Published : Mar 15, 2026, 06:49 AM ISTUpdated : Mar 15, 2026, 10:01 PM IST

India Latest News Live: ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

ಸಾರಾಂಶ

ನವದೆಹಲಿ: ಅನಿಲ ಕೊರತೆಯಿಂದಾಗಿ ಹೊಟೆಲ್‌, ರೆಸ್ಟೋರೆಂಟ್‌, ಬೀದಿ ಬದಿ ಅಂಗಡಿಗಳಿಗೆ ಬೀಗ ಬಿದ್ದಿರುವ ಹೊತ್ತಿನಲ್ಲಿ, 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ವಿತರಣೆ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ‘ದೇಶದಲ್ಲಿ ಸಾಕಷ್ಟು ಕಚ್ಚಾ ತೈಲ ದಾಸ್ತಾನಿದ್ದು, ದೇಶೀಯ ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲೂ ಪೆಟ್ರೋಲ್‌ ಮತ್ತು ಡೀಸೆಲ್‌ ಕೊರತೆಯಾಗಿಲ್ಲ’ ಎಂದು ಹೇಳಿದ್ದಾರೆ.

ಜತೆಗೇ, ನಗರ ಪ್ರದೇಶಗಳಲ್ಲಿ 25 ದಿನಗಳ ಅಂತರದಲ್ಲಿ ಗ್ಯಾಸ್‌ ಬುಕ್‌ ಮಾಡಬಹುದು ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಅಂತರ 45 ದಿನ ಇರಲಿದೆ ಎಂದೂ ತಿಳಿಸಿದರು

10:01 PM (IST) Mar 15

ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

ಇರಾನ್ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳಿಗೆ, ಅವರು ಕಾಫಿ ಶಾಪ್‌ನಿಂದಲೇ ವಿಡಿಯೋ ಮೂಲಕ ತಮಾಷೆಯಾಗಿ ಉತ್ತರಿಸಿದ್ದಾರೆ. ತಮ್ಮ ಸಾವಿನ ವದಂತಿ ಹಾಗೂ ಆರು ಬೆರಳುಗಳಿರುವ ಎಐ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ ಅವರು, ಇಸ್ರೇಲಿ ನಾಗರಿಕರಿಗೆ ಧೈರ್ಯ ತುಂಬಿದ್ದಾರೆ.

Read Full Story

09:32 PM (IST) Mar 15

ರಶ್ಮಿಕಾ ಮಂದಣ್ಣ 'ಅಣ್ಣ' ಅಂತ ಕರೆಯೋ ಆ ಸ್ಟಾರ್ ನಟ ಯಾರು? ಇದರಲ್ಲಿ ನಿಜವೆಷ್ಟು?

ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ, ಬಾಲಿವುಡ್‌ನಲ್ಲೂ ತನ್ನ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ. ಚಿತ್ರರಂಗದಲ್ಲಿ ರಶ್ಮಿಕಾ 'ಅಣ್ಣ' ಎಂದು ಕರೆಯುವ ನಟ ಯಾರು ಗೊತ್ತಾ? ಈ ಸುದ್ದಿಯಲ್ಲಿ ಸತ್ಯಾಂಶ ಇದೆಯೇ?

Read Full Story

09:07 PM (IST) Mar 15

2027ರವರೆಗೂ ಕಾರ್ ರೇಸ್‌ನಲ್ಲಿ ಅಜಿತ್! ಶೂಟಿಂಗ್ ನಡುವೆಯೂ ರೇಸಿಂಗ್ - ಮ್ಯಾನೇಜರ್ ಕೊಟ್ಟ ಅಪ್‌ಡೇಟ್

ಅಜಿತ್, ತಮ್ಮದೇ ಆದ 'ಅಜಿತ್ ಕುಮಾರ್ ರೇಸಿಂಗ್' ತಂಡದ ಮೂಲಕ ದುಬೈ, ಅಬುಧಾಬಿ, ಮಲೇಷ್ಯಾ ಹಾಗೂ ಯುರೋಪಿಯನ್ ದೇಶಗಳಲ್ಲಿ ನಡೆದ ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.

Read Full Story

08:38 PM (IST) Mar 15

ನಿಮ್ಮ ಹೃದಯದ ಆರೋಗ್ಯ ಹೇಗಿದೆ? ಮನೆಯಲ್ಲಿಯೇ ಐದು ನಿಮಿಷದ ಈ ಸಿಂಪಲ್​ ಟೆಸ್ಟ್​ ಮಾಡಿ ನೋಡಿ

ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಕಳವಳದ ನಡುವೆ, ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಹೃದಯದ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವ 5 ಸರಳ ವಿಧಾನಗಳನ್ನು ಡಾ. ವಿನಯ್ ವಿವರಿಸಿದ್ದಾರೆ. ಮನೆಯಲ್ಲಿ ಈ ಸುಲಭದ ಪರೀಕ್ಷೆ ಮಾಡುವಂತಹ ಈ ಸುಲಭ ಟೆಸ್ಟ್‌ಗಳಿಂದ  ಹೃದಯದ ಸ್ಥಿತಿ ಅರಿಯಬಹುದು.

Read Full Story

07:31 PM (IST) Mar 15

Ram Charan - ಅಲ್ಲು ಅರ್ಜುನ್‌ಗೆ ರಾಮ್ ಚರಣ್ ಪೈಪೋಟಿ? ಮೆಗಾ ಪವರ್ ಸ್ಟಾರ್ ಹೊಸ ಬ್ಯುಸಿನೆಸ್ ಶುರು!

ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸಿನೆಮಾಗಳ ಜೊತೆಗೆ ಬ್ಯುಸಿನೆಸ್‌ನಲ್ಲೂ ರಾಮ್ ಚರಣ್ ಸಖತ್ ಬ್ಯುಸಿ. ಇದೀಗ ಅವರು ಹೊಸ ಉದ್ಯಮವೊಂದನ್ನು ಆರಂಭಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಏನಿದು ಹೊಸ ಬ್ಯುಸಿನೆಸ್? ಇಲ್ಲಿದೆ ಪೂರ್ತಿ ವಿವರ.

Read Full Story

07:22 PM (IST) Mar 15

3 ಮದುವೆಗಳ ಏಳು-ಬೀಳು - ರಿವಾಲ್ವರ್​ನಿಂದ Pawan Kalyan ಆತ್ಮಹ*ತ್ಯೆಗೆ ಯತ್ನ! ನಟ ಅಂದು ಹೇಳಿದ್ದೇನು?

ನಟ ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುವ ಹೊತ್ತಲ್ಲಿ, ಅವರ ವೈಯಕ್ತಿಕ ಜೀವನದ ಚರ್ಚೆ ಮುನ್ನೆಲೆಗೆ ಬಂದಿದೆ.  ಅವರು ತಮ್ಮ ಮೂರು ಮದುವೆಗಳ ಹಿಂದಿನ ಕಾರಣ ಮತ್ತು ಹೊಂದಾಣಿಕೆಯ ಕೊರತೆಯಿಂದ ಸಂಬಂಧಗಳು ಮುರಿದುಬಿದ್ದ ಬಗ್ಗೆ ಮಾತನಾಡಿದ್ದು ವಿಡಿಯೋ ವೈರಲ್​ ಆಗಿದೆ.

Read Full Story

07:14 PM (IST) Mar 15

ಮೆಗಾ ಸೊಸೆ ಲಾವಣ್ಯ ಕೈಬಿಟ್ಟ ವಿಜಯ್ ಸಿನಿಮಾ ಸೂಪರ್ ಹಿಟ್ - ರಶ್ಮಿಕಾ ಮಾಡಿದ ಪಾತ್ರ ವೈರಲ್

ಮೆಗಾ ಸೊಸೆ ಲಾವಣ್ಯ ತ್ರಿಪಾಠಿ ತಮ್ಮ ಹೊಸ ಚಿತ್ರ 'ಸತಿ ಲೀಲಾವತಿ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಮದುವೆಯ ನಂತರದ ಅವರ ಮೊದಲ ಚಿತ್ರ ಇದಾಗಿದ್ದರಿಂದ ಅಭಿಮಾನಿಗಳಲ್ಲಿ ವಿಶೇಷ ಆಸಕ್ತಿ ಮೂಡಿದೆ.

Read Full Story

06:55 PM (IST) Mar 15

Rajamouli - ಚಿರಂಜೀವಿ ಚಿತ್ರದಿಂದ ಸಾಲದ ಸುಳಿಗೆ ಸಿಲುಕಿದ್ದ ನಿರ್ಮಾಪಕ - ರಾಜಮೌಳಿಗೆ ಧೈರ್ಯ ತುಂಬಿದ್ಹೇಗೆ?

ನಿರ್ದೇಶಕ ರಾಜಮೌಳಿ ಸದ್ಯ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ 'ವಾರಣಾಸಿ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು 1300 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ.

Read Full Story

06:23 PM (IST) Mar 15

Trisha Krishnan - ಜಗಳ ಮುಗೀತಾ? ಪಾರ್ತಿಬನ್ ಮಗಳ ಜೊತೆ ನಟಿ ತ್ರಿಷಾ - ವೈರಲ್ ಆಯ್ತು ಮದುವೆಯ ಫೋಟೋ!

ನಟ ಪಾರ್ತಿಬನ್ ಜೊತೆಗಿನ ವಿವಾದದ ನಂತರ, ನಟಿ ತ್ರಿಷಾ ಕೃಷ್ಣನ್‌ ಇದೀಗ ಅವರ ಮಗಳು ಕೀರ್ತನಾ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Read Full Story

05:54 PM (IST) Mar 15

ಪಂಚರಾಜ್ಯ ಚುನಾವಣೆ - ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಬದಲು ಈ ಬಾರಿ ಕೇವಲ 2 ಹಂತಗಳಲ್ಲಿ ಮತದಾನ ಏಕೆ?

ಪಶ್ಚಿಮ ಬಂಗಾಳವೂ ಸೇರಿದಂತೆ 5 ರಾಜ್ಯಗಳ ವಿಧಾನಸಭಾ ದಿನಾಂಕ ಘೋಷಣೆಯಾಗಿದೆ.  ಈ ಹಿಂದೆ ಹಲವು ಚುನಾವಣಾ ಹಿಂಸಾಚಾರಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಕೇವಲ 2 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಅದಕ್ಕೇನು ಕಾರಣ…

Read Full Story

05:29 PM (IST) Mar 15

'ನೀವ್ ಹಾಕಿದ್ ಬಟ್ಟೆನಾ ಇನ್ನೊಬ್ರು ಹಾಕಿದ್ರೆ ಸುಮ್ನಿರ್ತೀರಾ?' - ಜಯಂ ರವಿಗೆ ಟಾಂಗ್ ಕೊಟ್ಟರಾ ಆರ್ತಿ ರವಿ?

ಆರ್ತಿ ರವಿ ತಮ್ಮ ಸ್ಟೋರಿಯಲ್ಲಿ, ಬಟ್ಟೆ ಮತ್ತು ಬಣ್ಣದ ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, 'ನೀವು ಒಂದು ಕಡೆಗೆ ಹೋದಾಗ, ಅಲ್ಲಿ ಬೇರೊಬ್ಬರು ನಿಮ್ಮಂತೆಯೇ ಅದೇ ಬಣ್ಣದ ಬಟ್ಟೆ ಧರಿಸಿದ್ದರೆ ಸುಮ್ಮನಿರುತ್ತೀರಾ?

Read Full Story

05:15 PM (IST) Mar 15

Arjun Das - ಲವ್ ಫೇಲ್ಯೂರ್‌ನಿಂದ ಕಂಗೆಟ್ಟಿದ್ದ ನಟ! ಆ ಖಡಕ್ ವಾಯ್ಸ್ ಹಿಂದಿದೆ ನೋವಿನ ಕಥೆ

‘ಕೈದಿ’, ‘ಮಾಸ್ಟರ್’ ಚಿತ್ರಗಳ ಮೂಲಕ ಖಡಕ್ ವಿಲನ್ ಆಗಿ, ‘ಅನೀತಿ’ ಚಿತ್ರದ ಮೂಲಕ ಅತ್ಯುತ್ತಮ ನಟನಾಗಿ ಗುರುತಿಸಿಕೊಂಡಿರುವ ಅರ್ಜುನ್ ದಾಸ್, ಇದೀಗ ತಮ್ಮ ಬದುಕಿನ ಒಂದು ಕಹಿ ಅಧ್ಯಾಯವನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

05:00 PM (IST) Mar 15

ನಾನು ನಿರ್ಮಿಸಿದ ಎಲ್ಲಾ ಸಿನಿಮಾಗಳಿಂದಲೂ ನಷ್ಟ, ಆದ್ರೆ ಪಶ್ಚಾತ್ತಾಪ ಇಲ್ಲ - ನಟ ವಿಜಯ್ ಸೇತುಪತಿ

ನಟ ವಿಜಯ್ ಸೇತುಪತಿ ತಾವು ನಿರ್ಮಾಪಕರಾಗಿ ಮಾಡಿದ ಎಲ್ಲಾ ಸಿನಿಮಾಗಳೂ ತಮಗೆ ಆರ್ಥಿಕವಾಗಿ ದೊಡ್ಡ ನಷ್ಟವನ್ನುಂಟು ಮಾಡಿವೆ ಎಂದು ಬಹಿರಂಗಪಡಿಸಿದ್ದಾರೆ. ಆದರೂ ಈ ಬಗ್ಗೆ ತಮಗೆ ಯಾವುದೇ ಬೇಸರವಿಲ್ಲ ಎಂದಿದ್ದಾರೆ.

Read Full Story

04:41 PM (IST) Mar 15

Ram Gopal Varma - 'ಧುರಂಧರ್' ಡೈರೆಕ್ಟರ್‌ಗೆ ಇಂಡಸ್ಟ್ರಿಯಲ್ಲಿ ಶತ್ರುಗಳು ಜಾಸ್ತಿ, ಹುಷಾರಾಗಿರಿ - RGV ಎಚ್ಚರಿಕೆ

ಬಾಲಿವುಡ್ ಸಿನಿಮಾ 'ಧುರಂಧರ್' ಸೂಪರ್ ಹಿಟ್ ಆದ್ಮೇಲೆ, ಡೈರೆಕ್ಟರ್ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್‌ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದು ಗಂಭೀರ ಎಚ್ಚರಿಕೆ ಕೊಟ್ಟಿದ್ದಾರೆ.

Read Full Story

04:40 PM (IST) Mar 15

ಬಹು ನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ

ರಾಷ್ಟ್ರಿಯ ಚುನಾವಣಾ ಆಯೋಗವೂ ಬಹು ನಿರೀಕ್ಷಿತ 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

Read Full Story

04:34 PM (IST) Mar 15

ಕೊನೆಗೂ ಮದುವೆಗೆ ರೆಡಿಯಾದ್ರಾ ಅನುಷ್ಕಾ ಶೆಟ್ಟಿ? 44ನೇ ವಯಸ್ಸಲ್ಲಿ ಸಿಕ್ತು ಬಿಗ್ ಟ್ವಿಸ್ಟ್!

ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿಬರುತ್ತಲೇ ಇರುತ್ತವೆ. ಆದರೆ ಈ ಬಾರಿ ಅವರ ಮದುವೆ ಬಗ್ಗೆ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ. ಉದ್ಯಮಿಯೊಬ್ಬರ ಜೊತೆ ಅವರ ಮದುವೆ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.
Read Full Story

04:27 PM (IST) Mar 15

ಸತ್ಯ ಬಯಲಾಗುವ ಮೊದಲೇ ಸಂಭ್ರಮಿಸಿ ಪೇಚಿಗೆ ಸಿಲುಕಿದ ಊರ ಜನ - ಆಗಿದ್ದೇನು?

ಯುವಕನೋರ್ವ ತಾನು ಐಎಎಸ್ ಪಾಸಾಗಿದ್ದೇನೆ ಎಂದು ಹೇಳಿಕೊಂಡು ಊರ ತುಂಬೆಲ್ಲಾ ಜನರಿಂದ ಸನ್ಮಾನ ಮಾಡಿಸಿಕೊಂಡ ಘಟನೆ ನಡೆದಿದೆ. ಆದರೆ ನಂತರ ಸುಳ್ಳು ಹೇಳಿರುವುದು ಗೊತ್ತಾಗಿ ಜನ ಬೆಸ್ತು ಬಿದ್ದಿದ್ದಾರೆ. ಬಿಹಾರದ ಶೇಖ್‌ಪುರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

04:24 PM (IST) Mar 15

ಸ್ವಪ್ನ ಶಾಸ್ತ್ರದ ಪ್ರಕಾರ ಯಾವ ದಿನ ಬಿದ್ದ ಕನಸು ಹೆಚ್ಚು ನಿಜವಾಗುತ್ತೆ ಗೊತ್ತಾ?

ನಿದ್ದೆಯಲ್ಲಿ ಕನಸು ಬೀಳೋದು ಸಹಜ. ಕೆಲವು ಕನಸುಗಳು ಸಾಮಾನ್ಯವಾಗಿ ಕಂಡರೂ, ಇನ್ನು ಕೆಲವು ಮನಸ್ಸಲ್ಲಿ ಅನುಮಾನ ಹುಟ್ಟಿಸುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನ ಸ್ವಭಾವ, ಸಮಯ ಮತ್ತು ಬಿದ್ದ ದಿನದ ಆಧಾರದ ಮೇಲೆ ಅವುಗಳ ಅರ್ಥವನ್ನು ತಿಳಿಯಬಹುದು.

Read Full Story

04:00 PM (IST) Mar 15

ಕಳೆದ ಐಪಿಎಲ್‌ನಲ್ಲಿ ಕೆಕೆಆರ್ ಈ ಇಬ್ಬರನ್ನು ಕೈಬಿಟ್ಟು ಮಹಾ ಎಡವಟ್ಟು ಮಾಡಿತು ಎಂದ ಅನಿಲ್ ಕುಂಬ್ಳೆ!

ಐಪಿಎಲ್ 2025ಕ್ಕೆ ಮುನ್ನ ಟ್ರೋಫಿ ಗೆದ್ದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಫಿಲ್ ಸಾಲ್ಟ್ ಅವರನ್ನು ಕೈಬಿಟ್ಟ ಕೆಕೆಆರ್ ನಿರ್ಧಾರವನ್ನು ಅನಿಲ್ ಕುಂಬ್ಳೆ ತೀವ್ರವಾಗಿ ಟೀಕಿಸಿದ್ದಾರೆ. ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಕೆಕೆಆರ್ ಸ್ಥಿರತೆ ತೋರುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

Read Full Story

03:03 PM (IST) Mar 15

'ಟಿ20 ವಿಶ್ವಕಪ್ ಗೆಲುವು ಬರೀ ಆರಂಭವಷ್ಟೇ' - ಇದು ಟೀಂ ಇಂಡಿಯಾ ಯುಗವೆಂದು ಗುಡುಗಿದ ರೋಹಿತ್ ಶರ್ಮಾ

ಟೀಂ ಇಂಡಿಯಾದ ಗೆಲುವಿನ ಓಟ ಮುಂದಿನ ವರ್ಷಗಳಲ್ಲಿಯೂ ಮುಂದುವರಿಯಲಿದೆ ಎಂದು ಮಾಜಿ ನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುರುಷ ಮತ್ತು ಮಹಿಳಾ ತಂಡಗಳು ಇತ್ತೀಚೆಗೆ ಗೆದ್ದಿರುವ ವಿಶ್ವಕಪ್‌ಗಳು ಈ ಪ್ರಾಬಲ್ಯದ ಆರಂಭವಷ್ಟೇ ಎಂದಿದ್ದಾರೆ.

Read Full Story

02:43 PM (IST) Mar 15

ಹವಾಮಾನ ವೈಪರಿತ್ಯಕ್ಕೆ ಭೂಮಿ ತಿರುಗುವ ವೇಗ ಕಡಿತ, ದಿನದ ಸಮಯ ಹೆಚ್ಚಳ, ಕಾದಿದೆಯಾ ಗಂಡಾತರ?

ಹವಾಮಾನ ವೈಪರಿತ್ಯಕ್ಕೆ ಭೂಮಿ ತಿರುಗುವ ವೇಗ ಕಡಿತ, ದಿನದ ಸಮಯ ಹೆಚ್ಚಳ, ಕಾದಿದೆಯಾ ಗಂಡಾತರ?, ಗ್ರಹದ ತಿರುಗುವಿಕೆ ವೇಗ ಬದಲಾದರೆ ಅಪಾಯ ತಪ್ಪಿದ್ದಲ್ಲ, ಇದರಿಂದ ಆಗುವ ಪರಿಣಾಮವೇನು? 24 ಗಂಟೆಯಲ್ಲಿ ಒಂದು ದಿನ ಮುಗಿಯಲ್ಲ

Read Full Story

02:18 PM (IST) Mar 15

ಇದು ಗಡ್ಡದ ಮ್ಯಾಟರ್ರು - ನೀವು ಗಡ್ಡ ಪ್ರಿಯರಾಗಿದ್ರೆ ಈ ಅಧ್ಯಯನದ ವರದಿ ನಿಮಗಾಗಿ

ಪುರುಷರ ಗಡ್ಡದಲ್ಲಿ ನಾಯಿಗಳ ತುಪ್ಪಳಕ್ಕಿಂತಲೂ ಹೆಚ್ಚು ಅಪಾಯಕಾರಿ ಬ್ಯಾಕ್ಟೀರಿಯಾಗಳಿವೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಅಧ್ಯಯನವು ಗಡ್ಡಗಳಲ್ಲಿ ಮಾನವ-ರೋಗಕಾರಕ ತಳಿಗಳ ಹೆಚ್ಚಿನ ಮಟ್ಟವನ್ನು ಕಂಡುಹಿಡಿದಿದೆ. ಆದಾಗ್ಯೂ, ನಿಯಮಿತವಾಗಿ ತೊಳೆಯುವುದು, ಎಕ್ಸ್‌ಫೋಲಿಯೇಶನ್ ಮತ್ತು ಮಾಯಿಶ್ಚರೈಸ್ ಮಾಡುವಂತಹ ಸರಿಯಾದ ನೈರ್ಮಲ್ಯ ಪಾಲನೆಯಿಂದ ಗಡ್ಡವನ್ನು ಸುರಕ್ಷಿತವಾಗಿರಿಸಬಹುದು.
Read Full Story

01:47 PM (IST) Mar 15

ಯುಎಇಗೆ ಇಂದಿನ ಎಲ್ಲಾ ವಿಮಾನಗಳು ರದ್ದು! ಏರ್ ಇಂಡಿಯಾ, ಇಂಡಿಗೋ ದಿಢೀರ್ ಕ್ರಮ

ಏರ್ ಇಂಡಿಯಾ ಮತ್ತು ಇಂಡಿಗೋ, ಯುಎಇ ಅಧಿಕಾರಿಗಳ ಸೂಚನೆಯಂತೆ ತಮ್ಮ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಿವೆ. ಈ ದಿಢೀರ್ ನಿರ್ಧಾರವು ಕುವೈತ್ ವಿಮಾನ ನಿಲ್ದಾಣದ ಮೇಲಿನ ಡ್ರೋನ್ ದಾಳಿಗಳಂತಹ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಂದಿದೆ.

Read Full Story

01:30 PM (IST) Mar 15

ಐಪಿಎಲ್ ಟೂರ್ನಿಗಾಗಿ ಹೊಸ ಹೇರ್‌ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ, ಟ್ರೋಫಿ ಗೆಲುವಿಗೂ ಇದೆ ನಂಟು

ಐಪಿಎಲ್ ಟೂರ್ನಿಗಾಗಿ ಹೊಸ ಹೇರ್‌ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ, ಟ್ರೋಫಿ ಗೆಲುವಿಗೂ ಇದೆ ನಂಟು, ಕೊಹ್ಲಿ ಹೇರ್‌ಸ್ಟೈಲ್ ಬದಲಿಸಿ ಕಣಕ್ಕಿಳಿದಾಗ ಟ್ರೋಫಿ ಒಲಿದಿದೆ. ಇದೀಗ 2026ರ ಐಪಿಎಲ್ ಟ್ರೋಫಿ ಗೆಲುವಿನ ಸೂಚನೆ ಕೊಹ್ಲಿ ನೀಡಿದ್ರಾ?

Read Full Story

12:30 PM (IST) Mar 15

70 ಸೆಕೆಂಡ್​ನಲ್ಲಿ 16 ಕೋಟಿ ಆಭರಣ ಲೂಟಿ ಮಾಡಿ ಯುವಕರು ಗಾಯಬ್​! ಸಿನಿಮಾ ಮೀರಿಸುವ ದರೋಡೆ ವಿಡಿಯೋ ವೈರಲ್​

ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯ-ಅಮೆರಿಕನ್ ಕುಟುಂಬದ ಕುಮಾರ್ ಜ್ಯುವೆಲ್ಲರ್ಸ್​ಗೆ ನುಗ್ಗಿದ 20ಕ್ಕೂ ಹೆಚ್ಚು ದರೋಡೆಕೋರರು, ಕೇವಲ 70 ಸೆಕೆಂಡುಗಳಲ್ಲಿ ಸುಮಾರು 16 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ವೈರಲ್ ಆಗಿದ್ದು, ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ.
Read Full Story

12:29 PM (IST) Mar 15

ಟಿ20 ವಿಶ್ವಕಪ್ ಆಡಲು ಗಾಯ ಮುಚ್ಚಿಟ್ಟ್ರಾ ಬಾಬರ್ ಅಜಂ? ಆಯ್ಕೆ ಸಮಿತಿ ಸದಸ್ಯನಿಂದ ಸ್ಫೋಟಕ ಆರೋಪ!

