ಶಾಸಕರಿಂದ ಶೇ.40 ಕಮೀಷನ್ ದಂಧೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ

By Kannadaprabha News  |  First Published Nov 21, 2024, 7:33 PM IST

ಕ್ಷೇತ್ರದಲ್ಲಿ ನಾನಾ ಯೋಜನೆಯಡಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಇಲಾಖೆಯಿಂದ ಟೆಂಡರ್‌ ಮೂಲಕ ಗುತ್ತಿಗೆದಾರರಿಗೆ ನೀಡದೇ ನೇರವಾಗಿ ಹ್ಯಾಬಿಟೆಡ್ ಸಂಸ್ಥೆಗೆ ನೀಡಿ ಅವರಿಂದ ಶೇ.40 ಕಮಿಷನ್ ದಂಧೆಗೆ ಶಾಸಕರು ಇಳಿದಿದ್ದಾರೆ: ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ 


ಕೊಟ್ಟೂರು(ನ.21):  ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಹುತೇಕ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಇಲಾಖೆಗೆ ವಹಿಸಿದೇ ಕರ್ನಾಟಕ ನೇರವಾಗಿ ರಾಜ್ಯ ಹ್ಯಾಬಿಟೆಡ್ ಸಂಸ್ಥೆಗೆ ವಹಿಸಿ ಮೂಲಕ ಶೇ.40 ಕಮೀಷನ್ ಪಡೆಯುವ ದಂಧೆಯಲ್ಲಿ ಕ್ಷೇತ್ರದ ಶಾಸಕರು ತೊಡಗಿದ್ದಾರೆಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ ಆರೋಪಿಸಿದರು. 

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಸೋಮವಾರ ಮಾತನಾಡಿ, ಕ್ಷೇತ್ರದಲ್ಲಿ ನಾನಾ ಯೋಜನೆಯಡಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಇಲಾಖೆಯಿಂದ ಟೆಂಡರ್‌ ಮೂಲಕ ಗುತ್ತಿಗೆದಾರರಿಗೆ ನೀಡದೇ ನೇರವಾಗಿ ಹ್ಯಾಬಿಟೆಡ್ ಸಂಸ್ಥೆಗೆ ನೀಡಿ ಅವರಿಂದ ಶೇ.40 ಕಮೀಷನ್ ದಂಧೆಗೆ ಶಾಸಕರು ಇಳಿದಿದ್ದಾರೆ. ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನಿರ್ವಹಿಸದೇ ಕಳಪೆಯಲ್ಲಿ ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ಕಾರ್ಯದರ್ಶಿ, ಜಿಲ್ಲಾಧಿಕಾರಿ ಸೇರಿದಂತೆ ವಿವಿರವಾದ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿರುವೆ ಎಂದರು. 

Latest Videos

undefined

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಬಾಣಂತಿಯರ ಸಾವು 3ಕ್ಕೇರಿಕೆ!

ಕ್ಷೇತ್ರದ ಮರಿಯಮ್ಮನಹಳ್ಳಿಯ ತೇರು ಬೀದಿ ರಸ್ತೆ ಅಭಿವೃದ್ಧಿಗೆ ಮಂಜೂರಾದ 6 ಕೋಟಿ ಕಾಮಗಾರಿಯನ್ನು ತಮ್ಮದೇ ಪಕ್ಷದ ಗುತ್ತಿಗೆದಾರರಿಗೆ ವಹಿಸಿರುವ ಶಾಸಕರು, ತಮಗೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕಮೀಷನ್ ನೀಡಿ ಉಳಿದ ಹಣದಲ್ಲಿ ಕಾಮಗಾರಿ ನಿರ್ವಹಿಸಲು ಸೂಚಿಸಿದ್ದಾರೆ. ಕನಿಷ್ಠ ಪ್ರಮಾಣದ ಹಣದಲ್ಲಿ ಕಾಮಗಾರಿಯನ್ನು ಗುಣ ಗುಣಮಟ್ಟದಲ್ಲಿ ನಿರ್ವಹಿಸಲು ಹೇಗೆ ಸಾಧ್ಯ ಎಂಬ ವಿವೇಚನೆ ಇಲ್ಲದ ಶಾಸಕರು ಹಣ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ ಎ೦ದು ದೂರಿದರು. 

ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತಿದೆ ಎಂದು ವಿಪಕ್ಷದವರು ಆರೋಪಿಸುತ್ತಿರುವುದರಲ್ಲಿ ಸತ್ಯಾಂಶವಿಲ್ಲ. ಯಾವುದೇ ಯೋಜನೆಯನ್ನು ಯೋಜನೆಯನು ಸರ್ಕಾರ ಸ್ಥಗಿತ ಮಾಡಿಲ್ಲ. ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂಬ ಆರೋಪ ತಳ್ಳಿ ಹಾಕಿದ ಅವರು, ಎಚ್ ಕೆಆರ್‌ಡಿಬಿಗೆ ಮುಖ್ಯಮಂತ್ರಿ ₹2 ಸಾವಿರ ಕೋಟಿ ನೀಡಿದ್ದಾರೆ. ಹ.ಬೊ.ಹಳ್ಳಿ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ಸಿಕ್ಕಿದೆ. ಪಟ್ಟಣದಲ್ಲಿ ಮಿನಿ ವಿಧಾನಸೌಧ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ ನಿರ್ಮಾಣ ಮತ್ತು ಕುಡಿವ ನೀರು ಯೋಜನೆಗಳಿಗೆ ನನ್ನ ಅವಧಿಯಲ್ಲಿಯೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಚುನಾವಣೆ ನೀತಿ ಸಂಹಿತೆಯಿಂದ ಸ್ಥಗಿತವಾಗಿತ್ತು. ಇದೀಗ ಎಲ್ಲ ಅಭಿವೃದ್ಧಿ ಕೆಲಸಗಳು ತಮ್ಮಿಂದ ಎಂದು ಶಾಸಕರು ಹೇಳಿಕೊಳ್ಳುತ್ತಿದ್ದಾರೆ ಎಂದರು. 

ರಾಜ್ಯದಲ್ಲಿ ಬಡವರಿಗಾಗಿ ನೀಡಿರುವ ಬಿಪಿಎಲ್, ಅಂತ್ಯೋದಯ ಕಾರ್ಡ್‌ಗಳನ್ನು ಯಾವುದೇಕಾರಣಕ್ಕೂರದ್ದು ಮಾಡುವುದಿಲ್ಲ. ಅನೇಕ ಅನರ್ಹರು ಹೊಂದಿರುವ ಕಾರ್ಡ್‌ಗಳನ್ನು ರದ್ದು ಪಡಿಸುವುದಕ್ಕಾಗಿ ಪ್ರಕ್ರಿಯೆ ನಡೆಸುವುದಕ್ಕಾಗಿ ಸದ್ಯ ಪಡಿತರ ತಡೆ ಹಿಡಿದಿದೆ. ರೈತರ ಭೂಮಿಯಲ್ಲಿ ವಕ್ ಹೆಸರು ಬಂದಿರುವುದರ ಕುರಿತು ಪ್ರಶ್ನಿಸಿದಾಗ, 2019ರಲ್ಲಿಯೇ ಬಿಜೆಪಿ ಈ ಕುರಿತು ನೋಟಿಸ್ ನೀಡಿತ್ತು. ಇದೀಗ ಮುಖ್ಯಮಂತ್ರಿ ನೋಟಿಸ್ ಹಿಂಪಡೆದಿದ್ದಾರೆ. ಚಿಂತಾಮಣಿಯಲ್ಲಿ ವಕ್ಫ್‌ ವಿಚಾರವಾಗಿ ರೈತರ ವಿರುದ್ಧ ಪೊಲೀಸರು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಇಲ್ಲ ಎಂದರು. 

ಸಿದ್ದರಾಮಯ್ಯ ಶೀಘ್ರ ರಾಜೀನಾಮೆ: ವಿಜಯೇಂದ್ರ

ಐ.ದಾರುಕೇಶ, ಎಪಿಎಂಸಿ ಅಧ್ಯಕ್ಷ ನಂಜಪ್ಪ, ಉಪಾಧ್ಯಕ್ಷ ಎಂ.ಶಿವಣ್ಣ, ಸದಸ್ಯ ಚಿರಿಬಿ ಕೊಟ್ರೇಶ, ಪಪಂ ಸದಸ್ಯ ತೋಟದ ರಾಮಣ್ಣ, ಮುಖಂಡರಾದ ರಾಂಪುರ ಭರಮಣ್ಣ, ಅಡಿಕೆ ಮಂಜುನಾಥ, ಗೂಳಿ ಮಲ್ಲಿಕಾರ್ಜುನ, ಬದ್ದಿ ಮರಿಸ್ವಾಮಿ ಇತರರು ಇದ್ದರು.

# ಕ್ಷೇತ್ರದಲ್ಲಿನ ಎಲ್ಲ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನಿರ್ವಹಿಸದೇ ತೀರಾ ಕಳಪೆಯಲ್ಲಿ ಮಾಡುತ್ತಿದ್ದಾರೆ 
# ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತಿದೆ ಎಂದು ವಿಪಕ್ಷದವರು ಆರೋಪಿಸುತ್ತಿರುವುದರಲ್ಲಿ ಸತ್ಯಾಂಶವಿಲ್ಲ 
# ಯಾವುದೇ ಯೋಜನೆಯನ್ನು ಸರ್ಕಾರ ಸ್ಥಗಿತ ಮಾಡಿಲ್ಲ

click me!