ಕಾಲೇಜ್​ ಫಂಕ್ಷನ್​ನಲ್ಲಿ ಟಾಪ್​ ತೆಗೆಯುತ್ತಾ ಡಾನ್ಸ್​ ಮಾಡಿದ ವಿದ್ಯಾರ್ಥಿನಿ! ವಿಡಿಯೋ ನೋಡಿ ನೆಟ್ಟಿಗರು ಗರಂ

By Suchethana D  |  First Published Nov 19, 2024, 5:35 PM IST

ಕಾಲೇಜ್​ ಫಂಕ್ಷನ್​ನಲ್ಲಿ ಟಾಪ್​ ತೆಗೆಯುತ್ತಾ ಡಾನ್ಸ್​ ಮಾಡಿದ ವಿದ್ಯಾರ್ಥಿನಿ! ಅಶ್ಲೀಲತೆಯ ಪರಮಾವಧಿ ಎನ್ನುತ್ತಲೇ ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. 
 


ಫ್ಯಾಷನ್​ ಹೆಸರಿನಲ್ಲಿ ಈಗಿನ ಯುವತಿಯರ ಬಟ್ಟೆ ಬರೆಗಳು ಅವರಿಗೇ ಪ್ರೀತಿ. ಸಿನಿಮಾ ನಟ- ನಟಿಯರಿಂದ ಇಂದಿನ ಯುವ ಪೀಳಿಗೆ ಪ್ರೇರೇಪಿತರಾಗುವುದು ಹೆಚ್ಚಾಗುತ್ತಲೇ ಇದೆ. ಅವರದ್ದೇ ರೀತಿಯ ವೇಷ-ಭೂಷಣ, ಡಾನ್ಸ್​, ಲೈಫ್​ಸ್ಟೈಲ್​ ಎಲ್ಲವನ್ನೂ ಅನುಕರಿಸುವ ದೊಡ್ಡ ವರ್ಗವೇ ಇದೆ. ಇತ್ತೀಚಿನ ಹೆಚ್ಚಿನ ಚಿತ್ರ ತಾರೆಯರು ಹಣ ಹಾಗೂ ಚಿತ್ರರಂಗದಲ್ಲಿ ನೆಲೆಯೂರಬೇಕು ಎಂದು ಯಾವ ಹಂತಕ್ಕಾದರೂ ಹೋಗಲು ಸೈ ಎನಿಸಿಕೊಂಡಿದ್ದಾರೆ. ಅರೆ ಬೆತ್ತಲೆ ಮಾತ್ರವಲ್ಲದೇ ಪೂರ್ತಿ ಬೆತ್ತಲಾಗಲೂ ಹೇಸದೇ ಇರುವುದನ್ನು ಇತ್ತೀಚಿನ ಸಿನಿಮಾಗಳಲ್ಲಿ ನೋಡಬಹುದು. ಆದರೆ ಅವರನ್ನೇ ಇಂದಿನ ಯುವತಿಯರು ಅನುಸರಿಸುತ್ತಿರುವುದು ಮಾತ್ರ ಅತಿ ದೊಡ್ಡ ದುರಂತ ಎನ್ನಲಾಗುತ್ತಿದೆ. ಇದೀಗ ಕಾಲೇಜಿನ ಫಂಕ್ಷನ್​ ಒಂದರಲ್ಲಿ ಯುವತಿಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಉತ್ತರ ಪ್ರದೇಶ ನೊಯ್ಡಾದ ಅಮಿಟಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು  ಫ್ರೆಶರ್ಸ್ ಪಾರ್ಟಿಯಲ್ಲಿ ನೃತ್ಯ ಮಾಡುವಾಗ ತನ್ನ ಟಾಪ್​  ಅನ್ನು ವೇದಿಕೆಯ ಮೇಲೆಯೇ ತೆಗೆದು ನರ್ತಿಸಿದ್ದಾಳೆ. ಆಗ ಅಲ್ಲಿದ್ದ ಯುವಕರು ಹುಚ್ಚೆದ್ದು ಕುಣಿದಿದ್ದಾರೆ. ಇದರ ವಿಡಿಯೋ  ಅನ್ನು ಶಿವಂಗಿ ಕಶ್ಯಪ್ ಎಂಬ ಮಹಿಳೆ X ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಕತ್​ ವೈರಲ್​ ಆಗಿದೆ.  30-ಸೆಕೆಂಡ್ ಈ ಕ್ಲಿಪ್‌ನಲ್ಲಿ ವಿದ್ಯಾರ್ಥಿನಿಯ ವೇಷವನ್ನು ನೋಡಿ ಟೀಕೆಗಳ ಸುರಿಮಳೆಯಾಗುತ್ತಿದೆ. ಇಂದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳ ನಡವಳಿಕೆಗೆ ಆತಂಕ ಮತ್ತು ಆಕ್ಷೇಪ ವ್ಯಕ್ತವಾಗುತ್ತಿದೆ.

Tap to resize

Latest Videos

undefined

ಫಸ್ಟ್​ ನೈಟ್​ ವಿಡಿಯೋ ಶೇರ್​ ಮಾಡಿದ ದಂಪತಿ! ಈ ಕಣ್ಣಿಂದ ಇನ್ನು ಏನೇನು ನೋಡ್ಬೋಕೋ ಅಂತಿರೋ ನೆಟ್ಟಿಗರು...

ಈ ವಿಡಿಯೋದಲ್ಲಿ ವಿದ್ಯಾರ್ಥಿನಿ,  2004 ರಲ್ಲಿ ಅಕ್ಷಯ್ ಕುಮಾರ್ ಮತ್ತು ಐಶ್ವರ್ಯಾ ರೈ ನಟಿಸಿದ ಖಾಕಿ ಚಿತ್ರದ ಜನಪ್ರಿಯ ಬಾಲಿವುಡ್ ಟ್ರ್ಯಾಕ್ ದಿಲ್ ದೂಬಾದ ಬೀಟ್‌ಗಳಿಗೆ ಡಾನ್ಸ್​ ಮಾಡಿದ್ದಾಳೆ. ಆರಂಭದಲ್ಲಿ ಈಕೆ,  ವೇದಿಕೆಯ ಮೇಲೆ  ಕೆಂಪು, ದೊಡ್ಡ ಗಾತ್ರದ ಟೀ-ಶರ್ಟ್ ಧರಿಸಿದ್ದಳು. ಹಾಡು ಪ್ಲೇ ಆಗುತ್ತಿದ್ದಂತೆಯೇ  ತನ್ನ ಟಿ-ಶರ್ಟ್  ತೆಗೆದಳು, ಕೆಳಗೆ ಧರಿಸಿರುವ ಮತ್ತೊಂದು ಹಸಿರು, ಹೊಳೆಯುವ ಕ್ರಾಪ್ ಟಾಪ್ ಅನ್ನು ತೋರಿಸಿ ಅದರಲ್ಲಿಯೇ ಡಾನ್ಸ್​ ಮಾಡಿದ್ದಾಳೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಆಕೆ ಧರಿಸಿರುವ ಬಟ್ಟೆಯಲ್ಲಿ ಅಶ್ಲೀಲತೆ ಏನೂ ಇಲ್ಲ ಎಂದು ಕೆಲವರು ಹೇಳುತ್ತಿದ್ದರೂ, ಕಾಲೇಜಿನ ಫಂಕ್ಷನ್​ನಲ್ಲಿ ಅದು ಕೂಡ ಫ್ರೆಷರ್ಸ್​ ಡೇನಲ್ಲಿ ಇದು ಅಶ್ಲೀಲತೆ ಎಂದೇ ಪರಿಗಣಿಸಲಾಗುತ್ತದೆ ಎಂದು ಬಹುತೇಕ ಮಂದಿ ಕಮೆಂಟ್​  ಮೂಲಕ ತಿಳಿಸುತ್ತಿದ್ದಾರೆ.
 

ಅಂದಹಾಗೆ "Mr. ಮತ್ತು Mrs ಫ್ರೆಶರ್ 2024" ಕಾರ್ಯಕ್ರಮವು ನವೆಂಬರ್ 8 ರಂದು ಅಮಿಟಿ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ.  ಈ ರೀತಿ ಡಾನ್ಸ್​ ಮಾಡಿದ ವಿದ್ಯಾರ್ಥಿನಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಕಾಲೇಜುಗಳಲ್ಲಿ ಇಂಥದ್ದಕ್ಕೆ ಅವಕಾಶ ಮಾಡಿಕೊಡುತ್ತಿರುವುದಕ್ಕಾಗಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. 

Amity University ❎ nudyty industry ✅😡

Beti gayi hai Engineering degree lene
Yahi wo ladkya h jinke lye ham candle 🕯 march krte h😢
Behan jab tshirt ka koi kaam nhi tha to aai kyu pehan ke ? pic.twitter.com/secTHsUF0z

— Shivangi Kashyap (@ShiviKashyapbjp)
click me!