ಕೋಟಿಗಟ್ಟಲೆ ದುಡಿದ್ರೂ ಕಡಿಮೆ ಬೆಲೆಯ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

First Published Jul 4, 2023, 1:23 PM IST

ಕೋಟಿಗಟ್ಟಲೆ ದುಡಿದ್ರೂ ಕಡಿಮೆ ಬೆಲೆಯ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ನಟಿ ರಶ್ಮಿಕಾ ಮಂದಣ್ಣ ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸಿನಿಮಾ ಜೊತೆಗೆ ರಶ್ಮಿಕಾ ಬೇರೆ ಬೇರೆ ವಿಚಾರಗಳಿಗೆ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಅಂತ ಬ್ಯುಸಿಯಾಗಿರುವ ರಶ್ಮಿಕಾ ಇದೀಗ ಕೋಟಿಗಟ್ಟಲೇ ಸಂಪಾದನೆ ಮಾಡುತ್ತಿದ್ದಾರೆ. 

ಭಾರತದ ಬಹುಬೇಡಿಕೆಯ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಸ್ಟೈಲ್ ಐಕಾನ್ ರಶ್ಮಿಕಾ ತರಹೇವಾರಿ ಡ್ರೆಸ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ. ಕೋಟಿ ಗಟ್ಟಲೇ ಸಂಪಾದನೆ ಅಂದ್ಮೇಲೆ ಅವರು ಧರಿಸುವ ಬಟ್ಟೆಯ ಬೆಲೆ ಕೂಡ ಅಷ್ಟೆ ದುಬಾರಿ ಇರುತ್ತೆ. 

Latest Videos


ರಶ್ಮಿಕಾ ಧರಿಸಿರುವ ಸೀರೆಯ ಫೋಟೋ ವೈರಲ್ ಆಗಿದೆ. ಇದರ ಬೆಲೆ ಕೇಳಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಟಾಲಿವುಡ್ ಕ್ಲೋಸೆಸ್ಟ್ ಪೇಜ್ ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ರಶ್ಮಿಕಾ ಸೀರೆ ಬೆಲೆ ರಿವೀಲ್ ಆಗಿದೆ. ರಶ್ಮಿಕಾ ಧರಿಸಿರುವ ಸೀರೆಯ ಬೆಲೆ 3549 ರೂಪಾಯಿ ಎಂದು ವರದಿಯಾಗಿದೆ. 

ಕೋಟಿಗಟ್ಟಲೇ ದುಡಿದರು ಇಷ್ಟು ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರಾ ಎಂದು  ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ಕಲಾವಿದರು ಧರಿಸಿರುವ ಬಟ್ಟೆ, ಬ್ಯಾಗ್, ಚಪ್ಪಲಿಗಳ ಬೆಲೆ ದುಬಾರಿಯಾಗಿರುತ್ತದೆ. ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ. ರಶ್ಮಿಕಾ ಕೂಡ ಬಹುತೇಕವಾಗಿ ದುಬಾರಿ ಬಟ್ಟೆಯಲ್ಲೇ ಕಾಣಿಸಿಕೊಳ್ಳುತ್ತಾರೆ. 

ರಶ್ಮಿಕಾ ಸದ್ಯ ಹಿಂದಿಯಲ್ಲಿ ಅನಿಮಲ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಹಿಂದಿಯಲ್ಲಿ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಸೋಲು ಕಂಡಿವೆ. ಮಿಷನ್ ಮಜ್ನು ಮತ್ತು ಗುಡ್‌ಬೈ ಸಿನಿಮಾಗಳು ಸೋಲು ಕಂಡಿವೆ. ಇದೀಗ ಅನಿಮಲ್ ಸಕ್ಸಸ್ಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ನಟಿಸಿದ್ದಾರೆ. 

ಇನ್ನೂ ತೆಲುಗಿನಲ್ಲಿ ರಶ್ಮಿಕಾ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಮತ್ತೆ ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ರೈನ್‌ಬೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

click me!