Published : Sep 16, 2026, 07:31 AM ISTUpdated : Sep 16, 2026, 11:02 PM IST

India Latest News Live: ಬೆಂಗಳೂರಿನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಆಗಿದ್ದೇನು?

ಸಾರಾಂಶ

ನವದೆಹಲಿ: ಐಐಆರ್‌ಸಿ ಇಂಡಿಯಾ (ವಿಶ್ವವಿದ್ಯಾಲಯ) ಶ್ರೇಯಾಂಕ-2026 ಬಿಡುಗಡೆಯಾಗಿದ್ದು, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ ಬೆಂಗಳೂರು) ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) 2ನೇ ಸ್ಥಾನವನ್ನು ಗಳಿಸಿದೆ.

ಐಐಆರ್‌ಸಿ ಇಂಡಿಯಾ ಪ್ರತಿ ವರ್ಷ ಶ್ರೇಯಾಂಕ ಬಿಡುಗಡೆ ಮಾಡುತ್ತದೆ. ಇದಕ್ಕೆ ಸಾಂಸ್ಥಿಕ ಬಲ, ಶೈಕ್ಷಣಿಕ ಸಾಮರ್ಥ್ಯ, ಆಡಳಿತ ಮತ್ತು ಆಡಳಿತ ಎಂಬ 3 ಮುಖ್ಯ ವಿಭಾಗಗಳನ್ನು ಪರಿಗಣಿಸಲಾಗುತ್ತದೆ. ಈ ವರ್ಷದ ಶ್ರೇಯಾಂಕದಲ್ಲಿ, ಐಎಸ್‌ಸಿ ಬೆಂಗಳೂರು 84.53 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. 72.66 ಅಂಕಗಳೊಂದಿಗೆ ಮಾಹೆ 2ನೇ ಮತ್ತು 70.38 ಅಂಕಗಳೊಂದಿಗೆ ದೆಹಲಿಯ ಜೆಎನ್‌ಯು 3ನೇ ಸ್ಥಾನ ಪಡೆದುಕೊಂಡಿವೆ.

ಮಾಹೆ ನಂ.1 ಡೀಮ್ಡ್-ಟು-ಬಿ ವಿವಿ

ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಾಹೆ, ಐಐಆರ್‌ಸಿ ಇಂಡಿಯಾ (ವಿಶ್ವವಿದ್ಯಾಲಯ) ಶ್ರೇಯಾಂಕ 2026ರಲ್ಲಿ ದೇಶದ ನಂ.1 ಖಾಸಗಿ ‘ಡೀಮ್ಡ್-ಟು-ಬಿ’ ವಿವಿಯಾಗಿ ಹೊರಹೊಮ್ಮಿದೆ.

11:02 PM (IST) Sep 16

ಬೆಂಗಳೂರಿನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಆಗಿದ್ದೇನು?

ಬೆಂಗಳೂರಿನಲ್ಲಿ ನಡೆದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತ್ಯುತ್ಸವದಲ್ಲಿ ಗಾನ ಸುಧೆ ಆಲಿಸುತ್ತಾ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾವುಕರಾದರು. ಕರ್ನಾಟಿಕ್ ಸಂಗೀತದಲ್ಲಿ ಭಕ್ತಿಯೇ ಜೀವಾಳ ಎಂದ ಅವರು, ಸುಬ್ಬುಲಕ್ಷ್ಮಿ ಅವರ ಸಾಧನೆ ಹಾಗೂ ಗಾಂಧೀಜಿಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
Read Full Story

10:56 PM (IST) Sep 16

ಪ್ರಧಾನಿ ಮೋದಿ ಭೇಟಿಯಾದ ಬಾಲ್ಯದ ಶಾಲಾ ಗೆಳೆಯ, ಬೆನ್ನಲ್ಲೇ ನಡೀತು ಒಂದು ದೊಡ್ಡ ಪವಾಡ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ತಮ್ಮ ಶಾಲಾ ದಿನಗಳ ಗೆಳೆಯನನ್ನು ಭೇಟಿಯಾಗಿದ್ದರು. ಸಮಸ್ಯೆ ಹೇಳಿಕೊಂಡು ಮೋದಿ ಮುಂದೆ ಕೈಕಟ್ಟಿ ನಿಂತಿದ್ದ ಗೆಳೆಯನಿಗೆ ಇಂದು ಗುಡ್‌ನ್ಯೂಸ್ ಸಿಕ್ಕಿದೆ. ಏನದು ಪ್ರಕರಣ? ಸ್ಟೋರಿ ಓದಿ.

Read Full Story

08:48 PM (IST) Sep 16

ರೈಡ್‌ಗೂ ಮುನ್ನ ಟಿಪ್ಸ್‌ - ರಾಪಿಡೋಗೆ 10 ಲಕ್ಷ ದಂಡ ವಿಧಿಸಿದ ಸಿಸಿಪಿಎ, ನಮ್ಮ ಯಾತ್ರಿಗೆ ಏಕಿಲ್ಲ?

ರೈಡ್-ಹೇಲಿಂಗ್ ಆಪ್‌ಗಳಲ್ಲಿ ಪ್ರಯಾಣಕ್ಕೂ ಮುನ್ನವೇ 'ಟಿಪ್ಸ್' ಪಡೆಯುವ ತಂತ್ರದ ವಿರುದ್ಧ ಸಿಸಿಪಿಎ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ನಿಯಮ ಉಲ್ಲಂಘಿಸಿದ 'ರಾಪಿಡೋ' ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಲಾಗಿದ್ದು, 'ನಮ್ಮ ಯಾತ್ರಿ' ಆಪ್ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
Read Full Story

08:05 PM (IST) Sep 16

ಇಸ್ಲಾಂ, ಕ್ರಿಶ್ಚಿಯನ್‌ಗೆ ಮತಾಂತರವಾದ ದಲಿತರಿಗೆ SC ಸ್ಥಾನಮಾನವಿಲ್ಲ? - ಯಥಾಸ್ಥಿತಿ ಕಾಯ್ದುಕೊಳ್ಳಲು KGB ಸಮಿತಿ ಶಿಫಾರಸು ಸಾಧ್ಯತೆ

ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ (SC) ಸ್ಥಾನಮಾನ ನೀಡುವ ಕುರಿತು ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಆಯೋಗವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

Read Full Story

07:38 PM (IST) Sep 16

ಧೂಮಪಾನಿಗಳ ಹೊಗೆ ಹಾಕಿಸಿದ ITC, ಫೇಮಸ್‌ ಬ್ರ್ಯಾಂಡ್‌ಗಳ ಸಿಗರೇಟ್‌ ದರದಲ್ಲಿ ಭರ್ಜರಿ ಏರಿಕೆ!

ಐಟಿಸಿ ಲಿಮಿಟೆಡ್ ತನ್ನ ಪ್ರಸಿದ್ಧ ಸಿಗರೇಟ್ ಬ್ರ್ಯಾಂಡ್‌ಗಳಾದ ಕ್ಲಾಸಿಕ್ ಕನೆಕ್ಟ್ ಮತ್ತು ಗೋಲ್ಡ್ ಫ್ಲೇಕ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ನೂತನ ತೆರಿಗೆ ನಿಯಮಾವಳಿಗಳು ಮತ್ತು ಹೆಚ್ಚುವರಿ ಅಬಕಾರಿ ಸುಂಕದ ಹೊರೆಯಿಂದಾಗಿ ಈ ಬೆಲೆ ಏರಿಕೆ ಮಾಡಲಾಗಿದೆ.

Read Full Story

07:31 PM (IST) Sep 16

ಅದಾನಿಯನ್ನು ಹಿಂದಿಕ್ಕಿ ಏಷ್ಯಾದ ನಂ.1 ಶ್ರೀಮಂತನಾದ ಈ ವ್ಯಕ್ತಿ ಯಾರು? ಟಾಪ್​-5 ಪಟ್ಟಿಯಲ್ಲಿ ಭಾರತಕ್ಕೆ ದಕ್ಕಿದ್ದೆಷ್ಟು

ಟಿಕ್‌ಟಾಕ್ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ನ ಸಂಸ್ಥಾಪಕ ಜಾಂಗ್ ಯಿಮಿಂಗ್ ಅವರು ಗೌತಮ್ ಅದಾನಿಯನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕೃತಕ ಬುದ್ಧಿಮತ್ತೆ (AI) ಮತ್ತು ಟಿಕ್‌ಟಾಕ್‌ನ ಜಾಗತಿಕ ಯಶಸ್ಸಿನಿಂದಾಗಿ ಅವರ ನಿವ್ವಳ ಮೌಲ್ಯ $105 ಬಿಲಿಯನ್ ಮೀರಿದೆ.
Read Full Story

06:35 PM (IST) Sep 16

ಒಂದೇ ದಿನ ಎರಡು ವಿಚಿತ್ರ ಪ್ರಕರಣ - ಪತ್ನಿಯರಿಂದ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದ ಇಬ್ಬರು ಪತಿರಾಯರು!

ಉತ್ತರಪ್ರದೇಶದಲ್ಲಿ ಮಂಗಳವಾರ ಒಂದು ವಿಚಿತ್ರ ಘಟನೆ ನಡೆದಿದೆ. ಪತ್ನಿಯರಿಂದ ನಮ್ಮನ್ನು ರಕ್ಷಿಸುವಂತೆ ಆಗ್ರಾದ ಏಕ್ತಾ ಪೊಲೀಸ್ ಠಾಣೆಗೆ ಇಬ್ಬರು ಪತಿರಾಯರು ಬಂದಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ ಗೊತ್ತಾ? ಪತ್ನಿಯರು ಹಿಂಗೂ ಇರ್ತಾರಾ ದೇವ್ರೇ ಅನ್ಸುತ್ತೆ.

Read Full Story

06:20 PM (IST) Sep 16

ಭಿಕ್ಷಾಟನೆಯಲ್ಲಿದ್ದ ಇಂಡಿಯಾನಾ ಮಾಜಿ ಫುಟ್ಬಾಲ್ ತಾರೆ ಬದುಕು ಬದಲಿಸಿದ ಆ ಬ್ಯಾಗ್, ಹೊಸ ಮನೆ ಕೊಡಿಸಿದ ಯೂಟ್ಯೂಬರ್!

ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಮಾಜಿ ಫುಟ್‌ಬಾಲ್ ಆಟಗಾರ ಸ್ಯಾಂಪ್ಸನ್ ಜೇಮ್ಸ್ ಗಾಯ ಮತ್ತು ಮಾನಸಿಕ ಸಮಸ್ಯೆಯಿಂದ ನಿರಾಶ್ರಿತರಾಗಿದ್ದರು. ಆಸ್ಟಿನ್ ಬೀದಿಯಲ್ಲಿದ್ದ ಅವರ ಬಳಿಯಿದ್ದ ಕೆಂಪು ಬ್ಯಾಗ್ ನೋಡಿ ಹಳೆಯ ವಿದ್ಯಾರ್ಥಿಯೊಬ್ಬರು ಗುರುತಿಸಿ ಸಹಾಯಕ್ಕೆ ಮುಂದಾದರು. ಆನ್‌ಲೈನ್ ನಿಧಿಸಂಗ್ರಹದ ಮೂಲಕ 17,000 ಡಾಲರ್ ಸಂಗ್ರಹಿಸಿ ಅವರಿಗೆ ಹೊಸ ಬದುಕು ನೀಡಲಾಗಿದೆ.
Read Full Story

06:20 PM (IST) Sep 16

ಕಮಲ್‌ ಹಾಸನ್‌ ಬದಲು ಚಿರಂಜೀವಿ ಹೀರೋ; 110 ದಿನ ಓಡಿದ ಸಿನಿಮಾದ ಇಂಟರೆಸ್ಟಿಂಗ್‌ ಕಥೆ!

ಮೆಗಾಸ್ಟಾರ್ ಚಿರಂಜೀವಿ ಅವರ ಆರಂಭಿಕ 'ಕೋತಲ ರಾಯುಡು' ಸಿನಿಮಾ ದೊಡ್ಡ ಯಶಸ್ಸು ಕಂಡರೂ, ನಿರ್ಮಾಪಕ ತಮ್ಮಾರೆಡ್ಡಿ ಭರದ್ವಾಜ ಅವರಿಗೆ ಈ ವಿಚಾರ ತಿಳಿದಿರಲಿಲ್ಲ. ಕಮಲ್ ಹಾಸನ್ ಬದಲು ಚಿರಂಜೀವಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿ, ಕಡಿಮೆ ಲಾಭಕ್ಕೆ ವಿತರಕರಿಗೆ ಮಾರಾಟ ಮಾಡಿದ್ದರು. ತಿಂಗಳ ನಂತರ ಸಿನಿಮಾ 110 ದಿನ ಪೂರೈಸಿದ ಪೋಸ್ಟರ್ ನೋಡಿ ನಿರ್ಮಾಪಕರು ಆಶ್ಚರ್ಯಚಕಿತರಾದರು.
Read Full Story

05:56 PM (IST) Sep 16

ಕಮಲ್​ ಹಾಸನ್​ ದಾಖಲೆ ಮುರಿದ 4ರ ಬಾಲೆ - ರಾಷ್ಟ್ರಪತಿಯಿಂದ ಗೌರವ ಸ್ವೀಕಾರ- ಯಾರೀ ಪುಟಾಣಿ

ದೆಹಲಿಯಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 4 ವರ್ಷದ ತ್ರಿಶಾ ಥೋಸರ್ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸ್ವೀಕರಿಸಿದ್ದಾಳೆ. ಈ ಮೂಲಕ ಕಮಲ್ ಹಾಸನ್ ಅವರ 64 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಅತಿ ಕಿರಿಯ ವಯಸ್ಸಿನಲ್ಲಿ ಈ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಕಮಲ್ ಹಾಸನ್ ಕೂಡ ಈ ಪುಟಾಣಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ.

Read Full Story

05:38 PM (IST) Sep 16

Clean Greasy Non-Stick Pan - ನಾನ್-ಸ್ಟಿಕ್ ಪ್ಯಾನ್ ಅಂಚಿನಲ್ಲಿರುವ ಜಿಡ್ಡು ಹೋಗ್ತಿಲ್ವಾ? ಈ ಟ್ರಿಕ್ಸ್ ಟ್ರೈ ಮಾಡಿ

ನಾನ್-ಸ್ಟಿಕ್ ಪ್ಯಾನ್ ಅನ್ನು ಎಷ್ಟೇ ಹುಷಾರಾಗಿ ಬಳಸಿದರೂ ಅದರ ಅಂಚಿನಲ್ಲಿ ಎಣ್ಣೆ, ಜಿಡ್ಡು ಕೂತುಬಿಡುತ್ತದೆ. ಬರೀ ಡಿಶ್‌ವಾಶ್‌ನಿಂದ ತೊಳೆದರೆ ಈ ಜಿಡ್ಡು ಹೋಗಲ್ಲ. ಹಾಗಂತ ಗಟ್ಟಿಯಾಗಿ ಉಜ್ಜಿದರೆ ಪ್ಯಾನ್ ಕೋಟಿಂಗ್ ಹಾಳಾಗುತ್ತೆ. ಆದರೆ ನಮ್ಮ ಅಡುಗೆಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಕ್ಲೀನ್ ಮಾಡಬಹುದು.

Read Full Story

05:17 PM (IST) Sep 16

ಸಿಎಂ ಯೋಗಿ ಆದಿತ್ಯನಾಥ ಅವರ ಮುಸ್ಲಿಂ ಅಭಿಮಾನಿ ಟ್ಯಾಟೂ ನೋಡಿ ಶಾಕ್! ದೇಶದ ರಾಜಕಾರಣದಲ್ಲಿ ಸಂಚಲನ ಸೃಷ್ಟಿ!

ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಬಿಜೆಪಿಯಲ್ಲಿ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಹೀಗಿರುವಾಗ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರ ಮುಸ್ಲಿಂ ಅಭಿಮಾನಿಯೊಬ್ಬರು ನೆಕ್ಸ್ಟ್‌ ಪಿಎಂ ಯೋಗಿ ಎಂದು ಟ್ಯಾಟೋ ಹಾಕಿಸಿಕೊಂಡ ವಿಡಿಯೋ ವೈರಲ್ ಆಗಿದೆ.

Read Full Story

05:10 PM (IST) Sep 16

Sanjukta Parashar - ಸಿಆರ್‌ಪಿಎಫ್‌ನ ಮಹಾಬಲಿಷ್ಠ ಕೋಬ್ರಾ ಕಮಾಂಡೋ ಯುನಿಟ್‌ಗೆ ಇದೇ ಮೊದಲ ಬಾರಿಗೆ ಮಹಿಳೆ ಚೀಫ್‌!

ಸಿಆರ್‌ಪಿಎಫ್‌ನ ನಕ್ಸಲ್ ನಿಗ್ರಹ ಕಮಾಂಡೋ ಘಟಕವಾದ 'ಕೋಬ್ರಾ' ವಲಯಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. ಐಪಿಎಸ್ ಅಧಿಕಾರಿ ಸಂಯುಕ್ತಾ ಪರಾಶರ್ ಅವರು ಈ ಐತಿಹಾಸಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Read Full Story

04:54 PM (IST) Sep 16

ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗನ ಮನೆಯಲ್ಲಿ ಜಯ ಗಣೇಶ ಜಯ ಗಣೇಶ, ಸ್ಪೆಷಲ್ ಫೋಟೋಗಳು

ಬಾಂಗ್ಲಾದೇಶ ಖ್ಯಾತ ಕ್ರಿಕೆಟಿಗ ತನ್ನ ಮನೆಯಲ್ಲಿ ಗಣೇಶನ ಕೂರಿಸಿ ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದ್ದಾರೆ. ಅಷ್ಟಕ್ಕೂ ಯಾರು ಕ್ರಿಕೆಟಿಗ? ಸ್ಟೋರಿ ಓದಿ.

Read Full Story

04:53 PM (IST) Sep 16

Fresh Mutton Tips - ಮಟನ್ ತರ್ತಾ ಇದ್ದೀರಾ? ಎಳೆ, ಫ್ರೆಶ್‌ ಮಟನ್‌ ಗುರುತಿಸೋದು ಹೇಗೆ? ಈ ಸಿಂಪಲ್‌ ಟಿಪ್ಸ್‌ ಗೊತ್ತಿದ್ರೆ ಸಾಕು

ಮಾರುಕಟ್ಟೆಯಲ್ಲಿ ಮಟನ್ ತಂದಾಗಲೆಲ್ಲಾ ಬಲ್ತಿರೋ ಮಾಂಸ ಸಿಗ್ತಾ ಇದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ನಿಮಗೆ ಮಟನ್ ಬಗ್ಗೆ ಐಡಿಯಾ ಇಲ್ಲದಿದ್ದರೂ ಪ್ರತಿ ಬಾರಿಯೂ ಫ್ರೆಶ್ ಮಾಂಸವನ್ನೇ ಮನೆಗೆ ತರಬಹುದು.

Read Full Story

04:49 PM (IST) Sep 16

35ರಂತೆ ಕಾಣುವ 75ರ ಚೆಲುವೆ! ಏನೀ ಸೌಂದರ್ಯದ ಗುಟ್ಟು? ಅಮ್ಮನ ಕಥೆ ಕೇಳಿ ಮಗಳೇ ಬೆಚ್ಚಿಬಿದ್ದ ಸ್ಟೋರಿ ಇದು

ಚೀನಾದಲ್ಲಿ 75 ವರ್ಷದ ವೃದ್ಧೆಯೊಬ್ಬಳು ತನ್ನ ನಿವೃತ್ತಿ ಉಳಿತಾಯದ ₹4 ಕೋಟಿಗೂ ಹೆಚ್ಚು ಹಣವನ್ನು ಒಂದೇ ಬ್ಯೂಟಿ ಸಲೂನ್‌ನಲ್ಲಿ ಖರ್ಚು ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮಾರುಕಟ್ಟೆ ದರಕ್ಕಿಂತ ಹತ್ತಾರು ಪಟ್ಟು ಹೆಚ್ಚು ಹಣ ವಸೂಲಿ ಮಾಡಿರುವ ಬಿಲ್‌ಗಳನ್ನು ನೋಡಿ ಆಕೆಯ ಮಗಳು ಹಾಗೂ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ವಯಸ್ಸಾದ ಗ್ರಾಹಕರಿಗೆ ದುಬಾರಿ ಚಿಕಿತ್ಸೆ ನೀಡಿರುವ ಬಗ್ಗೆ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ.

Read Full Story

04:43 PM (IST) Sep 16

ಅರೆಬಿಯನ್‌ ಸಮುದ್ರ ಮಧ್ಯೆ ಪಾಕಿಸ್ತಾನ ಪುಂಡಾಟ - ಭಾರತೀಯ ಯುದ್ಧನೌಕೆಗೆ ಸ್ಫೀಡ್ ಆಗಿ ಬಂದು ಡಿಕ್ಕಿ ಹೊಡೆದ ಪಾಕ್ ನೌಕೆ

ಉತ್ತರ ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನಿ ನೌಕಾಪಡೆಯ ಹಡಗು ಭಾರತೀಯ ಯುದ್ಧನೌಕೆಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದಿದೆ. ಈ ಅಪಾಯಕಾರಿ ಕೃತ್ಯವು 1991ರ ದ್ವಿಪಕ್ಷೀಯ ಒಪ್ಪಂದದ ನೇರ ಉಲ್ಲಂಘನೆಯಾಗಿದ್ದು, ಭಾರತವು ಪಾಕಿಸ್ತಾನದ ರಾಯಭಾರಿಗೆ ತೀವ್ರ ಎಚ್ಚರಿಕೆ ನೀಡಿದೆ.
Read Full Story

04:28 PM (IST) Sep 16

ಗಣೇಶನ ಕಣ್ಣಿನಿಂದ ಎಂಟು ಗಂಟೆ ನೀರು - ಆತಂಕದಲ್ಲಿ ಭಕ್ತರು! ವಿಡಿಯೋ ವೈರಲ್​- ಗ್ರಾಮಸ್ಥರು ಹೇಳೋದೇನು

ಉಜ್ಜಯಿನಿ ಜಿಲ್ಲೆಯ ಚೋಪ್ರಾ ಗ್ರಾಮದ 700 ವರ್ಷಗಳಷ್ಟು ಹಳೆಯ ದೇವಾಲಯದಲ್ಲಿ ಗಣೇಶನ ಮೂರ್ತಿಯಿಂದ ಕಣ್ಣೀರು ಬಂದಿರುವ ಘಟನೆ ನಡೆದಿದೆ. ಸತತ ಎಂಟು ಗಂಟೆಗಳ ಕಾಲ ಕಣ್ಣೀರು ಹರಿದಿದ್ದು, ಭಕ್ತರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದೆ. ಗ್ರಾಮಸ್ಥರು ಪೂಜೆ ಸಲ್ಲಿಸಿ ಕ್ಷಮೆ ಕೇಳಿದ ನಂತರವಷ್ಟೇ ಕಣ್ಣೀರು ನಿಂತಿದೆ.
Read Full Story

04:10 PM (IST) Sep 16

Samsung Galaxy S26 FE ಭಾರತದಲ್ಲಿ ಲಾಂಚ್‌; 50MP ಕ್ಯಾಮೆರಾ, 4,900mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್‌!

ಸ್ಯಾಮ್‌ಸಂಗ್ ಕಂಪನಿಯು ಭಾರತದಲ್ಲಿ ಹೊಸ ಗ್ಯಾಲಕ್ಸಿ S26 FE ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು 6.7 ಇಂಚಿನ ಡಿಸ್‌ಪ್ಲೇ, Exynos 2500 ಪ್ರೊಸೆಸರ್, 50MP ಕ್ಯಾಮೆರಾ ಮತ್ತು ಗ್ಯಾಲಕ್ಸಿ AI ಫೀಚರ್‌ಗಳನ್ನು ಒಳಗೊಂಡಿದೆ. 79,999 ರೂ. ಬೆಲೆಯ ಈ ಫೋನ್‌ಗೆ ಆಕರ್ಷಕ ಎಕ್ಸ್‌ಚೇಂಜ್ ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯವಿವೆ.
Read Full Story

03:30 PM (IST) Sep 16

ಬೆಳ್ಳಿಪರದೆಯ ಮೇಲೆ ಮರುಜೀವ ಪಡೆಯಲಿದೆ ಎಂ.ಎಸ್.ಸುಬ್ಬುಲಕ್ಷ್ಮಿ ಕಥನ - ರಶ್ಮಿಕಾ ಮಂದಣ್ಣ ನಾಯಕಿ!

ಭಾರತ ರತ್ನ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್ ಅಧಿಕೃತವಾಗಿ ಘೋಷಣೆಯಾಗಿದೆ. 110ನೇ ಜಯಂತಿಯ ಸಂದರ್ಭದಲ್ಲಿ ಚೆನ್ನೈನ ದಿ ಮ್ಯೂಸಿಕ್ ಅಕಾಡೆಮಿಯಲ್ಲಿ ಚಿತ್ರವನ್ನು ಪ್ರಕಟಿಸಲಾಗಿದೆ.

Read Full Story

02:54 PM (IST) Sep 16

ಭಾರತಕ್ಕೆ ಹೆಮ್ಮೆಯ ಕ್ಷಣ - ವಾಯ್ಸ್-ಎನೇಬಲ್ಡ್ ಬ್ರೈಲ್ ಪ್ರಿಂಟರ್ ಕಂಡುಹಿಡಿದ ಹಿಮಜಾಗೆ ಒಲಿದ ಜೇಮ್ಸ್ ಡೈಸನ್ ಪ್ರಶಸ್ತಿ!

ದೃಷ್ಟಿಹೀನ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಹಿಮಜಾ ಲಿಂಗಂಪಲ್ಲಿ 'ರುಧ್ರ' ಎಂಬ ಧ್ವನಿ ಚಾಲಿತ ಬ್ರೈಲ್ ಮುದ್ರಣ ಯಂತ್ರವನ್ನು ಆವಿಷ್ಕರಿಸಿದ್ದಾರೆ. ಈ ಅದ್ಭುತ ಸಾಧನೆಗಾಗಿ ಅವರಿಗೆ 'ಜೇಮ್ಸ್ ಡೈಸನ್ ಪ್ರಶಸ್ತಿ 2026' ಲಭಿಸಿದ್ದು, ಭವಿಷ್ಯದಲ್ಲಿ ಈ ಯಂತ್ರವನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಒದಗಿಸುವ ಗುರಿ ಹೊಂದಿದ್ದಾರೆ.
Read Full Story

02:36 PM (IST) Sep 16

'ನಾನು ಇದನ್ನೆಲ್ಲಾ ನೋಡಿದ್ದೇನೆ' - ವೈಭವ್ ಸೂರ್ಯವಂಶಿ ಬಗ್ಗೆ ಸಂಜು ಸ್ಯಾಮ್ಸನ್ ಅಚ್ಚರಿ ಹೇಳಿಕೆ..!

ಆಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್, ಬೆಂಚ್ ಕಾಯುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಕೋಚ್ ಗೌತಮ್ ಗಂಭೀರ್ ಜೊತೆಗಿನ ಮಾತುಕತೆಯನ್ನು ಅವರು ಹಂಚಿಕೊಂಡಿದ್ದಾರೆ.
Read Full Story

01:37 PM (IST) Sep 16

ರೋಹಿತ್‌ ಶರ್ಮಾ ವಿಚಾರವೇ ಅಗರ್ಕರ್‌ಗೆ ಮುಳುವಾಯ್ತಾ? BCCIನಲ್ಲಿ ಹೊಸ ಬೆಳವಣಿಗೆ

ವೆಸ್ಟ್ ಇಂಡೀಸ್ ಸರಣಿಯ ತಂಡದ ಆಯ್ಕೆ ಬಳಿಕ ಅಜಿತ್ ಅಗರ್ಕರ್ ಬಿಸಿಸಿಐ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದೆ. ರೋಹಿತ್ ಶರ್ಮಾ ಅವರ ಏಕದಿನ ವೃತ್ತಿಜೀವನದ ಕುರಿತು ಬಿಸಿಸಿಐ ಜೊತೆಗಿನ ಭಿನ್ನಾಭಿಪ್ರಾಯವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇವರ ಸ್ಥಾನಕ್ಕೆ ವಿ.ವಿ.ಎಸ್. ಲಕ್ಷ್ಮಣ್ ಬರುವ ನಿರೀಕ್ಷೆಯಿದೆ.
Read Full Story

