ಶಾರುಖ್ ಖಾನ್ fanboy ಆಗಿ ಬಂದು ಸ್ಟಾರ್ ಹೀರೋ ಆಗೋವರೆಗೆ: ವಿಕ್ಕಿಕೌಶಲ್‌ ಜರ್ನಿ

First Published | Oct 1, 2024, 4:46 PM IST

ಒಬ್ಬ ನಟನ ಅಭಿಮಾನಿಯಾಗಿ ಬಂದು ಅದೇ ನಟನ ಸಹನಟನಾಗುವವರೆಗೆ ಬೆಳೆಯುವುದು ಸಣ್ಣ ಮಾತೇನಲ್ಲ, ಆದರೆ ಇದನ್ನು ಬಾಲಿವುಡ್ ನಟ ವಿಕ್ಕಿ ಕೌಶಲ್ ಸಾಬೀತುಪಡಿಸಿದ್ದಾರೆ. ಈ ಬಗ್ಗೆ ಒಂದು ಸ್ಟೋರಿ.

2001ರಲ್ಲಿ ಶಾರುಖ್ ಖಾನ್ ಅಭಿಮಾನಿಯಾಗಿ ಅವರ ಸೆಟ್‌ಗೆ ಬಂದು ಆಗಲೇ ಖ್ಯಾತಿಯ ಉತ್ತುಂಗದಲ್ಲಿದ್ದ ಶಾರುಖ್‌ ಖಾನ್‌ ಜೊತೆ ಫೋಟೋ ತೆಗೆಸಿಕೊಂಡಿದ್ದ ನಟ ವಿಕ್ಕಿ ಕೌಶಲ್‌ ಇಂದು ಅದೇ ಸ್ತರಕ್ಕೆ ಬೆಳೆದು ನಿಂತಿರುವ ನಟ. ಈ ವಿಚಾರ ಈಗೇಕೆ ಅಂತಿರಾ ಕಾರಣ ಇದೆ. 

ಇತ್ತೀಚೆಗೆ ಅಬುದಾಭಿಯಲ್ಲಿ ನಡೆದ ಐಫಾ ಉತ್ಸವದಲ್ಲಿ ನಟ ವಿಕ್ಕಿ ಕೌಶಲ್ ಹಾಗೂ ಶಾರುಖ್ ಖಾನ್ ವೇದಿಕೆ ಮೇಲೆ ಜತೆಯಾಗಿ ಎನರ್ಜಿಟಿಕ್‌ ಡಾನ್ಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಸಖತ್ ಮಜಾ ನೀಡಿದರು. ಐಫಾ ಅವಾರ್ಡ್ ಫಂಕ್ಷನ್‌ನ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಶಾರುಖ್ ಖಾನ್ ಜೊತೆ ಜೊತೆಗೆ ತಮ್ಮ ಹಾಸ್ಯ ಪ್ರವೃತ್ತಿಯಿಂದ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಲ್ಲದೇ ನಟ ವಿಕ್ಕಿ ಕೌಶಲ್ ಜೊತೆಗೂಡಿ ಡಾನ್ಸ್ ಮಾಡಿದರು

Tap to resize

ತನ್ನ ನೆಚ್ಚಿನ ನಟನ ಜೊತೆಗೆ 'ಝೂಮೆ ಜೊ ಪಠಾಣ್' ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ ವಿಕ್ಕಿ ಕೌಶಲ್, ಇವರ ಡಾನ್ಸ್‌ ಎನರ್ಜಿಟಿಕ್ ಡಾನ್ಸ್ ವೇದಿಕೆಗೆ ಕಿಚ್ಚು ಹಚ್ಚುವ ಜೊತೆಗೆ ಕತ್ರೀನಾ ಪತಿಯೂ ಆಗಿರುವ ನಟ ವಿಕ್ಕಿ ಕೌಶಲ್ ಅವರು ಬೆಳೆದು ಬಂದ ಹಾದಿಯನ್ನು ನೆನಪು ಮಾಡುವಂತೆ ಮಾಡಿದೆ. ವಿಕ್ಕಿ ಕೌಶಲ್ ಹಾಗೂ ಅವರ ಸೋದರ ಸನ್ನಿ ಕೌಶಲ್ ಅವರು 2002ರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದ್ದರು.

ಆ ವೇಳೆ ನಟ ಶಾರುಖ್ ಖಾನ್ ಅವರು ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದು, ತಮ್ಮ ಕೋ ಸ್ಟಾರ್ ಕರೀನಾ ಕಪೂರ್ ಜೊತೆ 'ಅಶೋಕ' ಸಿನಿಮಾದ ಶೂಟಿಂಗ್‌ನಲ್ಲಿದ್ದರು. ಇತ್ತ ವಿಕ್ಕಿ ಕೌಶಲ್ ಅವರು ತಮ್ಮ ಸೋದರ ಸನ್ನಿ ಜೊತೆ ಈ ಸಿನಿಮಾ ಸೆಟ್‌ಗೆ ಬಂದಿದ್ದು, ಆಗ ವಿಕ್ಕಿ ಇನ್ನು ಸಣ್ಣ ಹುಡುಗ ಕಣ್ಣುಗಳ ತುಂಬಾ ಕುತೂಹಲದ ಜೊತೆ ಕನಸುಗಳನ್ನು ಹೊತ್ತು ಅವರು ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದ್ದರು.

ಈ ಫೋಟೋಗಳನ್ನು ಬರೋಬ್ಬರಿ 10 ವರ್ಷಗಳ ನಂತರ 2022ರಲ್ಲಿ ವಿಕ್ಕಿ ಕೌಶಲ್ ಅವರ ತಂದೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ಮತ್ತೆ ವೈರಲ್ ಆಗುತ್ತಿದ್ದು, ವಿಕ್ಕಿ ಕೌಶಲ್ ಬೆಳೆದು ಬಂದ ಹಾದಿಯನ್ನು ನೆನಪು ಮಾಡುತ್ತಿದೆ. ಆ ಸಂದರ್ಭದಲ್ಲಿ ವಿಕ್ಕಿ ಕೌಶಲ್ 8ನೇ ತೆರಗತಿಯಲ್ಲಿ ಓದುತ್ತಿದ್ದರಂತೆ.  ಅದೇನೇ ಇರಲಿ ಇವರ ಈ ಬೆಳವಣಿಗೆಗೆ ನೆಟ್ಟಿಗರು ಕೂಡ ಸಖತ್ ಕಾಮೆಂಟ್ ಮಾಡುತ್ತಿದ್ದಾರೆ. ಕನಸು ಕಂಡರೆ ಹೀಗೆ ಕಾಣಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ವಿಕ್ಕಿ ಕೌಶಲ್ ಅದೃಷ್ಟದ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಕೆಲವರು ತುಸು ವ್ಯಂಗ್ಯವಾಡಿದ್ದಾರೆ. ಈ ಮುಖಕ್ಕೆ ಕತ್ರೀನಾ ಕೈಫ್ ಬೀಳ್ತಾರೆ ಅಂತಾ ಯಾರಾದ್ರೂ ಊಹೆಯಾದ್ರೂ ಮಾಡಿದ್ರಾ? ಇವರಿಗೆ ಪ್ರಯತ್ನದ ಜೊತೆ ಅದೃಷ್ಟವೂ ಅಷ್ಟೇ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಯಾರೇನೇ ಅಂದರೂ ವಿಕ್ಕಿ ಕೌಶಲ್ ಬೆಳವಣಿಗೆ ಮೆಚ್ಚುವಂತದ್ದೇ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ. 

Latest Videos

click me!