Published : Feb 11, 2026, 06:58 AM ISTUpdated : Feb 11, 2026, 10:47 PM IST

India Latest News Live: ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್‌ಪಾಲ್ ಮನೆ - ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ

ಸಾರಾಂಶ

ಪಣಜಿ: ಅನುಮತಿ ಇಲ್ಲದೇ ರಷ್ಯಾ ಮಹಿಳಾ ಪ್ರವಾಸಿಗರ ಫೋಟೋ ತೆಗೆದ ಕರ್ನಾಟಕದ 7-8 ಪ್ರವಾಸಿಗರನ್ನು ಗೋವಾದ ಬಾಗಾ ಬೀಚ್‌ನಲ್ಲಿ ಬಂಧಿಸಲಾಗಿದೆ. ಫೋಟೋ ತೆಗೆದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರಷ್ಯನ್ನರು ಜೀವರಕ್ಷಕ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದರು. ಸಿಬ್ಬಂದಿ ಮಧ್ಯಪ್ರವೇಶಿಸಿ ಫೋಟೋ ತೆಗೆದವರನ್ನು ಮುಂದಿನ ವಿಚಾರಣೆಗೆ ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೊಂದೇ ಅಲ್ಲದೇ ಗೋವಾದ ಹಲವು ಬೀಚ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳಾ ರಷ್ಯನ್‌ ಪ್ರವಾಸಿಗರ ಮೇಲೆ ಕಿರುಕುಳ ನಡೆದ ಘಟನೆಗಳು ವರದಿಯಾಗಿ

10:47 PM (IST) Feb 11

ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್‌ಪಾಲ್ ಮನೆ - ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ

ಚೆಕ್‌ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಜೈಲು ಸೇರಿದ್ದಾರೆ. ಈ ಸಂದರ್ಭದಲ್ಲಿ, ಅವರ ಆಪ್ತಮಿತ್ರ ನವಾಜುದ್ದೀನ್ ಸಿದ್ದಿಕಿ ಹಿಂದೊಮ್ಮೆ ನೀಡಿದ್ದ ಸಂದರ್ಶನವೊಂದು ವೈರಲ್ ಆಗಿದೆ.

Read Full Story

10:09 PM (IST) Feb 11

ವಂದೇ ಮಾತರಂ ಭಾರತಕ್ಕಾಗಿ ಬರೆದ ಗೀತೆಯಲ್ಲ, ಅದು ಬ್ರಿಟಿಷರಿಗಾಗಿ ಬರೆದಿದ್ದು - ಮೌಲ್ವಿ ಕಲ್ಬೆ ಜವಾದ್ ವಿವಾದ

Vande Mataram Not Written for India: Maulvi Kalbe Jawad's Remark ವಂದೇ ಮಾತರಂ ಸಂಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸುವ ಕೇಂದ್ರದ ಹೊಸ ಮಾರ್ಗಸೂಚಿಗಳನ್ನು ಶಿಯಾ ಮೌಲ್ವಿ ಕಲ್ಬೆ ಜವಾದ್ ವಿರೋಧಿಸಿದರು, ಅದನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು ಎಂದು ಹೇಳಿದರು.

 

Read Full Story

09:50 PM (IST) Feb 11

ಡಯಾಬಿಟೀಸ್‌ಗೆ HbA1c ಟೆಸ್ಟ್‌ ಮಾಡಿಸ್ತಿದ್ದೀರಾ? ಇದರ ರಿಸಲ್ಟ್‌ ಸುಳ್ಳಾಗಿರಬಹುದು ಎಂದ Lancet!

Is Your HbA1c Result Accurate? Lancet Study Warns of Misleading Reports ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ HbA1c ಪರೀಕ್ಷೆಯು ಡಯಾಬಿಟಿಸ್‌ ರೋಗನಿರ್ಣಯಕ್ಕೆ ತಪ್ಪುದಾರಿಗೆಳೆಯುವ ಫಲಿತಾಂಶಗಳನ್ನು ನೀಡಬಹುದು ಎಂದು ಲ್ಯಾನ್ಸೆಟ್ ಸಂಶೋಧನೆ ಎಚ್ಚರಿಸಿದೆ.

 

Read Full Story

09:30 PM (IST) Feb 11

ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ - ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ

Udit Narayan first wife complaint: ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಮೊದಲ ಪತ್ನಿ ರಂಜನಾ ತಮ್ಮ ಮಾಜಿ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Read Full Story

09:05 PM (IST) Feb 11

DMart ಆನ್‌ಲೈನ್‌ ಅಪ್ಲಿಕೇಶನ್‌ ಅಥವಾ DMart ಸ್ಟೋರ್‌? ಹೆಚ್ಚಿನ ಆಫರ್‌ ಸಿಗೋದು ಎಲ್ಲಿ?

DMart Store vs DMart Ready App: Where to Find Better Offers? ನೀವು ಡಿಮಾರ್ಟ್ ಸ್ಟೋರ್‌ ಅಥವಾ ಡಿಮಾರ್ಟ್ ರೆಡಿ ಅಪ್ಲಿಕೇಶನ್ ಮೂಲಕ ಶಾಪಿಂಗ್ ಮಾಡಬೇಕೇ? ಶೇಕಡಾ 99 ರಷ್ಟು ಜನರಿಗೆ ಆನ್‌ಲೈನ್ ಶಾಪಿಂಗ್‌ನ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.

 

Read Full Story

08:46 PM (IST) Feb 11

ನಾಳೆ ರಾಜ್‌ಪಾಲ್‌ ಯಾದವ್‌ ಜಾಮೀನು ಅರ್ಜಿ ವಿಚಾರಣೆ - ಸಹಾಯಕ್ಕೆ ಧಾವಿಸಿದ ಸಲ್ಮಾನ್‌ ಖಾನ್‌, ಅಜಯ್‌ ದೇವಗನ್‌!

ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಜ್‌ಪಾಲ್ ಯಾದವ್ ಅವರ ಜಾಮೀನು ವಿಚಾರಣೆ ಫೆಬ್ರವರಿ 12 ಕ್ಕೆ ನಿಗದಿಯಾಗಿದೆ. ಸಲ್ಮಾನ್ ಖಾನ್, ಅಜಯ್ ದೇವಗನ್, ವರುಣ್ ಧವನ್ ಮತ್ತು ಚಿತ್ರರಂಗದ ಇತರರು ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಹೇಳಿದ್ದಾರೆ.

 

Read Full Story

08:13 PM (IST) Feb 11

ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ; ಜಪಾನ್ ಸೇರಿ ಹಲವು ದೇಶಕ್ಕಿಂತ ಕಡಿಮೆ

ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ;  ಹೌದು 2 ರೂಪಾಯಿ 19 ಪೈಸೆ ಮಾತ್ರ. ಜಪಾನ್, ಚೀನಾ, ಫ್ರಾನ್ಸ್ ಸೇರಿದಂತೆ ಹಲವು ದೇಶಕ್ಲೆಕಿಂತ ಅತೀ ಕಡಿಮೆ.  ಈ ಕುರಿತು ಸಚಿವರು ಉತ್ತರಿಸಿದ್ದಾರೆ.

 

Read Full Story

07:57 PM (IST) Feb 11

MBBS ಕೋರ್ಸ್ ಮುಗಿಸಿ ಅಧಿಕೃತವಾಗಿ ವೈದ್ಯೆಯಾದ ನಟಿ ಶ್ರೀಲೀಲಾ - ಕಿಸ್ ಬೆಡಗಿ ಬಗ್ಗೆ ನೆಟ್ಟಿಗರಿಗೇಕೆ ಅನುಮಾನ?

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಲೀಲಾ ತಮ್ಮ ನಟನಾ ವೃತ್ತಿಯ ಜೊತೆಗೆ ವೈದ್ಯಕೀಯ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಡಾಕ್ಟರ್ ಆಗಿದ್ದಾರೆ. ಘಟಿಕೋತ್ಸವದ ವೀಡಿಯೋ ವೈರಲ್ ಆಗಿದ್ದು, ಕೆಲವರು ಅಭಿನಂದನೆ ಸಲ್ಲಿಸಿದ್ದರೆ ಮತ್ತೆ ಕೆಲವರು ಅನುಮಾನವ್ಯಕ್ತಪಡಿಸಿದ್ದಾರೆ.

Read Full Story

07:37 PM (IST) Feb 11

ಇನ್ಮುಂದೆ 'ಜನಗಣಮನ'ಕ್ಕೂ ಮುನ್ನ 'ವಂದೇ ಮಾತರಂ' ಕಡ್ಡಾಯ; ಕೇಂದ್ರ ಸರ್ಕಾರದಿಂದ ಹೊಸ ಪ್ರೋಟೋಕಾಲ್ ಜಾರಿ!

