Published : Jun 16, 2026, 05:10 AM ISTUpdated : Jun 16, 2026, 11:06 PM IST

India Latest News Live: ರಾಮಲಲ್ಲಾಗೆ ವಿಶ್ವದ ದುಬಾರಿ ಮಾವು 'ಸೂರ್ಯನ ಮೊಟ್ಟೆ' ಅರ್ಪಣೆ - ಕೆಜಿಗೆ 3 ಲಕ್ಷ- ರಾಜ್ಯದಲ್ಲೂ ಬೆಳೆದ ಇದರ ವಿಶೇಷತೆ ಏನು

ಸಾರಾಂಶ

ಲಾತೂರು: ‘ಸಂಸದನಾಗಿ ಆಯ್ಕೆಯಾದ ಬಳಿಕ ವೈದ್ಯಕೀಯ ವೃತ್ತಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ. ನನಗೆ ಆರ್ಥಿಕವಾಗಿ ಬಹಳ ನಷ್ಟವಾಗುತ್ತಿದೆ’ ಎಂದು ಮೂಲತಃ ವೈದ್ಯರಾಗಿರುವ ಮಹಾರಾಷ್ಟ್ರದ ಲಾತೂರಿನ ಕಾಂಗ್ರೆಸ್‌ ಸಂಸದ ಡಾ. ಶಿವಾಜಿ ಕಲ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘2023-24ನೇ ಸಾಲಿನಲ್ಲಿ ನಾನು ಸುಮಾರು 36 ಲಕ್ಷ ರು. ಆದಾಯ ತೆರಿಗೆ ಕಟ್ಟಿದ್ದೆ. ಆದರೆ 2024-25ನೇ ಸಾಲಿನಲ್ಲಿ ನನ್ನ ಆದಾಯ ಗಣನೀಯವಾಗಿ ಕಡಿಮೆಯಾಗಿ ಕೇವಲ 8.75 ಲಕ್ಷ ರು. ಮಾತ್ರ ತೆರಿಗೆ ಕಟ್ಟಿದ್ದೇನೆ. ಸಂಸದನಾದ ನಂತರ ರೋಗಿಗಳಿಗೆ ಸಾಕಷ್ಟು ಸಮಯ ಕೊಡಲು ಆಗುತ್ತಿಲ್ಲ. ನನ್ನ ಆಸ್ಪತ್ರೆಯನ್ನು ಪೂರ್ಣ ಸಮಯ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆರ್ಥಿಕ ನಷ್ಟವಾಗುತ್ತಿದೆ’ ಎಂದರು.

11:06 PM (IST) Jun 16

ರಾಮಲಲ್ಲಾಗೆ ವಿಶ್ವದ ದುಬಾರಿ ಮಾವು 'ಸೂರ್ಯನ ಮೊಟ್ಟೆ' ಅರ್ಪಣೆ - ಕೆಜಿಗೆ 3 ಲಕ್ಷ- ರಾಜ್ಯದಲ್ಲೂ ಬೆಳೆದ ಇದರ ವಿಶೇಷತೆ ಏನು

ಅಯೋಧ್ಯೆಯ ರೈತರೊಬ್ಬರು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಾದ ಜಪಾನ್‌ನ ಮಿಯಾಝಾಕಿಯನ್ನು ಯಶಸ್ವಿಯಾಗಿ ಬೆಳೆದು, ಮೊದಲ ಫಸಲನ್ನು ರಾಮಲಲ್ಲಾನಿಗೆ ಅರ್ಪಿಸಿದ್ದಾರೆ. 'ಸೂರ್ಯನ ಮೊಟ್ಟೆ' ಎಂದೇ ಖ್ಯಾತವಾದ ಈ ಮಾವನ್ನು ಕರ್ನಾಟಕದ ರೈತರೂ ಬೆಳೆದಿದ್ದು, ಬೆಂಗಳೂರಿನ ಲಾಲ್‌ಬಾಗ್ ಮೇಳದಲ್ಲಿ ಮಾರಾಟಕ್ಕಿಡಲಾಗಿತ್ತು.
Read Full Story

09:28 PM (IST) Jun 16

ತೆಲಂಗಾಣದಲ್ಲಿ ಹೈದರಾಬಾದ್ ರಸ್ತೆಗೆ ಡೋನಾಲ್ಡ್ ಟ್ರಂಪ್ ಹೆಸರು, ಶರಣಾಗಿದ್ದು ಯಾರು ಪ್ರಶ್ನಿಸಿದ ಬಿಜೆಪಿ

ತೆಲಂಗಾಣ ಸರ್ಕಾರ ಹೈದರಾಬಾದ್‌ನಲ್ಲಿ ರಸ್ತೆಗೆ ಡೋನಾಲ್ಡ್ ಟ್ರಂಪ್ ಅವನ್ಯೂ ರಸ್ತೆ ಎಂದು ನಾಮಕರಣ ಮಾಡಿದೆ. ಇದರ ಬೆನ್ನಲ್ಲೇ ವಿವಾದಗಳು ಶುರುವಾಗಿದೆ. ಅಮೆರಿಕ ಮುಂದೆ ಶರಣಾಗಿದ್ದು ಯಾರು ಎಂದು ಬಿಜೆಪಿ ಪ್ರಶ್ನಿಸಿದೆ.

 

Read Full Story

09:13 PM (IST) Jun 16

NH 150C Project - ಬಿಸಿಲುನಾಡು ರಾಯಚೂರು ಆಗಲಿದೆ ಹೈವೇಗಳ ಹಬ್ - ದೆಹಲಿಯಲ್ಲಿ ಮಹತ್ವದ ಸಭೆ

NH 150C Project: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ಸಂಸದ ಜಿ ಕುಮಾರ ನಾಯಕ ಭೇಟಿ ‌ಮಾಡಿದ್ರು.‌

Read Full Story

08:47 PM (IST) Jun 16

ಭಾರತಕ್ಕೆ ಗಂಡಾಂತರ, ಭಾರಿ ಮಳೆಗಾಲದಲ್ಲೂ ಎಲ್ಲೆಡೆ ಬಿಸಿಲು, ಬೆಚ್ಚಿ ಬೀಳಿಸಿದ ಸ್ಯಾಟಲೈಟ್ ವರದಿ

ಮುಂಗಾರು ವಿಳಂಬವಾಗಿ ಕೇರಳಕ್ಕೆ ಅಪ್ಪಳಿಸಿದರೂ ದೇಶದ ಹಲವು ಭಾಗಕ್ಕೆ ಇನ್ನೂ ತಲುಪಿಲ್ಲ. ಇದೀಗ ಸ್ಯಾಟಲೈಟ್ ಚಿತ್ರ ಹಾಗೂ ವರದಿ ಗಂಡಾಂತರದ ಸೂಚನೆ ನೀಡಿದೆ. ಭಾರಿ ಮಳೆಗಾಲದಲ್ಲೂ ಭಾರತದಲ್ಲೆಡೆ ಬಿಸಿಲು ತೀವ್ರಗೊಂಡಿದೆ.

Read Full Story

08:14 PM (IST) Jun 16

16 ತಿಂಗಳ ಬಳಿಕ ಪ್ರಧಾನಿ ಮೋದಿ ಡೋನಾಲ್ಡ್ ಟ್ರಂಪ್ ಮಹತ್ವದ ಭೇಟಿ, ಹ್ಯಾಂಡ್‌ಶೇಕ್‌ನಲ್ಲೇ ಸಿಕ್ಕಿತಾ ಸೂಚನೆ?

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೋನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. 16 ತಿಂಗಳ ಬಳಿಕ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಹ್ಯಾಂಡ್‌ಶೇಕ್ ಮಾಡಿ ಇಬ್ಬರು ಮಾತನಾಡಿದ್ದಾರೆ. ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

 

Read Full Story

08:05 PM (IST) Jun 16

Anchor Sreemukhi - ಆಹಾ ನನ್ನ ಮದ್ವೆಯಂತೆ.. ಕೊನೆಗೂ ಆ ಸತ್ಯ ಬಾಯ್ಬಿಟ್ಟ ಸ್ಟಾರ್ ಆ್ಯಂಕರ್!

Tollywood ಲೇಡಿ ಆ್ಯಂಕರ್‌ಗಳ ಪೈಕಿ ರಶ್ಮಿ ಗೌತಮ್ ಮತ್ತು ಶ್ರೀಮುಖಿ ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. 30 ವರ್ಷ ದಾಟಿದರೂ ಇವರು ಮದುವೆಯಾಗಿಲ್ಲ. ರಶ್ಮಿ ಗೌತಮ್ ಮದುವೆ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಶ್ರೀಮುಖಿ ಮಾತ್ರ ಇತ್ತೀಚೆಗೆ ತಮ್ಮ ಮದುವೆ ಯಾವಾಗ ಎಂಬುದನ್ನು ಬಹಿರಂಗಪಡಿಸಿದ್ದಾರೆ.

Read Full Story

07:46 PM (IST) Jun 16

Akshay Kumar - ಹೆಲಿಕಾಪ್ಟರನ್ನೇ ಟ್ಯಾಕ್ಸಿ ಮಾಡಿಕೊಂಡಿದ್ದ ಅಕ್ಷಯ್ - ಫರಾ ಖಾನ್ ಹೇಳಿದ್ರು ರೋಚಕ ಕಥೆ!

Akshay Kumar 'ತೀಸ್ ಮಾರ್ ಖಾನ್' ಸಿನಿಮಾ ಶೂಟಿಂಗ್‌ಗೆ ಪ್ರತಿದಿನ ಹೆಲಿಕಾಪ್ಟರ್‌ನಲ್ಲಿ ಹೋಗಿಬರುತ್ತಿದ್ದರು! ಈ ಬಗ್ಗೆ ನಿರ್ದೇಶಕಿ ಫರಾ ಖಾನ್ ತಮಾಷೆಯಾಗಿ ಮಾತನಾಡಿದ್ದು, 'ನನ್ನ ದುಡ್ಡು ತಿಂದ' ಎಂದು ಕಾಲೆಳೆದಿದ್ದಾರೆ.

Read Full Story

07:05 PM (IST) Jun 16

Rashmika Mandanna - ವಿದ್ಯಾರ್ಥಿಗಳಿಗೆ ನೆರವು ನೀಡಿದ ಸ್ಟಾರ್ ಜೋಡಿ - ಆದರೆ ಎಲ್ಲರ ಗಮನ ಸೆಳೆದಿದ್ದು ಈ ಕ್ಷಣ!

Rashmika Mandanna: ವೇದಿಕೆ ಮೇಲೆಯೇ ಪತಿ ವಿಜಯ್ ದೇವರಕೊಂಡ ಅವರ ಮುಖದ ಬೆವರನ್ನ ಪ್ರೀತಿಯಿಂದ ಒರೆಸಿ, ಅವರ ಮೀಸೆಯನ್ನ ಸರಿಪಡಿಸುತ್ತಿರುವ ರಶ್ಮಿಕಾ ಅವರ ವಿಡಿಯೋ ಅಭಿಮಾನಿಗಳ ಹೃದಯ ಗೆಲ್ತಾ ಇದೆ.

Read Full Story

06:38 PM (IST) Jun 16

Thalapathy Vijay ಡಿವೋರ್ಸ್ ರಹಸ್ಯ - ವಿಜಯ್ ಅಕ್ರಮ ಸಂಬಂಧ.. ಪತ್ನಿ ಸಂಗೀತಾ ನೇರ ಆರೋಪ!

Thalapathy Vijay ತಮಿಳುನಾಡು ರಾಜಕೀಯದಲ್ಲಿ ದಿಗ್ವಿಜಯ ಸಾಧಿಸಿ ಸಿಎಂ ಆಗಿದ್ದಾರೆ. ಆದ್ರೆ ವೈಯಕ್ತಿಕ ಬದುಕು ಮಾತ್ರ ಹಳಿ ತಪ್ಪಿದೆ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್​​ಗೆ ಅರ್ಜಿ ಸಲ್ಲಿಸಿರೋ ವಿಷ್ಯ ಗೊತ್ತೇ ಇದೆ.

Read Full Story

06:11 PM (IST) Jun 16

Sunita Ahuja - 'ಗೋವಿಂದ ಒಳ್ಳೆ ಮಗ, ಒಳ್ಳೆ ಸಹೋದರ - ಆದರೆ ಗಂಡನಾಗಿ...' - ಪತ್ನಿ ಸುನಿತಾ ಹೇಳಿದ್ದೇನು?

Govinda wife: 40 ವರ್ಷಗಳ ದಾಂಪತ್ಯದ ನಂತರ ಸುನಿತಾ, ಗೋವಿಂದ ಒಬ್ಬ ಅತ್ಯುತ್ತಮ ಮಗ ಮತ್ತು ಸಹೋದರ, ಆದರೆ ಗಂಡನಾಗಿ ಅವರಿಂದ ನನ್ನ ನಿರೀಕ್ಷೆಗಳು ಬೇರೆಯೇ ಇದ್ದವು ಎಂದು ಅವರು ಹೇಳಿದ್ದಾರೆ.

Read Full Story

05:13 PM (IST) Jun 16

Marriage Secrets - ಮದುವೆಯಲ್ಲಿ ವಧು ಯಾಕೆ ವರನ ಎಡಭಾಗದಲ್ಲೇ ಕೂರುತ್ತಾಳೆ? ಕಾರಣವೇನು?

Marriage Secrets: ಮದುವೆಯಲ್ಲಿ ವಧು ಯಾವಾಗಲೂ ವರನ ಎಡಭಾಗದಲ್ಲಿ ಕೂರುವುದನ್ನು ನಾವು ನೋಡುತ್ತೇವೆ. ಆದರೆ, ಬಲಭಾಗದಲ್ಲಿ ಏಕೆ ಕೂರುವುದಿಲ್ಲ? ಎಡಭಾಗದಲ್ಲಿ ಕೂರುವುದರ ಹಿಂದಿನ ರಹಸ್ಯಗಳು, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

05:10 PM (IST) Jun 16

Odiyan - ಜಾನಪದ ಕಥೆ, ಭಯಾನಕ ಲೋಕ, ಸ್ಟಾರ್ ಕಾಸ್ಟ್ - ಮಾಲಿವುಡ್‌ಗೆ ಎಂಟ್ರಿ ಕೊಟ್ಟ ಕರಣ್ ಜೋಹರ್!

Bollywood ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಇದೇ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದೆ. ಮಂಜು ವಾರಿಯರ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿದ್ದಾರೆ.

Read Full Story

04:48 PM (IST) Jun 16

Alia Bhatt - ಕಲ್ಕಿ ಸೀಕ್ವೆಲ್‌ನಲ್ಲಿ ಆಲಿಯಾ? ಹೊಸ ಪಾತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗ್ತಾರಾ ಬಾಲಿವುಡ್ ಬ್ಯೂಟಿ!

Kalki 2898 AD ಸೀಕ್ವೆಲ್‌ನ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ, ಆಲಿಯಾ ಭಟ್ ಈ ಚಿತ್ರತಂಡ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಹತ್ವದ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.

Read Full Story

04:32 PM (IST) Jun 16

Amrita Singh - ಮದುವೆ ಯಾಕೆ ಬೇಕು? ಸೈಫ್ ಮಾಜಿ ಪತ್ನಿ ಅಮೃತಾ ಕೊಟ್ಟ ಆ ಹೇಳಿಕೆ ಈಗ ಮತ್ತೆ ವೈರಲ್!

Amrita Singh: ಸೈಫ್ ಅಲಿ ಖಾನ್ ಜೊತೆಗಿನ ವಿಚ್ಛೇದನದ ನಂತರ ಅಮೃತಾ ಸಿಂಗ್ ಯಾಕೆ ಮತ್ತೆ ಮದುವೆಯಾಗಲಿಲ್ಲ? ಅವರ ಹಳೆಯ ಸಂದರ್ಶನವೊಂದು ಈಗ ಮತ್ತೆ ಸದ್ದು ಮಾಡುತ್ತಿದೆ. ಅದರಲ್ಲಿ ಅವರು ಹೇಳಿದ್ದೇನು?

Read Full Story

04:25 PM (IST) Jun 16

ನೇರವಾಗಿ ಮೆಡಿಕಲ್‌ನಿಂದ ಶೀತ ಕೆಮ್ಮು ಸಿರಪ್ ಖರೀದಿಸುವ ಪದ್ಧತಿಗೆ ಬ್ರೇಕ್, ಇನ್ನು ಮುಂದೆ ಹೊಸ ನಿಯಮ

ಭಾರತ ಡ್ರಗ್ಸ್ ರೂಲ್ಸ್‌ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ನೀವು ನೇರವಾಗಿ ಮೆಡಿಕಲ್‌ಗೆ ಹೋಗಿ ಶೀತ ಕೆಮ್ಮು ಸಿರಪ್ ಖರೀದಿಸಲು ಸಾಧ್ಯವಿಲ್ಲ. ಹೊಸ ನಿಯಮದಲ್ಲಿ ಏನಿದೆ? ಔಷಧಿ ಖರೀದಿಸುವ ವಿಧಾನ ಹೇಗೆ?

Read Full Story

04:23 PM (IST) Jun 16

TMC Crisis - ಶಾಸಕರು, ಸಂಸದರು ಬರೀ ಟ್ರೈಲರ್, ಮಮತಾ ಕೋಟೆಯಲ್ಲಿ ಅಸಲಿ ಆಟ ಈಗ ಶುರು!

ಪಶ್ಚಿಮ ಬಂಗಾಳದ ಟಿಎಂಸಿಯಲ್ಲಿ ಬಂಡಾಯ ತೀವ್ರ 65 ಶಾಸಕರ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿರುವ ಬಂಡಾಯ ಬಣ, ಈಗ ನಗರಸಭೆ ಮತ್ತು ಜಿಲ್ಲಾ ಪರಿಷತ್‌ಗಳಂತಹ ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ.

Read Full Story

04:08 PM (IST) Jun 16

Dhanush Son - ರಜನಿಕಾಂತ್ ಮೊಮ್ಮಗ ಯಾತ್ರಾ ಹೀರೋ ಆಗಿ ಎಂಟ್ರಿ - ತಂದೆ ಧನುಷ್ ನಿರ್ದೇಶನದಲ್ಲೇ ಮೊದಲ ಸಿನಿಮಾ!

ನಟ ಧನುಷ್ ಅವರ ಹಿರಿಯ ಮಗ ಯಾತ್ರಾ, ಇದೀಗ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರವನ್ನು ಸ್ವತಃ ಧನುಷ್ ಅವರೇ ನಿರ್ದೇಶಿಸಲಿದ್ದಾರೆ ಎಂದು ವರದಿಯಾಗಿದೆ.

Read Full Story

03:20 PM (IST) Jun 16

ವಿರಾಟ್ ಕೊಹ್ಲಿ ಸಲಹೆಗೆ ಕ್ಯಾರೇ ಎನ್ನದ ವೈಭವ್ ಸೂರ್ಯವಂಶಿ..! ಈ ರೀತಿ ಕಿರಿಕ್ ಇದೇ ಮೊದಲಲ್ಲ

ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ನೀಡಿದ ಕಿವಿಮಾತನ್ನು ಮರೆತಂತೆ ವರ್ತಿಸಿರುವ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಆಟಗಾರರೊಂದಿಗೆ ಮೈದಾನದಲ್ಲೇ ಜಗಳವಾಡಿದ್ದಾರೆ. ಈ ಹಿಂದೆ ಕೂಡಾ ಇದೇ ರೀತಿ ಆಕ್ರಮಣಕಾರಿ ವರ್ತನೆ ತೋರಿದ್ದ ವೈಭವ್, ತಮ್ಮ ಪ್ರತಿಭೆಯ ಜೊತೆಗೆ ಕ್ರೀಡಾಸ್ಪೂರ್ತಿಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂಬುದು ಲೇಖನದ ಸಾರ.
Read Full Story

03:17 PM (IST) Jun 16

ನಾಗ್ಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ, ಏರ್ ಫೋರ್ಸ್ ಅಧಿಕಾರಿಯ ಪತ್ನಿ ಮೇಲೆ ಗ್ಯಾಂಗ್‌ನಿಂದ ದೌರ್ಜನ್ಯ - ಮತಾಂತರದ ವೀಡಿಯೋ ವೈರಲ್!

ನಾಗ್ಪುರದಲ್ಲಿ ವಾಯುಪಡೆ ಅಧಿಕಾರಿಯ ಪತ್ನಿಯನ್ನು ಆಕೆಯ ಶಾಲಾ ಸ್ನೇಹಿತ ಆಯಾಜ್ ತಾಜ್ ಮದಾರೆ ಎಂಬಾತ ವಂಚಿಸಿ, ಅ*ತ್ಯಾಚಾರ ಎಸಗಿದ್ದಾನೆ. ನಂತರ ಬ್ಲಾಕ್‌ಮೇಲ್ ಮಾಡಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ನಿಕಾಹ್ ಮಾಡಿಕೊಂಡಿದ್ದಾನೆ.

Read Full Story

02:38 PM (IST) Jun 16

Kainchi Dham - ವಿರಾಟ್ ಕೊಹ್ಲಿ, ಸ್ಟೀವ್ ಜಾಬ್ಸ್, ಜುಕರ್‌ಬರ್ಗ್ ಬದುಕು ಬದಲಿಸಿದ ಕೈಂಚಿ ಧಾಮ್ ರಹಸ್ಯವೇನು??

ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್‌ನಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ ಅನೇಕ ಗಣ್ಯರು ನೀಮ್ ಕರೋಲಿ ಬಾಬಾರ ಕೈಂಚಿ ಧಾಮ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಅಲ್ಲೇನಿದೆ? ಕೈಂಚಿ ಧಾಮ್‌ನ ರಹಸ್ಯ, ವಿಶೇಷತೆಗಳು, ಅಲ್ಲಿಗೆ ತಲುಪುವುದು ಹೇಗೆ?

Read Full Story

02:26 PM (IST) Jun 16

ಪಂಜಾಬ್‌ ಚುನಾವಣೆ ಸಮಯದಲ್ಲೇ ಸಿಎಂ ಭಗವಂತ್‌ ಮಾನ್‌ 'ಗುರುದ್ರೋಹಿ' ಎಂದು ಘೋಷಿಸಿದ ಅಖಲ್‌ ತಖ್ತ್‌

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಿಖ್ಖರ ಅತ್ಯುನ್ನತ ಧಾರ್ಮಿಕ ಪೀಠವಾದ 'ಅಖಲ್ ತಖ್ತ್' 'ಗುರು ದ್ರೋಹಿ' ಎಂದು ಘೋಷಿಸಿದೆ. ವಿವಾದಾತ್ಮಕ ವಿಡಿಯೋವೊಂದರ ಕುರಿತು ಸುಳ್ಳು ಹೇಳಿದ ಆರೋಪದ ಮೇಲೆ ಈ ಕಠಿಣ ನಿಲುವು ತಳೆಯಲಾಗಿದೆ.

Read Full Story

01:22 PM (IST) Jun 16

ಇದೇ ಕಾರಣಕ್ಕೆ ಶ್ರೀಲಂಕಾ ಬೌಲರ್ ಎದುರು ಸಿಟ್ಟಾದ ವೈಭವ್ ಸೂರ್ಯವಂಶಿ..! ಕೊನೆಗೂ ಬಯಲಾಯ್ತು ಇಂಟ್ರೆಸ್ಟಿಂಗ್ ಡೀಟೈಲ್ಸ್

ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿ ಪಂದ್ಯದ ಸೂಪರ್ ಓವರ್ ಸೋಲಿನ ನಂತರ, ಶ್ರೀಲಂಕಾ ಆಟಗಾರರು ವೈಭವ್ ಸೂರ್ಯವಂಶಿಯನ್ನು ಸ್ಲೆಡ್ಜ್ ಮಾಡಿದರು. 'ಇದು ನಿನ್ನ ಐಪಿಎಲ್ ಅಲ್ಲ' ಎಂಬ ಗೇಲಿಗೆ ಕೋಪಗೊಂಡ ವೈಭವ್, ಲಂಕಾ ಆಟಗಾರನನ್ನು ತಳ್ಳಿದ್ದರಿಂದ ಮೈದಾನದಲ್ಲಿ ಗಲಾಟೆ ನಡೆಯಿತು.
Read Full Story

12:47 PM (IST) Jun 16

ಕೇಂದ್ರ ಸರ್ಕಾರದ ನಡೆ ಟೀಕಿಸಿ ಹೊಸ ಅಪಾಯದ ಕುರಿತು ಎಚ್ಚರಿಕೆ ನೀಡಿದ ಕೆ. ಅಣ್ಣಾಮಲೈ

ನೀಟ್ ಮರುಪರೀಕ್ಷೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳನ್ನು ಅಣ್ಣಾಮಲೈ ಟೀಕಿಸಿದ್ದಾರೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಸಮಸ್ಯೆಯನ್ನು ಬಗೆಹರಿಸುವ ಬದಲು ಹೊಸ ತೊಂದರೆಗಳನ್ನು ತಂದೊಡ್ಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Read Full Story

12:38 PM (IST) Jun 16

400 ಮಿಲಿಯನ್..! ಕಪ್ ಗೆಲ್ಲುವುದರಲ್ಲಿ ಮಾತ್ರವಲ್ಲ, ಮೈದಾನದಾಚೆಯೂ ಹೊಸ ದಾಖಲೆ ಬರೆದ ಆರ್‌ಸಿಬಿ..!

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ತಿಂಗಳು ಕಳೆದಿದೆ. ಹೀಗಿದ್ದೂ ಐಪಿಎಲ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು ಮತ್ತೆ ಸದ್ದು ಮಾಡುತ್ತಿವೆ. ಇದೀಗ ಆರ್‌ಸಿಬಿ ಕಪ್ ಗೆಲ್ಲುವುದರಲ್ಲಿ ಮಾತ್ರವಲ್ಲ ಮೈದಾನದಾಚೆಗೂ ಹೊಸ ಇತಿಹಾಸ ನಿರ್ಮಿಸಿದೆ.

 

Read Full Story

12:29 PM (IST) Jun 16

ಯಾರ ಮೇಲೂ ಡಿಪೆಂಡ್‌ ಆಗ್ಬೇಡಿ; ಮದುವೆ ಬಗ್ಗೆ ಫಸ್ಟ್‌ ಟೈಮ್‌ ಮಾತನಾಡಿದ ಅಂಬಾನಿ ಸೊಸೆ Radhika Merchant

Mukesh Ambani Sister In Law Radhika Merchant: ಮುಖೇಶ್ ಅಂಬಾನಿ ಅವರಿಗೆ ಹೇಗೆ ಪರಿಚಯದ ಅಗತ್ಯವಿಲ್ಲವೋ, ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್‌ಗೂ ಈಗ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗೆ ಅವರು ಆಡಿದ ಮಾತುಗಳು ಸದ್ಯ ವೈರಲ್ ಆಗುತ್ತಿವೆ. ಅನಂತ್‌ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್‌ ಕೂಡ ಉದ್ಯಮಿ. 

 

Read Full Story

11:41 AM (IST) Jun 16

ಟೀಂ ಇಂಡಿಯಾಗೆ Debut ಮಾಡೋ ಮುನ್ನವೇ ಬ್ಯಾನ್‌ ಆಗ್ತಾರಾ 'ವಂಡರ್‌ಕಿಡ್' Vaibhav Suryavanshi?

Vaibhav Suryavanshi: ತ್ರಿಕೋನ ಸರಣಿಯ ಭಾಗವಾಗಿ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ಸೂಪರ್ ಓವರ್‌ನಲ್ಲಿ ಸೋತಿದೆ. ಪಂದ್ಯದ ನಂತರ ಭಾರತ, ಲಂಕಾ ಆಟಗಾರರ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆದಿದೆ. ಆಟಗಾರರು ಯಾಕೆ ಜಗಳವಾಡಿದರು? ಅಸಲಿಗೆ ಆಗಿದ್ದೇನು? ಈಗ ಬ್ಯಾನ್‌ ಆಗ್ತಾರಾ?

 

Read Full Story

11:04 AM (IST) Jun 16

NEET ಪರೀಕ್ಷೆಯ ಅಕ್ರಮ ತಡೆಯಲು Telegram Appಗೆ ತಾತ್ಕಾಲಿಕ ನಿರ್ಬಂಧ; ಪ್ರಮುಖ ಫೀಚರ್ ನಿಷ್ಕ್ರಿಯ

ನೀಟ್ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ಭಾರತದಲ್ಲಿ ಟೆಲಿಗ್ರಾಂ ಬಳಕೆಯ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಇದರ ಭಾಗವಾಗಿ, ಮೆಸೇಜ್ ಎಡಿಟ್ ಫೀಚರ್ ಅನ್ನು ಸಹ ನಿಷ್ಕ್ರಿಯಗೊಳಿಸಲಾಗಿದೆ.

Read Full Story

10:48 AM (IST) Jun 16

ವಯಸ್ಸು 45 ಆದ್ರೂ..ಇಬ್ಬರು ಮಕ್ಕಳು ತಂದೆಯಾದ್ರೂ Shahid Kapoor ಲವ್ವರ್‌ ಬಾಯ್‌ ತರ ಕಾಣೋದು ಹೇಗೆ? Diet Plan

Actor Shahid Kapoor Diet Plan: ನಟ ಶಾಹಿದ್ ಕಪೂರ್ ತಮ್ಮ ಫಿಟ್ ಆದ ದೇಹದಿಂದ ಸದಾ ಗಮನ ಸೆಳೆಯುತ್ತಾರೆ. ಅವರ ಹೊಸ ಸಿನಿಮಾ 'ಕಾಕ್‌ಟೇಲ್ 2' ಲುಕ್‌ ಕೂಡಾ ಅಭಿಮಾನಿಗಳಿಗೆ ಇಷ್ಟವಾಗಿದೆ. ಅವರ ಈ ಫಿಟ್‌ನೆಸ್‌ ಹಿಂದಿರುವುದು ಸರಳ ಆಹಾರ, ಸಮತೋಲಿತ ಜೀವನಶೈಲಿ ಮತ್ತು ಆರೋಗ್ಯಕರ ಅಭ್ಯಾಸಗಳು.

 

Read Full Story

10:07 AM (IST) Jun 16

ಗೂಗಲ್ ಸಿಇಒ ಸುಂದರ್ ಭಾಷಣದ ಮಧ್ಯೆ ಹೊರನಡೆದ ಸ್ಟ್ಯಾನ್‌ಫೋರ್ಡ್ ವಿವಿ ವಿದ್ಯಾರ್ಥಿಗಳು

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಷಣ ಮಾಡುತ್ತಿದ್ದಾಗ, ಸುಮಾರು 100-200 ವಿದ್ಯಾರ್ಥಿಗಳು ಸಭಾಂಗಣದಿಂದ ಹೊರನಡೆದು ಪ್ರತಿಭಟಿಸಿದರು. 

Read Full Story

08:17 AM (IST) Jun 16

ಮೂರು ಹಣಕಾಸು ಸಂಸ್ಥೆಗಳಿಗೆ ದಂಡ, ಒಂದು ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದ ಆರ್‌ಬಿಐ

Reserve Bank of india Penalty ನಿಯಮ ಉಲ್ಲಂಘಿಸಿದ ಮೂರು ಹಣಕಾಸು ಸಂಸ್ಥೆಗಳ ಮೇಲೆ ಆರ್‌ಬಿಐ ದಂಡ ವಿಧಿಸಿದೆ. ಜೊತೆಗೆ, ಒಂದು ಸಹಕಾರಿ ಬ್ಯಾಂಕ್ ಮೇಲೆ ಆರು ತಿಂಗಳ ಕಾಲ ನಿರ್ಬಂಧಗಳನ್ನು ಹೇರಿದೆ.

Read Full Story

07:54 AM (IST) Jun 16

ಈ ಕಾರಣದಿಂದ ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಮುಂದಾಗಿದ್ದ ಶ್ರೇಯಾಂಕಾ ಪಾಟೀಲ್! ಕೊನೆಗೆ ಮನಸ್ಸು ಬದಲಿಸಿದ್ದು ಹೇಗೆ?

ಬರ್ಮಿಂಗ್‌ಹ್ಯಾಮ್‌: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕ್ ಎದುರಿನ ಪಂದ್ಯದ ಬಳಿಕ ಕನ್ನಡತಿ ಶ್ರೇಯಾಂಕಾ ಪಾಟೀಲ್, ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಮುಂದಾಗಿದ್ದ ವಿಚಾರ ಬಾಯ್ಬಿಟ್ಟಿದ್ದಾರೆ.

Read Full Story

07:48 AM (IST) Jun 16

ಎಲ್‌ ನಿನೋ ಪರಿಣಾಮ - ದೇಶದಲ್ಲಿ ಶೇ.28ರಷ್ಟು ಮಳೆ ಕೊರತೆ, ಜಲಾಶಯಗಳಲ್ಲಿ ಶೇ.23ರಷ್ಟು ನೀರು

ಭಾರತದಲ್ಲಿ ಮುಂಗಾರು ಪ್ರವೇಶಿಸಿದರೂ ಎಲ್‌ ನಿನೋ ಪರಿಣಾಮದಿಂದಾಗಿ ವಾಡಿಕೆಗಿಂತ ಶೇ.28ರಷ್ಟು ಮಳೆ ಕೊರತೆಯಾಗಿದೆ. ಕರ್ನಾಟಕದ ಕಾವೇರಿ ಕಣಿವೆ ಹಾಗೂ ಕರಾವಳಿ ಭಾಗಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ರಾಜ್ಯದ ಜಲಾಶಯಗಳಲ್ಲಿ ಕೇವಲ ಶೇ.23ರಷ್ಟು ನೀರು ಮಾತ್ರ ಸಂಗ್ರಹವಾಗಿದೆ.
Read Full Story

07:34 AM (IST) Jun 16

ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದದ ಕರಡು ಪ್ರತಿ ಬಹಿರಂಗ; 14 ಷರತ್ತುಗಳು ಇಲ್ಲಿವೆ ನೋಡಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ವಿರೋಧ ವ್ಯಕ್ತಪಡಿಸಿದೆ. ತಮ್ಮ ಭದ್ರತೆಗೆ ಸಂಬಂಧಿಸಿದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವುದಾಗಿ ಮತ್ತು ಆಕ್ರಮಿತ ಗಾಜಾ, ಸಿರಿಯಾ, ಲೆಬನಾನ್ ಪ್ರದೇಶಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
Read Full Story

07:25 AM (IST) Jun 16

B-52 Stratofortress - ಟೇಕಾಫ್‌ ಆಗ್ತಿದ್ದಂತೆಯೇ ಪತನಗೊಂಡ ಅಮೆರಿಕ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನ - 8 ಸಾವು

ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಮೆರಿಕ ವಾಯುಪಡೆಯ B-52 ಬಾಂಬರ್ ವಿಮಾನ ಪತನಗೊಂಡಿದೆ. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಎಂಟು ಮಂದಿ ಸಾವನ್ನಪ್ಪಿದ್ದು, ಅಪಘಾತದ ಕಾರಣ ತಿಳಿಯಲು ವಾಯುಸೇನೆ ತನಿಖೆ ಆರಂಭಿಸಿದೆ.
Read Full Story

07:18 AM (IST) Jun 16

FIFA World Cup 2026 ಮೈದಾನದಲ್ಲೂ ಮಿಂಚು, ಮೈದಾನದ ಹೊರಗೂ ಮಾದರಿ - ಜಪಾನ್ ವಿಶ್ವದ ಗಮನ ಸೆಳೆದದ್ದು ಹೇಗೆ?

ಫಿಫಾ ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ, ನೆದರ್‌ಲೆಂಡ್ಸ್‌ ಮತ್ತು ಜಪಾನ್‌ 2-2 ಗೋಲುಗಳಿಂದ ಡ್ರಾ ಸಾಧಿಸಿದವು. ಎರಡು ಬಾರಿ ಮುನ್ನಡೆ ಪಡೆದಿದ್ದ ಡಚ್‌ ಪಡೆಯ ಗೆಲುವಿನ ಆಸೆಗೆ ಜಪಾನ್‌ ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿ ತಣ್ಣೀರೆರಚಿತು. ಪಂದ್ಯದ ನಂತರ ಜಪಾನ್ ಅಭಿಮಾನಿಗಳು ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ ಗಮನ ಸೆಳೆದರು.
Read Full Story

06:56 AM (IST) Jun 16

FIFA World Cup 2026 - ಸ್ಪೇನ್‌ಗೆ ಶಾಕ್ ನೀಡಿ ಡ್ರಾ ಸಾಧಿಸಿದ ಕೇಪ್ ವರ್ಡೆ!

ಫಿಫಾ ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲೇ ಕೇಪ್ ವರ್ಡೆ, ಮಾಜಿ ಚಾಂಪಿಯನ್ ಸ್ಪೇನ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ, ಐವರಿ ಕೋಸ್ಟ್ ತಂಡ ಈಕ್ವೆಡಾರ್ ವಿರುದ್ಧ ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿ ಗೆದ್ದರೆ, ಸ್ವೀಡನ್ ತಂಡ ಟ್ಯುನೀಶಿಯಾ ವಿರುದ್ಧ 5-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.
Read Full Story

06:18 AM (IST) Jun 16

ತೆರಿಗೆಯಿಂದ ವಿನಾಯಿತಿ ಪಡೆದ 5 ಪ್ರಮುಖ ಆದಾಯ ಮೂಲಗಳು; ITR ಫೈಲ್‌ ಮಾಡುವಾಗ ನೆನಪಿರಲಿ

ಈ ಲೇಖನವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದ 5 ಪ್ರಮುಖ ಆದಾಯ ಮೂಲಗಳನ್ನು ವಿವರಿಸುತ್ತದೆ. ಐಟಿಆರ್‌ ಫೈಲ್‌ ಮಾಡುವ ಈ ಸಂದರ್ಭದಲ್ಲಿ ಯಾವುದೆಲ್ಲಾ ತೆರಿಗೆ ಮುಕ್ತ ಆದಾಯ ಎಂಬುದನ್ನು ತಿಳಿಯುವುದು ಒಳ್ಳೆಯದು.

Read Full Story

05:54 AM (IST) Jun 16

75 ರೂಪಾಯಿ ಠೇವಣಿ ಇದ್ದ ಪಕ್ಷ ಈಗ ಬಂಗಾಳದ ದೊಡ್ಡ ಪಾರ್ಟಿ! ಪುಟ್ಟ ಪಕ್ಷ ಎನ್‌ಪಿಸಿಐಗೆ ಭೀಮಬಲ

ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) 20 ಬಂಡಾಯ ಸಂಸದರು, ಕೇವಲ 75 ರೂಪಾಯಿ ಠೇವಣಿ ಹೊಂದಿದ್ದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಸೇರಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಎನ್‌ಸಿಪಿಐ ಸಂಸತ್ತಿನ 5ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಂಡಾಯ ಬಣಕ್ಕೆ ಮಾನ್ಯತೆ ನೀಡುವ ಕುರಿತು ಲೋಕಸಭಾ ಸ್ಪೀಕರ್ ಕಾನೂನು ಸಲಹೆ ಪಡೆಯುತ್ತಿದ್ದಾರೆ.

Read Full Story

More Trending News