ಮದುವೆ ಫಿಕ್ಸ್​ ಆಗ್ತಿದ್ದಂಗೆ ವಧು ಸೇರಿ ಅಮ್ಮ- ಅಜ್ಜಿ ಒಂದು ತಿಂಗಳು ಅಳ್ಬೇಕು, ಅದೂ ಬೇರೆ ಬೇರೆ ರಾಗದಲ್ಲಿ!

By Suchethana D  |  First Published Nov 19, 2024, 4:08 PM IST

ಮದುವೆ ಫಿಕ್ಸ್​ ಆಗ್ತಿದ್ದಂಗೆ ವಧು ಸೇರಿ ಅಮ್ಮ- ಅಜ್ಜಿ ಒಂದು ತಿಂಗಳು ಅಳುವ ವಿಶೇಷ, ವಿಶಿಷ್ಟ, ವಿಚಿತ್ರ ಸಂಪ್ರದಾಯವೊಂದಿದೆ. ಇದರ ಹಿಂದಿರುವ ಉದ್ದೇಶವೂ ಕುತೂಹಲವಾಗಿದೆ! 
 


ಮದುವೆ ಮನೆ ಎಂದರೆ ಅಲ್ಲಿ ಖುಷಿ, ಸಂತೋಷ, ನಲಿವುಗಳ ಸಮ್ಮಿಳನ. ಮದುವೆಗೆ ಒಂದೆರಡು ತಿಂಗಳು ಇರುವಾಗಲೇ ಹಬ್ಬದ ವಾತಾವರಣ ಇರುವುದು ಸಹಜ. ನೆಂಟರಿಷ್ಟರು, ದೂರ ದೂರದ ಪರಿಚಯಸ್ಥರು ಎಲ್ಲರೂ ಮನೆಗೆ ಬಂದು ಒಂದೆಡೆ ಸೇರುವ ಸಂಭ್ರಮವೇ ಬೇರೆ. ಮದುವೆಯ ಸಮಯದಲ್ಲಿ ನೂರೆಂಟು ಸಂಪ್ರದಾಯಗಳಿದ್ದರೂ ಎಲ್ಲವೂ ಸಡಗರ, ಸಂಭ್ರಮದ್ದೇ ಆಗಿರುತ್ತದೆ. ಆದರೆ ಇಲ್ಲೊಂದು ಸಂಪ್ರದಾಯದ ಪ್ರಕಾರ, ಮದುವೆ ಫಿಕ್ಸ್​ ಆಗುತ್ತಿದ್ದಂತೆಯೇ ಮದುಮಗಳು ಸೇರಿ ಆಕೆಯ ಅಮ್ಮ- ಅಜ್ಜಿ ಇದ್ದರೆ ಅವರು ಎಲ್ಲರೂ ಅಳಬೇಕು. ಅದೂ ವಿಭಿನ್ನ ರಾಗದಲ್ಲಿ ಅಳಬೇಕು. ಮೂವತ್ತು ದಿನಗಳ ಮೊದಲೇ ಅಳುವಿನ ಕಾರ್ಯಕ್ರಮ ಶುರುವಾಗುತ್ತದೆ. ಪ್ರತಿದಿನ ಒಂದೊಂದು ಗಂಟೆಯಂತೆ ಎಲ್ಲರೂ ಅಳಬೇಕು!

ಇಂಥದ್ದೊಂದು ವಿಚಿತ್ರ, ಕುತೂಹಲದ ಸಂಪ್ರದಾಯ ಇರುವುದು ಚೀನಾದ ತುಜಿಯಾ ಸಮುದಾಯದವರಲ್ಲಿ.  ಮದುವೆಗೆ ಒಂದು ತಿಂಗಳು ಇದೆ ಎನ್ನುವಾಗ, ಮೊದಲಿಗೆ ವಧುವಿನಿಂದ ಅಳುವ ಕಾರ್ಯಕ್ರಮ  ಶುರು.  ಪ್ರತಿದಿನ ಒಂದು ಗಂಟೆ ಆಕೆ ಅಳಬೇಕು. 10 ದಿನ ಸತತ ಅತ್ತ ಬಳಿಕ, ಆಕೆಯ ತಾಯಿ ಅಳುವನ್ನು ಶುರು ಮಾಡಬೇಕು. ಆಕೆ ಮತ್ತೆ ಹತ್ತು ದಿನ ಅಳಬೇಕು. ಒಟ್ಟು 20 ದಿನ ಆದ ಮೇಲೆ  ಅಜ್ಜಿಯ ರೋಧನೆ ಶುರುವಾಗುತ್ತದೆ. ಹೀಗೆ ವಧು ಒಟ್ಟು 30 ದಿನ, ತಾಯಿ 20 ದಿನ ಮತ್ತು ಅಜ್ಜಿ ಕೊನೆಯ 10 ದಿನ ಅಳುವ ಕಾರ್ಯಕ್ರಮ ಇದಾಗಿದೆ. ಈ ಸಂಪ್ರದಾಯವು ಸಂತೋಷದ ಅಭಿವ್ಯಕ್ತಿ ಎಂದು ನಂಬಲಾಗಿದೆ, ಮಹಿಳೆಯರು ಪ್ರತಿದಿನವೂ ವಿಭಿನ್ನ ಸ್ವರಗಳಲ್ಲಿ ಅಳಬೇಕು. ಇದಕ್ಕೆ  "ಕ್ರೈಯಿಂಗ್ ವೆಡ್ಡಿಂಗ್ ಕಸ್ಟಮ್" (Crying Wedding Custom)ಎಂಬ ಹೆಸರು ಇದೆ.

