ಭಾರತದ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ: ಏನಿದು ಹೈಪರ್ಸಾನಿಕ್ ಮಿಸೈಲ್..?

Nov 21, 2024, 2:49 PM IST

ಹೈಪರ್ಸಾನಿಕ್ ಮಿಸೈಲ್‌ನ್ನು ಭಾರತ ತನ್ನ ಬತ್ತಳಿಕೆಗೆ ಸೇರೆಸಿಕೊಂಡಿದೆ. ಈ ಮೂಲಕ ಕೆಲವೇ ಕೆಲವು ರಾಷ್ಟ್ರಗಳಿಗೆ ಸಿಕ್ಕಿರೋ ಸಕ್ಸಸ್ ಭಾರತಕ್ಕೂ ಸಿಕ್ಕಿದೆ. ಈಗ, ಭಾರತ ಇದನ್ನ ಒಂಟಿಯಾಗಿ ಸಾಧಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ರಷ್ಯಾ ಜೊತೆಗೂಡಿ ಭಾರತ ಈ ಹೈಪರ್ಸಾನಿಕ್ ಮಿಸೈಲ್‌ ತಯಾರಿಸಬೇಕಿತ್ತು. ಆದ್ರೆ, ಆಗೋದೆಲ್ಲಾ ಒಳ್ಳೇದಕ್ಕೆ ಅನ್ನೋ ಹಾಗೆ, ರಷ್ಯಾ ಹಿಂದೆ ಸರಿದ್ರೂ ಭಾರತ ಸ್ವದೇಶಿಯಾಗಿ ಇದನ್ನ ಸಾಧಿಸಿ ತೋರಿಸಿದೆ. ಡಿಆರ್‌ಡಿಒದ ಈ  ಸಾಹಸದ ಸ್ಟೋರಿ ಇಲ್ಲಿದೆ.

ಭಾರತದ ಬತ್ತಳಿಕೆ ಸೇರಿಕೊಂಡ ಹೊಸ ಬ್ರಹ್ಮಾಸ್ತ್ರ.. ಚೀನಾಗೆ ಚಳಿಚಳಿ.. ಪಾಕಿಸ್ತಾನಕ್ಕೆ ಪುಕಪುಕ..ಹೈಪರ್ಸಾನಿಕ್ ಮಿಸೆಲ್‌ನ ಟೆಸ್ಟ್ ಸಕ್ಸಸ್.. ಜಗತ್ತಿನ ಮುಂದೆ ಮತ್ತೊಮ್ಮೆ ಬಾಹುಬಲ ಪ್ರದರ್ಶಿಸಿದ ಭಾರತ.. ಈ ಮಿಸೈಲ್ ಮುನ್ನುಗ್ಗಿ ಬಂದ್ರೆ ಮುಗೀತು.. ಇಸ್ರೇಲ್‌ನ ಐರನ್ ಡೋಮ್ ಕೂಡ ಉಡೀಸ್. ಯಾಕೆಂದ್ರೆ, ಶಬ್ದಕ್ಕಿಂತ ಐದು ಪಟ್ಟು ಸ್ಪೀಡಲ್ಲಿ ಸಾಗುತ್ತೆ ಈ ಕ್ಷಿಪಣಿ. ಕೆಲವೇ ಕೆಲವು ರಾಷ್ಟ್ರಗಳಿಗ ಮಾತ್ರ ಸಾಧ್ಯವಾಗಿರೋದು ಈಗ ಭಾರತಕ್ಕೂ ಸಾಧ್ಯವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸಿದೆ ಭಾರತ. ಹಾಗಿದ್ರೆ ಶತ್ರುಗಳ ಎದೆ ನಡುಗಿಸ್ತಾ ಇರೋ ಆ ಮಿಸೈಲ್‌ನ ಪವರ್ ಏನು..? ಅದರ ವಿಶೇಷತೆ ಏನು..? ಅಂತ ನೋಡೋಣ. ಇದೇ ಈ ಹೊತ್ತಿನ ವಿಶೇಷ ಕಿಲ್ಲರ್ ಮಿಸೈಲ್.