- Home
- Sports
- Cricket
- 400 ಮಿಲಿಯನ್..! ಕಪ್ ಗೆಲ್ಲುವುದರಲ್ಲಿ ಮಾತ್ರವಲ್ಲ, ಮೈದಾನದಾಚೆಯೂ ಹೊಸ ದಾಖಲೆ ಬರೆದ ಆರ್‌ಸಿಬಿ..!
400 ಮಿಲಿಯನ್..! ಕಪ್ ಗೆಲ್ಲುವುದರಲ್ಲಿ ಮಾತ್ರವಲ್ಲ, ಮೈದಾನದಾಚೆಯೂ ಹೊಸ ದಾಖಲೆ ಬರೆದ ಆರ್‌ಸಿಬಿ..!
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ತಿಂಗಳು ಕಳೆದಿದೆ. ಹೀಗಿದ್ದೂ ಐಪಿಎಲ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು ಮತ್ತೆ ಸದ್ದು ಮಾಡುತ್ತಿವೆ. ಇದೀಗ ಆರ್‌ಸಿಬಿ ಕಪ್ ಗೆಲ್ಲುವುದರಲ್ಲಿ ಮಾತ್ರವಲ್ಲ ಮೈದಾನದಾಚೆಗೂ ಹೊಸ ಇತಿಹಾಸ ನಿರ್ಮಿಸಿದೆ.
1.2 ಬಿಲಿಯನ್ ನಿಮಿಷ ವೀಕ್ಷಣೆ ಕಂಡ 2026ರ ಐಪಿಎಲ್ ಟೂರ್ನಿ
ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎಂದೇ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದೀಗ 2026ರ ಐಪಿಎಲ್ ಟೂರ್ನಿಯು ಒಟ್ಟಾರೆ 1.2 ಬಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಬರೋಬ್ಬರಿ 7% ಏರಿಕೆ ಕಂಡಿದೆ ಎಂದು ಪ್ರಸಾರದ ಹಕ್ಕು ಹೊಂದಿರುವ ಜಿಯೋ ಸ್ಟಾರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್‌ಸಿಬಿ
ಇನ್ನು 19ನೇ ಸೀಸನ್ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು.
ಜಿಯೋ ಸ್ಟಾರ್ ಮಹತ್ವದ ಪ್ರಕಟಣೆ
2026ರ ಐಪಿಎಲ್ ಟೂರ್ನಿಯ ವ್ಯಾಪ್ತಿಯು ಸುಮಾರು 1.2 ಬಿಲಿಯನ್ ನಿಮಿಷಗಳು ಹೆಚ್ಚಾಗಿದೆ. ಇದು ವರ್ಷದಿಂದ ವರ್ಷಕ್ಕೆ 7 ಪ್ರತಿಶತದಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಈ ಸೀಸನ್ ಐಪಿಎಲ್ ಟೂರ್ನಿಯು ಪ್ರೇಕ್ಷಕರನ್ನು ಸ್ಕ್ರೀನ್ ಮುಂದೆ ರೆಪ್ಪೆ ಕದಲಿಸದಂತೆ ಮಾಡಿದೆ. ಯಾಕೆಂದರೆ ಈ ಬಾರಿ ಒಟ್ಟಾರೆ ವೀಕ್ಷಣೆಯ ಸಮಯ ಸುಮಾರು 870 ಬಿಲಿಯನ್ ವೀಕ್ಷಕರನ್ನು ತಲುಪಿತು ಎಂದು ಜಿಯೋ ಸ್ಟಾರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್‌ಸಿಬಿ-ಗುಜರಾತ್ ಫೈನಲ್ ಮ್ಯಾಚ್ 400 ಮಿಲಿಯನ್ ವೀವ್ಸ್
ಇನ್ನು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿ, ಸತತ ಎರಡನೇ ಬಾರಿಗೆ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ವೀಕ್ಷಕರ ಸಂಖ್ಯೆಯನ್ನು ದ್ವಿಗುಣಗೊಳಿಸಿತು. ಈ ಪಂದ್ಯವನ್ನು ಸುಮಾರು 400 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ ಎಂದು ಜಿಯೋ ಸ್ಟಾರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟಿವಿ, ಡಿಜಿಟಲ್ ವೀಕ್ಷಣೆಯಲ್ಲಿ ಗಣನೀಯ ಏರಿಕೆ
2026ರ ಐಪಿಎಲ್ ಟೂರ್ನಿಯು ಒಟ್ಟಾರೆ ವೀಕ್ಷಣೆಯಲ್ಲಿ ಭಾರೀ ಏರಿಕೆ ಕಂಡಿದೆ. ಟಿವಿ ವೀಕ್ಷಣೆಯಲ್ಲಿ ಬರೋಬ್ಬರಿ 22% ಏರಿಕೆ ಕಂಡಿದೆ. ಇನ್ನು ಡಿಜಿಟಲ್ ವಿಡಿಯೋ ವೀಕ್ಷಣೆ 25 ಬಿಲಿಯನ್ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 8% ಏರಿಕೆ ಕಂಡಿದೆ. ಇನ್ನು ಪ್ರಾದೇಶಿಕ ಭಾಷೆಗಳಲ್ಲಿ ಮ್ಯಾಚ್ ವೀಕ್ಷಣೆ ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 33% ಏರಿಕೆ ಕಂಡಿದೆ ಎಂದು ವರದಿಯಾಗಿದೆ.
ಒಟ್ಟು ನಾಲ್ಕು ಟ್ರೋಫಿ ಗೆದ್ದಿರುವ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನದೇ ಆದ ಲಾಯಲ್ ಫ್ಯಾನ್ ಬೇಸ್ ಹೊಂದಿದೆ. ಇದೀಗ ಆರ್‌ಸಿಬಿ ಫ್ರಾಂಚೈಸಿಯು ಕಳೆದ ಐದು ವರ್ಷಗಳಲ್ಲಿ ನಾಲ್ಕು ಟ್ರೋಫಿ(ಎರಡು ವುಮೆನ್ಸ್ ಪ್ರೀಮಿಯರ್ ಲೀಗ್)ಗಳನ್ನು ಗೆಲ್ಲುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