12:38 PM (IST) Sep 16

Sanju Samson - ರೋಹಿತ್ ಶರ್ಮಾ, ಅಭಿಷೇಕ್ ಎಲೈಟ್ ಲಿಸ್ಟ್ ಸೇರಿದ ಸಂಜು ಸ್ಯಾಮ್ಸನ್; ಟಿ20ಯಲ್ಲಿ ಹೊಸ ಮೈಲಿಗಲ್ಲು

ಆಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಭರ್ಜರಿ ಅರ್ಧಶತಕ ಸಿಡಿಸಿ ಫಾರ್ಮ್‌ಗೆ ಮರಳಿದ್ದಾರೆ. ಈ ಮೂಲಕ ಅವರು ಅಂತಾರಾಷ್ಟ್ರೀಯ ಟಿ20ಯಲ್ಲಿ ಆರಂಭಿಕನಾಗಿ 1,000 ರನ್ ಗಡಿ ದಾಟಿದ 5ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಂಜು ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
Read Full Story

12:28 PM (IST) Sep 16

ಇನ್ಮುಂದೆ ವಾಟ್ಸಾಪ್ ಫೇಸ್‌ಬುಕ್ ಇನ್‌ಸ್ಟಾಗೆ 'ಮೆಟಾ ಒನ್' ಪ್ರೀಮಿಯಂ ಸೇವೆ, ಭಾರತದಲ್ಲಿ ಚಂದಾದಾರಿಕೆ ದರ ಎಷ್ಟು?

ಸಾಮಾಜಿಕ ಜಾಲತಾಣ ದೈತ್ಯ ಮೆಟಾ ತನ್ನ ಪ್ರಮುಖ ಅಪ್ಲಿಕೇಶನ್‌ಗಳಿಗಾಗಿ 'ಮೆಟಾ ಒನ್' ಎಂಬ ನೂತನ ಚಂದಾದಾರಿಕೆ ಸೇವೆಯನ್ನು ಬಿಡುಗಡೆ ಮಾಡಿದೆ. ಉಚಿತ ಸೇವೆಗಳು ಮುಂದುವರಿಯಲಿದ್ದು, ಹೆಚ್ಚಿನ ಗ್ರಾಹಕೀಕರಣ ಮತ್ತು ಸುಧಾರಿತ AI ಪರಿಕರಗಳನ್ನು ಬಯಸುವವರಿಗಾಗಿ ಈ ಪಾವತಿಸಿದ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ. ವೈಯಕ್ತಿಕ ಬಳಕೆದಾರರು, ಸೃಷ್ಟಿಕರ್ತರು ಮತ್ತು ಉದ್ಯಮಿಗಳಿಗಾಗಿ ವಿವಿಧ ಬೆಲೆಯ ಯೋಜನೆಗಳು ಲಭ್ಯವಿವೆ.
Read Full Story

12:14 PM (IST) Sep 16

Maruti Suzuki Ertiga ಹೊಸ ಸಂಚಲನ.. ದೊಡ್ಡ ದೊಡ್ಡ ದೈತ್ಯ ಕಂಪನಿಗಳಿಗೆ ಬಿತ್ತು ಕೊಡಲಿ ಪೆಟ್ಟು

ಮಾರುತಿ ಸುಜುಕಿ ನಿರ್ಮಾಣದ Ertiga ದೇಶದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ದೊಡ್ಡ ದೊಡ್ಡ ದೈತ್ಯ ಕಂಪನಿಗಳಿಗೆ ನಡುಕ ಹುಟ್ಟಿಸುವ ರೀತಿಯಲ್ಲಿ ಮಾರಾಟವಾಗಿದೆ. 2012ರಿಂದ ಇಲ್ಲಿಯವರೆಗೆ ಮಾರಾಟವಾದ ದಾಖಲೆ ಕೇಳಿದ್ರೆ ಬೆರಗಾಗ್ತೀರಿ.. ಈ ಕುರಿತ ಸ್ಟೋರಿ ಇಲ್ಲಿದೆ..

Read Full Story

11:31 AM (IST) Sep 16

ಸಿಂಪಲ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರ ಫೇವರೇಟ್ ಕ್ಯಾಪ್ಟನ್ ಯಾರು? ಇಲ್ಲಿದೆ ನೋಡಿ ಕನ್ನಡಿನ ಮಾತು

ಬೆಂಗಳೂರು: ಭಾರತ ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್, ತಮ್ಮ ಸಿಂಪ್ಲಿಸಿಟಿ ಮೂಲಕವೇ ಆಗಾಗ ಸುದ್ದಿಯಾಗುವ ಜಾವಗಲ್ ಶ್ರೀನಾಥ್ ತಮ್ಮ ನೆಚ್ಚಿನ ಕ್ಯಾಪ್ಟನ್ ಯಾರು ಎನ್ನುವ ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದ್ದಾರೆ.

Read Full Story

10:25 AM (IST) Sep 16

Mahindra Thar Facelift - ಥಾರ್‌ ರಾಕ್ಸ್‌ ಲುಕ್‌ನಲ್ಲಿ ಹೊಸ ಥಾರ್‌; ಬರಲಿವೆ ಭರ್ಜರಿ ಫೀಚರ್ಸ್‌!

ಮಹೀಂದ್ರ ಕಂಪನಿಯು ತನ್ನ ಜನಪ್ರಿಯ ಥಾರ್ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಹೊಸ ಕಾರು ಥಾರ್ ರಾಕ್ಸ್‌ನಂತೆಯೇ ಆಕರ್ಷಕ ಮುಂಭಾಗದ ವಿನ್ಯಾಸ, ಅತ್ಯಾಧುನಿಕ ಸುರಕ್ಷತಾ ಫೀಚರ್‌ಗಳು ಮತ್ತು ಪ್ರೀಮಿಯಂ ಇಂಟೀರಿಯರ್ ಹೊಂದಿರಲಿದೆ. ಹಳೆಯ ಎಂಜಿನ್ ಆಯ್ಕೆಗಳನ್ನೇ ಮುಂದುವರಿಸಲಾಗಿದ್ದು, ಆಫ್-ರೋಡ್ ಪ್ರಿಯರಿಗೆ ಇದು ಹೊಸ ಅನುಭವ ನೀಡಲಿದೆ.
Read Full Story

10:10 AM (IST) Sep 16

ಟ್ರಂಪ್ ಪುತ್ರನ ಅದ್ಧೂರಿ ಮದುವೆಗೆ ರಷ್ಯಾ ತೈಲ ಉದ್ಯಮಿಗಳ ಹಣ! ಭಾರತ ತೈಲ ಖರೀದಿಗೆ ಕಿಡಿಕಾರುತ್ತಿದ್ದ ಅಮೆರಿಕ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರನ ವಿವಾಹದ ಸಂಭ್ರಮಾಚರಣೆಗೆ ರಷ್ಯಾ ಅಧ್ಯಕ್ಷ ಪುಟಿನ್ ಆಪ್ತ ಉದ್ಯಮಿ ಉಮರ್ ಕ್ರೆಮ್ಲೆವ್ ಧನಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಟ್ರಂಪ್ ಜೂನಿಯರ್ ಪತ್ನಿ ಬೆಟ್ಟಿನಾ ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ.
Read Full Story

09:38 AM (IST) Sep 16

ಪೂಜೆ ಫಲ ಸಿಗಲಿಲ್ಲವೆಂದು ಪೂಜಾರಿ ಕಿಡ್ನಾಪ್‌ - ₹1 ಲಕ್ಷಕ್ಕೆ ದುಡ್ಡಿಗೆ ಧಮ್ಕಿ, ಪುತ್ರನಿಂದ ಉಳಿಯಿತು ಜೀವ!

ನೋಯ್ಡಾದಲ್ಲಿ ತಾವು ಮಾಡಿಸಿದ್ದ ಪೂಜೆಯಿಂದ ಇಷ್ಟಾರ್ಥ ಈಡೇರಲಿಲ್ಲ ಎಂದು ಇಬ್ಬರು ವ್ಯಕ್ತಿಗಳು ಪೂಜಾರಿಯೊಬ್ಬರನ್ನು ಅಪಹರಿಸಿದ್ದಾರೆ. ಪೂಜೆಯ ನೆಪದಲ್ಲಿ ಜೌನ್‌ಪುರಕ್ಕೆ ಕರೆಸಿಕೊಂಡು 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಪ್ರಾಣ ಬೆದರಿಕೆ ಹಾಕಿದ್ದರು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಅರ್ಚಕರನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story

09:31 AM (IST) Sep 16

ಯುಎಸ್ ಓಪನ್ ಟೆನಿಸ್ - ಅಲೆಕ್ಸಾಂಡರ್ ಜ್ವೆರೆವ್ ಚಾಂಪಿಯನ್; 23ರ ಶೆಲ್ಟನ್‌ ಕನಸು ಭಗ್ನ

ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು ಅಮೆರಿಕದ ಬೆನ್ ಶೆಲ್ಟನ್ ಅವರನ್ನು ಮಣಿಸಿ ಚೊಚ್ಚಲ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 2003ರ ಬಳಿಕ ಕಪ್ ಗೆಲ್ಲುವ ಅಮೆರಿಕದ 23 ವರ್ಷಗಳ ಕನಸು ಭಗ್ನಗೊಂಡಿದೆ. ಜ್ವೆರೆವ್ ಅವರಿಗೆ ₹52.58 ಕೋಟಿ ಪ್ರಶಸ್ತಿ ಮೊತ್ತ ಲಭಿಸಿದೆ.
Read Full Story

More Trending News