Published : Nov 01, 2026, 06:57 AM ISTUpdated : Nov 01, 2026, 11:42 PM IST

India Latest News Live: ಟುಕ್ ಟುಕ್ ಪ್ರೇಮ! ಭಾರತದ ಆಟೋವನ್ನು ಬಿಟ್ಟಿರಲಾರದೆ ಲಂಡನ್‌ಗೇ ಹೊತ್ತೊಯ್ದ ವಿದೇಶಿ ದಂಪತಿ ಮನಮಿಡಿಯುವ ಕಥೆ

ಸಾರಾಂಶ

ಲಖನೌ: ಎಸ್‌ಐಆರ್‌ ಪ್ರಕ್ರಿಯೆ ಬಳಸಿ ಬಿಜೆಪಿ ಸರ್ಕಾರ ನಿರ್ದಿಷ್ಟ ಸಮುದಾಯದವರ ಹೆಸರುಗಳನ್ನು ಮತಪಟ್ಟಿಯಿಂದ ಉದ್ದೇಶಪೂರ್ವಕವಾಗಿ ತೆಗೆದುಹಾಕಿದೆ ಎಂಬ ವಿಪಕ್ಷಗಳ ಆರೋಪದ ನಡುವೆ, ‘ಉತ್ತರಪ್ರದೇಶದಲ್ಲಿ 1.27 ಕೋಟಿ ಹಿಂದೂಗಳ ಹೆಸರು ಪಟ್ಟಿಯಿಂದ ಕಾಣೆಯಾಗಿದೆ’ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಜತೆಗೆ ಅರ್ಹರೆಲ್ಲರ ಹೆಸರು ಸೇರ್ಪಡೆಯಾಗುವುದನ್ನು ಖಚಿತಪಡಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ನಿರ್ದೇಶಿಸಿದ್ದಾರೆ. 

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಯೋಗಿ. ‘ಹೆಸರುಗಳು ಅಳಿಸಲ್ಪಟ್ಟಿರುವುದು 28 ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಲ್ಲಿ ಪಕ್ಷದ ಸ್ಥಿತಿಯನ್ನು ದುರ್ಬಲಗೊಳಿಸುತ್ತಿದೆ. ರಾಜ್ಯದಲ್ಲಿ ವಾಸ್ತವವಾಗಿ 16 ಕೋಟಿಗೂ ಹೆಚ್ಚು ಮತದಾರರಿರಬೇಕಿತ್ತು. ಆದರೆ ಪ್ರಸ್ತುತ 13 ಕೋಟಿ ಮತದಾರಷ್ಟೇ ಇದ್ದಾರೆ’ ಎಂದರು.

11:42 PM (IST) Nov 01

ಟುಕ್ ಟುಕ್ ಪ್ರೇಮ! ಭಾರತದ ಆಟೋವನ್ನು ಬಿಟ್ಟಿರಲಾರದೆ ಲಂಡನ್‌ಗೇ ಹೊತ್ತೊಯ್ದ ವಿದೇಶಿ ದಂಪತಿ ಮನಮಿಡಿಯುವ ಕಥೆ

ಬ್ರಿಟನ್ ಮೂಲದ ಹೆಲೆನ್ ಮತ್ತು ಮಿಕ್ ದಂಪತಿ ಭಾರತ ಪ್ರವಾಸಕ್ಕಾಗಿ 'ಟಿಮ್ಮಿ' ಎಂಬ ಹೆಸರಿನ ಆಟೋರಿಕ್ಷಾವನ್ನು ಖರೀದಿಸಿದ್ದರು. 75 ದಿನಗಳ ಕಾಲ 4218 ಕಿ.ಮೀ ಪ್ರಯಾಣಿಸಿದ ನಂತರ ಆಟೋದ ಮೇಲಿನ ಭಾವನಾತ್ಮಕ ನಂಟಿನಿಂದಾಗಿ ಅದನ್ನು ಹಡಗಿನ ಮೂಲಕ ಲಂಡನ್‌ಗೆ ಕೊಂಡೊಯ್ದಿದ್ದಾರೆ. ಉದ್ಯಮಿ ಹರ್ಷ ಗೋಯೆಂಕಾ ಈ ಸುಂದರ ಕಥೆಯನ್ನು ಹಂಚಿಕೊಂಡಿದ್ದಾರೆ.
Read Full Story

09:30 PM (IST) Nov 01

ODI ಪಂದ್ಯಕ್ಕೂ ಮೊದಲು ಕೊಹ್ಲಿ ಕುರಿತ ರಹಸ್ಯವನ್ನ ಬಹಿರಂಗಪಡಿಸಿದ RCB ಸ್ಟಾರ್ ಡಫಿ

ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದಿದ್ದು, ನವೆಂಬರ್ 4ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದು, ಕಿವೀಸ್ ವೇಗಿ ಜಾಕೋಬ್ ಡಫಿ ಕೊಹ್ಲಿಯ ಸರಳತೆಯನ್ನು ಕೊಂಡಾಡಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ ಶುಭಮನ್ ಗಿಲ್ ಮತ್ತು ಉಳಿದ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕರಾಗಲಿದ್ದಾರೆ.
Read Full Story

09:13 PM (IST) Nov 01

ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರ ಹೃದಯ ಗೆದ್ದ ದಿನೇಶ್ ಕಾರ್ತಿಕ್ ಶುಭಾಶಯ..! RCB ಮನೆಮಗನ ಕನ್ನಡ ಪ್ರೀತಿಗೆ ಫ್ಯಾನ್ಸ್‌ ಫಿದಾ!

ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಅವರು ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ತಮಿಳುನಾಡಿನವರಾದರೂ ತಮ್ಮನ್ನು ಕರ್ನಾಟಕದ ದತ್ತುಪುತ್ರ ಎಂದು ಕರೆದುಕೊಂಡಿರುವ ಅವರು, ಭಾಷೆ ಮತ್ತು ಗಡಿಯ ಮಿತಿಗಳನ್ನು ಮೀರಿದ್ದಾರೆ. ಅಲ್ಲದೆ, ಆರ್‌ಸಿಬಿಯ ಸತತ ಎರಡು ಐಪಿಎಲ್ ಗೆಲುವಿನಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
Read Full Story

08:57 PM (IST) Nov 01

ಬಾಯ್‌ಫ್ರೆಂಡ್ ಕೊಟ್ಟ ನೋವು ಅಷ್ಟಿಷ್ಟಲ್ಲ - ಬ್ರೇಕಪ್ ಕಥೆ ಬಿಚ್ಚಿಟ್ಟ ‘ಸೂರ್ಯಕಾಂತಿ’ ನಟಿ ರೆಜಿನಾ

ನಟಿ ರೆಜಿನಾ ಕ್ಯಾಸಂಡ್ರಾ ತಮ್ಮ ಪ್ರೇಮ ಜೀವನದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. 2020ರಲ್ಲಿ ಕೊನೆಯ ಸಂಬಂಧ ಅಂತ್ಯಗೊಂಡಿದ್ದು, ಅದರಲ್ಲಿ ನಂಬಿಕೆ ದ್ರೋಹಕ್ಕೆ ಒಳಗಾಗಿದ್ದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

Read Full Story

08:26 PM (IST) Nov 01

'ನಿಮ್ಮೊಂದಿಗೆ ಉತ್ತಮ ಕ್ಷಣ ಕಳೆದೆ..' - ಇಟಲಿ ಟ್ರಿಪ್‌ನಲ್ಲಿ ಸಾರಾ ತೆಂಡೂಲ್ಕರ್ ಜತೆ ಕಾಣಿಸಿಕೊಂಡ ಖ್ಯಾತ ಉದ್ಯಮಿ..! ಯಾರೀತ?

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಇತ್ತೀಚೆಗೆ ತಮ್ಮ ಇಟಲಿ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದು, ಉದ್ಯಮಿ ಆಕಾಶ್ ಮೆಹ್ತಾ ಜೊತೆಗಿನ ಚಿತ್ರಗಳು ಕುತೂಹಲ ಮೂಡಿಸಿವೆ. ಇದರ ಜೊತೆಗೆ ಅವರು ಮುಂಬೈನಲ್ಲಿ ಫಿಟ್‌ನೆಸ್ ಅಕಾಡೆಮಿ ನಡೆಸುತ್ತಿದ್ದು, ಹಲವು ಪ್ರಮುಖ ಬ್ರ್ಯಾಂಡ್‌ಗಳ ರಾಯಭಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.
Read Full Story

08:08 PM (IST) Nov 01

'ಈ ಐಡಿಯಾ ಆವತ್ತೇ ಇತ್ತು' ಎಲಾನ್ ಮಸ್ಕ್ ಹಾರುವ ಕಾರಿಗೆ ರಾಮಾಯಣ 'ಲಿಂಕ್' ಕೊಟ್ಟ ರಣಬೀರ್ ಕಪೂರ್

ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದ ಪುಷ್ಪಕ ವಿಮಾನವು ತೀವ್ರ ಕುತೂಹಲ ಮೂಡಿಸಿದೆ. ನಟ ರಣಬೀರ್ ಕಪೂರ್ ಈ ಪೌರಾಣಿಕ ವಿಮಾನವನ್ನು ಎಲಾನ್ ಮಸ್ಕ್ ಅವರ ಹಾರುವ ಕಾರಿಗೆ ಹೋಲಿಸಿದ್ದಾರೆ. ಏನಂದ್ರು ರಣಬೀರ್ ಕಪೂರ್?

Read Full Story

07:42 PM (IST) Nov 01

Suriya - 'ಸೀನ್' ಟ್ರೇಲರ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಸೂರ್ಯ ಅಬ್ಬರ; ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್!

ತಮಿಳು ನಟ ಸೂರ್ಯ ನಟನೆಯ ‘ಸೀನ್’ ಬಿಡುಗಡೆಯ ಹಾದಿಯಲ್ಲಿದೆ. ಹಿಂದಿನ ಎರಡು ಸಿನಿಮಾಗಳಿಗಿಂತ ವಿಭಿನ್ನವಾದ ಪೊಲೀಸ್ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ನೀಡಿದೆ.

Read Full Story

07:25 PM (IST) Nov 01

ರಾಮಾಯಣದ ಸೀತೆಯಾಗಲು ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು ಕೋಟಿ? ಒಂದೊಂದು ಭಾಗಕ್ಕೂ ಭರ್ಜರಿ ಪೇಮೆಂಟ್!

ನಿತೇಶ್ ತಿವಾರಿ ನಿರ್ದೇಶನದ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸುತ್ತಿರುವ ರಾಮಾಯಣ ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ? ತಿಳಿಯಿರಿ.

Read Full Story

07:03 PM (IST) Nov 01

'ನಿನ್ನಷ್ಟು ನೀಚ ಯಾರೂ ಇಲ್ಲ' ಎಂದು ಕಿಡಿಕಾರಿದ್ದೇಕೆ ಸಲ್ಮಾನ್ ಖಾನ್‌? ಯಾರ ವಿರುದ್ಧ ಭಾಯ್‌ಜಾನ್‌ಗೆ ಗರಂ ಆಗಿದ್ದು?

ಲವ್‌ನನ್ನು ಸಹೋದರಿಯಂತೆ ನೋಡುತ್ತೇನೆ ಎಂದು ಹೇಳುವ ಸ್ಕೌಟ್, ತನ್ನ ಗೆಳತಿ ಕಾಶ್ವಿ ಎದುರು ಈ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಯಾಕೆ ಮಾತನಾಡಲಿಲ್ಲ? ಕಾಶ್ವಿಯ ಅಸಮಾಧಾನಕ್ಕೆ ಕಾರಣವೇನು? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಏನು ವಿಷಯ? ಸಲ್ಲೂ ಕೋಪಕ್ಕೆ ಕಾರಣವೇನು?

Read Full Story

06:06 PM (IST) Nov 01

World Vegan day 2026 - ಸಂಪೂರ್ಣ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಅದೆಷ್ಟು ಪ್ರಯೋಜನಕಾರಿ? ಇಲ್ಲಿದೆ ಉಪಯುಕ್ತ ಮಾಹಿತಿ

ಇತ್ತೀಚಿನ ವರ್ಷಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಅದರಲ್ಲೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಹಲವರು ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೇಗನ್ (Vegan) ಆಹಾರ ಪದ್ಧತಿ ಹೆಚ್ಚು ಜನಪ್ರಿಯವಾಗುತ್ತಿದೆ.

Read Full Story

05:52 PM (IST) Nov 01

ಸಿಗರೇಟ್ ಚಟಕ್ಕೆ ಬಹಳಷ್ಟು ಬಾಲಿವುಡ್ ನಟಿಯರು ಬಲಿ - ಈ ಲಿಸ್ಟ್‌ನಲ್ಲಿ ಯಾರೆಲ್ಲಾ ಸ್ಟಾರ್ ಹೀರೋಯಿನ್ಸ್‌ ಇದ್ದಾರೆ?

ಸೋನಂ ಕಪೂರ್, ಕಂಗನಾ ರನೌತ್, ಸುಶ್ಮಿತಾ ಸೇನ್ ಸೇರಿದಂತೆ ಧೂಮಪಾನದ ಅಭ್ಯಾಸದ ವಿಚಾರವಾಗಿ ಸುದ್ದಿಯಾದ ಬಾಲಿವುಡ್ ನಟಿಯರು ಯಾರು? ಅವರ ಬಗ್ಗೆ ಪ್ರಕಟವಾದ ವರದಿಗಳು ಮತ್ತು ಬಹಿರಂಗ ಹೇಳಿಕೆಗಳ ಮಾಹಿತಿ ಇಲ್ಲಿದೆ.

Read Full Story

05:18 PM (IST) Nov 01

ಆಮ್ ಆದ್ಮಿ ಪಾರ್ಟಿಯಲ್ಲಿ ತಳಮಳ, ದಿಢೀರ್ ರಾಜೀನಾಮೆ ನೀಡಿದ ಇಬ್ಬರು ಶಾಸಕರು ಬಿಜೆಪಿ ಸೇರಲು ಸಿದ್ಧತೆ

ಆಮ್ ಆದ್ಮಿ ಪಾರ್ಟಿಯಲ್ಲಿ ಕೋಲಾಹಲ ಶುರುವಾಗಿದೆ. ಇಬ್ಬರು ಶಾಸಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದಾರೆ. ಇದೀಗ ಈ ಇಬ್ಬರು ಬಿಜೆಪಿ ಸೇರಲು ತಯಾರಿ ನಡೆಸಿದ್ದಾರೆ. ಇಬ್ಬರು ನಾಯಕರ ನಡೆ ಆಪ್ ಪಾರ್ಟಿಗೆ ತೀವ್ರ ಹಿನ್ನಡೆ ತಂದಿದೆ.

Read Full Story

05:16 PM (IST) Nov 01

ರಾವಣನ ಆ ಒಂದು ಫೈಟ್‌ಗಾಗಿ ಆರುವರೆ ವರ್ಷಗಳ ಪರಿಶ್ರಮ - ಥಿಯೇಟರ್‌ನಲ್ಲಿ ಮೈ ಜುಮ್ಮೆನ್ನಿಸುವ ದೃಶ್ಯವಂತೆ!

ರಾವಣ ಮತ್ತು ಜಟಾಯು ನಡುವಿನ ಕಾಳಗದ ದೃಶ್ಯವನ್ನು ಪೂರ್ಣಗೊಳಿಸಲು ಆರುವರೆ ವರ್ಷ ಬೇಕಾಯಿತು ಎಂದು ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದಾರೆ. ಪುಷ್ಪಕ ವಿಮಾನದ ವಿನ್ಯಾಸ, ಚಿತ್ರದ ಮೇಕಿಂಗ್ ಮತ್ತು ವಿಶೇಷ ಸಂಗತಿಗಳ ಮಾಹಿತಿ ಇಲ್ಲಿದೆ.

Read Full Story

04:55 PM (IST) Nov 01

'ಚಂದ್ರಮುಖಿ 2' ಬಳಿಕ ಮತ್ತೆ ಹಾರರ್ ಲೋಕಕ್ಕೆ ಕಂಗನಾ ಎಂಟ್ರಿ - ಈ ಬಾರಿ ಬಾಹುಬಲಿ ನಟ ಸಾಥ್!

ರಾಣಾ ದಗ್ಗುಬಾಟಿ ನಿರ್ಮಾಣದ 'ಸ್ಕೇರಿ ಪಿಕ್ಚರ್' ಹಾರರ್ ಸಿನಿಮಾದಲ್ಲಿ ಕಂಗನಾ ರನೌತ್ ನಟಿಸುತ್ತಿದ್ದಾರೆ. ಹಾರರ್‌ಕಾನ್ ಇಂಡಿಯಾ 2026ರಲ್ಲಿ ಸಿನಿಮಾ ಘೋಷಣೆಯಾಗಿದ್ದು, ತೆಲುಗು ನಿರ್ದೇಶಕ ರವಿ ಬಾಬು ಮೊದಲ ಬಾರಿಗೆ ಹಿಂದಿ ಚಿತ್ರ ನಿರ್ದೇಶಿಸುತ್ತಿದ್ದಾರೆ.

Read Full Story

04:45 PM (IST) Nov 01

ಎಲ್ಲರನ್ನೂ ಖುಷಿ ಪಡಿಸೋದು ನನ್ನ ಕೆಲಸ ಅಲ್ಲ -ಸೂರ್ಯವಂಶಿ ವಿಚಾರಕ್ಕೆ ಕೋಪಿಸಿಕೊಂಡ ಗಂಭೀರ್

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸೋಲಿನ ಬಳಿಕ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಾರ್ಮ್‌ನಲ್ಲಿದ್ದ ವೈಭವ್ ಸೂರ್ಯವಂಶಿ ಬದಲು ಇಶಾನ್ ಕಿಶನ್‌ಗೆ ಅವಕಾಶ ನೀಡಿದ್ದೇ ಸೋಲಿಗೆ ಕಾರಣ ಎಂಬ ಟೀಕೆಗಳು ಕೇಳಿಬಂದಿವೆ. ಇದಕ್ಕೆ ಗಂಭೀರ್, ಜನಪ್ರಿಯ ನಿರ್ಧಾರಗಳಿಗಿಂತ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ತಮ್ಮ ಕೆಲಸ ಎಂದು ತಿರುಗೇಟು ನೀಡಿದ್ದಾರೆ.

Read Full Story

04:39 PM (IST) Nov 01

'ರಾಮಾಯಣ'ದ ಸೀತಾ ಪಾತ್ರಧಾರಿಗಿದೆ ಈ ಅಪರೂಪದ ಕಾಯಿಲೆ - ಸಾಯಿ ಪಲ್ಲವಿ ಹೇಳಿದ ಆ ಸಮಸ್ಯೆ ಏನು?

ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮನ್ನು ಕಾಡುತ್ತಿರುವ ರೋಸೇಶಿಯಾ ಚರ್ಮದ ಸಮಸ್ಯೆ ಕುರಿತು ಮಾತನಾಡಿದ್ದಾರೆ. ಏನಿದು ರೋಸೇಶಿಯಾ? ಸಾಮಾನ್ಯ ಮೊಡವೆಗೂ ಇದಕ್ಕೂ ಏನು ವ್ಯತ್ಯಾಸ? ಇದರ ಲಕ್ಷಣಗಳೇನು?

Read Full Story

04:15 PM (IST) Nov 01

ಈ ಸ್ಟಾರ್ ನಟಿ ಮಾಡೆಲಿಂಗ್‌ಗೆ ಪಡೆದಿದ್ದು ಕೇವಲ 1500 ರೂ., ಇಂದು 900 ಕೋಟಿ ರೂ. ಒಡತಿ - ಯಾರೀಕೆ!

ಮಾಡೆಲಿಂಗ್‌ಗಾಗಿ ಕೇವಲ 1,500 ರೂ. ಸಂಭಾವನೆ ಪಡೆದಿದ್ದ ಐಶ್ವರ್ಯಾ ರೈ ಬಚ್ಚನ್, ಇಂದು ಬರೋಬ್ಬರಿ 900 ಕೋಟಿ ರೂ. ಒಡೆಯಾಗಿದ್ದಾರೆ. ಅವರ ಮೊದಲ ಸಂಪಾದನೆ, ಸಿನಿಮಾ ಸಂಭಾವನೆ ಹಾಗೂ ಆಸ್ತಿಯ ವಿವರ ಇಲ್ಲಿದೆ.

Read Full Story

04:02 PM (IST) Nov 01

ಪತಿ IAS, ಪತ್ನಿ IPS - 40 ವಿಲ್ಲಾ, ವರ್ಷಕ್ಕೆ 1.8 ಕೋಟಿ ಕಮಾಯಿ; ಸಂಚಲನ ಮೂಡಿಸಿದ ಭ್ರಷ್ಟಾಚಾರ ಆರೋಪ

ಐಎಎಸ್‌ ಅಧಿಕಾರಿ ಶಿಖರ್ ಅಗರ್ವಾಲ್ ಮತ್ತು ಐಪಿಎಸ್‌ ಅಧಿಕಾರಿ ಪ್ರಶಾಖಾ ಮಾಥುರ್ ದಂಪತಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಇವರು 6.16 ಕೋಟಿ ರೂ. ಮೌಲ್ಯದ 40 ವಿಲ್ಲಾಗಳನ್ನು ಖರೀದಿಸಿ, ಮತ್ತೆ ಅದೇ ಕಂಪನಿಗೆ ಗುತ್ತಿಗೆ ನೀಡಿ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ಆರಂಭಿಸಿದೆ.
Read Full Story

04:01 PM (IST) Nov 01

ಯಶ್ 'ರಾಮಾಯಣ' ನೋಡಿ ಹಾಲಿವುಡ್ ವಿಮರ್ಶಕರು ಹೇಳಿದ್ದೇನು? ಮೆಚ್ಚುಗೆ ಜೊತೆಗೆ ಬಂತು ಶಾಕಿಂಗ್ ಕಾಮೆಂಟ್

ಯಶ್ ನಟನೆಯ 'ರಾಮಾಯಣ' ಸಿನಿಮಾದ ಗ್ರಾಫಿಕ್ಸ್ ಮತ್ತು ಮೇಕಿಂಗ್‌ಗೆ ಹಾಲಿವುಡ್ ವಿಮರ್ಶಕರು ಫಿದಾ ಆಗಿದ್ದಾರೆ. ಆದರೆ ನವೆಂಬರ್ 5ರಂದು ರಿಲೀಸ್ ಆಗಲಿರುವ ಈ ಚಿತ್ರದ ಉದ್ದ, ಕಥೆ ಹೇಳಿದ ರೀತಿ ಹಾಗೂ ನಿರೂಪಣೆ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.

Read Full Story

03:54 PM (IST) Nov 01

195 ಕಿ.ಮೀ ಪ್ರಯಾಣಕ್ಕೆ ಕೇವಲ 59 ನಿಮಿಷ, ಬುಲೆಟ್ ರೈಲು ಕಾರಿಡಾರ್‌ಗೆ ಪ್ರಧಾನಿ ಮೋದಿ ಅನುಮೋದನೆ

195 ಕಿಲೋಮೀಟರ್ ಪ್ರಯಾಣಕ್ಕೆ ಕೇವಲ 59 ನಿಮಿಷ ಸಾಕು. ದೆಹಲಿಯಿಂದ ಪ್ರಮುಖ ನಗರಗಳ ಸಂಪರ್ಕಿಸುವು ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ.

Read Full Story

03:31 PM (IST) Nov 01

Aishwarya Rai Birthday - ದೇವದಾಸ್‌ನಿಂದ ಧೂಮ್ 2 ವರೆಗೆ ಐಶ್ವರ್ಯಾ ರೈ ಅವರ 10 ಬೆಸ್ಟ್ ಲುಕ್ಸ್

ಐಶ್ವರ್ಯಾ ರೈ ಬಚ್ಚನ್ ಹುಟ್ಟುಹಬ್ಬ: ದೇವದಾಸ್ ಚಿತ್ರದ ಪಾರೋ ಪಾತ್ರದ ಸೀರೆಯಿಂದ ಹಿಡಿದು, ಜೋಧಾ ಬಾಯಿಯ ರಾಯಲ್ ಲುಕ್ ಹಾಗೂ ಧೂಮ್ 2 ಚಿತ್ರದ ಸುನೇರಿಯ ಗ್ಲಾಮರಸ್ ಅವತಾರದವರೆಗೆ ಐಶ್ವರ್ಯಾ ರೈ ತೆರೆಮೇಲೆ ಮೋಡಿ ಮಾಡಿದ್ದಾರೆ. ಅವರ 10 ಬೆಸ್ಟ್ ಆನ್-ಸ್ಕ್ರೀನ್ ಲುಕ್ಸ್‌ ಇಲ್ಲಿವೆ.
Read Full Story

03:10 PM (IST) Nov 01

ನಿದ್ರೆಗೂ ಹೃದಯದ ಆರೋಗ್ಯಕ್ಕೂ ಇದೆ ಸಂಬಂಧ! ಮಲಗುವ ಮುನ್ನ ಈ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ!

ನಿದ್ರೆ ಎಂದರೆ ಕೇವಲ ದೇಹಕ್ಕೆ ವಿಶ್ರಾಂತಿ ನೀಡುವ ಸಮಯವಲ್ಲ. ದೇಹದ ಹಲವು ಪ್ರಮುಖ ಕಾರ್ಯಗಳು ಸಮರ್ಪಕವಾಗಿ ನಡೆಯಲು ಇದು ಸಹಾಯ ಮಾಡುತ್ತದೆ. ಸಣ್ಣಪುಟ್ಟ ನಿದ್ರೆಯ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಹೃದಯದ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯದ ಕಡೆಗೆ ಉತ್ತಮ ಹೆಜ್ಜೆ ಇಡಬಹುದು.

Read Full Story

01:32 PM (IST) Nov 01

'ವಿವಾಹಿತ ಪುರುಷನನ್ನು ಮದುವೆಯಾಗಲ್ಲ' ಎಂದಿದ್ದ ಶ್ರೀದೇವಿ ಕೊನೆಗೆ 2 ಮಕ್ಕಳ ತಂದೆಗೆ ಹೆಂಡತಿ ಆಗಿದ್ದು ಆ ಘಟನೆಯಿಂದ!

ಚೆಂದದ ನಟಿ ಶ್ರೀದೇವಿ ಅವರ ವೈಯಕ್ತಿಕ ಜೀವನವೂ ಸಿನಿಮಾದ ಕಥೆಗಿಂತ ಕಡಿಮೆಯೇನಿರಲಿಲ್ಲ. 'ನಾನು ಎಂದಿಗೂ ವಿವಾಹಿತ ಪುರುಷನನ್ನು ಮದುವೆಯಾಗುವುದಿಲ್ಲ' ಎಂದು ಹೇಳಿದ್ದ ಶ್ರೀದೇವಿ, ಕೊನೆಗೆ 2 ಮಕ್ಕಳ ತಂದೆ ಬೋನಿ ಕಪೂರ್ ಬಲೆಗೆ ಬಿದ್ದಿದ್ದು ಆ ಒಂದು ಕಾರಣಕ್ಕೆ. ಈ ರಹಸ್ಯ ಪ್ರೇಮಕತೆ ಅಸಲೀಯತ್ತು ಇದು..

Read Full Story

01:02 PM (IST) Nov 01

ಎನ್‌ಡಿಎ ಮೈತ್ರಿಯಲ್ಲಿ ಕೋಲಾಹಲ, 11 ಶಾಸಕರ ರಾಜೀನಾಮೆ ಬೆನ್ನಲ್ಲೇ ಸಚಿವ ಸ್ಥಾನಕ್ಕೆ UDP ಅಧ್ಯಕ್ಷ ಗುಡ್ ಬೈ

ಪಕ್ಷದ 12 ಶಾಸಕರ ಪೈಕಿ 11 ಮಂದಿ ರಾಜೀನಾಮೆ ನೀಡಿ ಬಿಜೆಪಿ ಹಾಗೂ ಎನ್‌ಪಿಪಿ ಸೇರಿಕೊಂಡಿದ್ದಾರೆ. ಕೋಲಾಹಲದ ನಡುವೆ 12ನೇ ಶಾಸಕ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

Read Full Story

12:08 PM (IST) Nov 01

ಇಂದಿನಿಂದ ಹಳೇ ವಾಹನ ಬ್ಯಾನ್, ಪಾರ್ಕಿಂಗ್ ಶುಲ್ಕ ಡಬಲ್, ರಾಷ್ಟ್ರ ರಾಜಧಾನಿಯಲ್ಲಿ ಕಡ್ಡಾಯ ರೂಲ್ಸ್ ಜಾರಿ

ನವೆಂಬರ್ 1 ರಿಂದ ಕೆಲ ಕಡ್ಡಾಯ ರೂಲ್ಸ್ ಜಾರಿಯಾಗಿದೆ. ಹಳೇ ವಾಹನ ಪ್ರವೇಶ ನಿಷೇಧಿಸಲಾಗಿದೆ. ಶೇಕಡಾ 50ರಷ್ಟು ಮಂದಿಗೆ ವರ್ಕ್ ಫ್ರಮ್ ಹೋಮ್ ಕಡ್ಡಾಯವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಠಿಣ ನಿಯಮಗಳು ಜಾರಿಯಾಗಿದೆ.

Read Full Story

11:13 AM (IST) Nov 01

Sanjay Gupta Death - ಮನೆಯೊಳಗೇ ಬಿದ್ದು ಬಾಲಿವುಡ್ ನಟ-ನಿರ್ದೇಶಕ ಸಂಜಯ್‌ ಗುಪ್ತಾ ನಿಧನ; ತಡರಾತ್ರಿ ಆಗಿದ್ದೇನು?

ಸಂಜಯ್ ಗುಪ್ತಾರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕುಟುಂಬದ ಸದಸ್ಯರು ಪೊಲೀಸರೊಂದಿಗೆ ಮಾತನಾಡಿದ್ದು, ಈ ಸಾವಿನ ಹಿಂದೆ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಘಟನೆಯ ವಿವರಗಳನ್ನು ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.

Read Full Story

10:53 AM (IST) Nov 01

ಪ್ರತಿಭಟನೆಗೆ ಬನ್ನಿ, ಶಾಪಿಂಗ್ ಕೂಡ ಮಾಡಿ..! ದೆಹಲಿಗೆ ಬರುವವರಿಗೆ ರಾಹುಲ್ ಗಾಂಧಿ ಹೀಗೇಕೆ ಹೇಳಿದ್ರು, ಅಸಲಿ ಕಾರಣವೇನು?

Don't Jus Protest, Shop: ಚುನಾವಣಾ ಅಕ್ರಮ ವಿರೋಧಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ವ್ಯಾಪಾರಿಗಳಿಂದ ಶಾಪಿಂಗ್ ಮಾಡುವಂತೆ ರಾಹುಲ್ ಗಾಂಧಿ ಜನರಿಗೆ ಕರೆ ನೀಡಿದ್ದಾರೆ.

Read Full Story

10:42 AM (IST) Nov 01

IND vs NZ 5th T20I - ಕಿವೀಸ್ ಎದುರು ಕಮ್‌ಬ್ಯಾಕ್‌ ಮಾಡಿ ಗೆಲ್ಲುತ್ತಾ ಟೀಂ ಇಂಡಿಯಾ? ಸರಣಿ ಗೆದ್ದರೂ ಒತ್ತಡದಲ್ಲಿ ಶ್ರೇಯಸ್ ಅಯ್ಯರ್..!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟಿ20 ಪಂದ್ಯ ಭಾನುವಾರ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ. ಸರಣಿ ಗೆದ್ದಿರುವ ಟೀಂ ಇಂಡಿಯಾ, ಕಳೆದ ಪಂದ್ಯದ ಸೋಲಿನಿಂದ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ಕಳಪೆ ಫಾರ್ಮ್‌ನಲ್ಲಿರುವ ನಾಯಕ ಶ್ರೇಯಸ್ ಅಯ್ಯರ್ ಮೇಲೆ ತೀವ್ರ ಒತ್ತಡವಿದ್ದು, ತಂಡದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆಯಿದೆ.
Read Full Story

10:16 AM (IST) Nov 01

Chalo Delhi - SIR ವಿರೋಧಿಸಿ ದೆಹಲಿಯಲ್ಲಿಂದು ಕಾಂಗ್ರೆಸ್ ಪ್ರತಿಭಟನೆ, ಎಷ್ಟು ಜನರ ಸೇರಿದ್ರು?

ಚುನಾವಣಾ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿವೆ. ರಾಹುಲ್ ಗಾಂಧಿ ಕರೆಯ ಮೇರೆಗೆ ಸಾವಿರಾರು ಕಾರ್ಯಕರ್ತರು ಸೇರಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ .

Read Full Story

10:13 AM (IST) Nov 01

ಇನ್‌ಸ್ಟಾಗ್ರಾಮ್‌ನಲ್ಲಿ ತೆಂಬಾ ಬವುಮಾ ಟ್ರೋಲ್ ಮಾಡಿದ ಟ್ರ್ಯಾವಿಸ್ ಹೆಡ್‌; ಆಮೇಲೆ ಆಸೀಸ್‌ಗೆ ನರಕ ತೋರಿಸಿದ ಹರಿಣಗಳು..!

ಮೊದಲ ಟೆಸ್ಟ್ ಪಂದ್ಯದ ಗೆಲುವಿನ ನಂತರ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೋಲ್ ಮಾಡಿದ್ದರು. ಆದರೆ, ಛಲ ಬಿಡದ ಬವುಮಾ ಭರ್ಜರಿ ಶತಕ ಸಿಡಿಸಿ ಸರಣಿಯನ್ನು 2-1 ಅಂತರದಿಂದ ಗೆಲ್ಲಿಸಿಕೊಟ್ಟರು. ಈ ಮೂಲಕ ಆಸ್ಟ್ರೇಲಿಯಾಕ್ಕೆ ತಕ್ಕ ತಿರುಗೇಟು ನೀಡಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದರು.

Read Full Story

08:44 AM (IST) Nov 01

SIR ವಿರೋಧದ ಹಿಂದೆ ರೆಜಿಮ್ ಚೇಂಜ್ ಸಂಚು? ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ಶಾಕಿಂಗ್ ಹೇಳಿಕೆ | ವಿಡಿಯೋ

ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ಆಡಳಿತ ಬದಲಾವಣೆ ಮಾಡಲು ರಾಹುಲ್ ಗಾಂಧಿ ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ನುಸುಳುಕೋರರನ್ನು ಮತದಾರರ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಎಸ್‌ಐಆರ್‌ ಪ್ರಕ್ರಿಯೆ ವಿರೋಧಿಸುತ್ತಿದೆ ಎಂದು ಟೀಕಿಸಿದ್ದಾರೆ.

Read Full Story

08:41 AM (IST) Nov 01

ಇಂದಿನಿಂದ LPG ಸಿಲಿಂಡರ್ ಬೆಲೆಯಲ್ಲಿ ಅಚ್ಚರಿಯ ಬದಲಾವಣೆ! ಹಬ್ಬಕ್ಕೆ ದುಬಾರಿ ಗಿಫ್ಟ್

ನವೆಂಬರ್ 1 ರಿಂದ ಅನ್ವಯವಾಗುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹10 ರಿಂದ ₹11.50 ರವರೆಗೆ ಹೆಚ್ಚಳ ಮಾಡಲಾಗಿದೆ. ಆದರೆ, ಗೃಹಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Read Full Story

07:53 AM (IST) Nov 01

ಫ್ರಾನ್ಸ್‌ನಲ್ಲಿ ಮತ್ತೆ ಬೃಹತ್‌ ವೀಕೆಂಡ್‌ ಪ್ರತಿಭಟನೆ ಕಿಚ್ಚು; ಸತತ 3ನೇ ವಾರ ಧರಣಿ, 3.2 ಲಕ್ಷ ಜನ ಭಾಗಿ

ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿ ಫ್ರಾನ್ಸ್‌ನಲ್ಲಿ ಸತತ 3ನೇ ವಾರವೂ ಬೃಹತ್ ಪ್ರತಿಭಟನೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದ್ದು, ಸಾವಿರಾರು ಜನರನ್ನು ಬಂಧಿಸಲಾಗಿದೆ.

Read Full Story

07:42 AM (IST) Nov 01

12 ವರ್ಷಗಳಲ್ಲಿ ಬಡತನದಿಂದ ಹೊರಬಂದ 49.6 ಕೋಟಿ ಜನ! ಶೇ. 57.7 ರಿಂದ ಶೇ. 16.1ಕ್ಕೆ ಕುಸಿತ

ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದಲ್ಲಿ ಬಡತನವು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಕಡಿಮೆಯಾಗುತ್ತಿದೆ. 2011ರಿಂದ 2023ರ ಅವಧಿಯಲ್ಲಿ ಸುಮಾರು 50 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ಮಹಿಳಾ ಉದ್ಯೋಗ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಬದಲಾವಣೆಗೆ ಪ್ರಮುಖ ಕಾರಣವಾಗಿವೆ.
Read Full Story

07:31 AM (IST) Nov 01

IAS-IPS ದಂಪತಿಯ ಬೃಹತ್ ಅಕ್ರಮ - ದುಬಾರಿ ಮೌಲ್ಯದ 36 ಮನೆ ಜಸ್ಟ್ ₹6 ಕೋಟಿಗೆ ಖರೀದಿ

ರಾಜಸ್ಥಾನದ ಐಎಎಸ್‌ ಅಧಿಕಾರಿ ಶಿಖರ್‌ ಅಗ್ರವಾಲ್‌ ಹಾಗೂ ಐಪಿಎಸ್‌ ಅಧಿಕಾರಿ ಪ್ರಶಾಖಾ ಮಾಥುರ್‌ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಬೃಹತ್ ಅಕ್ರಮ ಎಸಗಿದ್ದಾರೆ. ಕೇವಲ 6 ಕೋಟಿ ರೂ.ಗಳಿಗೆ 36 ಮನೆಗಳನ್ನು ಖರೀದಿಸಿದ ಆಘಾತಕರ ವಿಚಾರ ಎಸಿಬಿ ತನಿಖೆಯಿಂದ ಬಹಿರಂಗವಾಗಿದೆ.

Read Full Story

07:28 AM (IST) Nov 01

ಕನ್ನಡ ರಾಜ್ಯೋತ್ಸವ, ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ - ಕರ್ನಾಟಕಕ್ಕೆ ಕೇಂದ್ರದಿಂದ ₹4,500 ಕೋಟಿ ತೆರಿಗೆ ಪಾಲು ಬಿಡುಗಡೆ

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ 1.09 ಲಕ್ಷ ಕೋಟಿ ರೂ. ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂ. ಹಂಚಿಕೆಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬಲ ಸಿಕ್ಕಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ಹೆಚ್ಚುವರಿ ಕಂತಾಗಿದೆ.
Read Full Story

07:18 AM (IST) Nov 01

ಕೋರ್ಟ್ ಹೇಳಿದ ಕಡೆಯೇ ರಾಮಮಂದಿರ ಇದೆಯಾ? ಅಯೋಧ್ಯೆ ಕೇಸ್ ಮತ್ತೆ ಸುಪ್ರೀಂಗೆ! PIL ಸಲ್ಲಿಕೆ

2019ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸೂಚಿಸಿದ ನಿಖರವಾದ ಸ್ಥಳದಲ್ಲೇ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆಯೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಕೆಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಲು ಸಮಿತಿ ಅಥವಾ ಆಯೋಗವನ್ನು ರಚಿಸುವಂತೆ ಶ್ರೀ ರಾಮ ಜನ್ಮಭೂಮಿ ಕೇಸ್ ಟ್ರಸ್ಟ್ ಮನವಿ ಮಾಡಿದೆ.
Read Full Story

More Trending News