MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಕೇಂದ್ರ ಸರ್ಕಾರದ ನಡೆ ಟೀಕಿಸಿ ಹೊಸ ಅಪಾಯದ ಕುರಿತು ಎಚ್ಚರಿಕೆ ನೀಡಿದ ಕೆ. ಅಣ್ಣಾಮಲೈ

ಕೇಂದ್ರ ಸರ್ಕಾರದ ನಡೆ ಟೀಕಿಸಿ ಹೊಸ ಅಪಾಯದ ಕುರಿತು ಎಚ್ಚರಿಕೆ ನೀಡಿದ ಕೆ. ಅಣ್ಣಾಮಲೈ

ನೀಟ್ ಮರುಪರೀಕ್ಷೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳನ್ನು ಅಣ್ಣಾಮಲೈ ಟೀಕಿಸಿದ್ದಾರೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಸಮಸ್ಯೆಯನ್ನು ಬಗೆಹರಿಸುವ ಬದಲು ಹೊಸ ತೊಂದರೆಗಳನ್ನು ತಂದೊಡ್ಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2 Min read
Author : Mahmad Rafik
Published : Jun 16 2026, 12:47 PM IST
Share this Photo Gallery
  • FB
  • TW
  • Linkdin
  • Whatsapp
15
ಕೇಂದ್ರ ಸರ್ಕಾರದ ನಡೆ ಟೀಕಿಸಿದ ಅಣ್ಣಾಮಲೈ
Image Credit : Social Media

ಕೇಂದ್ರ ಸರ್ಕಾರದ ನಡೆ ಟೀಕಿಸಿದ ಅಣ್ಣಾಮಲೈ

ಕೇಂದ್ರ ಸರ್ಕಾರ ಹಲವು ಭದ್ರತೆಯೊಂದಿಗೆ ನೀಟ್ ಮರುಪರೀಕ್ಷೆಯನ್ನು ನಡೆಸುತ್ತಿದೆ. ಜೂನ್ 21ರ ಪರೀಕ್ಷೆಗೆ ಮುಂಚಿತವಾಗಿ ಭಾರತದಲ್ಲಿ ಟೆಲಿಗ್ರಾಂ ಆಪ್ ಮೇಲೆ ತಾತ್ಕಾಲಿಕ ನಿರ್ಬಂಧ ಹಾಕಿದೆ. ಈ ಹಿಂದೆ ಟೆಲಿಗ್ರಾಂ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಪರೀಕ್ಷೆ ಸಂಬಂಧ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಅಣ್ಣಾಮಲೈ ಟೀಕಿಸಿದ್ದಾರೆ. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಣ್ಣಾಮಲೈ, ಇದು ಹೊಸ ತೊಂದರೆಗಳನ್ನು ತಂದೊಡ್ಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಣ್ಣಾಮಲೈ ವ್ಯಂಗ್ಯ
Image Credit : ANI

ಅಣ್ಣಾಮಲೈ ವ್ಯಂಗ್ಯ

ಎರಡು ಹಂತದ ಸಿಆರ್‌ಪಿಎಫ್ ಮತ್ತು ಸಿಐಎಸ್‌ಎಫ್ ಬೆಂಗಾವಲಿನ ಜೊತೆ ವಾಯುಸೇನೆಯಿಂದ ಏರ್‌ಲಿಫ್ಟ್, ನಾಲ್ಕು ಹಂತದಲ್ಲಿ ಎಐ ಆಧಾರಿತ ಬಯೋಮೆಟ್ರಿಕ್ ತಪಾಸಣೆ. ಇಷ್ಟು ಮಾತ್ರವಲ್ಲ ಪ್ರಧಾನ ಮಂತ್ರಿ ಕಚೇರಿಯಿಂದ ನೇರ ಮೇಲ್ವಿಚಾರಣೆ ನಡೆಯಲಿದೆ. ಇಷ್ಟು ಉನ್ನತಮಟ್ಟದ ಭದ್ರತೆಯನ್ನು ನೀಡುತ್ತಿರೋದು ಯಾವುದೋ ಮಿಲಿಟರಿ ದರ್ಜೆಯ ಸಾಫ್ಟ್‌ವೇರ್‌ ಖರೀದಿಗೆ ಅಲ್ಲ. ಜೂನ್ 21, 2026 ರಂದು ನಿಗದಿಯಾಗಿರುವ NEET ಮರುಪರೀಕ್ಷೆಗಾಗಿ ಶಿಕ್ಷಣ ಸಚಿವಾಲಯ ಇಷ್ಟೆಲ್ಲಾ ಭದ್ರತೆ ಮಾಡಿಕೊಂಡಿದೆ.

Related Articles

Related image1
NEET ಪರೀಕ್ಷೆಯ ಅಕ್ರಮ ತಡೆಯಲು Telegram Appಗೆ ತಾತ್ಕಾಲಿಕ ನಿರ್ಬಂಧ; ಪ್ರಮುಖ ಫೀಚರ್ ನಿಷ್ಕ್ರಿಯ
Related image2
ನೀಟ್ ಪ್ರಶ್ನೆ ಪತ್ರಿಕೆ ವಾಯುಪಡೆಯ ಮಿ-17ನಲ್ಲಿ ರವಾನೆ, ಪೇಪರ್ ತಯಾರಿಸಿದವರಿಗೆ ಜೂನ್21ರವರೆಗೆ ಗೃಹಬಂಧನ!
35
ಪರೀಕ್ಷೆ ಒತ್ತಡ ಹೆಚ್ಚಳ
Image Credit : ChatGPT AI

ಪರೀಕ್ಷೆ ಒತ್ತಡ ಹೆಚ್ಚಳ

ಈ ಬಾರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಮಾಡಿಕೊಂಡಿರುವ ವ್ಯವಸ್ಥೆಗೆ ವಿದ್ಯಾರ್ಥಿಗಳು ಮೆಚ್ಚುಗೆ ಸೂಚಿಸುತ್ತಾರೆ. ಪರೀಕ್ಷಾಕೇಂದ್ರ ಪ್ರವೇಶಕ್ಕೂ ಮುನ್ನ ನಡೆಯುವ ಪರಿಶೀಲನೆ, ವಿಸ್ತೃತ ತಪಾಸಣೆ ಪರೀಕ್ಷಾ ಸಮಯವನ್ನು 180 ರಿಂದ 190 ನಿಮಿಷಕ್ಕೆ ಹೆಚ್ಚಳ ಮಾಡುತ್ತದೆ. ಇಷ್ಟೊಂದು ವಿವರ ಮತ್ತು ಸೂಕ್ಷ್ಮವಾದ ತಪಾಸಣೆಗಳು ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಒತ್ತಡವನ್ನು ಹೆಚ್ಚಳ ಮಾಡುತ್ತದೆ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.

45
ಪ್ರವೇಶ ಕಾರ್ಡ್‌ ಡೌನ್‌ಲೋಡ್ ಸಮಸ್ಯೆ
Image Credit : Asianet News

ಪ್ರವೇಶ ಕಾರ್ಡ್‌ ಡೌನ್‌ಲೋಡ್ ಸಮಸ್ಯೆ

ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ತಿಂಗಳುಗಟ್ಟಲೆ ಕಷ್ಟಪಟ್ಟು ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳ ಮೇಲೆ ತಾವು ಹಾಕಿರುವ ಹೆಚ್ಚುವರಿ ಒತ್ತಡವನ್ನು ಸರ್ಕಾರ ಮರೆತಿದೆ. ಇದು ನಮ್ಮ ಪರೀಕ್ಷಾ ಪದ್ಧತಿಯ ಉದ್ದೇಶ ಮತ್ತು 'ಪರೀಕ್ಷೆಯ ಒತ್ತಡ'ವನ್ನು ಕಡಿಮೆ ಮಾಡಬೇಕೆಂಬ ಎನ್‌ಇಪಿ 2020ರ ಗುರಿಯನ್ನೇ ಹಾಳುಮಾಡುತ್ತದೆ ಎಂದು ಅಣ್ಣಾಮಲೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಪರೀಕ್ಷೆಗೆ ಇಷ್ಟೆಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡರೂ ಇನ್ನು ಪ್ರವೇಶ ಕಾರ್ಡ್‌ ಡೌನ್‌ಲೋಡ್ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎನ್‌ಟಿಎ ಈ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ನೀಡಿದೆ.

55
ಹೊಸ ಸಮಸ್ಯೆಯ ಅಪಾಯ
Image Credit : Getty

ಹೊಸ ಸಮಸ್ಯೆಯ ಅಪಾಯ

ಹಲವು ಸವಾಲುಗಳಿದ್ದು, ಅವುಗಳಿಗೆ ಸೂಕ್ತ ಪರಿಹಾರಗಳ ಅಗತ್ಯವಿದೆ. ಆದರೆ ನೀಟ್ (NEET) ಮರುಪರೀಕ್ಷೆಗಾಗಿ ಮಾಡಿಕೊಂಡಿರುವ ಈ ಯೋಜನೆಯು ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದು ನನಗನಿಸುತ್ತಿಲ್ಲ. ಬದಲಾಗಿ ಇದು ಹೊಸ ತೊಂದರೆಗಳನ್ನು ತಂದೊಡ್ಡುವ ಅಪಾಯವಿದೆ ಎಂದು ಅಣ್ಣಾಮಲೈ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನೀಟ್
ಅಣ್ಣಾಮಲೈ

Latest Videos
Recommended Stories
Recommended image1
ಯಾರ ಮೇಲೂ ಡಿಪೆಂಡ್‌ ಆಗ್ಬೇಡಿ; ಮದುವೆ ಬಗ್ಗೆ ಫಸ್ಟ್‌ ಟೈಮ್‌ ಮಾತನಾಡಿದ ಅಂಬಾನಿ ಸೊಸೆ Radhika Merchant
Recommended image2
ಟೀಂ ಇಂಡಿಯಾಗೆ Debut ಮಾಡೋ ಮುನ್ನವೇ ಬ್ಯಾನ್‌ ಆಗ್ತಾರಾ 'ವಂಡರ್‌ಕಿಡ್' Vaibhav Suryavanshi?
Recommended image3
NEET ಪರೀಕ್ಷೆಯ ಅಕ್ರಮ ತಡೆಯಲು Telegram Appಗೆ ತಾತ್ಕಾಲಿಕ ನಿರ್ಬಂಧ; ಪ್ರಮುಖ ಫೀಚರ್ ನಿಷ್ಕ್ರಿಯ
Related Stories
Recommended image1
NEET ಪರೀಕ್ಷೆಯ ಅಕ್ರಮ ತಡೆಯಲು Telegram Appಗೆ ತಾತ್ಕಾಲಿಕ ನಿರ್ಬಂಧ; ಪ್ರಮುಖ ಫೀಚರ್ ನಿಷ್ಕ್ರಿಯ
Recommended image2
ನೀಟ್ ಪ್ರಶ್ನೆ ಪತ್ರಿಕೆ ವಾಯುಪಡೆಯ ಮಿ-17ನಲ್ಲಿ ರವಾನೆ, ಪೇಪರ್ ತಯಾರಿಸಿದವರಿಗೆ ಜೂನ್21ರವರೆಗೆ ಗೃಹಬಂಧನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved