ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು 1 ನಿಮಿಷ ನಿಲ್ಲಿಸಿದಾಗ ಖರ್ಚಾಗುವ ಪೆಟ್ರೋಲ್ ಎಷ್ಟು?

By Chethan Kumar  |  First Published Nov 6, 2024, 6:47 PM IST

ಬೆಂಗಳೂರು ಸೇರಿದಂತೆ ನಗರ, ಪಟ್ಟಣಗಳಲ್ಲಿನ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ನಿಲ್ಲಿಸಬೇಕು. ಹೀಗೆ ಕಾರಿನ ಎಂಜಿನ್ ಆಫ್ ಮಾಡದೇ ಗ್ರೀನ್ ಲೈಟ್‌ಗಾಗಿ ಕಾಯುತ್ತಾ ನಿಲ್ಲುವಾಗ ಖರ್ಚಾಗುವ ಕಾರಿನ ಪೆಟ್ರೋಲ್ ಎಷ್ಟು? ತಿಳಿದರೆ ಎಂಜಿನ್ ಆಫ್ ಮಾಡುವುದು ಖಚಿತ.
 


ಬೆಂಗಳೂರು ಟ್ರಾಫಿಕ್ ಕಾರಣದಿಂದ ದೇಶಾದ್ಯಂತ ಸುದ್ದಿಯಾಗಿದೆ. ಬೆಂಗಳೂರು ವಾತಾವರಣ, ಟೆಕ್ ಹಬ್ ತಂತ್ರಜ್ಞಾನ ಬಳಕೆ, ಸ್ಟಾರ್ಟ್ಅಪ್ ಹಬ್ ಸೇರಿದಂತೆ ಹಲವು ಕಾರಣಗಳಿಂದ ಜನಪ್ರಿಯವಾಗಿದೆ. ಆದರೆ ಟ್ರಾಫಿಕ್ ಕಾರಣದಿಂದ ಕುಖ್ಯಾತಿಗೂ ಗುರಿಯಾಗಿದೆ. ಬೆಂಗಳೂರು ಸೇರಿದಂತೆ ಇತರ ನಗರ, ಪಟ್ಟಣಗಳಲ್ಲೂ ಟ್ರಾಫಿಕ್ ಸಮಸ್ಯೆಗಳು ಹೆಚ್ಚಾಗುತ್ತಿದೆ. ಸಿಗ್ನಲ್‌ನಲ್ಲಿ ವಾಹನ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ. ಹೀಗೆ ನಿಲ್ಲಿಸುವಾಗ ಬಹುತೇಕರು ವಾಹನ ಎಂಜಿನ್ ಆಫ್ ಮಾಡುವುದಿಲ್ಲ. ಒಂದೆರೆಡು ನಿಮಿಷದಲ್ಲಿ ತೆರಳಬೇಕಾಗಿರುವ ಕಾರಣ ಆಫ್ ಮಾಡುವ ಗೋಜಿಗೆ ಹೋಗುವುದಿಲ್ಲ. ಜೊತೆಗೆ ಸಿಗ್ನಲ್ ಗ್ರೀನ್ ಆದರೂ ಎಂಜಿನ್ ಸ್ಟಾರ್ಟ್ ಮಾಡಿ ತೆರಳುವಷ್ಟರಲ್ಲಿ ಹಿಂಬದಿಯಲ್ಲಿರುವ ವಾಹನ ಸವಾರರು ಹಾರ್ನ್ ಶಬ್ದಕ್ಕೆ ಪ್ರಾಣವೂ ಹೋಗಬಹುದು. ಆದರೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಕೇವಲ 1 ನಿಮಿಷ ನಿಲ್ಲಿಸಿದಾಗ ನಿಮ್ಮ ಕಾರಿನಲ್ಲಿ ಖರ್ಚಾಗುವ ಪೆಟ್ರೋಲ್ ಎಷ್ಟು ಗೊತ್ತಾ? ಇದು ಒಂದು ತಿಂಗಳಲ್ಲಿ ಲೆಕ್ಕಹಾಕಿದರೆ ಎಂಜಿನ್ ಆಫ್ ಮಾಡುವ ಅಭ್ಯಾಸ ರೂಢಿಸಿಕೊಳ್ಳುತ್ತೀರಿ.

