MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಉದ್ಯಮಿ ಗೌತಮ್ ಸಿಂಘಾನಿಯ ಜತೆಗಿದ್ದು, ಮಾಲ್ಡೀವ್ಸ್ ಬೋಟ್‌ ದುರಂತದಲ್ಲಿ ನಾಪತ್ತೆಯಾಗಿರುವ ದಂತಕಥೆ ಹರಿ ಸಿಂಗ್‌ ಯಾರು?

ಉದ್ಯಮಿ ಗೌತಮ್ ಸಿಂಘಾನಿಯ ಜತೆಗಿದ್ದು, ಮಾಲ್ಡೀವ್ಸ್ ಬೋಟ್‌ ದುರಂತದಲ್ಲಿ ನಾಪತ್ತೆಯಾಗಿರುವ ದಂತಕಥೆ ಹರಿ ಸಿಂಗ್‌ ಯಾರು?

ಭಾರತದ ಖ್ಯಾತ ರ‍್ಯಾಲಿ ಚಾಲಕ ಹರಿ ಸಿಂಗ್ ಅವರು ಮಾಲ್ಡೀವ್ಸ್‌ನಲ್ಲಿ ನಡೆದ ಸ್ಪೀಡ್‌ಬೋಟ್ ಅಪಘಾತದ ನಂತರ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಉದ್ಯಮಿ ಗೌತಮ್ ಸಿಂಘಾನಿಯಾ ಅವರನ್ನು ರಕ್ಷಿಸಲಾಗಿದ್ದು, ಹರಿ ಸಿಂಗ್ ಮತ್ತು ಇನ್ನೊಬ್ಬರಿಗಾಗಿ ಮಾಲ್ಡೀವ್ಸ್ ರಕ್ಷಣಾ ಪಡೆ ತೀವ್ರ ಶೋಧ ನಡೆಸುತ್ತಿದೆ. 

2 Min read
Author : Gowthami K
Published : Mar 21 2026, 03:35 PM IST
Share this Photo Gallery
  • FB
  • TW
  • Linkdin
  • Whatsapp
17
ಮಾಲ್ಡೀವ್ಸ್‌ನಲ್ಲಿ ಭೀಕರ ಸ್ಪೀಡ್‌ಬೋಟ್ ಅಪಘಾತ
Image Credit : X

ಮಾಲ್ಡೀವ್ಸ್‌ನಲ್ಲಿ ಭೀಕರ ಸ್ಪೀಡ್‌ಬೋಟ್ ಅಪಘಾತ

ಭಾರತೀಯ ಮೋಟಾರ್‌ಸ್ಪೋರ್ಟ್ ಲೋಕದಲ್ಲಿ ವಿಶಿಷ್ಟ ಸಾಧನೆಗಳ ಮೂಲಕ ತಮ್ಮದೇ ಆದ ಗುರುತು ಮೂಡಿಸಿದ್ದ ಹಿರಿಯ ರ‍್ಯಾಲಿ ಚಾಲಕ ಹರಿ ಸಿಂಗ್ ಅವರು ಮಾಲ್ಡೀವ್ಸ್‌ನಲ್ಲಿ ಸಂಭವಿಸಿದ ಭೀಕರ ಸ್ಪೀಡ್‌ಬೋಟ್ ಅಪಘಾತದ ನಂತರ ನಾಪತ್ತೆಯಾಗಿರುವ ಘಟನೆ ಆತಂಕ ಹುಟ್ಟಿಸಿದೆ. ಈ ದುರ್ಘಟನೆ ಮಾರ್ಚ್ 19, 2026 ರಂದು ತಡರಾತ್ರಿ ಮಾಲ್ಡೀವ್ಸ್‌ ದೇಶದ ವಿ ಫೆಲಿಧೂ ದ್ವೀಪದ ಸಮೀಪ ಸಂಭವಿಸಿದೆ.

27
ಅಪಘಾತದ ವಿವರಗಳು
Image Credit : X

ಅಪಘಾತದ ವಿವರಗಳು

ಪ್ರವಾಸಿಗರನ್ನು ಸಾಗಿಸುತ್ತಿದ್ದ ಸ್ಪೀಡ್‌ಬೋಟ್ ಸಮುದ್ರದಲ್ಲಿ ಏಕಾಏಕಿ ಉರುಳಿಬಿದ್ದ ಪರಿಣಾಮ ಕನಿಷ್ಠ ಏಳು ಮಂದಿ ನೀರಿನಲ್ಲಿ ಸಿಲುಕಿದರು. ಈ ಬೋಟ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾದ ಇಬ್ಬರು ಮಹಿಳೆಯರು ಹಾಗೂ ಐದು ಭಾರತೀಯ ಪುರುಷರು ಇದ್ದರು. ಅಪಘಾತದ ವೇಳೆ ರಷ್ಯಾದ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದು, ಅವರಲ್ಲಿ ಭಾರತದ ದಂತಕಥೆ ರ‍್ಯಾಲಿ ಚಾಲಕ ಹರಿ ಸಿಂಗ್ ಮತ್ತು ಅವರೊಂದಿಗೆ ದೋಣಿಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಇನ್ನೂ ನಾಪತ್ತೆಯಾಗಿದ್ದಾರೆ. ಈ ದೋಣಿಯಲ್ಲಿ ಹರಿ ಸಿಂಗ್ ಅವರೊಂದಿಗೆ ಅವರ ಗೆಳೆಯ ಉದ್ಯಮಿ, ರೇಮಂಡ್ ಎಂಡಿ ಗೌತಮ್ ಸಿಂಘಾನಿಯ ಕೂಡ ಪ್ರಯಾಣಿಸುತ್ತಿದ್ದರು. ಅಪಘಾತದ ನಂತರ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಗಾಯಗೊಂಡಿದ್ದ ಸಿಂಘಾನಿಯಾ ಅವರನ್ನು ರಕ್ಷಿಸಿ ಭಾರತಕ್ಕೆ ಏರ್‌ಲಿಫ್ಟ್‌ ಮಾಡಿ ಮುಂಬೈನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

Related Articles

Related image1
Breaking: ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಇದ್ದ ಬೋಟ್‌ ಮಾಲ್ಡೀವ್ಸ್‌ನಲ್ಲಿ ಮುಳುಗಡೆ!
Related image2
ಸ್ಪೀಡ್‌ಬೋಟ್ ಅಪಘಾತ; ರ‍್ಯಾಲಿ ದಿಗ್ಗಜ ಹರಿ ಸಿಂಗ್ ನಾಪತ್ತೆ, ರೇಮೆಂಡ್ MD ಗೌತಮ್ ಸಿಂಘಾನಿಯಾಗೆ ಗಾಯ
37
ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ
Image Credit : X

ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ

ಆದರೆ, ಹರಿ ಸಿಂಗ್ ಸೇರಿದಂತೆ ಇನ್ನೂ ಕೆಲವು ಪ್ರಯಾಣಿಕರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (MNDF) ಕೋಸ್ಟ್ ಗಾರ್ಡ್ ತಂಡಗಳು ತೀವ್ರ ಹುಡುಕಾಟ ಕಾರ್ಯ ನಡೆಸುತ್ತಿವೆ. ಘಟನೆ ಕೆಯೋಧೂ ಪ್ರದೇಶದಿಂದ ನೈಋತ್ಯ ದಿಕ್ಕಿನಲ್ಲಿ ಸುಮಾರು ಎರಡು ನಾಟಿಕಲ್ ಮೈಲುಗಳ ದೂರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ.

47
ಹರಿ ಸಿಂಗ್ ಯಾರು?
Image Credit : gautam singhania Hari singh

ಹರಿ ಸಿಂಗ್ ಯಾರು?

“ಜಿಪ್ಸಿ ಕಿಂಗ್” ಎಂದೇ ಪ್ರಸಿದ್ಧರಾಗಿರುವ ಹರಿ ಸಿಂಗ್ ಅವರು ಚಂಡೀಗಢ ಮೂಲದವರು. 1990ರಲ್ಲಿ ನಡೆದ ಹಿಮಾಲಯನ್ ಕಾರ್ ರ್ಯಾಲಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ಮೋಟಾರ್‌ಸ್ಪೋರ್ಟ್ ಪಯಣವನ್ನು ಆರಂಭಿಸಿದರು. ಅಲ್ಪ ಅವಧಿಯಲ್ಲೇ ತಮ್ಮ ಅದ್ಭುತ ಚಾಲನಾ ಕೌಶಲ್ಯದಿಂದ ದೇಶದ ಗಮನ ಸೆಳೆದ ಅವರು, 1990ರ ದಶಕ ಮತ್ತು 2000ರ ಆರಂಭದಲ್ಲಿ ಭಾರತೀಯ ರ‍್ಯಾಲಿ ಕ್ರೀಡೆಯಲ್ಲಿ ಪ್ರಮುಖ ಸ್ಥಾನವನ್ನು ಸಂಪಾದಿಸಿದರು. ಅವರು ಐದು ಬಾರಿ ಭಾರತೀಯ ರ‍್ಯಾಲಿ ಚಾಂಪಿಯನ್ ಪಟ್ಟವನ್ನು ಗೆದ್ದ ಸಾಧನೆ ಮಾಡಿದ್ದಾರೆ. ವಿಶೇಷವಾಗಿ JK Tyre Motorsport ತಂಡದೊಂದಿಗೆ, ಮಾರುತಿ ಜಿಪ್ಸಿ ವಾಹನದ ಬೆಂಬಲದೊಂದಿಗೆ ಅವರು ಅನೇಕ ಗೆಲುವುಗಳನ್ನು ದಾಖಲಿಸಿದ್ದಾರೆ.

57
ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳು
Image Credit : X

ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳು

ದೇಶೀಯ ಮಟ್ಟದ ಯಶಸ್ಸಿನೊಂದಿಗೆ, Hari Singh ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಆಸಿಯನ್ ರ‍್ಯಾಲಿ ಮತ್ತು ಸಾರ್ಕ್ ರ‍್ಯಾಲಿ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಿ, ಏಷ್ಯಾ ವಲಯ ರ‍್ಯಾಲಿ ಚಾಂಪಿಯನ್‌ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

67
ನಂತರದ ಜೀವನ ಮತ್ತು ಕೊಡುಗೆ
Image Credit : X

ನಂತರದ ಜೀವನ ಮತ್ತು ಕೊಡುಗೆ

ಸಕ್ರಿಯ ಸ್ಪರ್ಧೆಯಿಂದ ದೂರವಾದ ನಂತರ, ಅವರು ತರಬೇತುದಾರ ಮತ್ತು ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. Mercedes-Benz India ಹಾಗೂ JK ಟೈರ್ ಮೋಟಾರ್‌ಸ್ಪೋರ್ಟ್ ಜೊತೆಗೂಡಿ ಅವರು ಯುವ ಚಾಲಕರಿಗೆ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಲವು ದಶಕಗಳ ಕಾಲ ಭಾರತೀಯ ಮೋಟಾರ್‌ಸ್ಪೋರ್ಟ್ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ.

77
 ಪ್ರತಿಕ್ರಿಯೆ
Image Credit : X

ಪ್ರತಿಕ್ರಿಯೆ

ಹರಿ ಸಿಂಗ್ ಅವರ ನಾಪತ್ತೆಯ ಸುದ್ದಿ ಭಾರತೀಯ ಮೋಟಾರ್‌ಸ್ಪೋರ್ಟ್ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಅವರ ಸುರಕ್ಷಿತ ಪತ್ತೆಗೆ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಘಟನೆಯು ಪ್ರವಾಸಿ ಸುರಕ್ಷತೆ ಮತ್ತು ಸಮುದ್ರ ಸಾರಿಗೆ ನಿಯಮಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ. ಅಧಿಕಾರಿಗಳು ಶೋಧ ಕಾರ್ಯಾಚರಣೆ ಮುಂದುವರೆಸುತ್ತಿದ್ದು, ಶೀಘ್ರದಲ್ಲೇ ಸ್ಪಷ್ಟ ಮಾಹಿತಿ ದೊರಕುವ ನಿರೀಕ್ಷೆಯಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಅಪಘಾತ
ಭಾರತ ಸುದ್ದಿ
ಭಾರತ
ಸುದ್ದಿ
Latest Videos
Recommended Stories
Recommended image1
ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ, ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ
Recommended image2
BJP Candidate List: ಕಾಂಗ್ರೆಸ್ ತೊರೆದ ಇಬ್ಬರು ನಾಯಕರಿಗೆ ಬಿಜೆಪಿ ಟಿಕೆಟ್!
Recommended image3
ಮೈಸೂರು- ತಾಳಗುಪ್ಪ ಸೇರಿ 19 ರೈಲುಗಳ ಸಂಚಾರ ವರ್ಷಪೂರ್ತಿ ಹೆಚ್ಚಳ: ಫುಲ್​ ಡಿಟೇಲ್ಸ್​ ಇಲ್ಲಿದೆ
Related Stories
Recommended image1
Breaking: ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಇದ್ದ ಬೋಟ್‌ ಮಾಲ್ಡೀವ್ಸ್‌ನಲ್ಲಿ ಮುಳುಗಡೆ!
Recommended image2
ಸ್ಪೀಡ್‌ಬೋಟ್ ಅಪಘಾತ; ರ‍್ಯಾಲಿ ದಿಗ್ಗಜ ಹರಿ ಸಿಂಗ್ ನಾಪತ್ತೆ, ರೇಮೆಂಡ್ MD ಗೌತಮ್ ಸಿಂಘಾನಿಯಾಗೆ ಗಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved