ನಯನತಾರಾ ನಟಿಸಿದ ಸೂಪರ್ ಹಿಟ್ ಚಿತ್ರ 'ನಾನುಂ ರೌಡಿಧಾನ್'. ಪತಿ ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರಕ್ಕೆ ಧನುಷ್ ನಿರ್ಮಾಕರಾಗಿದ್ದರು. ಕಿವುಡ-ಮೂಕ ಪಾತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ ಜೋಡಿಯಾಗಿದ್ದರು. ಆರ್.ಜೆ.ಬಾಲಾಜಿ, ರಾಧಿಕಾ, ಮನ್ಸೂರ್ ಅಲಿಖಾನ್, ಪಾರ್ಥಿಬನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು.
2015ರಲ್ಲಿ ಬಿಡುಗಡೆಯಾದ ಈ ಹಾಸ್ಯಮಯ ಪ್ರೇಮಕಥೆಯ ಚಿತ್ರದಲ್ಲಿ ನಟಿಸುವಾಗ ನಯನತಾರಾ ಮತ್ತು ವಿಘ್ನೇಶ್ ಶಿವನ್ ಲವ್ ಮಾಡಲು ಶುರು ಮಾಡಿದರು. ಲಿವಿಂಗ್ ಟುಗೆದರ್‌ನಲ್ಲಿದ್ದ ಇವರು, ಮೂರು ತಿಂಗಳಿಗೊಮ್ಮೆ ವಿದೇಶಕ್ಕೆ ಹೋಗುತ್ತಿದ್ದರು. ಈ ಜೋಡಿ 2022ರಲ್ಲಿ ಮಹಾಬಲಿಪುರಂನಲ್ಲಿ ಮದುವೆಯಾದರು.
ಈ ಜೋಡಿಯ ಅದ್ದೂರಿ ಮದುವೆಯ ಪ್ರಸಾರದ ಹಕ್ಕನ್ನು ಒಟಿಟಿ ನೆಟ್‌ಫ್ಲಿಕ್ಸ್‌ಗೆ ಮಾರಿದ್ದರು. ಮದುವೆಗೆ 10 ಕೋಟಿಗಿಂತ ಕಡಿಮೆ ಖರ್ಚಾಗಿದ್ದರೂ, ನೆಟ್‌ಫ್ಲಿಕ್ಸ್‌ಗೆ 25 ಕೋಟಿಗೆ ಪ್ರಸಾರದ ಹಕ್ಕು ಮಾರಿದ್ದರು ಎನ್ನಲಾಗಿದೆ. ಎರಡು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾದರೂ, ನಯನತಾರಾ ಹುಟ್ಟುಹಬ್ಬದಂದು ವಿಡಿಯೋ ಬಿಡುಗಡೆ ಮಾಡಲಾಯಿತು.
ಬಿಯಾಂಡ್ ದಿ ಫೇರಿ ಟೇಲ್' ಡಾಕ್ಯುಮೆಂಟರಿ ಟ್ರೈಲರ್‌ನಲ್ಲಿ ವಿಘ್ನೇಶ್ ಶಿವನ್ ನಯನತಾರಾರನ್ನು ಚಿತ್ರೀಕರಿಸಿದ ಮೊದಲ ದೃಶ್ಯವಿತ್ತು. ಇದಕ್ಕೆ ಧನುಷ್ ಅನುಮತಿ ಕೇಳಿದ್ದರೂ ನಿರಾಕರಿಸಿದ್ದರು ಎನ್ನಲಾಗಿದೆ. ಆದರೆ ಅನುಮತಿ ಇಲ್ಲದೆಯೇ ಟ್ರೈಲರ್‌ನಲ್ಲಿ ಬಳಸಿದ್ದಕ್ಕೆ 10 ಕೋಟಿ ಕೇಳಿ ನೋಟಿಸ್ ಕಳುಹಿಸಿದ್ದರು.
ಇದೀಗ ನಯನತಾರಾ ಮೂರು ಪುಟಗಳ ಹೇಳಿಕೆ ಬಿಡುಗಡೆ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ನಯನತಾರಾ ಪರ ನಿಂತರೆ, ಇನ್ನು ಕೆಲವರು 'ನೀವು ಉಚಿತವಾಗಿ ಮದುವೆ ವಿಡಿಯೋ ಕೊಟ್ಟಿಲ್ಲ, ಹಣಕ್ಕೆ ಮಾರಿದ್ದೀರಿ. ಧನುಷ್ ಹಣ ಕೇಳೋದ್ರಲ್ಲಿ ತಪ್ಪಿಲ್ಲ' ಅಂತ ನಯನತಾರಾ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ನಯನ್-ಧನುಷ್ ವಿವಾದ ಇನ್ನೂ ಮುಗಿದಿಲ್ಲ. ಈ ಹಿಂದೆ ಧನುಷ್‌ರನ್ನು ಟೀಕಿಸಿದ್ದ ನಯನತಾರಾ, ಮತ್ತೆ ಚುಚ್ಚು ಮಾತಿನ ಹೇಳಿಕೆ ನೀಡಿದ್ದಾರೆ.
ಬಿಯಾಂಡ್ ದಿ ಫೇರಿ ಟೇಲ್' ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ನನ್ನ ಸಿನಿ ಜರ್ನಿಯ ಸುಂದರ ಕ್ಷಣಗಳನ್ನು ಒಳಗೊಂಡ ಈ ಡಾಕ್ಯುಮೆಂಟರಿಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ ಚಿತ್ರಗಳ ನೆನಪುಗಳೂ ಇರಬೇಕೆಂದು ನಾನು ನಿಮ್ಮನ್ನು ಸಂಪರ್ಕಿಸಿದಾಗ, ಯಾವುದೇ ಹಿಂಜರಿಕೆ ಇಲ್ಲದೆ ಅನುಮತಿ ನೀಡಿದ ನಿಮ್ಮ ಪ್ರೀತಿಗೆ ಚಿರಋಣಿ' ಎಂದು ನಯನತಾರಾ ಹೇಳಿದ್ದಾರೆ.
ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳ ನಿರ್ಮಾಪಕರಿಗೆ ಧನ್ಯವಾದ ಹೇಳಿದ್ದಾರೆ. ಆದರೆ ಧನುಷ್ ಹೆಸರಿಲ್ಲ. ಹಾಗಾಗಿ ನಯನತಾರಾ ಮತ್ತೆ ಧನುಷ್‌ಗೆ ಚುಚ್ಚು ಮಾತಾಡಿದ್ದಾರಾ ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ.