Don't Jus Protest, Shop: ಚುನಾವಣಾ ಅಕ್ರಮ ವಿರೋಧಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ವ್ಯಾಪಾರಿಗಳಿಂದ ಶಾಪಿಂಗ್ ಮಾಡುವಂತೆ ರಾಹುಲ್ ಗಾಂಧಿ ಜನರಿಗೆ ಕರೆ ನೀಡಿದ್ದಾರೆ.

ದೆಹಲಿಯಲ್ಲಿಂದು ಎಸ್‌ಐಆರ್, ಚುನಾವಣಾ ಅಕ್ರಮ ವಿರೋಧಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಪ್ರತಿಭಟನೆ ನಡೆಸುತ್ತಿದೆ. ಈ ಕುರಿತು ನಿನ್ನೆಯ ಪ್ರತಿಭಟನೆ ನಡೆಯುವ ಸ್ಥಳ, ರಾಲಿ ಸಾಗುವ ಮಾರ್ಗ ಕುರಿತಂತೆ ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾದಲ್ಲಿ ವಿವರವಾಗಿ ಹಂಚಿಕೊಂಡಿದ್ದರು ಅಲ್ಲದೆ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು. ಜೊತೆಗೆ ದೆಹಲಿ ವ್ಯಾಪಾರಿಗಳು ಕೂಡ ಪ್ರತಿಭಟನೆಗೆ ಕೈಜೋಡಿಸುವಂತೆ ಕರೆ ನೀಡಿದ್ದರು.

ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ, ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್: ಕರ್ನಾಟಕಕ್ಕೆ ಕೇಂದ್ರದಿಂದ ₹4,500 ಕೋಟಿ ತೆರಿಗೆ ಪಾಲು ಬಿಡುಗಡೆ

ಶಾಪಿಂಗ್ ಮಾಡಿ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲಿಸಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಶನಿವಾರ ಇಂಡಿಯಾ ಬ್ಲಾಕ್ ರಾಲಿಯಲ್ಲಿ ಭಾಗಿಯಾಗಲು ಬರುವ ಜನರಿಗೆ 'ನೀವು ದೆಹಲಿಗೆ ಬಂದ ಬಳಿಕ ಮುಂಚಿತವಾಗಿ ಶಾಪಿಂಗ್ ಮಾಡಿ ಆ ಮೂಲಕ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲಿಸಿ. ಇದು ದೀಪಾವಳಿ ಸಮಯವಾದ್ದರಿಂದ ಸಾಧ್ಯವಾದಷ್ಟು ಶಾಪಿಂಗ್ ಮಾಡಿ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲಿಸಿ. ಬಿಜೆಪಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದರೂ ನಾವು ನಮ್ಮ ಕಾರ್ಯಕ್ರಮವು ಸ್ಥಳೀಯ ವ್ಯಾಪಾರಿಗಳಿಗೆ ಹಾನಿ ಮಾಡುವುದಿಲ್ಲ. ದೇಶದ ವಿವಿಧ ಭಾಗಗಳಿಂದ ಬರುವ ಲಕ್ಷಾಂತರ ಜನರು ಸ್ಥಳೀಯ ವ್ಯಾಪಾರಿಗಳಲ್ಲಿ ಶಾಪಿಂಗ್ ಮಾಡುವ ಮೂಲಕ ಬೆಂಬಲಿಸಲಿದ್ದಾರೆ ಎಂದರು.

ಇದನ್ನೂ ಓದಿ: SIR ವಿರೋಧದ ಹಿಂದೆ ರೆಜಿಮ್ ಚೇಂಜ್ ಸಂಚು? ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ಶಾಕಿಂಗ್ ಹೇಳಿಕೆ | ವಿಡಿಯೋ

ನಮ್ಮ ಪ್ರತಿಭಟನೆಗೆ ಬಿಜೆಪಿ ಭಯಭೀತವಾಗಿದೆ. ಹೀಗಾಗಿ ಜನರಲ್ಲಿ ಆತಂಕ ಸೃಷ್ಟಿಸುವ ವದಂತಿ ಹರಡುತ್ತಿದೆ. ಆದರೆ ನಮ್ಮ ರಾಲಿ ಸ್ಥಳೀಯ ವ್ಯಾಪಾರಿಗಳಿಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಆದರೆ ಎರಡನೂ ಮಾಡೋಣ, ಲಕ್ಷಾಂತರ ಜನರು ಒಟ್ಟಾಗಿ ಸೇರಿ ನಾಳೆ ಪ್ರತಿಭಟನೆಯನ್ನೂ ಮಾಡೋಣ, ಸ್ಥಳೀಯ ವ್ಯಾಪಾರಿಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸುವ ಮೂಲಕ ಶಾಪಿಂಗ್ ಕೂಡ ಮಾಡೋಣ ಎನ್ನುತ್ತಾ ದೀಪಾವಳಿಯ ಶುಭಾಶಯಗಳು ಹೇಳಿ ಜೈ ಹಿಂದ್ ಎಂದಿದ್ದಾರೆ.

ಇಂದು ಭಾನುವಾರ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಆರಂಭವಾಗಿದ್ದು ದೇಶದ ಮೂಲೆಮೂಲೆಗಳಿಂದಲೂ ಜನರು ಬರುತ್ತಿದ್ದಾರೆ. ಮೈದಾನದಲ್ಲಿ ಜಮಾಯಿಸುತ್ತಿದ್ದಾರೆ. ಜನರಲ್ಲದೆ ವಿವಿಧ ರಾಜ್ಯಗಳ ವಿರೋಧ ಪಕ್ಷದ ನಾಯಕರು, ಬೆಂಬಲಿಗರು ಕೂಡ ದೆಹಲಿ ಆಗಮಿಸಿದ್ದಾರೆ.

ಇದನ್ನೂ ಓದಿ: Chalo Delhi: SIR ವಿರೋಧಿಸಿ ದೆಹಲಿಯಲ್ಲಿಂದು ಕಾಂಗ್ರೆಸ್ ಪ್ರತಿಭಟನೆ, ಎಷ್ಟು ಜನರ ಸೇರಿದ್ರು?

ಮುಖ್ಯ ವೇದಿಕೆಯಲ್ಲಿ ದೊಡ್ಡ ತ್ರಿವರ್ಣ ಧ್ವಜ ಹಾಕಲಾಗಿದೆ. ಇಂಡಿಯಾ ಬ್ಲಾಕ್ ಪಕ್ಷಗಳ ಪ್ರತಿನಿಧಿಗಳಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿರೋಧ ಪಕ್ಷವು ಮಿಂಟೋ ರಸ್ತೆಯಿಂದ ರಾಮಲೀಲಾ ಮೈದಾನಕ್ಕೆ ಮೆರವಣಿಗೆ ಸಾಗಿ ನಂತರ ರಾಜಕೀಯ ಪಕ್ಷಗಳು ವಿದ್ಯಾರ್ಥಿ ಗುಂಪುಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳು ಒಟ್ಟುಗೂಡಲಿವೆ. ಈ ಪ್ರತಿಭಟನೆಯಲ್ಲಿ ಇಂಡಿಯಾ ಬ್ಲಾಕ್ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ನಾಗರಿಕ ಸಮಾಜದ ಸದಸ್ಯರು ಸೇರಲಿದ್ದಾರೆ.