- Home
- Business
- ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಶನಿವಾರ ಒಂದೇ ದಿನ 2,940 ರುಪಾಯಿ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?
ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಶನಿವಾರ ಒಂದೇ ದಿನ 2,940 ರುಪಾಯಿ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಇಳಿಕೆ ಮುಂದುವರೆದಿದೆ. ಇದೀಗ ಮಾರ್ಚ್ 21ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಇಂದಿನ ಚಿನ್ನದ ರೇಟ್ ಎಷ್ಟು ನೋಡೋಣ ಬನ್ನಿ.

ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಕುಸಿತ
ಹಬ್ಬ ಹರಿದಿನಗಳು, ಮದುವೆ ಶುಭ ಸಮಾರಂಭಗಳ ನಡುವೆ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಾಣುತ್ತಿರುವುದು ಆಭರಣ ಖರೀದಿಸುವ ಗ್ರಾಹಕರ ಮುಖದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ನಿನ್ನೆ ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತವಾಗಿತ್ತು
ಮಾರ್ಚ್ 20ರ ಶುಕ್ರವಾರವಾದ ನಿನ್ನ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 1370 ರುಪಾಯಿ ಹಾಗೂ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1200 ರುಪಾಯಿ ಇಳಿಕೆ ಕಂಡಿತ್ತು. ಅದೇ ಟ್ರೆಂಡ್ ಶನಿವಾರವಾದ ಇಂದೂ ಮುಂದುವರೆದಿದೆ.
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 2,940 ರುಪಾಯಿ ಕುಸಿತ
ಮಾರ್ಚ್ 21ರಂದು ಪ್ರತಿ ಗ್ರಾಮ್ 24 ಕ್ಯಾರಟ್ ಚಿನ್ನದ ಮೇಲೆ 294 ರುಪಾಯಿ ಇಳಿಕೆ ಕಂಡಿದ್ದು, ಗ್ರಾಮ್‌ಗೆ 14,597 ರುಪಾಯಿಗಳಾಗಿವೆ. ಅಂದರೆ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 2,940 ರುಪಾಯಿ ಇಳಿಕೆಯಾದಂತೆ ಆಗಿದೆ.
22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 2,750 ರುಪಾಯಿ ಕುಸಿತ
ಇನ್ನೊಂದೆಡೆ ಆಭರಣ ಚಿನ್ನವಾದ 22 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಮೇಲೆ 275 ರುಪಾಯಿ ಇಳಿಕೆಯಾಗಿದ್ದು, ಇಂದು ಪ್ರತಿ ಗ್ರಾಮ್‌ಗೆ 13,380 ರುಪಾಯಿಗಳಾಗಿವೆ. ಅಲ್ಲಿಗೆ ಪ್ರತಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 2750 ರುಪಾಯಿ ಇಳಿಕೆಯಾದಂತೆ ಆಗಿದೆ.
ಬೆಳ್ಳಿ ಬೆಲೆಯಲ್ಲಿ ₹10,000 ಕುಸಿತ
ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಮಹಾ ಕುಸಿತವಾಗಿದೆ. ನಿನ್ನೆಯ ರೇಟ್‌ಗೆ ಹೋಲಿಸಿದರೆ, ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 10,000 ರುಪಾಯಿ ಇಳಿಕೆಯಾಗಿದೆ. ಒಂದು ಒಂದು ಕೆಜಿ ಬೆಳ್ಳಿಯು 2,45,000 ರುಪಾಯಿಗೆ ಮಾರಾಟವಾಗುತ್ತಿದೆ.
ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ಒಟ್ಟಾರೆಯಾಗಿ ಕಳೆದ 10 ದಿನಗಳಲ್ಲಿ 24 ಕ್ಯಾರಟ್ ಪ್ರತಿ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 16,250 ರುಪಾಯಿ ಇಳಿಕೆಯಾಗಿದ್ದರೇ, ಆಭರಣ ಚಿನ್ನವಾದ 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 14,900 ರುಪಾಯಿ ಇಳಿಕೆಯಾಗಿದೆ. ಸದ್ಯದ ಟ್ರೆಂಡ್ ಗಮನಿಸಿದರೆ ಚಿನ್ನದ ಬೆಲೆ ಮತ್ತಷ್ಟು ಇಳಿದರೂ ಅಚ್ಚರಿಯಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

