ಬೆಂಗಳೂರು ರಸ್ತೆ ಮಾತ್ರವಲ್ಲ ಏರ್‌ಪೋರ್ಟ್ ರನ್‌ವೇನಲ್ಲೂ ಟ್ರಾಫಿಕ್ ಜಾಮ್!

Published : Nov 11, 2024, 06:31 PM IST
ಬೆಂಗಳೂರು ರಸ್ತೆ ಮಾತ್ರವಲ್ಲ ಏರ್‌ಪೋರ್ಟ್ ರನ್‌ವೇನಲ್ಲೂ ಟ್ರಾಫಿಕ್ ಜಾಮ್!

ಸಾರಾಂಶ

ಬೆಂಗಳೂರು ಟ್ರಾಫಿಕ್ ಬಗ್ಗೆ ಯಾರಿಗೂ ಬಿಡಿಸಿ ಹೇಳಬೇಕಾಗಿಲ್ಲ. ಭಾರತದಲ್ಲೇ ಬೆಂಗಳೂರು ಟ್ರಾಫಿಕ್ ಫೇಮಸ್. ಆದರೆ ಬೆಂಗಳೂರು ರಸ್ತೆ ಮಾತ್ರವಲ್ಲ, ಏರ್‌ಪೋರ್ಟ್ ರನ್‌ವೇನಲ್ಲೂ ಟ್ರಾಫಿಕ್ ಜಾಮ್ ಆಗಿದೆ. 

ಬೆಂಗಳೂರು(ನ.11) ದೇಶ ಮಾತ್ರವಲ್ಲ ವಿಶ್ವದಲ್ಲೇ ಬೆಂಗಳೂರು ಟ್ರಾಫಿಕ್ ಜನಪ್ರಿಯವಾಗಿದೆ. ಬೆಂಗಳೂರು ವಾತಾವರಣ, ಇಲ್ಲಿನ ಪಾರ್ಕ್, ಸ್ಥಳ, ಆಹಾರ ಎಲ್ಲವನ್ನೂ ಜನರು ಇಷ್ಟಪಡುತ್ತಾರೆ. ಆದರೆ ಟ್ರಾಫಿಕ್‌ಗೆ ಬೇಸತ್ತು ಹೋಗಿದ್ದಾರೆ. ಟ್ರಾಫಿಕ್‌ನಲ್ಲಿ ಒಂದೆರೆಡು ಗಂಟೆ ಸಾಮಾನ್ಯ, ಕೆಲವೊಮ್ಮೆ 4 ರಿಂದ 5 ಗಂಟೆ ಕಳೆದದ್ದೂ ಇದೆ. ನೀವು ಹೇಗೋ ಕಷ್ಟಪಟ್ಟು ಬೆಂಗಳೂರು ವಿಮಾನ ನಿಲ್ದಾಣ ತಲುಪಿದರೆ ಸಾಕು, ಬಳಿಕ ಆಗಸದ ಮೂಲಕ ಹಾರಿ ಹೋಗಬಹುದು ಅಂದುಕೊಂಡಿದ್ದರೆ ತಪ್ಪು. ಕಾರಣ ಬೆಂಗಳೂರಿನ ವಿಮಾನ ನಿಲ್ದಾಣದ ಏರ್‌ಪೋರ್ಟ್‌ನಲ್ಲೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಸಿಟಿ ರಸ್ತೆಯಲ್ಲೇ ಸಾಗುವಂತೆ ವಿಮಾನ ರನ್‌ವೇಯಲ್ಲಿ ಸಾಗುತ್ತಿರುವ ದೃಶ್ಯ ಬೆಂಗಳೂರಿನ ದುರವ್ಯವಸ್ಥೆಯನ್ನು ಹೇಳುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣದ ರನ್‌ವೇ ಟ್ರಾಫಿಕ್ ಕುರಿತ ವಿಡಿಯೋ ಒಂದನ್ನು ಕರ್ನಾಟಕ ಪೋರ್ಟ್‌ಫೊಲಿಯೋ ಖಾತೆ ಹಂಚಿಕೊಂಡಿದೆ. ಈ ವಿಡಿಯೋದ ದಿನಾಂಕ ಹಾಗೂ ಸಮಯ ಲಭ್ಯವಿಲ್ಲ. ಆದರೆ ಈ ದೃಶ್ಯ ಮಾತ್ರ ಬೆಂಗಳೂರಿನ ಪ್ರಮುಖ ಸಮಸ್ಯೆಯ ಗಂಭೀರತೆಯನ್ನು ಸಾರಿ ಹೇಳುತ್ತಿದೆ. ಇದು ವಿಮಾನ ಒಂದರ ಒಳಗಿನಿಂದ ಪ್ರಯಾಣಿಕ ತೆಗೆದ ದೃಶ್ಯವಾಗಿದೆ.  ವಿಮಾನಗಳು ಸಾಲಾಗಿ ರನ್‌ವೇ ಮೂಲಕ ಸಾಗುತ್ತಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನಗಳು ನಿಂತಿರುವಂತೆ ಸಾಲಾಗಿ ನಿಲ್ಲುತ್ತಿದೆ. ಒಂದರ ಹಿಂದೆ ಒಂದರಂತೆ ಟೇಕ್ ಆಫ್ ಆಗುತ್ತಿದ್ದಂತೆ ಹಿಂದೆ ನಿಂತಿರುವ ವಿಮಾನಗಳು ಮುಂದೆ ಬಂದು ತಮ್ಮ ಟೇಕ್ ಆಫ್ ಸರದಿಗಾಗಿ ಗಾಯುತ್ತಿದೆ. ಒಂದೇ ರನ್‌ವೇಯಲ್ಲಿ ಹಲವು ವಿಮಾನಗಳು ಸಾಲಾಗಿ ಸಾಗುತ್ತಿರುವ ದೃಶ್ಯ ಬೆಂಗಳೂರಿನ ಹೆಬ್ಬಾಳ ಸೇರಿದಂತೆ ಕೆಲ ಟ್ರಾಫಿಕ್ ರಸ್ತೆಗಳ ದೃಶ್ಯ ನೆನಪಿಸುತ್ತಿದೆ.

ಬೆಂಗಳೂರು ಟ್ರಾಫಿಕ್‌ನಲ್ಲಿ ಆಫೀಸ್‌ನಿಂದ ಮನೆ ತಲುಪಲು 4 ಗಂಟೆ, ಹಿಂದಿನ ಎಲ್ಲಾ ದಾಖಲೆ ಉಡೀಸ್!

ಈ ವಿಡಿಯೋವನ್ನು ಎಕ್ಸ್ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ರಸ್ತೆಯಲ್ಲಿ ಮಾತ್ರ ಟ್ರಾಫಿಕ್ ಅಲ್ಲ, ವಿಮಾನ ನಿಲ್ದಾಣದ ರನ್‌ವೇಯಲ್ಲೂ ಟ್ರಾಫಿಕ್ ತುಂಬಿದೆ. ಬೆಂಗಳೂರು ವಿಮಾನ ನಿಲ್ದಾಣದ ರನ್‌ವೇಯಲ್ಲಿ ವಿಮಾನಗಳು ಟೇಕ್ ಆಫ್ ಆಘಲು ಸಾಲು ಸಾಲಾಗಿ ರನ್‌ವೇಯಲ್ಲಿ ಸಾಗುತ್ತಿರುವ ದೃಶ್ಯ ನಗರದ ಸಮಸ್ಯೆ ಹೇಳುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಹೆಚ್ಚಾಗುತ್ತಿದೆ. ವಿಮಾನ ನಿಲ್ದಾಣದಲ್ಲೂ ಜಾಮ್ ಸಮಸ್ಯೆ ಸೃಷ್ಟಿಯಾಗಿದೆ. ನಗರ ವೇಗಾವಿಗ ಬೆಳೆಯುತ್ತಿದ್ದ, ಜನರ ಪ್ರಮುಖ ತಾಣವಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

PREV
Read more Articles on
click me!

Recommended Stories

₹1000+ ಕೋಟಿ ಸೈಬರ್‌ ವಂಚನೆ : ಸ್ವಾಮೀಜಿ.ಕಾಂ, ನಿಯೋ ಸಿಸ್ಟಮ್‌ ಹೆಸರಲ್ಲಿ ಜಾಲ ಪತ್ತೆ
ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ವಂಚಕರ ಪತ್ತೆಗೆ ಬೇಟೆ ಶುರು