Tap to resize

Latest Videos

undefined

ಸತ್ಯ ತಿಳಿಯದೇ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದ್ವೆ ಮಾಡಿದ ತಾಯಿ: ಕೊನೆಗೆ ನಡೆದದ್ದೇ ರೋಚಕ...

ಇದನ್ನು ಕೇಳಿದರೆ ಎಲ್ಲರೂ ನಗುವುದು ಸಹಜವೇ. ಆದರೆ ಇದರ ಹಿಂದೆ ಕುತೂಹಲದ ಕಾರಣವೂ ಇದೆ.  ಈ  ತುಜಿಯಾ ಸಮಾಜದ ಸಂಸ್ಕೃತಿಯ ವಿಶೇಷ ಭಾಗ ಎಂದು ಎನಿಸಿಕೊಳ್ಳುವ ಈ ಮದುವೆಯ ಮುಂಚೆ ಅಳುವುದು ಯಾಕೆ ಎಂದು ನೋಡುವುದಾದರೆ, ಸಾಮಾನ್ಯವಾಗಿ ಮದುವೆ ದಿನ, ಮಗಳನ್ನು ಗಂಡಿಗೆ ಧಾರೆ ಎರೆದು ಕೊಡುವಾಗ, ಬಹುತೇಕ ಹೆಣ್ಣುಮಕ್ಕಳು ಹಾಗೂ ಆಕೆಯ ತಾಯಿಯ ಕಣ್ಣು ತೇವವಾಗುವುದು ಸಹಜ. ಹುಟ್ಟಿನಿಂದಲೇ ತಮ್ಮ ಜೊತೆ ಇದ್ದ ಮುದ್ದಿನ ಮಗಳು ಇನ್ನು ಮುಂದೆ ತಮ್ಮ ಮನೆಯಲ್ಲಿ ಇರುವುದು, ಆಕೆ ಗಂಡಿನ ಮನೆಯವಳಾಗುತ್ತಾಳೆ ಎನ್ನುವ ನೋವು ಎಂಥ ಹೆತ್ತ ಕರುಳನ್ನೂ ಚುರುಕ್​ ಎನ್ನಿಸದೇ ಇರದು. ಇನ್ನು ಹೆಣ್ಣು ಮಕ್ಕಳಿಗೆ ಗಂಡನ ಮನೆ ಸೇರುವ ಖುಷಿ ಒಂದೆಡೆಯಾದರೂ, ಹೆತ್ತ ತವರನ್ನು ಬಿಟ್ಟು ಹೋಗುವಾಗ ಆಕೆ ಮನಸ್ಸಿನಲ್ಲಿ ಪಡುವ ವೇದನೆ, ನೋವು ಆಕೆಗೆ ಮಾತ್ರ ತಿಳಿದಿರುತ್ತದೆ. ಇನ್ನು ಅಪ್ಪನಾದವ ಕೂಡ ದುಃಖ ಉಮ್ಮಳಿಸಿ ಬರುತ್ತಿದ್ದರೂ ಅದನ್ನು ಆತ ತೋರಿಸಿಕೊಳ್ಳದ ಸ್ಥಿತಿಯೂ ನಿರ್ಮಾಣ ಆಗುತ್ತದೆ. ಇದು ಸಹಜವಾಗಿ ಬಹುತೇಕ ಮದುವೆಗಳಲ್ಲಿ ಕಂಡುಬರುತ್ತದೆ.

ದೇಶ, ಭಾಷೆ, ಸಂಪ್ರದಾಯ ಏನೇ ಇದ್ದರೂ ತಾಯಿ ಮತ್ತು ಮಗಳ ಬಾಂಧವ್ಯ ಅದೇ ಅಲ್ಲವೆ? ಆದರೆ ಮದುವೆಯ ದಿನ ಈ ರೀತಿಯ ಕಣ್ಣೀರು ಹಾಕಬಾರದು ಎನ್ನುವ ಕಾರಣದಿಂದಲೇ ಮದುವೆಗೂ ಒಂದು ತಿಂಗಳ ಮುಂಚೆಯೇ ಅಳುವ ಕಾರ್ಯಕ್ರಮ ನಡೆಯುತ್ತಿದೆ. ತಮ್ಮೆಲ್ಲಾ ನೋವುಗಳನ್ನು ಈ ಒಂದು ತಿಂಗಳು ಕಣ್ಣೀರಿನ ಮೂಲಕ ಹರಿಸಿ ಮದುವೆಯ ದಿನ ಖುಷಿಯಾಗಿ ಇರಬೇಕು ಎನ್ನುವುದು ಇದರ ಹಿಂದಿರುವ ಉದ್ದೇಶ. ಮನೆಯ ಮಗಳು  ಮದುವೆ ಆಗಿ ತವರು ಮನೆ ತೊರೆಯುವಾಗ ಕಣ್ಣೀರಿನ ಧಾರೆ ಹರಿಸಬಾರದು. ಆಕೆ ಮೊದಲೇ ತನ್ನ ನೋವನ್ನೆಲ್ಲಾ ಹೊರಕ್ಕೆ ಹಾಕಿ ಮನಸೋ ಇಚ್ಛೆ ಅತ್ತು ಮದುವೆಯ ದಿನ ಖುಷಿ ಖುಷಿಯಾಗಿ ಇರಬೇಕು ಎನ್ನುವ ಒಂದು ಒಳ್ಳೆಯ ಉದ್ದೇಶವನ್ನು ಇದು ಹೊಂದಿದೆ. ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ತಯಾರಾಗಲು ಒಂದು ಮಾರ್ಗವೆಂದು ಪರಿಗಣಿಸಲಾಗಿದೆ.

ಎಂಟು ಮದುವೆಯಾದ ಕಿರುತೆರೆ ಅಣ್ಣಯ್ಯ ನಟಿ ನಿಶಾ ರವಿಕೃಷ್ಣನ್​! ಈಕೆಯ ಸ್ಟೋರಿ ಕೇಳಿ...

ಅಂದಹಾಗೆ, ತುಜಿಯಾ ಸಮುದಾಯ ಇರುವುದು ಚೀನಾದ ನೈಋತ್ಯ ಪ್ರದೇಶಗಳಲ್ಲಿ, ಹುಬೈ , ಹುನಾನ್ ಮತ್ತು ಗೈಝೌ ಪ್ರಾಂತ್ಯಗಳಲ್ಲಿ ಈ ಸಮುದಾಯದವರನ್ನು ನೋಡಬಹುದು. ಬುಡಕಟ್ಟು ಮತ್ತು ಆದಿವಾಸಿಗಳಲ್ಲಿರುವ ಸಂಪ್ರದಾಯಗಳೇ ವಿಶೇಷವಾದದ್ದು. ಅದರಲ್ಲಿಯೂ ಮದುವೆ ಸಂಪ್ರದಾಯಗಳು ಕುತೂಹಲಭರಿತವಾಗಿರುತ್ತವೆ. ಅದೇ ರೀತಿ ತುಜಿಯಾ ಸಮುದಾಯದಲ್ಲಿ ಅಳುವ ಸಂಪ್ರದಾಯವಿದೆ. ಈ ಸಮುದಾಯವು ವಿಶಿಷ್ಟವಾದ ಮದುವೆಯ ಶೈಲಿಗಳನ್ನು ಒಳಗೊಂಡಂತೆ ಅದರ ವಿಭಿನ್ನ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಪದ್ಧತಿಗಳಿಗೆ ಹೆಸರುವಾಸಿಯಾಗಿದೆ. ತುಜಿಯಾ ಜನರು ತಮ್ಮ ಸಾಂಸ್ಕೃತಿಕ ಗುರುತಿನ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ ಮತ್ತು ಪ್ರತಿ ಕಾರ್ಯದಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸುತ್ತಾರೆ.  

click me!