ಗರ್ಭಿಣಿಯ ಕಾಡುವ dry mouth problem ಸಮಸ್ಯೆ ನಿವಾರಿಸಲು ಇಲ್ಲಿವೆ ಟಿಪ್ಸ್

First Published Oct 7, 2022, 3:28 PM IST

ಕೆಲವು ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಮೌತ್ ಡ್ರೈ ನೆಸ್ ಸಮಸ್ಯೆ ಎದುರಿಸ್ತಾರೆ. ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಏರಿಳಿತಗಳು ಸಾಮಾನ್ಯವಾಗಿ ಡ್ರೈಮೌತ್ ಗೆ ಕಾರಣವಾಗುತ್ತವೆ ಆದರೆ ಇತರ ಕೆಲವು ಅಂಶಗಳು ಸಹ ಈ ಸ್ಥಿತಿಗೆ ಕಾರಣವಾಗಬಹುದು. ಉದಾಹರಣೆಗೆ, ಮಧುಮೇಹವು (Diabetic) ಗರ್ಭಾವಸ್ಥೆಯಲ್ಲಿ ಬಾಯಿ ಒಣಗಲು ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.

ಡ್ರೈಮೌತ್ (Dry mouth)ಅಥವಾ ಕ್ಸೆರೊಸ್ಟೋಮಿಯಾ ಎಂಬುದು ಲಾಲಾರಸ ಗ್ರಂಥಿಗಳಿಂದ ಲಾಲಾರಸದ ಹರಿವು ಕಡಿಮೆಯಾಗೋದರಿಂದ ಉಂಟಾಗುವ ಒಂದು ಸ್ಥಿತಿ. ಬಾಯಿಯ ಅಂಗಾಂಶವನ್ನು ನಯಗೊಳಿಸಲು ಮತ್ತು ಲೋಳೆಯನ್ನು ರಕ್ಷಿಸಲು ಲಾಲಾರಸ ಅತ್ಯಗತ್ಯ. ಅದರ ಉತ್ಪಾದನೆಯಲ್ಲಿನ ಕುಸಿತವು ಅಗಿಯಲು, ನುಂಗಲು ಮತ್ತು ಟೇಸ್ಟ್ ಮಾಡಲು ಕಷ್ಟವಾಗಬಹುದು ಮತ್ತು ಹಲ್ಲಿನ ಕ್ಷಯ ಮತ್ತು ವಿವಿಧ ಬಾಯಿಯ ಸೋಂಕುಗಳಿಗೆ ಕಾರಣವಾಗಬಹುದು.

ಡ್ರೈಮೌತ್ ಲಕ್ಷಣಗಳಲ್ಲಿ ಶುಷ್ಕ ಮತ್ತು ಮಸುಕಾದ ಬಿಳಿ ನಾಲಿಗೆ, ಬಾಯಿ ಹುಣ್ಣು (Mouth ulcer), ಗಂಟಲು ಕೆರೆತ, ಬಾಯಿ ಒಳಗೆ ಜಿಗುಟಾದ ಅನುಭವ, ಬ್ಯಾಡ್ ಬ್ರಿಥ್, ಬಿರುಕು ಬಿಟ್ಟ ತುಟಿಗಳು, ಒಣ ಗಂಟಲು, ಅತಿಯಾದ ಬಾಯಾರಿಕೆ, ಬರ್ನಿಂಗ್ ಸೆನ್ಸೇಷನ್ ಸೇರಿವೆ. ಗರ್ಭಾವಸ್ಥೆಯಲ್ಲಿ ಬಾಯಿ ಒಣಗಲು ಅನೇಕ ಕಾರಣಗಳಿರಬಹುದು

ಡಿಹೈಡ್ರೇಷನ್ ಸಾಕಷ್ಟು ಲಾಲಾರಸವನ್ನು ಉತ್ಪಾದಿಸೋದಿಲ್ಲ, ಇದು ಬಾಯಿಯಲ್ಲಿ ಡ್ರೈ ನೆಸ್ ಗೆ ಕಾರಣವಾಗುತ್ತೆ. ಗರ್ಭಾವಸ್ಥೆಯಲ್ಲಿ, ಡಿಹೈಡ್ರೇಷನ್ ತಡೆಗಟ್ಟಲು ನೀವು ಹೆಚ್ಚು ನೀರು ಕುಡಿಯಬೇಕು(Drink Water), ಏಕೆಂದರೆ ನೀರು ಭ್ರೂಣದ ಪರಿಚಲನೆ, ಆಮ್ನಿಯೋಟಿಕ್ ದ್ರವ ಮತ್ತು ಹೆಚ್ಚಿನ ರಕ್ತದ ಪ್ರಮಾಣವನ್ನು ಬೆಂಬಲಿಸುತ್ತೆ.  

ಬಾಯಿಯಲ್ಲಿ ಶುಷ್ಕತೆ ಏಕೆ?

ಹಾರ್ಮೋನುಗಳ ಮಟ್ಟದಲ್ಲಿನ ಬದಲಾವಣೆಗಳು ಲಾಲಾರಸದ ಹರಿವನ್ನು ಸಹ ಕಡಿಮೆ ಮಾಡಬಹುದು. ಇದಲ್ಲದೆ, ರಕ್ತದ ಪರಿಮಾಣದ ಹೆಚ್ಚಳವು ಆಗಾಗ್ಗೆ ಮೂತ್ರವಿಸರ್ಜನೆಗೆ ಕಾರಣವಾಗಬಹುದು, ಇದು ದೇಹದಿಂದ ದ್ರವವನ್ನು ಕಳೆದುಕೊಳ್ಳಲು ಕಾರಣವಾಗಬಹುದು. ದೇಹದಲ್ಲಿ ಸಾಕಷ್ಟು ನೀರಿನ ಅಂಶವು ಲಾಲಾರಸ (Saliva)ದ ಉತ್ಪಾದನೆಯನ್ನು ಕಡಿಮೆ ಮಾಡುತ್ತೆ , ಇದು ಬಾಯಿ ಒಣಗಲು ಕಾರಣವಾಗಬಹುದು.

ರಕ್ತಹೀನತೆ (Anemia) ಕೂಡ ಇದಕ್ಕೆ ಕಾರಣ

ಕಿರಿಕಿರಿಯೊಂದಿಗೆ ಬಾಯಿಯಲ್ಲಿ ತೀವ್ರವಾದ ಡ್ರೈ ನೆಸ್ ರಕ್ತಹೀನತೆಯ ಚಿಹ್ನೆಯಾಗಿರಬಹುದು. ಇದಲ್ಲದೆ, ಕೆಫೀನ್ ಯುಕ್ತ ಪಾನೀಯ ಮತ್ತು ಆಲ್ಕೋಹಾಲ್ ಸೇವನೆ, ತಂಬಾಕು ಉತ್ಪನ್ನಗಳ ಬಳಕೆ, ಉಪ್ಪು ಅಥವಾ ಮಸಾಲೆಯುಕ್ತ ಆಹಾರದ ಸೇವನೆ ಮತ್ತು ಬಾಯಿ ಉಸಿರಾಟವು ಸಹ ಬಾಯಿಯನ್ನು ಒಣಗಿಸುತ್ತೆ.

ಸ್ಟಡಿ ಏನು ಹೇಳುತ್ತೆ?

ಎನ್ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗರ್ಭಾವಸ್ಥೆಯಲ್ಲಿ (Pregnancy) ಬಾಯಿಯ ಆರೋಗ್ಯವನ್ನು ನಿರ್ಲಕ್ಷಿಸೋದು ಹಲ್ಲಿನ ಉಳುಕು ಮತ್ತು ಹಲ್ಲಿನ ಮುರಿಯುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗೋದಲ್ಲದೆ, ಅಕಾಲಿಕ ಹೆರಿಗೆ, ಜನನದ ಸಮಯದಲ್ಲಿ ತೂಕ ನಷ್ಟ ಮತ್ತು ಪ್ರಸವಪೂರ್ವ ಎಕ್ಲಾಂಪ್ಸಿಯಾದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಏನು ಮಾಡಬೇಕು?

ನೀವು ಗರ್ಭಾವಸ್ಥೆಯಲ್ಲಿ ಡ್ರೈಮೌತ್ ಸಮಸ್ಯೆಗಳನ್ನು ಹೊಂದಿದ್ದರೆ, ನಿಮ್ಮನ್ನು ಹೈಡ್ರೇಟ್ ಆಗಿರಿಸಲು ಹೆಚ್ಚು ಹೆಚ್ಚು ದ್ರವಗಳನ್ನು ತೆಗೆದುಕೊಳ್ಳಿ. ಐಸ್ ಕ್ಯೂಬ್ ಗಳನ್ನು(Ice cube) ಹೀರೋದರಿಂದ ನಾಲಿಗೆಗೆ ತೇವಾಂಶವನ್ನು ನೀಡುತ್ತೆ. ಇದಲ್ಲದೆ ಜ್ಯೂಸ್, ಹಣ್ಣುಗಳು ಮೊದಲಾದ ನಿಮ್ಮನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುವಂತಹ ಆಹಾರ ಸೇವಿಸಿ. 

ಮಲಗುವಾಗ ಬಾಯಿಯನ್ನು ಮುಚ್ಚಿಡಲು ಪ್ರಯತ್ನಿಸಿ, ಏಕೆಂದರೆ ಬಾಯಿಯ ಮೂಲಕ ಉಸಿರಾಡೋದು ಶುಷ್ಕತೆಗೆ ಕಾರಣವಾಗುತ್ತೆ. ನಿಮಗೆ ಶೀತ ಇದ್ದರೆ, ಸ್ಟೀಮ್(Steam) ತೆಗೆದೊಕೊಳ್ಳೋದರಿಂದ ಉಸಿರಾಟದ ನಾಳವನ್ನು ಕ್ಲಿಯರ್ ಮಾಡಲು ಸಹಾಯ ಮಾಡುತ್ತೆ, ಅದು ಮೂಗಿನ ಮೂಲಕ ಉಸಿರಾಡಲು ನಿಮಗೆ ಅನುವು ಮಾಡಿಕೊಡುತ್ತೆ. 

ಈ ವಿಷಯಗಳನ್ನು ತಪ್ಪಿಸಿ

ಧೂಮಪಾನ(Smoke) ಮತ್ತು ಆಲ್ಕೋಹಾಲ್ ಸೇವನೆ ತಪ್ಪಿಸಿ. ಏಕೆಂದರೆ ಅದು ಬಾಯಿಯನ್ನು ಹೆಚ್ಚು ಒಣಗಿಸುತ್ತೆ. ಬ್ರಷ್ ಮಾಡುವ ಮೂಲಕ, ಫ್ಲೋಸಿಂಗ್ ಮಾಡುವ ಮೂಲಕ ಮತ್ತು ತೊಳೆಯುವ ಮೂಲಕ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಿ. ಕಾಫಿ, ಚಹಾದ ಸೇವನೆ ಕಡಿಮೆ ಮಾಡಿ ಏಕೆಂದರೆ ಅವು  ಬಾಯಾರಿಕೆಯನ್ನು ಹೆಚ್ಚಿಸುತ್ತೆ. ಉಪ್ಪು ಮತ್ತು ಸಿಹಿ ವಸ್ತುಗಳ ಸೇವನೆ ಕಡಿಮೆ ಮಾಡಿ.
 

click me!