ಕೀರ್ತಿ ಸತ್ತಾಗ ಲಕ್ಷ್ಮೀ, ಲಕ್ಷ್ಮೀ ಸತ್ತಾಗ ಕೀರ್ತಿ ಎಂಟ್ರಿ... ಡೈರೆಕ್ಟರೇ ಏನ್ ಕಥೆ ಇದು ಅಂತಿದ್ದಾರೆ ವೀಕ್ಷಕರು!

Published : Nov 20, 2024, 07:39 PM ISTUpdated : Nov 21, 2024, 07:16 AM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೀಕ್ಷಕರು ಕಾಯುತ್ತಿದ್ದಂತೆ ಕೀರ್ತಿ ಎಂಟ್ರಿ ಕೊಟ್ಟಾಗಿದೆ, ಆದ್ರೆ ಈಗ ಲಕ್ಷ್ಮಿಯೇ ಇಲ್ಲ. ಮುಗಿಯದ ಗೋಳು ಅಂತ ಕಿಡಿಕಾರುತ್ತಿದ್ದಾರೆ ವೀಕ್ಷಕರು.   

PREV
17
ಕೀರ್ತಿ ಸತ್ತಾಗ ಲಕ್ಷ್ಮೀ, ಲಕ್ಷ್ಮೀ ಸತ್ತಾಗ ಕೀರ್ತಿ ಎಂಟ್ರಿ... ಡೈರೆಕ್ಟರೇ ಏನ್ ಕಥೆ ಇದು ಅಂತಿದ್ದಾರೆ ವೀಕ್ಷಕರು!

ಲಕ್ಷ್ಮೀ ಬಾರಮ್ಮ (Lakshmi BAramma) ಧಾರಾವಾಹಿಯಲ್ಲಿ ಗೋಳು ಮುಗಿಯುವಂತೆ ಕಾಣಿಸ್ತಿಲ್ಲ. ಕಥೆ ಎಲ್ಲಿಂದ ಎಲ್ಲಿಗೆ ಹೋಗ್ತಿದೆ ಎಂದು ಯೋಚಿಸೋದ್ರಲ್ಲಿ ವೀಕ್ಷಕರ ತಲೆ ಕೆಟ್ಟು ಹೋಗುವಂತಾಗಿದೆ. ಅಷ್ಟಕ್ಕೂ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಆಗಿರೋದು ಏನು? 
 

27

ಇಲ್ಲಿವರೆಗೆ ಕೀರ್ತಿ ಸತ್ತೋಗಿದ್ದಾಳೆ ಅಂತಾನೆ ತೋರಿಸಲಾಗಿತ್ತು, ಬೆಟ್ಟದ ಕೆಳಗೆ ಸಿಕ್ಕ ಡೆಡ್ ಬಾಡಿ ಮುಖ ಕಾಣಿಸದೇ ಇದ್ದರೂ ಕೀರ್ತಿ ಸತ್ತೋಗಿದ್ದಾಳೆ, ಅವಳ ಸಾವಿಗೆ ಹೇಗಾದರೂ ನ್ಯಾಯ ಒದಗಿಸಬೇಕು ಎಂದು ಲಕ್ಷ್ಮೀ ಪರದಾಡುತ್ತಿದ್ದಳು. ಕಾವೇರಿ ಮುಖವಾಡ ಕಳಚೋದಕ್ಕೆ ಲಕ್ಷ್ಮೀ ಮಾಡದ ನಾಟಕಗಳಿಲ್ಲ ಆದ್ರೆ ಯಾವುದೂ ವರ್ಕ್ ಔಟ್ ಆಗಿಯೇ ಇಲ್ಲ. 
 

37

ಕೊನೆಗೆ ಲಕ್ಷ್ಮೀಗೆ ತಲೆ ಸರಿ ಇಲ್ಲ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದು ಪಟ್ಟ ಕಟ್ಟಿ ರಿಟ್ರೀಟ್ ಸೆಂಟರ್ ಗೆ ಸೇರಿಸಿ, ಅಲ್ಲಿ ಲಕ್ಷ್ಮೀ ಕಥೆ ಮುಗಿಸುವ ಪ್ಲ್ಯಾನ್ ಕೂಡ ಮಾಡಿದ್ದ ಕಾವೇರಿ, ಅದರಲ್ಲೂ ಯಶಸ್ವಿಯಾಗಿದ್ದಾರೆ. ಲಕ್ಷ್ಮೀಯನ್ನು ಮುಗಿಸಿಯೇ ಬಿಟ್ಟಿದ್ದಾಳೆ ಕಾವೇರಿ. 
 

47

ರಿಟ್ರೀಟ್ ಸೆಂಟರ್ ನಲ್ಲಿ ನಡೆದ ರಾಮಾಯಣ ಕಥೆಯಲ್ಲಿ, ಕೊನೆಗೆ ರಾವಣನ ದಹನ ಆಗುತ್ತೆ, ದಹನದ ಸಮಯದಲ್ಲಿ ಲಕ್ಷ್ಮೀ ರಾವಣದ ಪ್ರತಿಕೃತಿಯ ಒಳಗೆ ಹೋಗುವಂತೆ ಮಾಡಿ, ಅಲ್ಲಿ ಸ್ಪೋಟಕಗಳನ್ನ ಇಟ್ಟು ಪ್ರತಿಕೃತಿ ಜೊತೆ ಲಕ್ಷ್ಮೀ ಸುಟ್ಟು ಭಸ್ಮವಾಗುವಂತೆ ಮಾಡಿದ್ದಾಳೆ. 
 

57

ಲಕ್ಷ್ಮೀ ಸಾವನ್ನಪ್ಪಿದ ಶಾಕ್ ನಿಂದ ಹೊರಬರಲಾಗದೆ ವೈಷ್ಣವ್ ಗೋಳಾಡ್ತಿದ್ದಾನೆ. ಮನೆಯವರೆಲ್ಲಾ ಲಕ್ಷ್ಮೀ ಸಾವಿನ ಶೋಕಾಚರಿಸುತ್ತಿದ್ದಾರೆ. ಈವಾಗ ಕೀರ್ತಿ ಎಂಟ್ರಿ ಕೊಡ್ತಾಳೆ. ಲಕ್ಷ್ಮೀ ಮನೆಯಲ್ಲಿ ಆರತಿ ನಡೆದೇ ನಡೆಯುತ್ತೆ ಎನ್ನುತ್ತಾ ಎಂಟ್ರಿ ಕೊಡುವ ಕೀರ್ತಿಯನ್ನು ನೋಡಿ, ಕಾವೇರಿ ಸೇರಿ, ಎಲ್ಲರೂ ಶಾಕ್ ಆಗ್ತಾರೆ. 
 

67

ಇದೀಗ ವೀಕ್ಷಕರ ತಲೆಗೆ ಹುಳ ಬಿಟ್ಟಂತಾಗಿದೆ, ಏನಿದು ಕಥೆ ಒಂದು ಸಲ ಕೀರ್ತಿ ಸಾಯ್ತಾಳೆ, ಮತ್ತೊಂದು ಸಲ ಲಕ್ಷ್ಮೀ, ಕೀರ್ತಿ ಸತ್ತಾಗ ಲಕ್ಷ್ಮೀ ಬರ್ತಾರೆ, ಲಕ್ಷ್ಮೀ ಸತ್ತಾಗ ಕೀರ್ತಿ ಬರ್ತಾಳೆ, ಏನಂತ ಕಥೆ ಮಾಡ್ತಿರಾ? ನೀವು ಏನೇ ಕಥೆ ಮಾಡಿದ್ರೂ ಕಾವೇರಿಯ ಮುಖವಾಡ ಮಾತ್ರ ಕಳಚಿ ಬೀಳೋದಿಲ್ಲ. ಕೊನೆಗೆ ಜಯಗಳಿಸೋದು ಮಾತ್ರ ಕಾವೇರಿನೆ ಅಂತ ಹೇಳ್ತಿದ್ದಾರೆ ವೀಕ್ಷಕರು. 
 

77

ಅಷ್ಟೇ ಅಲ್ಲ ಯಪ್ಪಾ ಈ ಕತೆ ಬರ್ದಿರೋ ಡೈರೆಕ್ಟರ್ ಗೆ ಒಂದ್ ದೊಡ್ಡ ನಮಸ್ಕಾರ. ಏನು ಅಂತ ಬರಿತ ಇದ್ದಾರೆ ಅಂತ ಗೊತ್ತಾಗ್ತಿಲ್ಲ ಅಂತಾನೂ ಹೇಳಿದ್ದಾರೆ ಜನ. ಲಕ್ಷ್ಮಿಗೆ ಏನಾದ್ರೂ ಪ್ಲಾಸ್ಟಿಕ್ ಸರ್ಜರಿ ಮಾಡಿ ಕೀರ್ತಿ ಫೇಸ್ ಕೊಟ್ರ ಅಂತಾನೂ ಕೇಳ್ತಿದ್ದಾರೆ. ಕೆಲವರು. ಅಥವಾ ಲಕ್ಷ್ಮೀಯನ್ನು ಕೀರ್ತಿ ಕಾಪಾಡಿ, ಇಬ್ಬರೂ ಸೇರಿ ಪ್ಲ್ಯಾನ್ ಮಾಡ್ತಿದ್ದಾರ ಅಂತಾನೂ ಕೇಳಿದ್ದಾರೆ.  ಇನ್ನು ಎಷ್ಟು ವರ್ಷ ಎಳ್ಕೊಂಡು ಹೋಗ್ತಾರೋ ಈ ಕತೇನ ಅಂತ ಕೂಡ ಕೇಳಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories