Vande Mataram Not Written for India: Maulvi Kalbe Jawad's Remark ವಂದೇ ಮಾತರಂ ಸಂಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸುವ ಕೇಂದ್ರದ ಹೊಸ ಮಾರ್ಗಸೂಚಿಗಳನ್ನು ಶಿಯಾ ಮೌಲ್ವಿ ಕಲ್ಬೆ ಜವಾದ್ ವಿರೋಧಿಸಿದರು, ಅದನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು ಎಂದು ಹೇಳಿದರು.
ಲಖನೌ (ಫೆ.11): ದೇಶಾದ್ಯಂತ ನಿಗದಿತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಶಾಲೆಗಳಲ್ಲಿ 'ವಂದೇ ಮಾತರಂ' ನ ಎಲ್ಲಾ ಆರು ಚರಣಗಳನ್ನು ಹಾಡಬೇಕು ಅಥವಾ ನುಡಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸುತ್ತಿದ್ದಂತೆ, ಶಿಯಾ ಮುಸ್ಲಿಂ ಧರ್ಮಗುರು ಕಲ್ಬೆ ಜವಾದ್, ಸ್ವಾತಂತ್ರ್ಯ ಇರಬೇಕು ಮತ್ತು ಅದನ್ನು ಯಾರ ಮೇಲೂ ಬಲವಂತಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಹೊಸ ನಿಯಮಗಳು ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಎರಡನ್ನೂ ಒಂದೇ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದಾಗ, 'ಜನ ಗಣ ಮನ' ಕ್ಕಿಂತ ಮೊದಲು 'ವಂದೇ ಮಾತರಂ' ಹಾಡಬೇಕು ಎಂದು ಹೇಳಿದೆ.
ಈ ಮಾರ್ಗಸೂಚಿಗಳಿಗೆ ಪ್ರತಿಕ್ರಿಯಿಸಿದ ಲಕ್ನೋ ಮೂಲದ ಮೌಲ್ವಿ, ಜನರು ಹಾಡನ್ನು ಪಠಿಸಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಬ್ರಿಟಿಷ್ ಆಳ್ವಿಕೆಯಲ್ಲಿ 'ವಂದೇ ಮಾತರಂ' ಬರೆದಿದ್ದಾರೆ ಮತ್ತು ಅದು ಮೂಲತಃ ವಸಾಹತುಶಾಹಿ ಆಡಳಿತಗಾರರ ವಿರುದ್ಧದ ಸಂದೇಶವಾಗಿತ್ತು ಎಂದು ಅವರು ಹೇಳಿದರು.
ಇದು ಧಾರ್ಮಿಕ ಘೋಷಣೆ ಎಂದ ಜವಾದ್
ಐಎಎನ್‌ಎಸ್ ಜೊತೆ ಮಾತನಾಡಿದ ಕಲ್ಬೆ ಜವಾದ್, "ವಂದೇ ಮಾತರಂ ಹಾಡಬೇಕೋ? ಹಾಡಬಾರದೋ ಎನ್ನುವುದಕ್ಕೆ ಸ್ವಾತಂತ್ರ್ಯ ಇರಬೇಕು. ನೀರು ಯಾರ ಮೇಲೂ ಏನನ್ನೂ ಒತ್ತಾಯ ಮಾಡಲು ಸಾಧ್ಯವಿಲ್ಲ. ನೀವು ಯಾರ ಮೇಲೂ ಧರ್ಮವನ್ನು ಒತ್ತಾಯಿಸಲು ಸಾಧ್ಯವಿಲ್ಲ. ಇದು ಧಾರ್ಮಿಕ ಘೋಷಣೆ" ಎಂದು ಹೇಳಿದ್ದಾರೆ.
"ಬ್ರಿಟಿಷರು ದೇಶವನ್ನು ಆಳುತ್ತಿದ್ದ ಸಮಯದಲ್ಲಿ ಚಟ್ಟೋಪಾಧ್ಯಾಯ ಇದನ್ನು ಬರೆದಿದ್ದಾರೆ. ಆಗ ಇನ್ನೂ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಗದಿದ್ದಾಗ ಅವರು ತಮ್ಮ ಪುಸ್ತಕದಲ್ಲಿ ಇದನ್ನು ಬರೆದಿದ್ದರು. ಬ್ರಿಟಿಷರ ವಿರುದ್ಧ ವಕಾಲತ್ತು ವಹಿಸಲು ಅವರು ಆ ಪುಸ್ತಕದಲ್ಲಿ ಬರೆದಿದ್ದರು. ಆದ್ದರಿಂದ, ಇದು ಬ್ರಿಟಿಷರಿಗಾಗಿ ಬರೆದ ಹಾಡು. ಭಾರತ ಅಥವಾ ದೇಶವಾಸಿಗಳಿಗಾಗಿ ಬರೆದ ಗೀತೆಯಲ್ಲ' ಎಂದು ಹೇಳಿದ್ದಾರೆ. "ಆದರೆ ಎಲ್ಲರಿಗೂ ಅದನ್ನು ಕಡ್ಡಾಯಗೊಳಿಸುವುದು ಒಳ್ಳೆಯದಲ್ಲ. ವಂದೇ ಮಾತರಂ ಹಾಡುವ ವಿಚಾರದಲ್ಲಿ ಸ್ವಾತಂತ್ರ್ಯ ಇರಬೇಕು" ಎಂದಿದ್ದಾರೆ.
ರಾಷ್ಟ್ರೀಯ ಗೀತೆ ಹಾಡುವ ಸಮಯದಲ್ಲಿ ಹಾಜರಿರುವವರು ಎದ್ದು ನಿಲ್ಲುವುದು ಕಡ್ಡಾಯ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಆದರೆ, ಚಲನಚಿತ್ರ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿ ಹಾಡನ್ನು ಪ್ರಸಾರ ಮಾಡುವಾಗ ಸಿನಿಮಾ ಮಂದಿರಗಳಲ್ಲಿ ಈ ಅವಶ್ಯಕತೆ ಅನ್ವಯಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಹೊಸ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ
ಇಲ್ಲಿಯವರೆಗೆ, 'ವಂದೇ ಮಾತರಂ' ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ರಾಷ್ಟ್ರೀಯ ಶಿಷ್ಟಾಚಾರವನ್ನು ಹೊಂದಿರಲಿಲ್ಲ, ರಾಷ್ಟ್ರಗೀತೆಯು ಬಹಳ ಹಿಂದಿನಿಂದಲೂ ಔಪಚಾರಿಕ ನಿಯಮಗಳು ಮತ್ತು ಮಾರ್ಗಸೂಚಿಗಳಿಂದ ನಿಯಂತ್ರಿಸಲ್ಪಡುತ್ತಿದೆ.
ಕೇಂದ್ರದ ಪ್ರಕಾರ, ಈ ಕ್ರಮವು ರಾಷ್ಟ್ರೀಯ ಗೀತೆಯ ಮೇಲಿನ ಗೌರವವನ್ನು ಪ್ರಮಾಣೀಕರಿಸುವ ಮತ್ತು 'ಸ್ವೀಕಾರಾರ್ಹ' ಮತ್ತು 'ಹೊರಗಿಡಲಾದ' ಪದ್ಯಗಳ ನಡುವಿನ ಕೃತಕ ವ್ಯತ್ಯಾಸ ಎಂದು ವಿವರಿಸಿದ್ದನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ. ಈ ಹಾಡನ್ನು ಆಯ್ದ ಸಂಪಾದಿತ ಪಠ್ಯವಾಗಿ ಪರಿಗಣಿಸುವ ಬದಲು, ಮೂಲತಃ ಬಂಕಿಮ್ ಚಂದ್ರ ಚಟರ್ಜಿ ಬರೆದಂತೆ ಒಂದೇ, ಸಂಪೂರ್ಣ ಸಂಯೋಜನೆಯಾಗಿ ಪರಿಗಣಿಸಬೇಕು ಎಂದು ಸರ್ಕಾರ ವಾದಿಸಿದೆ.


