ಕುಂಭಮೇಳ ಎಂದಾಗ ಮೊದಲು ನೆನಪಾಗೋದು ನಾಗಾ ಸಾಧುಗಳು. ಬೆತ್ತಲಾಗಿ ತಿರುಗಾಡುವ ಅವರು ಕಠಿಣ ನಿಯಮ ಪಾಲನೆ ಮಾಡ್ತಾರೆ. ಮಹಿಳಾ ನಾಗಾ ಸಾಧುಗಳು ತಮ್ಮ ಮುಟ್ಟಿನ ಸಮಯದಲ್ಲಿ ಏನು ಮಾಡ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸನಾತನ ಧರ್ಮ (Sanatana Dharma ) ದಲ್ಲಿ ನಾಗಾ ಸಾಧು (Naga Sadhu) ಗಳ ಸಂಪ್ರದಾಯ ಬಹಳ ಪ್ರಾಚೀನವಾದದ್ದು. ನಾಗಾ ಸಾಧುಗಳ ಪದ್ಧತಿ, ಸಂಪ್ರದಾಯ ಸಂಪೂರ್ಣ ಭಿನ್ನವಾಗಿದೆ. ಅವರ ಬಗ್ಗೆ ತಿಳಿದುಕೊಳ್ಳುವ ಅಂಶಗಳು ಸಾಕಷ್ಟಿದೆ. ನಾಗಾ ಸಾಧುಗಳು ಬೆತ್ತಲಾಗಿರ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಬೆತ್ತಲೆಯಾಗಿರುವ ನಾಗಾ ಸಾಧುಗಳು, ಭೌತಿಕ ಪ್ರಪಂಚವನ್ನು ಮತ್ತು ಅದರ ಎಲ್ಲಾ ಆಸೆಗಳನ್ನು ಮತ್ತು ಬಾಂಧವ್ಯಗಳನ್ನು ತ್ಯಜಿಸಿದ್ದೇವೆ ಎಂಬ ಸಂದೇಶವನ್ನು ರವಾನಿಸುತ್ತಾರೆ. ಇದು ಅವರ ತ್ಯಾಗದ ದೊಡ್ಡ ಸಂಕೇತವಾಗಿದೆ. ಇದು ಅವರನ್ನು ಲೌಕಿಕ ಬಂಧನಗಳಿಂದ ಮುಕ್ತಗೊಳಿಸುತ್ತದೆ. ಮಾನವ ಅಸ್ತಿತ್ವವು ಸಂಪೂರ್ಣವಾಗಿ ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿದೆ ಮತ್ತು ಬಟ್ಟೆಗಳಂತಹ ಲೌಕಿಕ ಅಂಶಗಳ ಅಗತ್ಯವಿಲ್ಲ ಎಂದು ಇದು ತೋರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಮಹಿಳಾ ನಾಗಾ ಸಾಧು (Female Naga Sadhu)ಗಳ ವಿಡಿಯೋಗಳು ವೈರಲ್ ಆಗ್ತಿವೆ. ಮೈಗೆಲ್ಲ ಕೆಸರು ಹಚ್ಚಿಕೊಂಡು ತಿರುಗಾಡುತ್ತಿದ್ದ ಮಹಿಳಾ ನಾಗಾ ಸಾಧುವಿನ ವಿಡಿಯೋ ಒಂದು ಇತ್ತೀಚಿಗೆ ಸುದ್ದಿ ಮಾಡಿತ್ತು. ಮಹಿಳಾ ನಾಗಾ ಸಾಧುಗಳು ವಿವಸ್ತ್ರವಾಗಿ ಇರ್ತಾರಾ? ಹಾಗಿದ್ರೆ ಪಿರಿಯಡ್ಸ್ ಸಮಯದಲ್ಲಿ ಅವರು ಏನು ಮಾಡ್ತಾರೆ ಎಂಬೆಲ್ಲ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ. ನಾವಿಂದು ಈ ಎಲ್ಲ ಪ್ರಶ್ನೆಗೆ ಉತ್ತರ ನೀಡ್ತೇವೆ.
undefined
ಕಾಲೇಜ್ ಫಂಕ್ಷನ್ನಲ್ಲಿ ಟಾಪ್ ತೆಗೆಯುತ್ತಾ ಡಾನ್ಸ್ ಮಾಡಿದ ವಿದ್ಯಾರ್ಥಿನಿ! ವಿಡಿಯೋ ನೋಡಿ ನೆಟ್ಟಿಗರು ಗರಂ
ಪಿರಿಯಡ್ಸ್ ಸಮಯದಲ್ಲಿ ನಾಗಾ ಸಾಧುಗಳು ಏನು ಮಾಡ್ತಾರೆ? : ಸ್ತ್ರೀ ನಾಗಾ ಸಾಧುವಾಗೋದು ಸುಲಭವಲ್ಲ. ಅನೇಕ ಕಠಿಣ ಸವಾಲುಗಳನ್ನು ಅವರು ಎದುರಿಸಬೇಕು. ಆದ್ರೆ ಮಹಿಳಾ ನಾಗಾ ಸಾಧುಗಳು ಜನರ ಮುಂದೆ ಬರುವುದು ಅಪರೂಪ. ಈಗ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಆಯೋಜಿಸಲಾಗಿರುವುದರಿಂದ ಮಹಿಳಾ ನಾಗಾ ಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸ್ತ್ರೀ ನಾಗಾ ಸಾಧುಗಳು, ಪುರುಷ ನಾಗಾ ಸಾಧುಗಳಿಗಿಂತ ಭಿನ್ನವಾಗಿರ್ತಾರೆ. ಅವರು ಬೆತ್ತಲಾಗಿರೋದಿಲ್ಲ. ಅವರೆಲ್ಲರೂ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದ್ರೆ ಆ ಬಟ್ಟೆಯನ್ನು ಹೊಲಿಯಲಾಗುವುದಿಲ್ಲ. ಆದ್ದರಿಂದ ಅವರಿಗೆ ಪಿರಿಯಡ್ಸ್ ಸಮಯದಲ್ಲಿ ಸಮಸ್ಯೆ ಕಾಡುವುದಿಲ್ಲ.
