ಪಕ್ಷದ 12 ಶಾಸಕರ ಪೈಕಿ 11 ಮಂದಿ ರಾಜೀನಾಮೆ ನೀಡಿ ಬಿಜೆಪಿ ಹಾಗೂ ಎನ್‌ಪಿಪಿ ಸೇರಿಕೊಂಡಿದ್ದಾರೆ. ಕೋಲಾಹಲದ ನಡುವೆ 12ನೇ ಶಾಸಕ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಶಿಲ್ಲಾಂಗ್ (ನ.01) ಆಡಳಿತರೂಢ ಎನ್‌ಡಿಎ ಮೈತ್ರಿಕೂಟದಲ್ಲಿ ರಾಜಕೀಯ ಕೋಲಾಹಲ ಶುರುವಾಗಿದೆ. 11 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಯುಡಿಪಿ ಅಧ್ಯಕ್ಷ ಹಾಗೂ 12ನೇ ಶಾಸಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಈಶಾನ್ಯ ರಾಜ್ಯ ಮೆಘಾಲಯದಲ್ಲಿ ರಾಜಕೀಯ ಸಂಚಲನ ಶುರುವಾಗಿದೆ. ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ(UDP) ಅಧ್ಯಕ್ಷ ಮೆಟ್‌ಬಾ ಲಿಂಗ್ಡೋ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯುಡಿಪಿ ಪಕ್ಷದ 12 ಶಾಸಕರ ಪೈಕಿ 11 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಹಾಗೂ ಎನ್‌ಪಿಪಿ ಪಕ್ಷ ಸೇರಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಯುಡಿಪಿ ಅಧ್ಯಶ್ರ ಲಿಂಗ್ಡೋ ಕೊನ್ರಾಡ್ ಸಾಂಗ್ಮಾ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

8 ಶಾಸಕರು ಬಿಜೆಪಿ ಹಾಗೂ ಮೂವರು ಎನ್‌ಪಿಪಿ ಸೇರ್ಪಡೆ

ಮೆಘಾಲಯದಲ್ಲಿ ಬಿಜೆಪಿ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮೈತ್ರಿಯ ಎನ್‌ಡಿಎ ಸರ್ಕಾರವಿದೆ. ಮುಖ್ಯಮಂತ್ರಿ ಕೊನ್ರಾಡ್ ಸಾಂಗ್ಮಾ ಅವರ ನೇತೃತ್ವದ ಎನ್‌ಪಿಪಿ ಪಕ್ಷ ಮೆಘಾಲದಲ್ಲಿ ಪ್ರಮುಖ ಪಾರ್ಟಿಯಾಗಿ ಗುರುತಿಸಿಕೊಂಡಿದೆ. ರಾಜಕೀಯ ಬಿಕ್ಕಟ್ಟಿನಲ್ಲಿ ಎನ್‌ಡಿಎ ಮೈತ್ರಿಯ ಯುಡಿಪಿ ಪಕ್ಷದ 12 ಶಾಸಕರ ಪೈಕಿ 11 ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಪೈಕಿ 8 ಶಾಸಕರು ಬಿಜೆಪಿ ಸೇರಿಕೊಂಡರೆ , ಮೂರು ಶಾಸಕರು ಎನ್‌ಪಿಪಿ ಪಕ್ಷ ಸೇರಿಕೊಂಡಿದ್ದಾರೆ. 11 ಮಂದಿ ರಾಜೀನಾಮೆಯಿಂದ ಯುಡಿಪಿ ಪಾರ್ಟಿ ಅಧ್ಯಕ್ಷ ಲಿಂಗ್ಡೋ ಮಾತ್ರ ಉಳಿದುಕೊಂಡಿದ್ದರು. ಈ ಬೆಳವಣಿಗೆಯಿಂದ ಬೇಸತ್ತ ಲಿಂಗ್ಡೋ, ಮೆಘಾಲಯದ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೆಘಾಲಾಯದಲ್ಲಿ ಆಡಳಿತರೂಡ ಎನ್‌ಡಿಎ ಮೈತ್ರಿಯಲ್ಲೇ ಕೋಲಾಹಲ ಸೃಷ್ಟಿಯಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ಯುಡಿಪಿ ಪಕ್ಷ ಖಾಲಿಯಾಗಿದೆ. ಇದ್ದ 12 ಶಾಸಕರಲ್ಲಿ ಇದೀಗ ಪಕ್ಷದಲ್ಲಿ ಉಳಿದಿರುವುದು ಅಧ್ಯಕ್ಷ ಲಿಂಗ್ಡೋ ಮಾತ್ರ. ಈ ರಾಜಕೀಯ ಬೆಳವಣಿಗೆಯಲ್ಲಿ ಎನ್‌ಡಿಎ ಮೈತ್ರಿ ಸರ್ಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಸಚಿವ ಸ್ಥಾನಕ್ಕೆ ಲಿಂಗ್ಡೋ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಮೆಘಾಲಯ ಸರ್ಕಾರದಲ್ಲಿ ಇಂಧನ, ಜಲಸಂಪನ್ಮೂಲ, ಜವಳಿ ಹಾಗೂ ತೆರಿಗೆ ಇಲಾಖೆ ನಿರ್ವಹಿಸುತ್ತಿದ್ದರು. ಮೆಘಾಲಯ ಸರ್ಕಾರದ ಪ್ರಮುಖ ಸಚಿವರಾಗಿ ಗುರುತಿಸಿಕೊಂಡಿದ್ದರು.

ಮೆಘಾಲಯದ ಪ್ರಮುಖ ಪಾರ್ಟಿಯಲ್ಲಿ ಇದೀಗ ಒಬ್ಬರೇ

2023ರಲ್ಲಿ ಮೆಘಾಲಯ ವಿಧಾನಸಭಾ ಚುನಾವಣೆಯಲ್ಲಿ ಲಿಂಗ್ಡೋ ಅಧ್ಯಕ್ಷತೆಯ ಯುಡಿಪಿ ಪಕ್ಷ 12 ಸ್ಥಾನ ಗೆದ್ದು ಎರಡನೇ ಅತೀ ದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿತ್ತು. ಯುಡಿಪಿ ಎನ್‌ಡಿಎ ಪಕ್ಷದ ಭಾಗವಾಗಿದೆ. ಹೀಗಾಗಿ ಎನ್‌ಡಿಎ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಇಷ್ಟೇ ಅಲ್ಲ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನವ ಸ್ವೀಕರಿಸಿದ್ದರು. ಇದೀಗ 12ರಲ್ಲಿ 11 ಮಂದಿ ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದ್ದಾರೆ. ಇದು ಯುಡಿಪಿ ಪಕ್ಷಕ್ಕೆ ತೀವ್ರ ಹಿನ್ನಡೆ ಮಾಡಿದೆ. 2ನೇ ಅತೀ ದೊಡ್ಡ ಪಕ್ಷವಾಗಿದ್ದ ಯುಡಿಪಿ ಇದೀಗ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ.

ಯುಡಿಪಿ ನಾಯಕರ ಪಕ್ಷಾಂತರದಿಂದ ಬಲಿಷ್ಠಗೊಂಡ ಎನ್‌ಪಿಪಿ, ಬಿಜೆಪಿ

ಯುಡಿಪಿ 11 ಶಾಸಕರಲ್ಲಿ 8 ಶಾಸಕರು ಬಿಜೆಪಿ ಸೇರಿಕೊಂಡ ಕಾರಣ ಇದೀಗ ಮೆಘಾಲಯ ವಿಧಾನಸಭೆಯಲ್ಲಿ ಬಿಜೆಪಿ ಬಲ 10ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ ಸದ್ಯ ಬಿಜೆಪಿ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಎನ್‌ಪಿಪಿ ಸಂಖ್ಯಾ ಬಾಲ 36ಕ್ಕೆ ಏರಿಕೆಯಾಗಿದೆ. 60 ಸದಸ್ಯರ ಸಂಖ್ಯಾಬಲ ಹೊಂದಿರುವ ಮೆಘಾಲಯ ವಿಧಾನಸಭೆಯಲ್ಲಿ ಇದೀಗ ಹಲವು ಲೆಕ್ಕಾಚಾರಗಳು ಅದಲು ಬದಲಾಗಿದೆ.

ದಿಢೀರ್ ಬೆಳವಣಿಗೆಯಿಂದ ಸಂಪುರಮ್ ಪುನಾರಚನೆ ಸಾಧ್ಯತೆ

ಮೆಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಾಂಗ್ಮಾ ಶೀಘ್ರದಲ್ಲೇ ಸಂಪುಟ ಪುನರಾಚನೆ ಮಾಡುವ ಸಾಧ್ಯತೆ ಇದೆ. ಸಚಿವ ಲಿಂಗ್ಡೋ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ಹಾಗೂ ಹೊಸದಾಗಿ ಪಕ್ಷಕ್ಕೆ ಸೇರಿಕೊಂಡಿರುವ ಶಾಸಕರ ಕಾರಣದಿಂದ ಸಂಪುಟದಲ್ಲಿ ಭಾರಿ ಬದಲಾವಣೆಗೆ ತಯಾರಿಗಳು ನಡೆದಿದೆ. ಇತ್ತ ತಾನು ಯಾರ ಒತ್ತಡಕ್ಕೂ ಮಣಿದು ರಾಜೀನಾಮೆ ನೀಡಿಲ್ಲ. ರಾಜಕೀಯ ಬೆಳವಣಿಗೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ಮೆಟ್‌ಬಾ ಲಿಂಗ್ಡೋ ಸ್ಪಷ್ಟಪಡಿಸಿದ್ದಾರೆ.