ವಾಹನಕ್ಕೆ HSRP ಅಳವಡಿಸಿಲ್ವಾ? ದಂಡ ತಪ್ಪಿಸಲು ಕೊನೆ ಅವಕಾಶ- ಆನ್​ಲೈನ್​ನಲ್ಲೂ ಸಲ್ಲಿಕೆ: ಡಿಟೇಲ್ಸ್ ಇಲ್ಲಿದೆ...

By Suchethana D  |  First Published Nov 8, 2024, 4:19 PM IST

 ವಾಹನಕ್ಕೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (HSRP) ಇನ್ನೂ ಅಳವಡಿಸಿಲ್ವಾ? ದಂಡ ತಪ್ಪಿಸಲು ಇಲ್ಲಿದೆ ಕೊನೆ ಅವಕಾಶ-  ಆನ್​ಲೈನ್​ನಲ್ಲೂ ಸಲ್ಲಿಕೆ ಲಭ್ಯ: ಡಿಟೇಲ್ಸ್ ಇಲ್ಲಿದೆ...  
 


ವಾಹನಗಳ ಸುರಕ್ಷತೆಯ ದೃಷ್ಟಿಯಲ್ಲಿ ಪ್ರತಿಯೊಬ್ಬ ವಾಹನ ಮಾಲೀಕರು ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (HSRP) ಅಳವಡಿಸುವುದನ್ನು ಕಡ್ಡಾಯ ಮಾಡಿ ಒಂದು  ವರ್ಷವಾಗಿದೆ. ಕಳೆದ ವರ್ಷದ ನವೆಂಬರ್​ ತಿಂಗಳಿನಲ್ಲಿ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿತ್ತು. 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಫೆಬ್ರುವರಿಯವರೆಗೆ ಗಡುಗು ನೀಡಲಾಗಿತ್ತು. ನಂತರ ಅದನ್ನು ಮೇ 31ಕ್ಕೆ ವಿಸ್ತರಿಸಲಾಗಿತ್ತು. ಆದರೆ ಇದುವರೆಗೆ ಕೋಟ್ಯಂತರ ವಾಹನ ಮಾಲೀಕರು ಈ ಆದೇಶವನ್ನು ಪಾಲಿಸಿಲ್ಲ. ಇದುವರೆಗೂ HSRP ಅಳವಡಿಸಿಕೊಂಡಿಲ್ಲ.

ಈ ನಂಬರ್​ ಪ್ಲೇಟ್​ ಅಳವಡಿಸದವರಿಗೆ ಮೊದಲ ಬಾರಿಗೆ 500 ರೂಪಾಯಿ ದಂಡ, ನಂತರವೂ ನಿರ್ಲಕ್ಷ್ಯ ಮಾಡಿದರೆ  1,000 ರೂ. ದಂಡ ವಿಧಿಸುವ ಆದೇಶವನ್ನು ಸಾರಿಗೆ ಇಲಾಖೆ ಮಾಡಿದೆ. ಆದರೆ ಇದೀಗ ಕೊನೆಯ ಬಾರಿಗೆ ಇನ್ನೊಂದು ಅವಕಾಶವನ್ನು ವಾಹನ ಸವಾರರಿಗೆ ನೀಡಲಾಗಿದೆ. ಇದೇ 30ರ ಒಳಗೆ ಅಂದರೆ ನವೆಂಬರ್​ 30,2024ರ ಒಳಗೆ HSRP ಅಳವಡಿಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಕಟ್ಟಲು ಸಿದ್ಧರಾಗಿ! ಅಷ್ಟಕ್ಕೂ ಇದನ್ನು ಕಡ್ಡಾಯಗೊಳಿಸಿರುವ ಹಿಂದೆ ವಾಹನ ಮಾಲೀಕರ ರಕ್ಷಣೆ ಉದ್ದೇಶವಿದೆ. ಎಚ್‌ಎಸ್‌ಆರ್‌ಪಿಗಳು ಟ್ಯಾಂಪರ್-ಪ್ರೂಫ್ ಅಲ್ಯೂಮಿನಿಯಂ ಪ್ಲೇಟ್‌ಗಳಾಗಿದ್ದು, ಮರುಬಳಕೆ ಮಾಡಲಾಗದ ಲಾಕ್‌ಗಳನ್ನು ಹೊಂದಿರುತ್ತವೆ ವಾಹನಗಳ ಅನಧಿಕೃತ ಮಾರ್ಪಾಡುಗಳನ್ನು ತಡೆಗಟ್ಟಲು ಮತ್ತು ವಾಹನದ ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಇದೇ ಕಾರಣಕ್ಕೆ ಇದರ ಅಳವಡಿಕೆ ಕಡ್ಡಾಯವಾಗಿದೆ. 

Tap to resize

Latest Videos

undefined

ಎಲ್ಲಿಂದಲೋ ಬಂದಳು, ಮದುಮಕ್ಕಳಿಗೆ ಆಶೀರ್ವದಿಸಿ ಮಾಯವಾದಳು! ಬೆಂಗಳೂರಿನ ಕುತೂಹಲದ ಘಟನೆ ವಿಡಿಯೋ ವೈರಲ್‌

ಈ ಪ್ಲೇಟ್​ಗಳ ಬಗ್ಗೆ ಇನ್ನಷ್ಟು ಮಾಹಿತಿಗೆ ಸಾರಿಗೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ.  9449863429 ಮತ್ತು 9449863426 ರಲ್ಲಿ ಎಚ್‌ಎಸ್‌ಆರ್‌ಪಿ ಪ್ರಶ್ನೆಗಳಿಗೆ ಮೀಸಲಾದ ಸಹಾಯವಾಣಿಯಾಗಿದೆ.  ಸಾರಿಗೆ ಇಲಾಖೆಯು ಎಲ್ಲಾ ವಾಹನ ಮಾಲೀಕರಿಗೆ ನವೀಕರಿಸಿದ ಗಡುವನ್ನು ಪೂರೈಸಲು ಒತ್ತಾಯಿಸಿದೆ, ಪಾಲಿಸದಿದ್ದಲ್ಲಿ ದಂಡವನ್ನು ಜಾರಿಗೊಳಿಸಬಹುದು ಎಂದು ಎಚ್ಚರಿಸಿದೆ.

ಆನ್​ಲೈನ್​ ಮೂಲಕವೂ ಈ ಪ್ಲೇಟ್​ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ Book My HSRP (https://bookingmyhsrp.com/) ವೆಬ್‌ಸೈಟ್‌ಗೆ ಹೋಗಿ ಕಲರ್ ಸ್ಟಿಕ್ಕರ್‌ನೊಂದಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅನ್ನು ಕ್ಲಿಕ್ ಮಾಡಬೇಕು. ವಾಹನದ ನೋಂದಣಿ ಸಂಖ್ಯೆ, ರಾಜ್ಯ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಬೇಕು. ಸ್ಥಳ ಮತ್ತು ನೇಮಕಾತಿ ಸಮಯವನ್ನು ಆಯ್ಕೆಮಾಡಬೇಕು. ಹಣ ಪಾವತಿಸಿ, ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಬೇಕು. HSRP ಸಿದ್ಧವಾದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ. HSRP ಅನ್ನು ನಿಮ್ಮ ಮನೆಗೆ ತಲುಪಿಸಲು ನೀವು ಆಯ್ಕೆ ಮಾಡಬಹುದು ಅಥವಾ ಆದ್ಯತೆಯ ಸ್ಥಳದಲ್ಲಿ ನೀವೇ ಹೋಗಿ ಪಡೆದುಕೊಳ್ಳಬಹುದು.  

ಭಾರತದ ನಂ.1 ಶ್ರೀಮಂತ ಯುಟ್ಯೂಬರ್​ ಮಹಿಳೆ! ಖಿನ್ನತೆಗೆ ಜಾರಿದ್ದಾಕೆ ಅಡುಗೆ ಮಾಡಿ ಕೋಟ್ಯಧಿಪತಿಯಾದರು.

click me!