ಟಿ20 ವಿಶ್ವಕಪ್ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಬಾಬರ್ ಅಜಂ ಸೇರಿದಂತೆ ಪ್ರಮುಖ ಆಟಗಾರರು ಸಂಪೂರ್ಣ ಫಿಟ್ ಇಲ್ಲದಿದ್ದರೂ ವಿಶ್ವಕಪ್ ಆಡಿದ್ದಾರೆ ಎಂದು ಆಯ್ಕೆ ಸಮಿತಿ ಸದಸ್ಯ ಆಕಿಬ್ ಜಾವೇದ್ ಆರೋಪಿಸಿದ್ದು, ಪಿಸಿಬಿ ತನಿಖೆಗೆ ಒತ್ತಾಯಿಸಿದ್ದಾರೆ.

Read Full Story

12:22 PM (IST) Mar 15

ನಟ ವಿಜಯ್‌ಗೆ ಉಪ ಮುಖ್ಯಮಂತ್ರಿ ಸ್ಥಾನ, ಟಿವಿಕೆಗೆ 80 ಕ್ಷೇತ್ರ, ಕೋಲಾಹಲ ಸೃಷ್ಟಿಸಿದ ಬಿಜೆಪಿ ಆಫರ್ ವರದಿ

ನಟ ವಿಜಯ್‌ಗೆ ಉಪ ಮುಖ್ಯಮಂತ್ರಿ ಸ್ಥಾನ, ಟಿವಿಕೆಗೆ 80 ಕ್ಷೇತ್ರ, ಕೋಲಾಹಲ ಸೃಷ್ಟಿಸಿದ ಬಿಜೆಪಿ ಆಫರ್ ವರದಿ, ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳುವ ಸಾಧ್ಯತೆ ಕಾಣಿಸುತ್ತಿದೆ.

Read Full Story

11:28 AM (IST) Mar 15

IPL 2026 ಟೂರ್ನಿಗೂ ಮುನ್ನ ರೋಹಿತ್ ಶರ್ಮಾಗೆ ಹಾರ್ದಿಕ್ ಸೀರಿಯಸ್ ವಾರ್ನಿಂಗ್? ಮುಂಬೈ ಇಂಡಿಯನ್ಸ್‌ನಲ್ಲಿ ಏನಾಗ್ತಿದೆ ಗುರೂ!

ಐಪಿಎಲ್ 2026ಕ್ಕೂ ಮುನ್ನ ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ವಾರ್ನಿಂಗ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಏನಾಗ್ತಿದೆ ಅಂತಾ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಮುಂಬೈ ತಂಡದಿಂದ ರೋಹಿತ್‌ನನ್ನು ಕೈಬಿಡ್ತಾರಾ?
Read Full Story

11:19 AM (IST) Mar 15

ಉಮ್ರಾ ಯಾತ್ರಿಗಳಿಗೆ ಹೊಸ ಡೆಡ್‌ಲೈನ್! ಸೌದಿ ಅರೇಬಿಯಾದಿಂದ ಬಂತು ಕಟ್ಟುನಿಟ್ಟಿನ ಆದೇಶ

ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಈ ಬಾರಿಯ ಉಮ್ರಾ ಯಾತ್ರೆಗೆ ಸಂಬಂಧಿಸಿದಂತೆ ಹೊಸ ದಿನಾಂಕಗಳನ್ನು ಪ್ರಕಟಿಸಿದೆ. ವೀಸಾ ನೀಡಿಕೆ, ಯಾತ್ರಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಹೊಸ ಗಡುವನ್ನು ನಿಗದಿಪಡಿಸಿದ್ದು, ಹಜ್ ಯಾತ್ರೆಗೆ ಅಧಿಕೃತ ಹಜ್ ವೀಸಾ ಕಡ್ಡಾಯವೆಂದು ಪುನರುಚ್ಚರಿಸಿದೆ.

Read Full Story

11:12 AM (IST) Mar 15

ನೇಪಾಳದ ದೇವಸ್ಥಾನ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಸ್ ಅಪಘಾತ, 7 ಭಾರತೀಯರು ಸಾವು

ನೇಪಾಳದ ದೇವಸ್ಥಾನ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಸ್ ಅಪಘಾತ, 7 ಭಾರತೀಯರು ಸಾವು, ಮನಕಾಮನ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. 7 ಮಂದಿ ಮೃತಪಟ್ಟರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ.

Read Full Story

11:02 AM (IST) Mar 15

ಜೀವನದಲ್ಲಿ ಇದಕ್ಕಿಂತ ಕೆಟ್ಟದ್ದು ಬೇರೆ ಏನಾಗಲು ಸಾಧ್ಯ? ಸ್ಟೇಟಸ್‌ ಹಾಕಿ ಪ್ರಾಣ ಬಿಟ್ಟ ಮಹಿಳೆ

ಮಹಿಳೆಯೊಬ್ಬರು, ತಮ್ಮ ನೋವನ್ನು ವಾಟ್ಸಾಪ್ ಸ್ಟೇಟಸ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣವೇ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಸಂಬಂಧಿಕರು ಪೊಲೀಸರಿಗೆ ತಿಳಿಸುವಷ್ಟರಲ್ಲಿ ದುರಂತ ಸಂಭವಿಸಿತ್ತು.

Read Full Story

10:36 AM (IST) Mar 15

ಭೂಮಿಗೆ ಅಪ್ಪಳಿಸಲಿದೆ 'ಗಾಡ್ಜಿಲ್ಲಾ' ಎಲ್ ನಿನೋ! ಏನಿದು ENSO? ಭಾರತದ ಹವಾಮಾನ ಬದಲಿಸುತ್ತಾ?

ಹವಾಮಾನ ವಿಜ್ಞಾನಿಗಳು 'ಗಾಡ್ಜಿಲ್ಲಾ ಎಲ್ ನಿನೋ' ಎಂಬ ಭೀಕರ ಹವಾಮಾನ ವಿದ್ಯಮಾನದ ಬಗ್ಗೆ ಎಚ್ಚರಿಸಿದ್ದಾರೆ. ಪೆಸಿಫಿಕ್ ಸಾಗರದಲ್ಲಿ ಉಷ್ಣಾಂಶ ಏರಿಕೆಯಿಂದ ಉಂಟಾಗುವ ಈ ವಿದ್ಯಮಾನವು ಜಾಗತಿಕ ಹವಾಮಾನವನ್ನು ಏರುಪೇರು ಮಾಡಲಿದ್ದು, ಭಾರತದ ಮಾನ್ಸೂನ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ.

Read Full Story

10:34 AM (IST) Mar 15

ಕಂಕುಳಲ್ಲಿ ಮಗು, ಕೈಯಲ್ಲಿ ಕಲ್ಲಿನ ಚಿಪ್ಪು; ತುತ್ತಿನ ಚೀಲ ತುಂಬಿಸಿಕೊಳ್ಳುವ ತಾಯಿ ಕಂಠಕ್ಕೆ ಮನಸೋತ ಜನ್ರು!

ರೈಲೊಂದರಲ್ಲಿ ಕಂಕುಳಲ್ಲಿ ಮಗುವನ್ನು ಕಟ್ಟಿಕೊಂಡು ಮಹಿಳೆಯೊಬ್ಬರು 'ಡಿಡಿಎಲ್‌ಜೆ' ಚಿತ್ರದ ಜನಪ್ರಿಯ ಹಾಡನ್ನು ಹಾಡಿದ್ದಾರೆ. ಚಿಪ್ಪು ಕಲ್ಲುಗಳನ್ನು ವಾದ್ಯದಂತೆ ಬಳಸಿ ಸುಶ್ರಾವ್ಯವಾಗಿ ಹಾಡಿರುವ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇವರ ಪ್ರತಿಭೆಗೆ ಮನಸೋತಿದ್ದಾರೆ.
Read Full Story

10:06 AM (IST) Mar 15

ಅರೆನಗ್ನ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾದ ಬೆನ್ನಲ್ಲೇ 12 ಸೆಕೆಂಡ್ ವಿಡಿಯೋ ಬಹಿರಂಗ

ಅರೆನಗ್ನ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾದ ಬೆನ್ನಲ್ಲೇ 12 ಸೆಕೆಂಡ್ ವಿಡಿಯೋ ಬಹಿರಂಗ, 20ರ ಹರೆಯದ ಯುವತಿ ಮೃತತದೇಹ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಇದರ ಬೆನ್ನಲ್ಲೇ ವೈರಲ್ ಆದ 12 ಸಕೆಂಡ್ ವಿಡಿಯೋದಲ್ಲಿ ಏನಿದೆ?

 

Read Full Story

09:43 AM (IST) Mar 15

ಅದೃಷ್ಟ ಹೆಚ್ಚು ಕಾಲ ಇರಲ್ಲ! ವೈಭವ್ ಸೂರ್ಯವಂಶಿಗೆ ಖಡಕ್ ವಾರ್ನಿಂಗ್ ಕೊಟ್ಟ ಉತ್ತಪ್ಪ

ಐಪಿಎಲ್ 2026ಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ರಾಬಿನ್ ಉತ್ತಪ್ಪ ಮಾತನಾಡಿದ್ದಾರೆ. ವೈಭವ್ ಕೇವಲ ಅದೃಷ್ಟವನ್ನು ನಂಬಿ ಆಡುತ್ತಿದ್ದಾನೆ, ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Read Full Story

09:29 AM (IST) Mar 15

Middle East Crisis - ಒಣಹಣ್ಣುಗಳ ಬೆಲೆ ಶೇ.40ರಷ್ಟು ಹೆಚ್ಚಳ, ಇಂಧನ ದರ ಏರಿಕೆಯಿಂದ ಪಾಕ್‌ ಸರ್ಕಾರಿ ನೌಕರರ ಅರ್ಧ ಸಂಬಳ ಕಟ್!

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಒಣಹಣ್ಣುಗಳ ಬೆಲೆ ಶೇ. 30-40ರಷ್ಟು ಏರಿಕೆಯಾಗಿದೆ. ಇದೇ ಸಂಘರ್ಷವು ಪಾಕಿಸ್ತಾನದಲ್ಲಿ ತೀವ್ರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಸರ್ಕಾರಿ ನೌಕರರ ಸಂಬಳ ಕಡಿತಕ್ಕೆ ಕಾರಣವಾಗಿದೆ. 

Read Full Story

09:07 AM (IST) Mar 15

ಪಾಕ್ ವಿವಾದಾತ್ಮಕ ಬೌಲರ್‌ ಉಸ್ಮಾನ್ ತಾರಿಖ್ ಜತೆ ಬುಮ್ರಾ ಹೋಲಿಕೆ! ಈತ ವೇಗದ ಬೌಲರ್‌ಗಳ ತಾರಿಖ್ ಎಂದ ಪಾಕ್ ಆಯ್ಕೆಗಾರ!

ಪಾಕಿಸ್ತಾನದ ಆಯ್ಕೆಗಾರ ಆಕಿಬ್ ಜಾವೇದ್, ಜಸ್ಪ್ರೀತ್ ಬುಮ್ರಾರ ವಿಶಿಷ್ಟ ಬೌಲಿಂಗ್ ಶೈಲಿಯನ್ನು ಸ್ಪಿನ್ನರ್ ಉಸ್ಮಾನ್ ತಾರಿಖ್‌ಗೆ ಹೋಲಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 14 ವಿಕೆಟ್ ಪಡೆದು ಮಿಂಚಿದ ಬುಮ್ರಾ, ಫೈನಲ್‌ನಲ್ಲಿ 4 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Read Full Story

07:48 AM (IST) Mar 15

NavIC Navigation System - ‘ನಾವಿಕ್‌’ ದಿಕ್ಸೂಚಿ ಸಿಸ್ಟಂನಲ್ಲಿ ಭಾರೀ ಸಮಸ್ಯೆ, ರಾಷ್ಟ್ರೀಯ ಭದ್ರತೆಗೆ ಅಪಾಯದ ಭೀತಿ!

ಭಾರತದ ಸ್ವದೇಶಿ ದಿಕ್ಸೂಚಿ ವ್ಯವಸ್ಥೆಯಾದ 'ನಾವಿಕ್'ನಲ್ಲಿ ಭಾರೀ ದೋಷ ಕಂಡುಬಂದಿದೆ. ಕಾರ್ಯನಿರ್ವಹಣೆಯಲ್ಲಿದ್ದ ನಾಲ್ಕು ಉಪಗ್ರಹಗಳಲ್ಲಿ ಒಂದಾದ ಐಆರ್‌ಎನ್‌ಎಸ್‌ಎಸ್‌-1ಎಫ್‌ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಇದು ರೈಲ್ವೆ ಸೇನಾ ಸೇವೆಗಳ ಮೇಲೆ ಪರಿಣಾಮ ಬೀರಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಮೂಡಿಸಿದೆ.

Read Full Story

07:44 AM (IST) Mar 15

ಚಿಕಿತ್ಸೆ ಫಲಕಾರಿಯಾಗದೆ ಮೊಜ್ತಬಾ ಖಮೇನಿ ಸಾವು, ಫೋನ್ ಮೂಲಕ ಅನುಮಾನ ವ್ಯಕ್ತಪಡಿಸಿದ ಟ್ರಂಪ್

ಚಿಕಿತ್ಸೆ ಫಲಕಾರಿಯಾಗದೆ ಮೊಜ್ತಬಾ ಖಮೇನಿ ಸಾವು, ಫೋನ್ ಮೂಲಕ ಅನುಮಾನ ವ್ಯಕ್ತಪಡಿಸಿದ ಟ್ರಂಪ್, ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಹತ್ಯೆಯಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

 

Read Full Story

07:29 AM (IST) Mar 15

AI ಅಬ್ಬರಕ್ಕೆ ಟೆಕ್ಕಿಗಳು ಉಡೀಸ್! ಮೆಟಾದಿಂದ 16,000 ಉದ್ಯೋಗಿಗಳಿಗೆ ಗೇಟ್‌ಪಾಸ್‌ಗೆ?

Meta Tech Layoffs  Cutsಜಾಗತಿಕ ಟೆಕ್ ದೈತ್ಯ ಮೆಟಾ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಕಾರಣ, ತನ್ನ ಇತಿಹಾಸದಲ್ಲೇ ಅತಿದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ನಿರ್ಧಾರದಿಂದಾಗಿ ಸುಮಾರು 16,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

Read Full Story

More Trending News