ಕೇಂದ್ರ ಸರ್ಕಾರವು 'ವಂದೇ ಮಾತರಂ' ರಾಷ್ಟ್ರಗೀತೆಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ, 'ಜನ ಗಣ ಮನ'ಕ್ಕೂ ಮೊದಲು ಇದನ್ನು ಪೂರ್ಣವಾಗಿ ಹಾಡಬೇಕು ಮತ್ತು ಎದ್ದು ನಿಲ್ಲುವುದು ಕಡ್ಡಾಯವಾಗಿದೆ. 

Read Full Story

07:14 PM (IST) Feb 11

ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರ ಸಾಧ್ಯವೇ?

ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಯಾವಾಗ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ, ಸಮಯ, ದಿನಾಂಕದ ಕುತೂಹಲ ಜೊತೆಗೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಾ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.

Read Full Story

06:44 PM (IST) Feb 11

ಯುವತಿಯ ರೀಲ್ಸ್ ಹುಚ್ಚಿಗೆ ಬಲಿಯಾದ ದೀಪಕ್; 21 ದಿನಗಳ ಬಳಿಕ ಆರೋಪಿ ಶಿಮ್ಜಿತಾಗೆ ಜಾಮೀನು ಕೊಟ್ಟ ಕೋರ್ಟ್!

ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಆರೋಪದಿಂದ ದೀಪಕ್ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಪ್ರಮುಖ ಆರೋಪಿ ಶಿಮ್ಜಿತಾಗೆ ಕೋಯಿಕ್ಕೋಡ್ ಸೆಷನ್ಸ್ ನ್ಯಾಯಾಲಯವು 21 ದಿನಗಳ ಸೆರೆವಾಸದ ನಂತರ ಕಠಿಣ ಷರತ್ತುಗಳೊಂದಿಗೆ ಜಾಮೀನು ನೀಡಿದೆ. ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ.

Read Full Story

06:33 PM (IST) Feb 11

70 ವರ್ಷದ ಗೂಗಲ್‌ ಮಾಜಿ ಸಿಇಒಗೆ 27 ವರ್ಷದ ಮಾಡೆಲ್‌ ಪ್ರೇಯಸಿ!

Former Google CEO Eric Schmidt Dating 27-Year-Old Model Gloria-Sophie? 70 ವರ್ಷದ ಎರಿಕ್ ಸ್ಮಿತ್, ಜರ್ಮನ್ ನಾಯಕ ಮಾರ್ಕಸ್ ಸೋಡರ್ ಅವರ ಪುತ್ರಿ 27 ವರ್ಷದ ಗ್ಲೋರಿಯಾ-ಸೋಫಿ ಬರ್ಕಂಡ್ಟ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಅವರ ರಿಲೇಷನ್‌ಷಿಪ್‌ ಬಗ್ಗೆ ಭಾರೀ ಊಹಾಪೋಹ ಎದ್ದಿದೆ.

 

Read Full Story

05:40 PM (IST) Feb 11

ಗಂಡನ ಮೇಲೆ ಅನೈತಿ*ಕ ಸಂಬಂಧದ ಆರೋಪ ಮಾಡಿ ತಾವೇ ಮರು ಮದ್ವೆಯಾದ್ರಾ ಬಿಗ್‌ಬಾಸ್ ಒಟಿಟಿ ಸ್ಪರ್ಧಿ

ಬಿಗ್ ಬಾಸ್ ಖ್ಯಾತಿಯ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್, ತನ್ನ ಪತಿ ಯುಗಮ್ ಗೆರಾ ವಿರುದ್ಧ ಮೋಸದ ಆರೋಪ ಮಾಡಿದ ಬೆನ್ನಲ್ಲೇ, ತಾವೇ ನಿಗೂಢ ವ್ಯಕ್ತಿಯೊಂದಿಗೆ ಮದುವೆಯಾದಂತೆ ಕಾಣುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Read Full Story

05:35 PM (IST) Feb 11

ಫೆ.12ರಂದು ಭಾರತ ಬಂದ್, 30 ಕೋಟಿ ಕಾರ್ಮಿಕರಿಂದ ಪ್ರತಿಭಟನೆ, ಇಡೀ ದೇಶ ಸ್ತಬ್ಧ! ಏನಿರುತ್ತೆ? ಏನಿರಲ್ಲ?

