- Home
- Sports
- Cricket
- ಸಂಜು ಸ್ಯಾಮ್ಸನ್‌ಗೆ ಲಾಸ್ಟ್ ಚಾನ್ಸ್? ಬುಮ್ರಾ, ಕಿಶನ್‌ಗೆ ರೆಸ್ಟ್, ನೆದರ್ಲೆಂಡ್ಸ್ ವಿರುದ್ಧ ತಂಡದಲ್ಲಿ 3 ಬದಲಾವಣೆ!
ಸಂಜು ಸ್ಯಾಮ್ಸನ್‌ಗೆ ಲಾಸ್ಟ್ ಚಾನ್ಸ್? ಬುಮ್ರಾ, ಕಿಶನ್‌ಗೆ ರೆಸ್ಟ್, ನೆದರ್ಲೆಂಡ್ಸ್ ವಿರುದ್ಧ ತಂಡದಲ್ಲಿ 3 ಬದಲಾವಣೆ!
ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ ಸೂಪರ್-8 ಹಂತಕ್ಕೇರಿರುವ ಭಾರತ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಬೆಂಚ್ ಬಲ ಪರೀಕ್ಷಿಸಲು ಟೀಂ ಇಂಡಿಯಾ ಪ್ಲಾನ್ ಮಾಡಿದೆ ಎನ್ನಲಾಗಿದೆ.

ನೆದರ್ಲೆಂಡ್ಸ್ ವಿರುದ್ಧ ಕೊನೆಯ ಹಣಾಹಣಿ
ಬೆಂಚ್ ಬಲ ಪರೀಕ್ಷೆಗೆ ಅವಕಾಶ
ಸೂಪರ್-8 ಪಂದ್ಯಗಳಿಗೂ ಮುನ್ನ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಮೀಸಲು ಆಟಗಾರರ ಸಾಮರ್ಥ್ಯ ಪರೀಕ್ಷಿಸಲು ಟೀಂ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಈವರೆಗೆ ಅವಕಾಶ ಸಿಗದ ಆಟಗಾರರು ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಮೂರು ಬದಲಾವಣೆಗಳ ಸಾಧ್ಯತೆ
ಬುಮ್ರಾಗೆ ವಿಶ್ರಾಂತಿ; ಅರ್ಶದೀಪ್ ಸಿಂಗ್ ಕಂಬ್ಯಾಕ್
ನಿರ್ಣಾಯಕ ಸೂಪರ್-8 ಪಂದ್ಯಗಳಿಗೂ ಮುನ್ನ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಪಾಕಿಸ್ತಾನ ವಿರುದ್ಧ ಆಡದಿದ್ದ ಅರ್ಶದೀಪ್ ಸಿಂಗ್, ಬುಮ್ರಾ ಬದಲಿಗೆ ಪ್ಲೇಯಿಂಗ್ XIಗೆ ಮರಳುವ ನಿರೀಕ್ಷೆಯಿದೆ.
ಪಾಕಿಸ್ತಾನ ವಿರುದ್ಧ ಭಾರತ ಕೇವಲ ಒಬ್ಬ ಸ್ಪೆಷಲಿಸ್ಟ್ ವೇಗಿಯೊಂದಿಗೆ ಆಡಿತ್ತು. ಬುಮ್ರಾ ಜೊತೆ ಹಾರ್ದಿಕ್ ಪಾಂಡ್ಯ ಹೊಸ ಚೆಂಡನ್ನು ಹಂಚಿಕೊಂಡಿದ್ದರು. ಈಗ ಬುಮ್ರಾಗೆ ವಿಶ್ರಾಂತಿ ನೀಡುವುದರಿಂದ, ಅರ್ಶದೀಪ್ ಜೊತೆ ಮೊಹಮ್ಮದ್ ಸಿರಾಜ್‌ಗೂ ಪ್ಲೇಯಿಂಗ್ XI ನಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ. ಸಿರಾಜ್ ಬಂದರೆ ರಿಂಕುಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ
ಕುಲ್ದೀಪ್ ಬದಲು ವಾಷಿಂಗ್ಟನ್ ಸುಂದರ್
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಕುಲ್ದೀಪ್ ಯಾದವ್ ಕೂಡ ಪ್ಲೇಯಿಂಗ್ XI ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಬ್ಯಾಟಿಂಗ್ ಸಾಮರ್ಥ್ಯವನ್ನೂ ಪರಿಗಣಿಸಿ, ತಂಡವು ವಾಷಿಂಗ್ಟನ್ ಸುಂದರ್‌ಗೆ ನೆದರ್ಲೆಂಡ್ಸ್ ವಿರುದ್ಧ ಅವಕಾಶ ನೀಡಬಹುದು.
ಇಶಾನ್ ಕಿಶನ್ ಬದಲು ಸಂಜು
ವಿಕೆಟ್ ಕೀಪರ್ ಇಶಾನ್ ಕಿಶನ್‌ಗೆ ವಿಶ್ರಾಂತಿ ನೀಡಿದರೆ, ಅಭಿಷೇಕ್ ಶರ್ಮಾ ಜೊತೆ ಮಲಯಾಳಿ ಆಟಗಾರ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಕಿಶನ್‌ಗೆ ಸ್ನಾಯು ಸೆಳೆತ ಉಂಟಾಗಿತ್ತು. ಸೂಪರ್-8ರಲ್ಲಿ ಪ್ರಯೋಗಕ್ಕೆ ಅವಕಾಶವಿಲ್ಲದ ಕಾರಣ, ಇದು ಸಂಜುಗೆ ಸಿಗುವ ಕೊನೆಯ ಅವಕಾಶವಾಗಿರಬಹುದು.
ಭಾರತದ ಸಂಭಾವ್ಯ XI
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

