ಅಣುಅಣುವಿನಲ್ಲೂ ದೇವರಿದ್ದಾನೆ ಎನ್ನುತ್ತೀರಿ, ಪಾರ್ವತಿ ದೇವಿಯ ಬಚ್ಚಲು ಮನೆಯಲ್ಲಿ ಇರ್ಲಿಲ್ವಾ?: ಬಿಟಿ ಲಲಿತಾ ನಾಯಕ್‌

By Santosh Naik  |  First Published Nov 21, 2024, 7:54 PM IST

ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್‌ ಹಿಂದೂ ದೇವರುಗಳಾದ ಗಣೇಶ, ಶಿವ, ಪಾರ್ವತಿ ಮತ್ತು ಅಯ್ಯಪ್ಪನ ಬಗ್ಗೆ ಧಾರವಾಡದ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಟೀಕೆಗಳನ್ನು ಮಾಡಿದ್ದಾರೆ. ದೇವರುಗಳು ಮನುಷ್ಯರೇ ಹೊರತು ದೈವ ಸ್ವರೂಪದವರಲ್ಲ ಎಂದು ಅವರು ವಾದಿಸಿದ್ದಾರೆ. ಸಂಕೇತಗಳನ್ನು ಪೂಜಿಸುವ ಬದಲು ಪರಿಸರವನ್ನು ದೇವರೆಂದು ಪೂಜಿಸಬೇಕೆಂದು ಪ್ರತಿಪಾದಿಸಿದರು.


ಧಾರವಾಡ (ನ.21): ಮಾಜಿ ಸಚಿವೆ, ನಟಿ, ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿಟಿ ಲಲಿತಾ ನಾಯಕ್‌ ಮತ್ತೊಮ್ಮೆ ಹಿಂದೂ ದೇವರುಗಳ ಅವಹೇಳನ ಮಾಡಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಮಾರಂಭದಲ್ಲಿ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್‌ ಹಿಂದು ದೇವರುಗಳನ್ನು ಲೇವಡಿ ಮಾಡಿದ್ದಾರೆ. ಹಿಂದುಗಳ ಪ್ರಮುಖ ಆರಾಧ್ಯದೈವವಾದ ಗಣೇಶ, ಶಿವ, ಪಾರ್ವತಿ ಹಾಗೂ ಅಯ್ಯಪ್ಪನ ಬಗ್ಗೆ ಅವರು ಟೀಕೆ ಮಾಡಿದ್ದಾರೆ. ಧರೆಗೆ ದೊಡ್ಡವರು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಲಲಿತಾ ನಾಯಕ್‌,'ಗಣೇಶ ಅನ್ನೋದು ಒಂದು ಜ್ಞಾನ. ಆ ಜ್ಞಾನಕ್ಕೆ ಒಂದು ಆಕಾರ ಕೊಟ್ಟಿದ್ದಾರೆ. ಅದಕ್ಕೆ ಒಂದು ಸೊಂಡಿಲು, ತಲೆ ಇದೆ. ಈಶ್ವರ ಅನ್ನುವಂತಹ ಅಪ್ಪ ಇದಾನೆ. ದೇವರು ಇದ್ದವನು ಯಾರನ್ನಾದರೂ ಕೊಲ್ಲುತ್ತಾನಾ? ಧರೆಯಿಂದ ಆಕಾಶದೆತ್ತರಕ್ಕೆ ಬೆಳೆದವನು ದೇವರು. ಅಣುರೇಣು ತೃಣಕಾಷ್ಟದಲ್ಲಿಯೂ ದೇವರಿದ್ದಾನೆ ಎನ್ನುತ್ತೀರಿ. ಹಾಗಿದ್ದರೆ, ಪಾರ್ವತಿ ದೇವಿಯ ಬಚ್ಚಲು ಮನೆಯಲ್ಲಿ ದೇವರು ಇದ್ದಿರಲಿಲ್ವಾ? ಎಂದು ಕುಹಕ ಮಾಡಿದ್ದಾರೆ.

ಹುಡುಗ ಅಡ್ಡ ನಿಂತಿದ್ದಾನೆ ಎಂದು ಕೊಂದು ಹೋಗುವವನ್ನು ದೇವರು ಅನ್ನೋದು ಹೇಗೆ? ಅವರೆಲ್ಲ ದೇವರಲ್ಲ, ಮನುಷ್ಯರು. ಆ ಮನುಷ್ಯ ಮಾಡಿರೋ ತಪ್ಪು ನಾವು ಮಾಡಬಾರದು. ಅಯ್ಯಪ್ಪ ಭಕ್ತರು ಅಂತಾ ಕೆಲವರು ಬಹಳ ಮಾಡುತ್ತಿರುತ್ತಾರೆ. ಆದರೆ, ಅಯ್ಯಪ್ಪ ಕಾಡಿನಲ್ಲಿ ಇಲ್ಲ. ಅಯ್ಯಪ್ಪ ಎಲ್ಲ ಕಡೆ ಅನಾಥವಾಗಿ ಇದ್ದಾನೆ. ಅನೇಕ ಅನಾಥ ಮಕ್ಕಳಿದ್ದಾರೆ. ಅವರಿಗೆ ತಂದೆ-ತಾಯಿ ಇಲ್ಲ. ಅವರನ್ನು ನೋಡಿಕೊಳ್ಳುವ ಕೆಲಸ ಆಗಬೇಕು. ಅದನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ. ಅಲ್ಲಿ ಕಾಡು ಕಡಿದು  ಪುರೋಹಿತಶಾಹಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲೆಲ್ಲ ತಲೆಯ ಮೇಲೆ ಏನೇನೋ ಹೊತ್ತುಕೊಂಡು ಹೋಗ್ತಾರೆ. ಜಯಮಾಲಾ ಏನೋ ಮುಟ್ಟಿದ್ರಂತೆ. ಮಟ್ಟಿದ ಕೂಡಲೇ ಮೈಲಿಗೆ ಆಯ್ತು ಅಂದ್ರು. ಕುಳಿತಿರೋ ಮೂರ್ತಿಗೆ ಯಾರು ಮುಟ್ಟಿದ್ರು ಒಂದೇ, ಮುಟ್ಟದಿದ್ದರೂ ಒಂದೇ ಎಂದು ಹೇಳಿದ್ದಾರೆ.

Tap to resize

Latest Videos

undefined

ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್‌ ಮಾಡ್ತಿದ್ದೀರಾ' ಅನ್ನೋದಾ?

ಸಂಕೇತಗಳು ಯಾವತ್ತೂ ಸತ್ಯವಲ್ಲ. ಕೇತಗಳು ಸಂಕೇತ ಅಷ್ಟೆ. ದೇಶದ ಬಾವುಟವನ್ನು ನಾವು ಗೌರವಿಸುತ್ತೇವೆ. ಆದರೆ ಆ ಬಾವುಟ ದೇಶವಲ್ಲ. ಅದು ದೇಶದ ಜನಗಳ ಪ್ರತೀಕ. ಬಾವುಟ ಹಾಕಿಕೊಂಡು ಒಂದ ವರ್ಷ ಪೂಜೆ ಮಾಡಿ ಏನಾದರೂ ಆಗುತ್ತದೆಯಾ? ಏನೂ ಆಗೋದಿಲ್ಲ. ಈ ಪರಿಸರವೇ ದೇವರು. ಅದಕ್ಕೆ ನೂರು ದೇವರು ನೂಕಾಚೆ ದೂರ. ಭಾರತಾಂಬೆ ದೇವಿ ಪೂಜಿಸೋಣ ಬಾರಾ ಎಂದು ಕುವೆಂಪು ಹೇಳಿದ್ದರು. ಅದು ಕೂಡ ಈಗ ತಪ್ಪಾಗಿದೆ ಒಂದು ಕಿರೀಟ ಹಾಕಿರೋ ದೇವರು, ನಾಲ್ಕು ಕೈ. ಅದಕ್ಕೆ ಪೂಜೆ ಮಾಡಿ ಕುವೆಂಪು ಮಾತು ಪಾಲಿಸುತ್ತೇವೆ ಅಂತಾರೆ. ಅದು ತಪ್ಪು. ಸೀತೆಯನ್ನು ಬೆಂಕಿಗೆ ದೂಡಿದ್ರು. ಬದುಕಿದ್ಳು, ದೈವಿ ಸ್ವರೂಪ ಅಂತಾರೆ. ಅದು ಹಾಗಲ್ಲ. ಸೀತೆ ಬೆಂಕಿಯಲ್ಲಿ ಸುಟ್ಟು ಹೋಗಿದ್ಳು. ಮಣ್ಣು ಮಾಡಿದ್ದರು. ಅದನ್ನೇ ಭೂತಾಯಿ ಕೈ ಹಿಡಿದು ಎತ್ತಿದ್ರು ಅಂತಾರೆ. ಅದೆಲ್ಲ ಏನೂ ಅಲ್ಲ. ಅವರೆಲ್ಲ‌ ಮನುಷ್ಯರೇ ಎಂದು ಬಿಟಿ ಲಲಿತಾ ನಾಯಕ್‌ ಮಾತನಾಡಿದ್ದಾರೆ.

ರೆಡ್‌ ಡ್ರೆಸ್‌ನಲ್ಲಿ ಶಿಲಾ ಬಾಲಿಕೆಯಾದ ನಿವೇದಿತಾ ಗೌಡ, ಕಾಮೆಂಟ್‌ ಸೆಕ್ಷನ್‌ ಮಾತ್ರ ನೋಡೋದಲ್ಲ!

 

click me!