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಗಳು ಹಾಗೂ ರೈತ ಸಂಘಟನೆಗಳು ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಬಂದ್‌ನಿಂದಾಗಿ ಸಾರಿಗೆ, ಬ್ಯಾಂಕಿಂಗ್, ಸರ್ಕಾರಿ ಕಚೇರಿಗಳು ಮತ್ತು ಮಾರುಕಟ್ಟೆಗಳಂತಹ ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.

Read Full Story

05:33 PM (IST) Feb 11

ಅರ್ಜುನ್ ತೆಂಡೂಲ್ಕರ್-ಸಾನಿಯಾ ಮದುವೆಗೆ ರಾಹುಲ್ ಗಾಂಧಿ ಆಹ್ವಾನಿಸಿದ ಸಚಿನ್ ಫ್ಯಾಮಿಲಿ!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಮಗನ ಮದುವೆಯ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕುಟುಂಬ ಸಮೇತರಾಗಿ ಹೋಗಿ ಮಗನ ಮದುವೆಗೆ ಆಹ್ವಾನಿಸಿದ್ದ ಲಿಟ್ಲ್ ಮಾಸ್ಟರ್, ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮದುವೆಗೆ ಆಹ್ವಾನಿಸಿದ್ದಾರೆ.

 

Read Full Story

05:08 PM (IST) Feb 11

ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, ಟ್ರಯಾಂಗಲ್ ಲವ್ ತಂದ ಆಪತ್ತು

ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, 19ರ ಯುವತಿ ಶಿವಾಜಿ ನಗರದಲ್ಲಿ ಹಾಡ ಹಗಲೇ ಬಲಿಯಾಗಿದ್ದಾಳೆ. ಇದರ ಹಿಂದೆ ಟ್ರಯಾಂಗಲ್ ಲವ್ ಸ್ಟೋರಿ ಕತೆಯೊಂದು ಅನಾವರಣಗೊಂಡಿದೆ.

Read Full Story

04:44 PM (IST) Feb 11

ಮಿಲಿಟರಿ ನರ್ಸ್‌ಗಳಿಗೆ ಬಂಪರ್‌ ನ್ಯೂಸ್‌, Ex-Servicemen ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರ!

ಮಿಲಿಟರಿ ನರ್ಸಿಂಗ್ ಸೇವೆ (MNS) ಅಧಿಕಾರಿಗಳಿಗೆ ಸರ್ಕಾರವು ಮಾಜಿ ಸೈನಿಕರ ಸ್ಥಾನಮಾನವನ್ನು ನೀಡಿದೆ. ಈ ಐತಿಹಾಸಿಕ ನಿರ್ಧಾರದಿಂದ, ಸೇನೆಯ ಇತರ ಸಿಬ್ಬಂದಿಯಂತೆ ಎಂಎನ್‌ಎಸ್ ಅಧಿಕಾರಿಗಳಿಗೂ ನಿವೃತ್ತಿಯ ನಂತರದ ಉದ್ಯೋಗ ಮೀಸಲಾತಿ ಲಭ್ಯವಾಗಲಿದೆ.

Read Full Story

04:15 PM (IST) Feb 11

ತಿಹಾರ್ ಜೈಲು ಸೇರಿದ ರಾಜ್‌ಪಾಲ್ ಯಾದವ್ ಸಂಕಟಕ್ಕೆ ಮಿಡಿದ ಸೋನು ಸೂದ್! ಕಾಮಿಡಿ ಸ್ಟಾರ್‌ಗೆ ದೊಡ್ಡ ಸಹಾಯ ಮಾಡಿದ 6 ಮಂದಿ!

ಕಾಮಿಡಿ ನಟ ರಾಜ್‌ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಅವರೇ ಖುದ್ದು ಬಂದು ಶರಣಾಗಿದ್ದರು. ಅವರು ಸಂಪೂರ್ಣವಾಗಿ ಕುಸಿದು ಹೋಗಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ, ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಹಲವರು ಮುಂದೆ ಬರುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.
Read Full Story

04:08 PM (IST) Feb 11

ಪೊಲೀಸ್ ಆಗುವ ಕನಸು ಕಂಡವನಿಗೆ ತಾಳಿ ಭಾಗ್ಯ - ಯುವಕನ ಅಪಹರಿಸಿ ಮದುವೆ ಮಾಡಿದ ಹುಡುಗಿ ಕಡೆಯವರು

ಬಿಹಾರದ ಸಮಷ್ಟಿಪುರದಲ್ಲಿ, ಪೊಲೀಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕನನ್ನು ಅಪಹರಿಸಿ, ಅಮಲು ಪದಾರ್ಥ ನೀಡಿ ಬಲವಂತವಾಗಿ ಮದುವೆ ಮಾಡಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವರನ ವಿಡಿಯೋ ವೈರಲ್ ಆಗಿ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

