ಒಂದು ಕಾಲದಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತಿದ್ದ ಖ್ಯಾತ ಸ್ಟಾಕ್ ಇನ್ವೆಸ್ಟರ್ ಡಾಲಿ ಖನ್ನಾ ಅವರ ಪತಿ ರಾಜೀವ್ ಖನ್ನಾ ಇಂದು ಷೇರು ಮಾರುಕಟ್ಟೆಯ ದಿಗ್ಗಜ ಹೂಡಿಕೆದಾರರಾಗಿದ್ದಾರೆ. ಇವರ 5 ಲಕ್ಷದ ಹೂಡಿಕೆ 5 ಕೋಟಿ ರೂ. ಆಗಿದೆ.
ಮುಂಬೈ: ಷೇರು ಮಾರುಕಟ್ಟೆಯಲ್ಲಿ ಕೆಲವೇ ವರ್ಷಗಳಲ್ಲಿ ಶೂನ್ಯದಿಂದ ಶಿಖರಕ್ಕೇರಿದ ಹಲವು ಹೂಡಿಕೆದಾರರಿದ್ದಾರೆ. ಚಿಕ್ಕ ಹೂಡಿಕೆಯಿಂದ ಷೇರು ಮಾರುಕಟ್ಟೆಗೆ ಬಂದಿರೋ ಹಲವರು ಇಂದು ಕೋಟ್ಯಧಿಪತಿಗಳಾಗಿದ್ದಾರೆ. ಇಂದು ನಾವು ನಿಮಗೆ ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಕಂಡಿರುವ ಹೂಡಿಕೆದಾರ ದಂಪತಿಗಳಾದ ಡಾಲಿ ಖನ್ನಾ ಮತ್ತು ರಾಜೀವ್ ಖನ್ನಾ ಕುರಿತು ಹೇಳುತ್ತಿದ್ದೇವೆ. ಡಾಲಿ ಖನ್ನಾ ಅವರ ಪೋರ್ಟ್‌ಫೋಲಿಯೊವನ್ನು ಅವರ ಪತಿ ರಾಜೀವ್ ನಿರ್ವಹಿಸುತ್ತಾರೆ. ರಾಜೀವ್ ಷೇರುಗಳಲ್ಲಿ ಸರಿಯಾದ ಸಮಯದಲ್ಲಿ ಪ್ರವೇಶ ಮತ್ತು ನಿರ್ಗಮನದ ಮೂಲಕ ಕೋಟಿಗಟ್ಟಲೆ ಗಳಿಸಿದ ವ್ಯಕ್ತಿಯಾಗಿದ್ದಾರೆ.
ರಾಜೀವ್ ಖನ್ನಾ 1986ರಲ್ಲಿ ಕ್ವಾಲಿಟಿ ಮಿಲ್ಕ್ ಫುಡ್ಸ್ ಅಂಡ್ ಐಸ್ ಕ್ರೀಮ್ ಎಂಬ ಕಂಪನಿ ಆರಂಭಿಸಿದರು. ಐಸ್ ಕ್ರೀಮ್ ಮಾರಾಟ ಮೂಲಕ ಮಾರುಕಟ್ಟೆ ಪ್ರವೇಶಿಸಿದರು. ನಂತರ 1995ರಲ್ಲಿ ಕ್ವಾಲಿಟಿ ಮಿಲ್ಕ್ ಫುಡ್ಸ್ ಅಂಡ್ ಐಸ್ ಕ್ರೀಮ್ ಕಂಪನಿಯನ್ನು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ಗೆ ಮಾರಾಟ ಮಾಡುವ ಮೂಲಕ ದೊಡ್ಡ ಮೊತ್ತದ ಲಾಭವನ್ನು ತಮ್ಮದಾಗಿಸಿಕೊಂಡರು. ಈ ಮಾರಾಟದಿಂದ ಬಂದ ಲಾಭವನ್ನು ಆರಂಭದಲ್ಲಿ ಎಲ್ಲಿಯೂ ಹೂಡಿಕೆ ಮಾಡದೇ ಫಿಕ್ಸೆಡ್ ಡಿಪಾಸಿಟ್ ಆಗಿ ಇರಿಸಿದರು.
undefined
1996ರಲ್ಲಿ ರಾಜೀವ್ ಖನ್ನಾ ಹವ್ಯಾಸಕ್ಕಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸಿದರು. ಸತ್ಯಂ ಕಂಪ್ಯೂಟರ್ಸ್ ಹೆಸರಿನ ಕಂಪನಿಯಲ್ಲಿ ಮೊದಲ ಬಾರಿಗೆ ರಾಜೀವ್ ಖನ್ನಾ ಹೂಡಿಕೆ ಮಾಡಿದರು. ತಂತ್ರಜ್ಞಾನ ಕಂಪನಿಯಲ್ಲಿ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹಣವನ್ನು ಗಳಿಸಬಹುದು ಎಂದು ತಿಳಿದುಕೊಂಡ ರಾಜೀವ್ ಖನ್ನಾ ಹಲವಾರು ತಂತ್ರಜ್ಞಾನ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸಿದರು. 1996ರಲ್ಲಿ ಹೂಡಿಕೆ ಮಾಡಿದ ಮೊತ್ತ 4 ವರ್ಷಗಳ ಬಳಿಕ ಅಂದ್ರೆ 2000ರಲ್ಲಿ ಮೂರು ಪಟ್ಟು ಹೆಚ್ಚಾಯ್ತು. ಈ ಸಮಯದಲ್ಲಿ ರಾಜೀವ್ ಖನ್ನಾ ಹಣ ಹಿಂಪಡೆದುಕೊಂಡರು.
