ಸಿಂಗಾಪುರ: ಅಮೆರಿಕದ ಒತ್ತಡ ಹಿನ್ನೆಲೆಯಲ್ಲಿ ಭಾರತ ರಷ್ಯಾ ತೈಲ ಖರೀದಿ ಕಡಿತ ಮಾಡಿದ ಬೆನ್ನಲ್ಲೇ ಇದರ ಲಾಭವನ್ನು ಚೀನಾ ಪಡೆದುಕೊಂಡಿದೆ. ಸತತ 3ನೇ ತಿಂಗಳು ಚೀನಾ, ದಾಖಲೆಯ ಪ್ರಮಾಣದಲ್ಲಿ ರಷ್ಯಾದಿಂದ ಅಗ್ಗದ ಬೆಲೆಯ ತೈಲ ಖರೀದಿಸಿದೆ. ಅಂಕಿ ಅಂಶಗಳ ಪ್ರಕಾರ ಫೆಬ್ರುವರಿಯಲ್ಲಿ ನಿತ್ಯ 20.7 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ರಷ್ಯಾದಿಂದ ಚೀನಾಗೆ ಸರಬರಾಜಾಗಿದೆ. ಈ ಪ್ರಮಾಣ ಜನವರಿಯಲ್ಲಿ 17 ಲಕ್ಷ, ಡಿಸೆಂಬರ್‌ನಲ್ಲಿ 20 ಲಕ್ಷವಿತ್ತು. ಕಳೆದ ಡಿಸೆಂಬರ್‌ನಲ್ಲಿ ಭಾರತ 2 ವರ್ಷಗಳಲ್ಲೇ ಅತಿ ಕನಿಷ್ಠ ಪ್ರಮಾಣದಲ್ಲಿ ರಷ್ಯಾ ತೈಲ ಖರೀದಿಸಿತ್ತು.

11:23 PM (IST) Feb 17
ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ ಬಿಚ್ಚಿಟ್ಟಿದ್ದಾರೆ. ಹಲವು ಧರ್ಮದ ಪುಣ್ಯಗಳಿಂದ ನನಗೆ ಸನಾತನ ಧರ್ಮದಲ್ಲಿರುವ ಸಾಧ್ಯವಾಗಿದೆ ಎಂದಿದ್ದಾರೆ.
11:02 PM (IST) Feb 17
ತಮ್ಮ 25 ವರ್ಷಗಳ ಸಿನಿಪಯಣದಲ್ಲಿ 'ನೋ ಕಿಸ್ಸಿಂಗ್' ಪಾಲಿಸಿ ಅನುಸರಿಸುತ್ತಿದ್ದ ನಟಿ ತಮನ್ನಾ ಭಾಟಿಯಾ, ವಿಜಯ್ ದೇವರಕೊಂಡ ಜೊತೆ ಮಾತ್ರ ಲಿಪ್‌ಲಾಕ್ ಮಾಡುವುದಾಗಿ ಹೇಳಿದ್ದರು. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಅವರ ಮದುವೆಯ ಸುದ್ದಿಯ ಬೆನ್ನಲ್ಲೇ ಇದೀಗ ಮತ್ತೆ ವೈರಲ್ ಆಗ್ತಿದೆ. ಏನದು ಸುದ್ದಿ?
10:24 PM (IST) Feb 17
2024-25ನೇ ಸಾಲಿಗೆ ನೌಕರರ ಭವಿಷ್ಯ ನಿಧಿ (ಪಿಎಫ್) ಮೇಲಿನ ಬಡ್ಡಿದರ 8.25% ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಡ್ಡಿದರ ಇಳಿಕೆಯಾಗಲಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಡಿಟೇಲ್ಸ್
10:21 PM (IST) Feb 17
ಕೇವಲ 5.65 ಲಕ್ಷ ರೂ 7 ಸೀಟರ್ ನಿಸ್ಸಾನ್ ಗ್ರಾವೈಟ್ ಕಾರು ಲಾಂಚ್, ಇದು ಭಾರತದ ಅತೀ ಕಡಿಮೆ ಬೆಲೆಯ ಎಂಪಿವಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಣ್ಣ ಕಾರುಗಳ ಬೆಲೆಯಲ್ಲಿ ಇದೀಗ 7 ಸೀಟಿನ ಕಾರು ಲಭ್ಯವಾಗಿದೆ.
