ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಅದಾನಿಗೆ ಮತ್ತೊಂದು ಶಾಕ್, ಒಪ್ಪಂದ ರದ್ದುಗೊಳಿಸಿದ ಕೀನ್ಯಾ

By Chethan Kumar  |  First Published Nov 21, 2024, 8:17 PM IST

ಅಮರಿಕದ ಸೌರ ಶಕ್ತಿ ಗುತ್ತಿಗೆ ಒಪ್ಪಂದ ಪಡೆಯಲು 2,500 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಅನ್ನೋ ಗಂಭೀರ ಆರೋಪ ಅದಾನಿ ವಿರುದ್ದ ಕೇಳಿಬಂದಿದೆ. ಅಮೆರಿಕ ಜಿಲ್ಲಾ ನ್ಯಾಯಾಲ ಅರೆಸ್ಟ್ ವಾರೆಂಟ್ ಹೊರಡಿಸಿದ ಬೆನ್ನಲ್ಲೇ ಇದೀಗ ಕೀನ್ಯಾ ಸರ್ಕಾರ, ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿದ್ದ ಒಪ್ಪಂದ ರದ್ದುಗೊಳಿಸಿದೆ.


ಕೀನ್ಯಾ(ನ.21) ಭಾರತದ ಉದ್ಯಮಿ ಗೌತಮ್ ಅದಾನಿ ಇತ್ತೀಚಗೆ ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆಗೆ ಸುಲಿಕುತ್ತಿದ್ದಾರೆ. ಹಿಂಡನ್ ಬರ್ಗ್ ಸುಳಿಯಿಂದ ಮೇಲೆದ್ದ ಬೆನ್ನಲ್ಲೇ ಇತರ ಕೆಲ ಆರೋಪಗಳು ಅದಾನಿ ಮೇಲೆ ಬಂದಿತ್ತು. ಇದೀಗ ಅಮೆರಿಕ ಜಿಲ್ಲಾ ನ್ಯಾಯಾಲಯ ಲಂಚ ವಂಚನೆ ಆರೋಪದಡಿ ಗೌತಮ್ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಆ ಆರೋಪದ ಬೆನ್ನಲ್ಲೇ ಇದೀಗ ಕೀನ್ಯಾ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅದಾನಿ ಗ್ರೂಪ್ ಜೊತೆ ಕಳೆದ ತಿಂಗಳು ಮಾಡಿಕೊಂಡಿದ್ದ ವಹಿವಾಟು ಒಪ್ಪಂದವನ್ನು ರದ್ದುಗೊಳಿಸಿದೆ.

ಕಳೆದ ತಿಂಗಳು ಅದಾನಿ ಗ್ರೂಪ್ ಹಾಗೂ ಕೀನ್ಯಾ ಸರ್ಕಾರದ ಮಹತ್ವದ ಒಪಂದಕ್ಕೆ ಸಹಿ ಹಾಕಿತ್ತು. ಕೀನ್ಯಾ ಪ್ರಮುಖ ವಿಮಾನ ನಿಲ್ದಾಣ ನಿರ್ವಹಣೆಯನ್ನು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲು ಒಪ್ಪಿಗೆ ಸೂಚಿಸಿತ್ತು. ಭಾರತದ ಸೇರಿದಂತೆ ಹಲವು ದೇಶಗಳಲ್ಲಿ ಅದಾನಿ ಗ್ರೂಪ್ ವಿಮಾನ ನಿಲ್ದಾಣ ಹಾಗೂ ಬಂದರನ್ನು ನಿರ್ವಹಣೆ ಮಾಡುವ ಹೊಣೆ ಹೊತ್ತುಕೊಂಡಿದೆ. ಇದೇ ವಹಿವಾಟನ್ನು ಕೀನ್ಯಾಗೂ ವಿಸ್ತರಿಸಿತ್ತು. 30 ವರ್ಷಗಳ ಒಪ್ಪಂದವನ್ನು ಅದಾನಿ ಗ್ರೂಪ್ ಜೊತೆ ಕೀನ್ಯಾ ಮಾಡಿಕೊಂಡಿತ್ತು. ಬರೋಬ್ಬರಿ 735 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಪ್ಪಂದ ದಿಢೀರ್ ರದ್ದಾಗಿದೆ.