ಬೆಳಗಿನಿಂದ ಸಂಜೆಯವರೆಗೂ ಶಿವನನ್ನು ಪೂಜಿಸುವ ಸ್ತ್ರೀ ನಾಗಾ ಸಾಧುಗಳಿಗೆ ಪುರುಷ ನಾಗಾ ಸಾಧುಗಳಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆಯಾಗಿರಲು ಅವಕಾಶ ಇರುವುದಿಲ್ಲ. ದೀಕ್ಷೆ ಪಡೆದು ನಾಗಾ ಸಾಧುಗಳಾಗುವಾಗ ಮಹಿಳೆಯರು ವಸ್ತ್ರಗಳನ್ನು ಧರಿಸಬೇಕು. ಸ್ತ್ರೀ ನಾಗಾ ಸಾಧುಗಳು ತಮ್ಮ ಹಣೆಯ ಮೇಲೆ ತಿಲಕವನ್ನು ಹಚ್ಚುತ್ತಾರೆ. ಕೇಸರಿ ಬಣ್ಣದ ಒಂದು ಬಟ್ಟೆಯನ್ನು ಮಾತ್ರ ಧರಿಸಲು ಅವರಿಗೆ ಅವಕಾಶವಿದೆ. ಸ್ತ್ರೀ ನಾಗಾ ಸಾಧುಗಳು ಹೊಲಿಗೆ ಹಾಕದ ಬಟ್ಟೆಯನ್ನು ಧರಿಸುತ್ತಾರೆ. ಇದನ್ನು ಗಂಟಿ ಎಂದು ಕರೆಯಲಾಗುತ್ತದೆ. ನಾಗಾ ಸಾಧು ಆಗುವ ಮೊದಲು ಮಹಿಳೆ 6 ರಿಂದ 12 ವರ್ಷಗಳ ಕಾಲ ಬ್ರಹ್ಮಚರ್ಯವನ್ನು ಪಾಲಿಸಬೇಕು.
ಸ್ತ್ರೀ ನಾಗಾ ಸಾಧುಗಳು ಸಹ ಪುರುಷ ನಾಗಾ ಸಾಧುಗಳಂತೆ ಕಠಿಣ ದೀಕ್ಷಾ ಪ್ರಕ್ರಿಯೆಯನ್ನು ಎದುರಿಸಬೇಕು. ದೀಕ್ಷೆಯ ಸಮಯದಲ್ಲಿ ಅವರು ಲೌಕಿಕ ಜೀವನದ ಎಲ್ಲಾ ಬಂಧಗಳು ಮತ್ತು ಸಂಬಂಧಗಳನ್ನು ತ್ಯಜಿಸಬೇಕು. ತಮ್ಮ ಪಿಂಡ ದಾನ ಮಾಡಿ, ತಲೆ ಬೋಳಿಸಿ ಹೊಸ ಜೀವನಕ್ಕೆ ಕಾಲಿಡುತ್ತಾರೆ. ಲೌಕಿಕ ವಸ್ತ್ರ, ಆಭರಣಗಳನ್ನೂ ಅವರು ತ್ಯಜಿಸಬೇಕಾಗುತ್ತದೆ.
ಭೂಮಿ ಮೇಲೆ ಮಳೆ ಬೀಳದ ಒಂದೇ ಒಂದು ಊರಿದೆ, ಜನರು ಬದುಕ್ತಾರೆ ಹೇಗೆ?
ಅವರು ತಮ್ಮ ಜೀವನವನ್ನು ಆಧ್ಯಾತ್ಮಿಕ ಅಭ್ಯಾಸ, ತಪಸ್ಸು ಮತ್ತು ಧ್ಯಾನಕ್ಕಾಗಿ ಮೀಸಲಿಡಬೇಕಾಗುತ್ತದೆ. ಕಾಡು, ಪರ್ವತ, ಗುಹೆಗಳಲ್ಲಿ ವಾಸವಾಗಿ ತಪಸ್ಸು ಮಾಡಬೇಕು. ಅವರು ಆಹಾರ, ನಿದ್ರೆ ಮತ್ತು ಇತರ ಅಗತ್ಯತೆ ವಿಷಯದಲ್ಲಿ ಕನಿಷ್ಠ ಮತ್ತು ಸರಳ ಜೀವನವನ್ನು ನಡೆಸುತ್ತಾರೆ. ಕುಂಭಮೇಳ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಗಾ ಸಾಧ್ವಿಗಳು ಭಾಗವಹಿಸುತ್ತಾರೆ. ಅವರು ತಮ್ಮ ಧ್ವಜದೊಂದಿಗೆ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಾರೆ.