ಟೈರ್ ಸಿಡಿಯೋದಕ್ಕೆ ಇನ್ನೊಂದು ಮುಖ್ಯ ಕಾರಣ ವಾಹನದ ವೇಗ. ಕಾರ್ ಆಗಿರಲಿ, ಬೈಕ್ ಆಗಿರಲಿ, ಕಂಪನಿ ಏನೇ ಇರಲಿ, ನೀವು ಹೋಗೋ ವೇಗದಿಂದ ಟೈರ್‌ಗೆ ಒತ್ತಡ ಬೀಳುತ್ತೆ. ಈ ಒತ್ತಡ ಹೆಚ್ಚಾದ್ರೆ ಟೈರ್ ಸಿಡಿಯುತ್ತೆ. ಯಾವ ಟೈರ್ ಎಷ್ಟು ಒತ್ತಡ ತಡೆದುಕೊಳ್ಳುತ್ತೆ ಅಂತ ತಿಳ್ಕೊಳ್ಳೋಕೆ ಕಂಪನಿಗಳು ಒಂದು ಕೋಡ್ ಕೊಡ್ತಾರೆ. ಉದಾಹರಣೆಗೆ 134/76 G 14 75 L ಹೀಗೆ ಸೀರಿಯಲ್ ನಂಬರ್ ಇರುತ್ತೆ. ಕಂಪನಿಗಳು ಟೈರ್ ಮೇಲೆ ಇದನ್ನ ಪ್ರಿಂಟ್ ಮಾಡಿರ್ತಾರೆ. ಆ ಕೋಡ್ ಕೊನೆಯಲ್ಲಿರೋ ಇಂಗ್ಲಿಷ್ ಅಕ್ಷರ ಟೈರ್‌ನಲ್ಲಿ ಎಷ್ಟು ಗಾಳಿ ಇರಬೇಕು ಅಂತ ತೋರಿಸುತ್ತೆ.
L ಅಂದ್ರೆ ಗರಿಷ್ಠ ವೇಗ 120 km/h. M ಅಂದ್ರೆ 130, N ಅಂದ್ರೆ 140, P ಅಂದ್ರೆ 150, Q ಅಂದ್ರೆ 160, R ಅಂದ್ರೆ 170, S ಅಂದ್ರೆ 180, T ಅಂದ್ರೆ 190, U ಅಂದ್ರೆ 200, H ಅಂದ್ರೆ 210, V ಅಂದ್ರೆ 240, W ಅಂದ್ರೆ 270, Y ಅಂದ್ರೆ 300 km/h ವೇಗದಲ್ಲಿ ಹೋಗಬಹುದು. ಈ ವೇಗ ಮೀರಿದ್ರೆ ಟೈರ್ ಸಿಡಿಯಬಹುದು. ಹಾಗಾಗಿ ಟೈರ್ ನೋಡಿ ಗಾಳಿ ಹಾಕಿಸಿ, ಅಪಘಾತ ತಪ್ಪಿಸಿ.