Tap to resize

Latest Videos

undefined

ಅದಾನಿಯನ್ನ ಇವತ್ತೇ ಬಂಧಿಸಬೇಕು, ಪ್ರಧಾನಿ ಮೋದಿ ರಕ್ಷಿಸುತ್ತಾರೆ: ರಾಹುಲ್ ಗಾಂಧಿ ಕಿಡಿ

ಈ ಕುರಿತು ಮಾಹಿತಿಯನ್ನು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೋ ಹೇಳಿದ್ದಾರೆ. ಅಮೆರಿಕ ಸೌರ ಶಕ್ತಿ ಗುತ್ತಿಗೆ ಪಡೆಯಲು 2,500 ಕೋಟಿ ರೂಪಾಯಿ ಲಂಚವನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಅನ್ನೋ ಗಂಭೀರ ಆರೋಪ ಅದಾನಿ ಮೇಲೆ ಕೇಳಿಬಂದಿದೆ. ಅಮೆರಿಕ ನ್ಯಾಯಾಲಯ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ. ಗುರುತರ ಆರೋಪ ಹಾಗೂ ಅರೆಸ್ಟ್ ವಾರೆಂಟ್ ಕಾರಣ, ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿರುವ ವಿಮಾನ ನಿಲ್ದಾಣ ನಿರ್ವಹಣೆ ಒಪ್ಪಂದ ಈ ತಕ್ಷಣ ರದ್ದುಗೊಳಿಸುವಂತೆ ಸೂಚಿಸಲಾಗಿದೆ ಎಂದು ರುಟೋ ಹೇಳಿದ್ದಾರೆ.ಕೀನ್ಯಾ ಇಂಧನ ಸಚಿವರು ಹಾಗೂ ಅದಾನಿ ಗ್ರೂಪ್ ಮಹತ್ವದ ಒಪ್ಪಂದ ಸಹಿ ಹಾಕಿತ್ತು. ಆದರೆ ಪರಿಸ್ಥಿತಿ ಭಿನ್ನವಾಗಿರುವ ಕಾರಣ ಒಪ್ಪಂದ ರದ್ದು ಮಾಡಲಾಗುತ್ತಿದೆ ಎಂದು ರುಟೋ ಹೇಳಿದ್ದಾರೆ. 

ಅಮೆರಿಕದಲ್ಲಿ ಅದಾನಿ ಗ್ರೀನ್ ಎನರ್ಜಿ ಗ್ರೂಪ್ ಕಂಪನಿ ಗುತ್ತಿಗೆ ಪಡೆಯಲು ಲಂಚನ ನೀಡಿದೆ ಅನ್ನೋ ಆರೋಪವನ್ನು ಮಾಡಲಾಗಿದೆ. ಗೌತಮ್ ಅದಾನಿ, ಸಂಬಂಧಿ ಸಾಗರ್ ಅದಾನಿ ಸೇರಿದಂತೆ 7 ಮಂದಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ. ಅಮೆರಿಕದಲ್ಲಿ ಸೌರ ಶಕ್ತಿಯ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸಮಾರು 2,500 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪ ಹಾಗೂ ಅರೆಸ್ಟ್ ವಾರೆಂಟ್ ಪ್ರಕಟಗೊಳ್ಳುತ್ತಿದ್ದಂತೆ ಅಮೆರಿಕದಲ್ಲಿ ಬಾಂಡ್ ಮೂಲಕ ಹೂಡಿಕೆ ಸಂಗ್ರಹಿಸುವ ಅದಾನಿ ಗ್ರೂಪ್ ಯೋಜನೆಗೆ ಹಿನ್ನಡೆಯಾಗಿದೆ.

ಅದಾನಿ ಗ್ರೂಪ್ ಗುತ್ತಿಗೆ ಪಡೆಯಲು ಲಂಚ ನೀಡಿದ್ದಾರೆ. ಈ ಮೂಲಕ ಹೂಡಿಕೆದಾರರಿಗೆ ವಂಚಿಸಿದ್ದಾರೆ ಅನ್ನೋದು ಆರೋಪ. ಆದರೆ ಈ ಆರೋಪವನ್ನು ಅದಾನಿ ಗ್ರೂಪ್ ನಿರಾಕರಿಸಿದೆ. ಇದು ಸುಳ್ಳು ಆರೋಪ. ಪ್ರತಿ ವ್ಯವಹಾರದಲ್ಲೂ ಪಾರದರ್ಶಕತೆ ಕಾಪಾಡಿಕೊಂಡಿದ್ದೇವೆ. ಸತ್ಯಕ್ಕೆ ದೂರವಾದ ಆರೋಪಗಳ ವಿರುದ್ದ ಕಾನೂನು ಹೋರಾಟ ಆರಂಭಿಸುತ್ತೇವೆ ಎಂದು ಅದಾನಿ ಗ್ರೂಪ್ ಹೇಳಿದೆ.
 

click me!