ರಾಜೀವ್ ಖನ್ನಾ ಹಣ ಹಿಂಪಡೆದುಕೊಂಡ ಕೆಲ ಸಮಯದ ನಂತರ ಷೇರುಗಳ ಮೌಲ್ಯ ಕುಸಿಯಲಾರಂಭಿಸಿದರು. ಹಣ ಹಿಂತೆಗೆದುಕೊಂಡಿದ್ದರಿಂದ ರಾಜೀವ್ ಖನ್ನಾ 2000ರಲ್ಲಿ ದೊಡ್ಡ ನಷ್ಟದಿಂದ ಪಾರಾದರು. ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತಿದ್ದಾಗ ರಿಸ್ಕ್ ತೆಗೆದುಕೊಳ್ಳದ ರಾಜೀವ್ ಖನ್ನಾ ಹಣವನ್ನು ಮತ್ತೆ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಿದರು.
ಯುನಿಟೆಕ್ ಷೇರುಗಳು
2003ರಲ್ಲಿ ರಾಜೀವ್ ಖನ್ನಾ ದೆಹಲಿಯಲ್ಲಿ ಒಂದು ಫ್ಲಾಟ್ ಖರೀದಿಸಲು ಬಯಸಿದ್ದರು, ಇದಕ್ಕಾಗಿ ಅವರು ರಿಯಲ್ ಎಸ್ಟೇಟ್ ಕಂಪನಿ ಯುನಿಟೆಕ್ ಕಚೇರಿಗೆ ಭೇಟಿ ನೀಡಿದರು. ಯುನಿಟೆಕ್‌ನ ಐಷಾರಾಮಿ ಕಚೇರಿಯನ್ನು ನೋಡಿದಾಗ, ಅವರು ಅದರ ಬಗ್ಗೆ ಸ್ವಲ್ಪ ಸಂಶೋಧನೆ ನಡೆಸಿ ಕೆಲವೇ ದಿನಗಳಲ್ಲಿ ಆ ಕಂಪನಿಯ 5 ಲಕ್ಷದ ಮೌಲ್ಯದ ಷೇರುಗಳನ್ನು ಖರೀದಿಸಿದರು. 2004 ರಲ್ಲಿ ಯುನಿಟೆಕ್‌ನ ಒಂದು ಷೇರಿನ ಬೆಲೆ ಕೇವಲ 1.10 ರೂಪಾಯಿಗಳಾಗಿತ್ತು. 4 ವರ್ಷಗಳ ನಂತರ 2008 ರಲ್ಲಿ ಅದರ ಒಂದು ಷೇರಿನ ಬೆಲೆ 546 ರೂಪಾಯಿಗಳಿಗೆ ಏರಿತು. ಹೀಗಾಗಿ ರಾಜೀವ್ ಖನ್ನಾ ಅವರ 5 ಲಕ್ಷ ರೂಪಾಯಿಗಳು ಕೇವಲ 4 ವರ್ಷಗಳಲ್ಲಿ 25 ಕೋಟಿ ರೂಪಾಯಿಗಳಾದವು.
ಇದನ್ನೂ ಓದಿ: ಕೇವಲ ಒಂದು ಟೆಕ್ನಿಕ್ ಬಳಸಿ ಷೇರು ಮಾರುಕಟ್ಟೆಯಿಂದ 2 ಕೋಟಿ ಗಳಿಸಿದ ಹಳ್ಳಿ ಹುಡುಗಿ
2008 ರಲ್ಲಿ ಬಂದ ಜಾಗತಿಕ ಹಣಕಾಸಿನ ಬಿಕ್ಕಟ್ಟಿನಲ್ಲಿ ಪ್ರಪಂಚದಾದ್ಯಂತದ ಷೇರು ಮಾರುಕಟ್ಟೆಗಳು ಕುಸಿದವು. ಆದರೆ ರಾಜೀವ್ ಖನ್ನಾ ಈ ಕುಸಿತಕ್ಕೆ ಮುಂಚೆಯೇ ತಮ್ಮ ಎಲ್ಲಾ ಹಣವನ್ನು ಹಿಂಪಡೆದಿದ್ದರು. ಯಾವ ಷೇರಿನಲ್ಲಿ ಯಾವಾಗ ಪ್ರವೇಶಿಸಬೇಕು ಮತ್ತು ಯಾವಾಗ ನಿರ್ಗಮಿಸಬೇಕು ಎಂಬುದನ್ನು ರಾಜೀವ್ ಖನ್ನಾ ಅವರಿಂದ ಕಲಿಯಬಹುದು. ಈ ತಂತ್ರವನ್ನು ಕಲಿತವರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಉಳಿಯಬಹುದು. ರಾಜೀವ್ ಖನ್ನಾ ಹಣ ಗಳಿಸಿದ ಯುನಿಟೆಕ್ ಷೇರಿನ ಬೆಲೆ ಇಂದು ಕೇವಲ 9 ರೂಪಾಯಿಗಳಿಗೆ ಇಳಿದಿದೆ.
Disclaimer: ಷೇರು/ಮ್ಯೂಚುವಲ್ ಫಂಡ್ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ, ದಯವಿಟ್ಟು ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಏಷ್ಯಾನೆಟ್ ಸುವರ್ಣನ್ಯೂಸ್ ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.
ಇದನ್ನೂ ಓದಿ: 4 ದಿನದಲ್ಲಿ Rs 34984 ಕೋಟಿ ಕಳೆದುಕೊಂಡ ಭಾರತದ ಪ್ರಮುಖ ಸರ್ಕಾರಿ ಬ್ಯಾಂಕ್