09:34 PM (IST) Feb 17
ಕನ್ನಡದ ಬಿಗ್ಬಾಸ್ ಸೀಸನ್ 12 ಹವಾ ಇನ್ನೂ ನಿಂತಿಲ್ಲ. ಮುಂದಿನ ಸೀಸನ್ ಯಾವಾಗ ಎಂದು ವೀಕ್ಷಕರು ಕಾಯುತ್ತಿರುವಾಗಲೇ ಇನ್ನೊಂದು ಕಡೆಯ ವೀಕ್ಷಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ಏನದು?
09:08 PM (IST) Feb 17
5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಹ್ಯುಂಡೈ ವರ್ನಾ, ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್ ಸೇರಿ ಆಯ್ದ ಕಾರುಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.
09:08 PM (IST) Feb 17
2014ರಲ್ಲಿ ಸೋನಿಯಾ ಗಾಂಧಿಯವರ ಒಪ್ಪಿಗೆಯ ಹೊರತಾಗಿಯೂ, ರಾಹುಲ್ ಗಾಂಧಿಯವರ ಮಧ್ಯಪ್ರವೇಶದಿಂದಾಗಿ ತಮಗೆ ಅಸ್ಸಾಂ ಮುಖ್ಯಮಂತ್ರಿ ಹುದ್ದೆ ತಪ್ಪಿಹೋಯಿತು ಎಂದು ಹಿಮಂತ್ ಬಿಸ್ವಾ ಶರ್ಮಾ ಬಹಿರಂಗಪಡಿಸಿದ್ದಾರೆ.
09:06 PM (IST) Feb 17
ಈಜಿಪ್ಟ್‌ನ ಪ್ರಸಿದ್ಧ ವ್ಯಾಲಿ ಆಫ್ ದಿ ಕಿಂಗ್ಸ್ ಪ್ರದೇಶದಲ್ಲಿ ಸುಮಾರು 2000 ವರ್ಷಗಳಷ್ಟು ಹಳೆಯದಾದ ತಮಿಳು–ಬ್ರಾಹ್ಮಿ ಶಾಸನಗಳು ಪತ್ತೆಯಾಗಿವೆ. ಈ ಐತಿಹಾಸಿಕ ಅನ್ವೇಷಣೆಯು ಪ್ರಾಚೀನ ತಮಿಳು ವ್ಯಾಪಾರಿಗಳು ಈಜಿಪ್ಟ್‌ನೊಂದಿಗೆ ಹೊಂದಿದ್ದ ಜಾಗತಿಕ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕವನ್ನು ದೃಢಪಡಿಸುತ್ತದೆ.
08:46 PM (IST) Feb 17
ಫೆ.22ಕ್ಕೆ ಕಾಂಗ್ರೆಸ್ ಮತ್ತೊಂದು ವಿಕೆಟ್ ಪತನ, ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ರಾಜ್ಯ ಅಧ್ಯಕ್ಷ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಸಿಎಂ ನೀಡಿದ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.
08:23 PM (IST) Feb 17
ಈಜಿಪ್ಟ್‌ನ ಸುಕಾರಿ ಪರ್ವತಗಳಲ್ಲಿ ಪುರಾತತ್ತ್ವಜ್ಞರು 3,000 ವರ್ಷಗಳಷ್ಟು ಹಳೆಯದಾದ ಚಿನ್ನದ ಸಂಸ್ಕರಣಾ ನಗರವನ್ನು ಕಂಡುಹಿಡಿದಿದ್ದಾರೆ, ಇದು ಸುಧಾರಿತ ಗಣಿಗಾರಿಕೆ ವ್ಯವಸ್ಥೆಗಳು ಮತ್ತು ಪ್ರಾಚೀನ ವಸತಿ ವಸಾಹತುಗಳ ಪುರಾವೆಗಳನ್ನು ಬಹಿರಂಗಪಡಿಸಿದೆ.
07:45 PM (IST) Feb 17
ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್, ಭಾರತವನ್ನು ಜಗತ್ತಿನ ನಾಯಕ ಎಂದು ಶ್ಲಾಘಿಸಿದ್ದಾರೆ. 'ಮೇಕ್ ಇನ್ ಇಂಡಿಯಾ' ಯೋಜನೆಗೆ ಫ್ರಾನ್ಸ್ ವಿಶ್ವಾಸಾರ್ಹ ಪಾಲುದಾರ ಎಂದು ಹೇಳಿದ ಅವರು, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಸಹಕಾರ ಇರಲಿದೆ ಎಂದರು.
07:44 PM (IST) Feb 17
ಅರ್ಜುನ್ ತೆಂಡೂಲ್ಕರ್ ಪ್ರೀ ವೆಡ್ಡಿಂಗ್‌ನಲ್ಲಿ ಶುಬಮನ್ ಭರ್ಜರಿ ಡ್ಯಾನ್ಸ್, ಬಾಲಿವುಡ್ ಹಾಡಿದೆ ಗಿಲ್ ಸ್ಟೆಪ್ಸ್ ಹಾಕಿದ್ದಾರೆ. ವಿಶೇಷ ಅಂದರೆ ಗಿಲ್ ಚೆಲುವೆಯೊಬ್ಬರ ಕೈಹಿಡಿದು ಡ್ಯಾನ್ಸ್ ಮಾಡಿದ್ದಾರೆ. ತೆಂಡೂಲ್ಕರ್ ಮನೆ ಕಾರ್ಯಕ್ರಮದಲ್ಲಿ ಗಿಲ್ ಜೊತೆ ಕಾಣಿಸಿಕೊಂಡಿದ್ದು ಯಾರು
07:24 PM (IST) Feb 17
Why India’s Rafale Deal is Costlier Than Indonesia ಭಾರತವು ಫ್ರಾನ್ಸ್‌ನಿಂದ ಒಟ್ಟು 114 ರಫೇಲ್ ಜೆಟ್‌ಗಳನ್ನು ಖರೀದಿಸಲಿದೆ. ಇವುಗಳಲ್ಲಿ 96 ವಿಮಾನಗಳನ್ನು ನಾಗ್ಪುರದಲ್ಲಿ ಫ್ರೆಂಚ್ ಕಂಪನಿ ಡಸಾಲ್ಟ್ ತಯಾರಿಸುತ್ತದೆ. 18 ಜೆಟ್‌ಗಳನ್ನು ಫ್ರಾನ್ಸ್‌ನಲ್ಲಿ ತಯಾರಿಸಲಾಗುತ್ತದೆ.
07:19 PM (IST) Feb 17
06:44 PM (IST) Feb 17
Maruti e-Vitara EV Launched: Price Starts at Rs 10.99 Lakh ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಇಂದು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಕೊನೆಗೂ ಬಿಡುಗಡೆ ಮಾಡಿದೆ. ಮಾರುತಿಯ ಇ-ವಿಟಾರಾ ಗ್ರ್ಯಾಂಡ್ ಆಗಿ ಅನಾವರಣವಾಗಿದ್ದು, ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ.
06:41 PM (IST) Feb 17
ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಡೈರೆಕ್ಟ್ ಮೆಸೇಜ್ ಮಾಡಿದ್ದ. ಕೆಲ ಸಮಯ ನನ್ನ ಜೊತೆ ಕಳೆಯಬಲು ಪ್ಲಾನ್ ಮಾಡಿಕೊಂಡಿದ್ದ. ಮುಂದೇನಾಯ್ತು ಅನ್ನೋದನ್ನು ಪೂನಂ ಪಾಂಡೆ ಹೇಳಿದ್ದಾರೆ.
06:39 PM (IST) Feb 17
ಪಲ್ಲೆಕೆಲೆ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಹೊರಬಿದ್ದಿದ್ದೆ. ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯ ರದ್ದಾದ ಬೆನ್ನಲ್ಲೇ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.
06:23 PM (IST) Feb 17
ಈ ಕುಟುಂಬಗಳು ಅಹಮದಾಬಾದ್, ಸೂರತ್, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ನೆಲೆಸಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಿದೇಶಿ ಆಸ್ತಿಗಳನ್ನು ಹೊಂದಿವೆ.
06:22 PM (IST) Feb 17
ಹಿಂದೂ ಯುವತಿಯೊಂದಿಗೆ ಉಜ್ಜಯಿನಿಯ ಮಹಾಕಾಲ ದೇವಸ್ಥಾನಕ್ಕೆ ಹಿಂದೂ ವೇಷದಲ್ಲಿ ಬಂದಿದ್ದ ಮುಸ್ಲಿಂ ಯುವಕನಿಗೆ ಭಜರಂಗದಳದ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಂಜಾಬ್‌ನ ಮೊಹಾಲಿಯ ನಿವಾಸಿಗಳಾದ ಇವರಿಬ್ಬರು ಹೋಟೆಲ್‌ನಲ್ಲಿ ತಂಗಿದ್ದಾಗ ಈ ಘಟನೆ ನಡೆದಿದೆ.
05:40 PM (IST) Feb 17
ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಸಾಮಾನ್ಯವಾಗಿ ಗಿಫ್ಟ್ ಐಟಂ, ಚಾಕೋಲೇಟ್, ಗ್ರೀಟಿಂಗ್ಸ್, ಗುಲಾಬಿ ಹೂವು ಸೇರಿದಂತೆ ಕೆಲ ವಸ್ತುಗಳ ಮಾರಾಟ ಅಧಿಕವಾಗಿತ್ತು. ಆದರೆ ಈ ಬಾರಿ ಭಾರತ ಹೊಸ ದಾಖಲೆ ಬರೆದಿದೆ.
05:06 PM (IST) Feb 17
ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಮಾರ್ಚ್ ಮಧ್ಯದಲ್ಲಿ ಚುನಾವಣಾ ಆಯೋಗ ಪ್ರಕಟಿಸುವ ಸಾಧ್ಯತೆಯಿದೆ. ಏಪ್ರಿಲ್‌ನಲ್ಲಿ ಚುನಾವಣೆಗಳು ನಡೆಯುವ ನಿರೀಕ್ಷೆಯಿದ್ದು, ಆಯೋಗವು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ..
04:54 PM (IST) Feb 17
ವಧುವಿನ ಮೇಲೆ ಹೂವಿನಂತೆ 8.5 ಕೋಟಿ ರೂ ಚೆಲ್ಲಿದ ವರನ ಕುಟುಂಬ, ಸುತ್ತಲು ನಿಂತು 500 ರೂಪಾಯಿ, 200 ರೂಪಾಯಿ ನೋಟುಗಳನ್ನು ಎಸೆದಿದ್ದಾರೆ. ಅದ್ಧೂರಿ ಮದುವೆಯಲ್ಲಿ ನೋಟುಗಳ ರಾಶಿ ತುಂಬಿಹೋಗಿದೆ.
04:36 PM (IST) Feb 17
04:15 PM (IST) Feb 17
ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್,, ಕಂಪನಿಯಲ್ಲಿ ಸುದೀರ್ಘ ಕಾಲದಿಂದ ಕೆಲಸ ಮಾಡುತ್ತಾ ಕಂಪನಿ ಬೆಳವಣಿಗೆಯಲ್ಲಿ ಪ್ರಮುಥ ಪಾತ್ರ ನಿರ್ವಹಿಸಿದ 47 ಉದ್ಯೋಗಿಗಳಿಗೆ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆ.
03:53 PM (IST) Feb 17
ಪಲ್ಲೆಕೆಲೆ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 'ಬಿ' ಗುಂಪಿನ ಮಹತ್ವದ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಒಂದು ವೇಳೆ ಪಂದ್ಯ ರದ್ದಾದರೇ ಯಾರಿಗೆ ಲಾಭ? ಸೂಪರ್-8 ಲೆಕ್ಕಾಚಾರ ಏನು ನೋಡೋಣ ಬನ್ನಿ.
03:51 PM (IST) Feb 17
parents forget child in taxi: ಬೆಂಗಳೂರಿನಲ್ಲಿ ಪೋಷಕರು ತಮ್ಮ 4 ವರ್ಷದ ಮಗುವನ್ನು ಕ್ಯಾಬ್‌ನಲ್ಲಿ ಮರೆತು ಮನೆಗೆ ಬಂದಿದ್ದಾರೆ. ಮಗು ಗಾಡಿಯಲ್ಲಿ ನಿದ್ರಿಸುತ್ತಿದ್ದು, ಪೋಷಕರು ಇಳಿಯುವಾಗ ಗಮನಿಸಿರಲಿಲ್ಲ. ನಂತರ ಪೊಲೀಸರ ಸಹಾಯದಿಂದ ಒಂದು ಗಂಟೆಯೊಳಗೆ ಮಗು ಸುರಕ್ಷಿತವಾಗಿ ಪೋಷಕರನ್ನು ಸೇರಿದೆ.
03:42 PM (IST) Feb 17
ಪಾಕಿಸ್ತಾನ ಸೆನೆಟರ್ ಫೈಸಲ್ ರಜಾ ಅಬಿದಿ ನವೆಂಬರ್ 2026 ರ ವೇಳೆಗೆ ಪಾಕಿಸ್ತಾನ ವಿಶ್ವದ ಏಕೈಕ ಶ್ರೀಮಂತ ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಅವರ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿವೆ.
03:30 PM (IST) Feb 17
ಡಿನ್ನರ್ ಬಳಿಕ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಪತಿ ಪತ್ನಿ, ಪ್ರೇಮಿಗಳ ದಿನ ಪತಿ ಹಾಗೂ ಪತ್ನಿ ಇಬ್ಬರು ಖುಷಿ ಖುಷಿಯಿಂದ ಡಿನ್ನರ್ ಸವಿದಿದ್ದಾರೆ. ಇತ್ತ ಪೊಲೀಸರಿಗೆ ಕರೆ ಮಾಡಿ ಪತ್ನಿ ಶವ ಪತ್ತೆಯಾಗಿದ್ದು ಎಂದು ಮಾಹಿತಿ ನೀಡಿದ್ದು ಪತಿ. ಹಾಗಾದರೆ ಕೊಂದಿದ್ದು ಯಾರು?
03:10 PM (IST) Feb 17
02:34 PM (IST) Feb 17
ಯೋಜನೆಯ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳಲು ನ್ಯಾಯಮಂಡಳಿಯು 2023 ರ NGT ಆದೇಶ ಮತ್ತು ಉನ್ನತಾಧಿಕಾರ ಸಮಿತಿಯ ಶಿಫಾರಸುಗಳನ್ನು ಉಲ್ಲೇಖಿಸಿತು, ಆದರೆ ಸಮಿತಿಯ ವರದಿಯು ಗೌಪ್ಯ ಸ್ವರೂಪದ್ದಾಗಿರುವುದರಿಂದ ಅದನ್ನು ಹಂಚಿಕೊಳ್ಳಲಾಗುವುದಿಲ್ಲ ಎಂದು ತೀರ್ಪು ನೀಡಿದೆ.
02:26 PM (IST) Feb 17
02:25 PM (IST) Feb 17
ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ ಸೂಪರ್-8 ಹಂತಕ್ಕೇರಿರುವ ಭಾರತ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಬೆಂಚ್ ಬಲ ಪರೀಕ್ಷಿಸಲು ಟೀಂ ಇಂಡಿಯಾ ಪ್ಲಾನ್ ಮಾಡಿದೆ ಎನ್ನಲಾಗಿದೆ.
01:54 PM (IST) Feb 17
ಭೋಪಾಲ್‌ನಲ್ಲಿ 61 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ 81 ವರ್ಷದ ನೇತ್ರತಜ್ಞೆ ಹೇಮಲತಾ ಶ್ರೀವಾಸ್ತವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರೋಗ್ಯವಾಗಿದ್ದ ಅವರು ಹಠಾತ್ ಅಸ್ವಸ್ಥರಾದ ಸಮಯದಲ್ಲಿ ಆಸ್ತಿ ದಾನ ಮಾಡಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದ್ದು, ಅವರ ಸಾವು ಅನುಮಾನ ಹುಟ್ಟಿಸಿದೆ.
01:32 PM (IST) Feb 17
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಹೊರಟ ವೇಳೆ ಅಭಿಮಾನಿಯೊಬ್ಬ ಕೊಟ್ಟ ಕಾಂಪ್ಲಿಮೆಂಟ್ಸ್‌ಗೆ ನಟಿ ಹೇಳಿದ್ದೇನು? ನೀವೇ ನೋಡಿ
01:32 PM (IST) Feb 17
ಹೋಟೆಲ್‌ನಲ್ಲಿ ಸ್ಕ್ವಿಡ್ ತೋರನ್ ಮತ್ತು ಮೀನಿನ ಮೊಟ್ಟೆ ತಿಂದ ಕೆಲವೇ ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದುರಂತಕ್ಕೆ ಫುಡ್ ಪಾಯ್ಸನಿಂಗ್ ಅಥವಾ ತೀವ್ರ ಅಲರ್ಜಿ ಕಾರಣವೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
01:07 PM (IST) Feb 17
ಯುಪಿಐ ಪಾವತಿ ವ್ಯವಸ್ಥೆಯು ನಗದು ಪಾವತಿಯನ್ನು ಮೀರಿಸಿದ್ದು, ಪ್ರಸ್ತುತ ದೇಶದ ಶೇ.57ರಷ್ಟು ವಹಿವಾಟುಗಳು ಯುಪಿಐ ಮೂಲಕವೇ ನಡೆಯುತ್ತಿವೆ. ಕೇಂದ್ರ ಹಣಕಾಸು ಇಲಾಖೆಯ ವರದಿಯು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರುಪೇ ಡೆಬಿಟ್ ಕಾರ್ಡ್ ಬಳಕೆಯನ್ನು ಉತ್ತೇಜಿಸಲು ಶಿಫಾರಸು ಮಾಡಿದೆ.
01:06 PM (IST) Feb 17
23 ವರ್ಷಗಳ ಹಿಂದಿನ ನಟಿ ಪ್ರತ್ಯುಷ್ಯ ಆತ್ಮ*ಹ*ತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಆತ್ಮ*ಹ*ತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಿದ್ಧಾರ್ಥ ರೆಡ್ಡಿಯನ್ನು ದೋಷಿ ಎಂದು ಘೋಷಿಸಿದ್ದು, ಆತನ ಅರ್ಜಿಯನ್ನು ವಜಾಗೊಳಿಸಿದೆ.
12:46 PM (IST) Feb 17
ಮಾಧುರಿ ದೀಕ್ಷಿತ್ ಈಗ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಆದರೆ, ವೆಬ್ ಸೀರೀಸ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರ 'ಮಿಸೆಸ್ ದೇಶಮುಖ್' ಸೀರೀಸ್ ಬಂದಿತ್ತು. ಈ ನಡುವೆ, ಅವರ ಮುಂಬೈನ ಐಷಾರಾಮಿ ಅಪಾರ್ಟ್‌ಮೆಂಟ್‌ನ ಒಳಗಿನ ಫೋಟೋಗಳನ್ನು ನೋಡೋಣ.
12:43 PM (IST) Feb 17
12:01 PM (IST) Feb 17