
ಇಸ್ಲಾಮಾಬಾದ್ (ನ.19): ಯಾರೇ ಆಗಲಿ ಪ್ರಸಿದ್ಧ ಮಹಿಳೆಯರು ಶೇರ್ ಮಾಡಿಕೊಳ್ಳು ಚಿತ್ರಗಳನ್ನು ಉಪಯೋಗಿಸಿ ನಕಲಿ ದೃಶ್ಯಗಳನ್ನು ತಯಾರಿಸುವುದು ಅನಾಗರಿಕ ನಡೆ ಎಂದು ದೂರದರ್ಶನ ನಿರೂಪಕಿ ಮಥೀರಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆದರೆ, ಇದೀಗ ಅವರ ಖಾಗಿ ವಿಡಿಯೋ ವೈರಲ್ ಆಗಿದ್ದು, ಗರಂ ಆಗಿದ್ದಾರೆ.
ಹೌದು, ಪ್ರಸಿದ್ಧ ಪಾಕಿಸ್ತಾನಿ ದೂರದರ್ಶನ ನಿರೂಪಕಿ ಮತ್ತು ಸಾಮಾಜಿಕ ಜಾಲತಾಣದ ತಾರೆ ಮಥೀರಾ ಮೊಹಮ್ಮದ್ ಅವರ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಿಂದ ಮಥೀರಾ ಅವರು ಗರಂ ಆಗಿದ್ದಾರೆ. ಈ ಹಿಂದೆ ಪಾಕಿಸ್ತಾನದ ಇನ್ನೊಬ್ಬ ಸಾಮಾಜಿಕ ಜಾಲತಾಣದ ತಾರೆ ಇಂಶಾ ರೆಹಮಾನ್ ಮತ್ತು ಇಂಡೋನೇಷ್ಯಾದ ಇ-ಸ್ಪೋರ್ಟ್ಸ್ ತಾರೆ ಲಿಡಿಯಾ ಒನಿಕಿ ಅವರ ಖಾಸಗಿ ವಿಡಿಯೋಗಳು ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ತಮ್ಮ ಹೆಸರು ಮತ್ತು ಫೋಟೋಶೂಟ್‌ಗಳ ಚಿತ್ರಗಳನ್ನು ಜನರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಮಥೀರಾ ಮೊಹಮ್ಮದ್ ಪ್ರತಿಕ್ರಿಯಿಸಿದ್ದಾರೆ. ಚಿತ್ರಗಳನ್ನು ಉಪಯೋಗಿಸಿ ನಕಲಿ ದೃಶ್ಯಗಳನ್ನು ತಯಾರಿಸುವುದು ಅನಾಗರಿಕ ನಡೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಟಿವಿ ನಿರೂಪಕಿಯಲ್ಲದೆ, ಗಾಯಕಿ, ನಟಿ, ನರ್ತಕಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿರುವ ಮಥೀರಾ ಮೊಹಮ್ಮದ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ; ಜನತೆಗೆ ಮತ್ತೊಂದು ಬರೆ ಎಳೆದ ಸರ್ಕಾರ
ಈ ಹಿಂದೆ ಖಾಸಗಿ ವಿಡಿಯೋ ವೈರಲ್ ಆದ ನಂತರ ಪಾಕಿಸ್ತಾನದ ಟಿಕ್ ಟಾಕ್ ತಾರೆ ಇಂಶಾ ರೆಹಮಾನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಅಳಿಸಿ ಹಾಕಿದ್ದರು. ಖಾಸಗಿ ವಿಡಿಯೋಗಳನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕಗೊಳಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಬಳಕೆದಾರರಿಂದ ತೀವ್ರ ಟೀಕೆಗೆ ಒಳಗಾದ ನಂತರ ಅವರು ಖಾತೆಗಳನ್ನು ಅಳಿಸಿದ್ದರು. ಇತ್ತೀಚೆಗೆ ಇನ್ನೊಬ್ಬ ಸಾಮಾಜಿಕ ಜಾಲತಾಣ ತಾರೆ ಮಿನಾಹಿಲ್ ಮಲಿಕ್ ಅವರ ಖಾಸಗಿ ವಿಡಿಯೋ ಕೂಡ ಸೋರಿಕೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