03:56 PM (IST) Feb 11

300 ರೂಪಾಯಿಗೆ ಖರೀದಿಸಿದ ಡೊಮೇನ್ ಇಂದು 634 ಕೋಟಿ! ಮಲೇಷ್ಯಾ ಉದ್ಯಮಿಯ ಅಚ್ಚರಿಯ 'ಜಾಕ್‌ಪಾಟ್'!

Bought for $100, Sold for $70M: The Incredible AI.com Domain Story 1993ರಲ್ಲಿ ಕೇವಲ 100 ಡಾಲರ್‌ಗೆ AI.com ಡೊಮೇನ್ ಖರೀದಿಸಿದ್ದ ಮಲೇಷ್ಯಾದ ಟೆಕ್ ಉದ್ಯಮಿ ಆರ್ಸಿಯಾನ್ ಇಸ್ಮಾಯಿಲ್, 33 ವರ್ಷಗಳ ನಂತರ ಅದನ್ನು 70 ಮಿಲಿಯನ್ ಡಾಲರ್‌ಗೆ (ಸುಮಾರು 634 ಕೋಟಿ ರೂ.) ಮಾರಾಟ ಮಾಡಿದ್ದಾರೆ. 

Read Full Story

03:25 PM (IST) Feb 11

T20 ವಿಶ್ವಕಪ್‌ನಲ್ಲಿ ಇದೇ ಮೊದಲು! ಡಬಲ್ ಸೂಪರ್ ಓವರ್‌ಗೆ ಸಾಕ್ಷಿಯಾದ ದಕ್ಷಿಣ ಆಫ್ರಿಕಾ-ಆಫ್ಘಾನಿಸ್ತಾನ!

ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ 2 ಸೂಪರ್ ಓವರ್‌ಗೆ ಸಾಕ್ಷಿಯಾದ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಮತ್ತು ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾದವು. ಎರಡೂ ತಂಡಗಳು 187 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡ ಬಳಿಕ, ಮೊದಲ ಸೂಪರ್ ಓವರ್ ಕೂಡ ಟೈ ಆಯಿತು. 2ನೇ ಸೂಪರ್ ಓವರ್‌ನಲ್ಲಿ ಹರಿಣಗಳಿಗೆ ಗೆಲುವು 

Read Full Story

03:18 PM (IST) Feb 11

Epstein Files - ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಅನಿಲ್ ಅಂಬಾನಿ ಹೆಸರು, ಯಾಕಿನ್ನೂ ಜೈಲಲ್ಲಿಲ್ಲ? - ರಾಹುಲ್ ಗಾಂಧಿ ಪ್ರಶ್ನೆ

Epstein Files: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ, ಎಪ್‌ಸ್ಟೀನ್‌ಗೆ ಸಂಬಂಧಿಸಿದ ಫೈಲ್‌ಗಳಲ್ಲಿ ಉದ್ಯಮಿ ಅನಿಲ್ ಅಂಬಾನಿ ಹೆಸರು ಇದೆ ಎಂದು ಆರೋಪಿಸಿದ್ದಾರೆ. ಹಾಗಿದ್ದ ಮೇಲೆ ಅವರನ್ನು ಯಾಕೆ ಇನ್ನೂ ಜೈಲಿಗೆ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

Read Full Story

02:05 PM (IST) Feb 11

12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲಿ ಮೌಲ್ಯಮಾಪನ ಮಾಡಲಿದೆ ಸಿಬಿಎಸ್ಇ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 12ನೇ ತರಗತಿಯ ಸುಮಾರು 1 ಕೋಟಿ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ಮಾಡಲು ನಿರ್ಧರಿಸಿದೆ. ಈ ಬದಲಾವಣೆಯು 12ನೇ ತರಗತಿಗೆ ಮಾತ್ರ ಸೀಮಿತವಾಗಿದ್ದು, 10ನೇ ತರಗತಿಯ ಮೌಲ್ಯಮಾಪನ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

Read Full Story

02:02 PM (IST) Feb 11

ಟಿ20 ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್‌ ನೀಡಿದ BCCI; ಆಟಗಾರರ ಕನಸಿಗೆ ತಣ್ಣೀರು!

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರು ಸದ್ಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಇದರ ನಡುವೆ ವ್ಯಾಲೆಂಟೈನ್ ಡೇ ಕೂಡಾ ಹತ್ತಿರ ಬರುತ್ತಿದೆ. ವ್ಯಾಲೆಂಟೈನ್ ಡೇ ಆಚರಿಸಲು ಕನಸು ಕಾಣುತ್ತಿದ್ದ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಏನದು ನೋಡೋಣ ಬನ್ನಿ.

Read Full Story

01:35 PM (IST) Feb 11

ಕೇವಲ 20 ರೂ ಆರೋಪಕ್ಕೆ 30 ವರ್ಷ ಹೋರಾಟ; ಕಳಂಕ ಮುಕ್ತನಾಗ್ತಿದ್ದಂತೆ ದೇವರಪಾದ ಸೇರಿದ ಪ್ರಾಮಾಣಿಕ

30 ವರ್ಷಗಳ ಹಿಂದೆ 20 ರೂಪಾಯಿ ಲಂಚ ಪಡೆದ ಆರೋಪ ಹೊತ್ತಿದ್ದ ಪೊಲೀಸ್ ಪೇದೆಯೊಬ್ಬರು, ತಮ್ಮ ಮೇಲಿನ ಕಳಂಕವನ್ನು ತೊಡೆದುಹಾಕಲು ಸುದೀರ್ಘ ಕಾನೂನು ಹೋರಾಟ ನಡೆಸಿದರು. ಅಂತಿಮವಾಗಿ ನ್ಯಾಯಾಲಯದಿಂದ ನಿರಪರಾಧಿ ಎಂದು ಸಾಬೀತಾದ ಮರುದಿನವೇ ಅವರು ನೈಸರ್ಗಿಕವಾಗಿ ಸಾವನ್ನಪ್ಪಿದರು.  

Read Full Story

01:29 PM (IST) Feb 11

ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಹೂವು, ಹಣ್ಣು ಕಂಡರೆ ಏನರ್ಥ? ಈ ಕನಸುಗಳ ಬಗ್ಗೆ ಜಾಗೃತೆಯಿರಲಿ

ನಮಗೆ ಕನಸಿನಲ್ಲಿ ನಾನಾ ರೀತಿಯ ವಸ್ತುಗಳು, ಸ್ಥಳಗಳು ಕಾಣಿಸುತ್ತವೆ. ಆದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಕನಸಿನಲ್ಲಿ ಹೂವು, ಹಣ್ಣುಗಳು ಕಂಡರೆ ಅದು ಶುಭವೋ ಅಥವಾ ಅಶುಭವೋ? ಈ ಗೊಂದಲ ಅನೇಕರಲ್ಲಿ ಇರುತ್ತದೆ. ಬನ್ನಿ, ಇದರ ಬಗ್ಗೆ ತಿಳಿದುಕೊಳ್ಳೋಣ.
Read Full Story

12:51 PM (IST) Feb 11

ಸ್ಯಾಲರಿ ಪಡೆಯುವ ಬೆಂಗಳೂರಿಗರಿಗೆ ಬಿಗ್ ಟ್ಯಾಕ್ಸ್ ರಿಲೀಫ್, ಶೇ.50ರಷ್ಟು HRA ವಿನಾಯಿತಿ

ಸ್ಯಾಲರಿ ಪಡೆಯುವ ಬೆಂಗಳೂರಿಗರಿಗೆ ಬಿಗ್ ಟ್ಯಾಕ್ಸ್ ರಿಲೀಫ್, ಶೇ.50ರಷ್ಟು HRA ವಿನಾಯಿತಿ, ಹೊಸ ಆದಾಯ ತೆರಿಗೆ ಕರಡು ನಿಯಮದಲ್ಲಿ ಈ ಬಾರಿ ಬೆಂಗಳೂರು ನಗರವನ್ನು ತೆರಿಗೆ ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಇದರಿಂದ ಎಲ್ಲಾ ವೇತನದಾರರು ಭರ್ಜರಿ ತೆರಿಗೆ ವಿನಾಯಿತಿ ಪಡೆಯಲಿದ್ದಾರೆ.

Read Full Story

12:44 PM (IST) Feb 11

ಜೈಲು ಸೇರಿದ ನಟ ರಾಜ್‌ಪಾಲ್ ಯಾದವ್ ಅವರ ಪತ್ನಿ ಏನ್ಮಾಡ್ತಾರೆ? ಇಬ್ಬರ ವಯಸ್ಸು, ಎತ್ತರದ ಅಂತರ ಕೇಳಿದ್ರೆ ಶಾಕ್ ಆಗ್ತೀರಾ!

ಚೆಕ್ ಬೌನ್ಸ್ ಪ್ರಕರಣದಲ್ಲಿ ನಟ ರಾಜ್‌ಪಾಲ್ ಯಾದವ್ ದೆಹಲಿಯ ತಿಹಾರ್ ಜೈಲಿನಲ್ಲಿ ಶರಣಾಗಿದ್ದಾರೆ. ಬಾಕಿ ಹಣ ಪಾವತಿಸಲು ಹೆಚ್ಚಿನ ಸಮಯ ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ನಡುವೆ, ರಾಜ್‌ಪಾಲ್ ಯಾದವ್ ಅವರ ಪತ್ನಿಯ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿ ಇಲ್ಲಿದೆ.

Read Full Story

12:32 PM (IST) Feb 11

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕುರ್ಚಿ ಮೇಲೆ ಮಲಗಿ ಗಾಢ ನಿದ್ದೆಗೆ ಜಾರಿದ ನಾಯಿ - ವೀಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕುರ್ಚಿಯ ಮೇಲೆ ಬೀದಿನಾಯಿಯೊಂದು ಮಲಗಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಸ್ವಚ್ಛತೆ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Read Full Story

12:21 PM (IST) Feb 11

ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ - ಭಾರತದ ಈ ತಾಣಗಳೇ ಹಾಟ್‌ ಫೇವರಿಟ್

ಫೆಬ್ರವರಿ 14ರ ಪ್ರೇಮಿಗಳ ದಿನದ ಆಚರಣೆ ಇದೀಗ ಹೊಸ ರೂಪ ಪಡೆದುಕೊಂಡಿದೆ. ಉಡುಗೊರೆಗಳ ಬದಲಾಗಿ ಜೋಡಿಗಳು ಪ್ರವಾಸಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೋಟೆಲ್ ಮತ್ತು ರೆಸಾರ್ಟ್‌ಗಳ ಬುಕ್ಕಿಂಗ್ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ.

Read Full Story

11:55 AM (IST) Feb 11

ಫೆಬ್ರವರಿ 13ರಿಂದ ಕುಂಭ ರಾಶಿಗೆ ಸೂರ್ಯನ ಪ್ರವೇಶ; ಈ 5 ರಾಶಿಗಳಿಗೆ ಇನ್ಮೇಲೆ ಶುಕ್ರದೆಸೆ ಶುರು, ಶುಭ ಸುದ್ದಿ ಕೇಳೋದು ಪಕ್ಕಾ!

ಸೂರ್ಯ ಮಕರ ರಾಶಿಯಿಂದ ಕುಂಭ ರಾಶಿಗೆ ಸಾಗಲಿದ್ದಾನೆ. ಈಗಾಗಲೇ ಈ ರಾಶಿಯಲ್ಲಿ ರಾಹು ಮತ್ತು ಶುಕ್ರರು ಸಂಚರಿಸುತ್ತಿದ್ದಾರೆ. ಈ ಗ್ರಹಗಳ ಸಂಯೋಗವು ಕೆಲವು ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ ತರಲಿದೆ.

 

Read Full Story

11:14 AM (IST) Feb 11

ಕೆನಡಾದ ಶಾಲೆಯಲ್ಲಿ ಮಹಿಳೆಯ ಅಟ್ಟಹಾಸ - ಗುಂಡಿನ ದಾಳಿಗೆ 10 ಬಲಿ, 25ಕ್ಕೂ ಹೆಚ್ಚು ಜನರಿಗೆ ಗಾಯ

ಕೆನಡಾದ ಬ್ರಿಟಿಷ್ ಕೊಲಂಬಿಯಾದ ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ಮಹಿಳೆಯೊಬ್ಬಳು ನಡೆಸಿದ ಗುಂಡಿನ ದಾಳಿಯಲ್ಲಿ ಆಕೆ ಸೇರಿದಂತೆ ಹತ್ತು ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Read Full Story

11:06 AM (IST) Feb 11

ಯಾರ್ ಗುರು ಇವನು? ಅಭಿಷೇಕ್ ಶರ್ಮಾ ವಿಶ್ವದಾಖಲೆ ಕೇವಲ 44 ಎಸೆತಗಳಲ್ಲಿ ಪೀಸ್ ಪೀಸ್!

ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ ಹೆಸರಿನಲ್ಲಿದ್ದ ಪ್ರಮುಖ ವಿಶ್ವದಾಖಲೆಯೊಂದು ಇದೀಗ ಮುರಿದುಬಿದ್ದಿದೆ. ನ್ಯೂಜಿಲೆಂಡ್‌ನ ಬ್ಯಾಟರ್‌ ಒಬ್ಬರು ಅವರಿಗಿಂತ 44 ಎಸೆತಗಳನ್ನು ಕಡಿಮೆ ಎದುರಿಸಿ ಈ ಸಾಧನೆ ಮಾಡಿದ್ದಾರೆ.
Read Full Story

09:30 AM (IST) Feb 11

2025-26ರ ಬಿಸಿಸಿಐ ಕಾಂಟ್ರ್ಯಾಕ್ಟ್‌ನಲ್ಲಿ ಬಡ್ತಿ ಪಡೆದ ಟೀಂ ಇಂಡಿಯಾದ 5 ಸ್ಟಾರ್ ಆಟಗಾರರು

ಬಿಸಿಸಿಐನ 2025-26ನೇ ಸಾಲಿನ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ಹಲವು ಆಟಗಾರರಿಗೆ ಬಡ್ತಿ ಸಿಕ್ಕಿದೆ.  ಐವರು ತಮ್ಮ ಗ್ರೇಡ್‌ಗಳಲ್ಲಿ ಬಡ್ತಿ ಪಡೆದಿದ್ದಾರೆ. ಇದು ಭಾರತ ತಂಡಕ್ಕೆ ವಿವಿಧ ಮಾದರಿಗಳಲ್ಲಿ ಅವರ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

Read Full Story

08:48 AM (IST) Feb 11

ರಾಜ್‌ಪಾಲ್ ಯಾದವ್ ನಟನೆಯ ಟಾಪ್ 5 ಸೂಪರ್‌ಹಿಟ್ ಫಿಲ್ಮ್ಸ್‌; ಒಂದು ಸಿನಿಮಾ ಗಳಿಸಿದ್ದು 400 ಕೋಟಿ!

ರಾಜ್‌ಪಾಲ್ ಯಾದವ್ ಹೀರೋ ಆಗಿ ನಟಿಸದೇ ಇರಬಹುದು, ಆದರೆ ಅವರ ಸ್ಕ್ರೀನ್ ಪ್ರೆಸೆನ್ಸ್ ಸಿನಿಮಾಗಳನ್ನು ಸ್ಮರಣೀಯವಾಗಿಸುತ್ತದೆ. ಅವರ 5 ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ 100-250 ಕೋಟಿಗೂ ಹೆಚ್ಚು ಗಳಿಸಿವೆ. ಈ ಸೂಪರ್‌ಹಿಟ್ ಮತ್ತು ಬ್ಲಾಕ್‌ಬಸ್ಟರ್ ಚಿತ್ರಗಳು ಹಾಗೂ ಅವುಗಳ ಗಳಿಕೆ ಬಗ್ಗೆ ತಿಳಿಯೋಣ ಬನ್ನಿ.

Read Full Story

08:26 AM (IST) Feb 11

T20 World Cup 2026 ಭಾರತ-ಪಾಕ್ ಪಂದ್ಯ ಆಯೋಜನೆ - ಐಸಿಸಿ ಗೆದ್ದಿದ್ದು ಹೇಗೆ?

ಫೆ.15ರಂದು ನಿಗದಿಯಾಗಿದ್ದ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ರದ್ದಾಗದಂತೆ ನೋಡಿಕೊಳ್ಳುವಲ್ಲಿ ಐಸಿಸಿ ಯಶಸ್ವಿಯಾಗಿದೆ. ಈ ನಿರ್ಧಾರದಿಂದ ಸುಮಾರು ₹1500 ಕೋಟಿ ನಷ್ಟವನ್ನು ತಪ್ಪಿಸಿದ್ದು, ಪ್ರಸಾರಕರು, ಅಭಿಮಾನಿಗಳು ಮತ್ತು ಸದಸ್ಯ ದೇಶಗಳನ್ನು ನಿರಾಳವಾಗಿಸಿದೆ.

Read Full Story

More Trending News