ಟ್ರಾಫಿಕ್ ಸಿಗ್ನಲ್ ರೆಡ್ ಇದ್ದರೆ ವಾಹನ ನಿಲ್ಲಿಸಬೇಕು. ಇನ್ನು ಹಲವು ಸಿಗ್ನಲ್ ಬಳಿ ಎಷ್ಟು ನಿಮಿಷ ಅಥವಾ ಸೆಕೆಂಡ್ ಇದೆ ಅನ್ನೋ ಮಾಹಿತಿ ಸ್ಪಷ್ಟವಾಗಿರುವುದಿಲ್ಲ. ಇದ್ದರೂ ಕಾರು ಸೇರಿದಂತೆ ಇತರ ವಾಹನಗಳ ಎಂಜಿನ್ ಆಫ್ ಮಾಡುವುದಿಲ್ಲ. ಕಾರಣ ಒಂದೆರೆಡು ನಿಮಿಷ, ಹೆಚ್ಚೆಂದರೆ 5 ನಿಮಿಷದಲ್ಲಿ ಸಿಗ್ನಲ್ ತೆರೆದುಕೊಳ್ಳಲಿದೆ. ಮತ್ತೆ ಪ್ರಯಾಣ ಮುಂದುವರಿಸಬೇಕಾದ ಕಾರಣ ಎಂಜಿನ್ ಆಫ್ ಮಾಡುವುದಿಲ್ಲ. ಆದರೆ ಹೀಗೆ ಆಫ್ ಮಾಡದೇ ಇದ್ದರೆ ಪೆಟ್ರೋಲ್ ಖರ್ಚಾಗುತ್ತಲೇ ಇರುತ್ತದೆ. ಇದು ಕಾರಿನ ಎಂಜಿನ್ ಸಿಸಿ ಹೆಚ್ಚಾದಂತೆ ಪೆಟ್ರೋಲ್ ಖರ್ಚು ಕೂಡ ಹೆಚ್ಚಾಗುತ್ತದೆ.

Tap to resize

Latest Videos

undefined

ಚಲಿಸುತ್ತಿರುವ ಕಾರಿನ ಟೈಯರ್ ಸ್ಫೋಟಕ್ಕಿದೆ ಕಾರಣ, ಪ್ರಯಾಣದ ವೇಳೆ ಈ ತಪ್ಪು ಮಾಡದಿರಿ!

1000 ಸಿಸಿ ಯಿಂದ 1,200 ಸಿಸಿ ಸಣ್ಣ ಪೆಟ್ರೋಲ್ ಕಾರು ಟ್ರಾಫಿಕ್ ಸಿಗ್ನಲ್‌ನಲ್ಲಿ 1 ನಿಮಿಷ ಎಂಜಿನ್ ಆಫ್ ಮಾಡದೇ ನಿಲ್ಲಿಸಿದಾಗ 0.01 ಲೀಟರ್ ಪೆಟ್ರೋಲ್ ಖರ್ಚಾಗಲಿದೆ. ಇನ್ನು 1500 ಸಿಸಿ ಎಂಜಿನ್ ಕಾರುಗಳು 1 ನಿಮಿಷ ಸಿಗ್ನಲ್‌ನಲ್ಲಿ ನಿಲ್ಲುವಾಗ 0.015 ಲೀಟರ್ ಪೆಟ್ರೋಲ್ ಖರ್ಚಾಗಲಿದೆ. 2000 ಸಿಸಿ ಎಂಜಿನ್ ಕಾರುಗಳು 0.02 ಲೀಟರ್ ಪೆಟ್ರೋಲ್ ಕುಡಿಯಲಿದೆ. ಒಂದು ದಿನ ನಗರ ಪ್ರದೇಶದಲ್ಲಿ ಟ್ರಾಫಿಕ್‌ನಲ್ಲಿ 30 ನಿಮಿಷ, 1 ಗಂಟೆ ಸೇರಿದಂತೆ ಹೆಚ್ಚಿನ ಸಮಯ ಕಾರು ನಿಲ್ಲಲಿದೆ. ಅಥವಾ ಸ್ಲೋ ಮೂವಿಂಗ್ ಟ್ರಾಫಿಕ್‌ನಲ್ಲಿ ಚಲಿಸಲಿದೆ. ಈ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಖರ್ಚಾಗಲಿದೆ.  

ತಜ್ಞರ ಪ್ರಕಾರ 30 ಸೆಕೆಂಡ್‌ಗಿಂತ ಹೆಚ್ಚು ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸುತ್ತಿದ್ದರೆ ಎಂಜಿನ್ ಆಫ್ ಮಾಡುವುದು ಉತ್ತಮ ಎನ್ನುತ್ತಾರೆ. ಕಾರು ಎಂಜಿನ್ ಆಫ್ ಮಾಡಿ, ಮತ್ತೆ ಆನ್ ಮಾಡಿದರೂ ಇಷ್ಟು ಖರ್ಚಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಒಂದು ತಿಂಗಳಲ್ಲಿ ಕೇವಲ ಕಾರು ಆನ್ ಮಾಡಿ ಹಲವು ಲೀಟರ್ ಪೆಟ್ರೋಲ್ ಸುಮ್ಮನೆ ಖರ್ಚಾಗಲಿದೆ ಅನ್ನೋದು ತಜ್ಞರ ಸೂಚನೆ. ಟ್ರಾಫಿಕ್‌ನಲ್ಲಿ ಎಂಜಿನ್ ಆಫ್ ಮಾಡುವುದರಿಂದ ಕಾರಿನ ಬಾಳಿಕೆಯೂ ಹೆಚ್ಚಾಗಲಿದೆ. ಪೆಟ್ರೋಲ್ ಉಳಿತಾಯ ಮಾಡಬಹುದು, ಅನಗತ್ಯವಾಗಿ ಖರ್ಚಾಗುವ ಹಣ ಉಳಿತಾಯವಾಗಲಿದೆ. ಕಾರಣ ಬಿಸಿಯಾಗಿರುವ ಎಂಜಿನ್ ಆಫ್ ಮಾಡುವುದರಿಂದ ತಣ್ಣಗಾಗಲಿದೆ. ಇತ್ತ ವಾಯು ಮಾಲಿನ್ಯ, ಶಬ್ದ  ಮಾಲಿನ್ಯ, ತಾಪಮಾನ ಹೆಚ್ಚಳ ಸೇರಿದಂತೆ ಹಲವು ಪರಿಸರ ಸಂಬಂಧಿತ ಸಮಸ್ಯೆಗಳ ಪ್ರಮಾಣ ಕಡಿಮೆಯಾಗಲಿದೆ. 

ಮುಂದಿನ ಬಾರಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಸಿಲುಕಿದ್ದರೆ ಎಂಜಿನ್ ಆಫ್ ಮಾಡುವುದು ಮರೆಯಬೇಡಿ. ಆದರೆ ಸಿಗ್ನಲ್ ಗ್ರೀನ್ ಆದರೂ ಆನ್ ಮಾಡದೆ ಇದ್ದರೆ ಹಾರ್ನ್ ಶಬ್ದದ ಆಕ್ರೋಶ ಎದುರಿಸಲು ತಯಾರಾಗಿ.

Fastag ರಿಚಾರ್ಜ್ ನಿಯಮದಲ್ಲಿ ಬದಲಾವಣೆ, ಪಾವತಿಗೂ ಮುನ್ನ ತಿಳಿದುಕೊಳ್ಳಿ ಹೊಸ ರೂಲ್ಸ್!
 

 

click me!