ಇಂಟರ್‌ ಕೋರ್ಸ್‌ ವೇಳೆ ಬ್ಲೀಡಿಂಗ್, ನರ್ಸ್‌ ಸಾಯೋವರೆಗೂ ಇಂಟರ್ನೆಟ್‌ ನಲ್ಲಿ ಔಷಧಿ ಹುಡುಕ್ತಿದ್ದ ಪ್ರೇಮಿ

By Roopa HegdeFirst Published Oct 1, 2024, 4:13 PM IST
Highlights

ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳ ಪ್ರಾಣ ಆಕೆ ಪ್ರೇಮಿ ಮುಂದೆಯೇ ಹೋಗಿದೆ. ಆತ ಮಾಡಿದ ಒಂದು ತಪ್ಪು ಆಕೆಯ ಸಾವಿಗೆ ಕಾರಣವಾಗಿದೆ. ಇಂಟರ್ ಕೋರ್ಸ್ ವೇಳೆ ಬ್ಲೀಡಿಂಗ್ ಆದ್ರೂ ನಿರ್ಲಕ್ಷ್ಯ ಮಾಡಿದ್ದೇ ದೊಡ್ಡ ತಪ್ಪಾಗಿದೆ. 
 

ಗೂಗಲ್ ನಲ್ಲಿ ಔಷಧಿ (Google Medicine)  ಹುಡುಕೋದು ಈಗ ಮಾಮೂಲಿ. ವೈದ್ಯರಿಗಿಂತ ಜನರು ಗೂಗಲ್ ಮೇಲೆ ಹೆಚ್ಚು ಭರವಸೆ ಇಟ್ಟಿದ್ದಾರೆ. ಎಲ್ಲ ಕೈಮೀರಿ ಹೋಯ್ತು ಎನ್ನುವ ಸಮಯದಲ್ಲಿ ವೈದ್ಯ (doctor) ರ ಬಳಿಗೆ ಓಡ್ತಾರೆ. ಈ ವ್ಯಕ್ತಿ ತನ್ನ ಹುಚ್ಚಾಟಕ್ಕೆ ಪ್ರೇಯಸಿ ಪ್ರಾಣ ತೆಗೆದಿದ್ದಾನೆ. ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಬಿದ್ದು, ನೋವಿನಿಂದ ಒದ್ದಾಡ್ತಿದ್ದರೆ ಆಕೆ ಪ್ರೇಮಿ ಮಾತ್ರ ಇಂಟರ್ನೆಟ್ ಹಿಡಿದು, ಬ್ಲೀಡಿಂಗ್ (Bleeding) ನಿಲ್ಲಿಸೋದು ಹೇಗೆ ಅಂತ ಸರ್ಚ್ ಮಾಡ್ತಿದ್ದ. ಆ ಮಹಾನುಭಾವನ ಕೆಲಸಕ್ಕೆ ನರ್ಸಿಂಗ್ ವಿದ್ಯಾರ್ಥಿನಿ ಪ್ರಾಣ ಬಿಟ್ಟಿದ್ದಾಳೆ. ಇಂಟರ್ ಕೋರ್ಸ್ (Intercourse) ವೇಳೆ ಅತಿ ಹೆಚ್ಚು ಬ್ಲೀಡಿಂಗ್ ಆಗಿದ್ದೇ ಆಕೆ ಸಾಯಲು ಕಾರಣವಾಗಿದೆ. 

ಘಟನೆ ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ ನಡೆದಿದೆ. ಪ್ರೇಮಿ ಜೊತೆ ಒಂದಾಗಿ ಜೀವನ ನಡೆಸುವ ಕನಸು ಕಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ (Nursing Student) ಶಾರೀರಿಕ ಸಂಬಂಧ ಬೆಳೆಸುವ ವೇಳೆ ಸಾವನ್ನಪ್ಪಿದ್ದಾಳೆ. ಇಂಟರ್ ಕೋರ್ಸ್ ವೇಳೆ ರಕ್ತಸ್ರಾವವಾಗಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಬದಲು ಪ್ರೇಮಿ ಮನೆಯಲ್ಲೇ ಮದ್ದು ಮಾಡಲು ಮುಂದಾಗಿದ್ದಾನೆ. 26 ವರ್ಷದ ಯುವಕ, ತನ್ನ ದಡ್ಡತನದಿಂದ ಯುವತಿಯ ಪ್ರಾಣ ತೆಗೆದಿದ್ದಾನೆ. 

Latest Videos

ದಂಪತಿಗಳು ಸಾವಿನಲ್ಲೂ ಒಂದಾದ ಅಪೂರ್ವ ಘಟನೆ: ಹೃದಯಾಘಾತದಿಂದ ಪತಿ, ಪತ್ನಿ ಇಬ್ಬರು ಸಾವು

ವಿದ್ಯಾರ್ಥಿನಿ ಮೂರು ವರ್ಷಗಳ ಹಿಂದೆ ಯುವಕನನ್ನು ಭೇಟಿಯಾಗಿದ್ದಳು. ಆದ್ರೆ ಎರಡು ವರ್ಷಗಳಿಂದ ಇಬ್ಬರೂ ಸಂಪರ್ಕದಲ್ಲಿರಲಿಲ್ಲ. ಕಳೆದ ಏಳು ತಿಂಗಳ ಹಿಂದೆ ಇಬ್ಬರೂ ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಸೆಪ್ಟೆಂಬರ್ 23 ರಂದು ಇಬ್ಬರೂ ವೈಯಕ್ತಿಕ ಸಮಯ ಕಳೆಯಲು ನಿರ್ಧರಿಸಿದ್ದರು. ಹೊಟೇಲ್ ರೂಮ್ ಬುಕ್ ಮಾಡಿದ ಜೋಡಿ ಅಲ್ಲಿಯೇ ಶಾರೀರಿಕ ಸಂಬಂಧ ಬೆಳೆಸಿದ್ದಾರೆ. ಇಂಟರ್ ಕೋರ್ಸ್ ಮಧ್ಯೆಯೇ ವಿದ್ಯಾರ್ಥಿನಿಗೆ ರಕ್ತಸ್ರಾವ ಶುರುವಾಗಿದೆ. ಆದ್ರೆ ಯುವಕ ಇದನ್ನು ನಿರ್ಲಕ್ಷ್ಯ ಮಾಡಿದ್ದಾನೆ. ಬ್ಲೀಡಿಂಗ್ ಆಗ್ತಿದ್ದರೂ ಸಂಬಂಧ ಬೆಳೆಸಿದ್ದ ಯುವಕ. ಬ್ಲೀಡಿಂಗ್ ಹೆಚ್ಚಾಗುತ್ತಿದ್ದಂತೆ ಯುವಕನಿಗೆ ಏನು ಮಾಡ್ಬೇಕು ಎಂಬುದು ಗೊತ್ತಾಗಲಿಲ್ಲ. ಮೊಬೈಲ್ ಹಿಡಿದು, ಇಂಟರ್ನೆಟ್ ನಲ್ಲಿ ಇದಕ್ಕೆ ಏನು ಮಾಡ್ಬೇಕು ಎಂಬುದನ್ನು ಸರ್ಚ್ ಮಾಡಲು ಶುರು ಮಾಡಿದ್ದಾನೆ. ಆಂಬುಲೆನ್ಸ್ ಗಾಗ್ಲಿ ಇಲ್ಲ ವೈದ್ಯರಿಗಾಗ್ಲಿ ಈತ ಕರೆ ಮಾಡಿಲ್ಲ. 60 ರಿಂದ 90 ನಿಮಿಷಗಳ ಕಾಲ ವಿದ್ಯಾರ್ಥಿನಿಗೆ ನಿರಂತರ ರಕ್ತಸ್ರಾವವಾಗಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಯುವಕ ನಂತ್ರ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದಾನೆ. ಆತನ ಖಾಸಗಿ ವಾಹನಕ್ಕೆ ಕಾದಿದ್ದಾನೆ. ಆದ್ರೆ ರಕ್ತಸ್ರಾವ ಅತಿಯಾದ ಕಾರಣ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದಲ್ಲಿ ಹಾಗೂ ರಕ್ತ ನೀಡಿದ್ದರೆ ಆಕೆ ಬದುಕುವ ಸಾಧ್ಯತೆಯಿತ್ತು. ಯುವಕ ಆಂಬ್ಯುಲೆನ್ಸ್ ನಲ್ಲಿ ವಿದ್ಯಾರ್ಥಿನಿ ಕರೆದೊಯ್ದಿದ್ದರೂ ಅಲ್ಲಿ ಆಕೆಗೆ ತುರ್ತು ಚಿಕಿತ್ಸೆ ಸಿಗ್ತಿತ್ತು.

ಓದಿದ್ದೀರಿ, ಕೆಲಸ ಹುಡುಕಿಕೊಳ್ಳಿ: ಡಿವೋರ್ಸ್ ಕೇಸಲ್ಲಿ ಮಹಿಳೆಗೆ ಸಿಜೆ ಅಡ್ವೈಸ್

ಆರೋಪಿ ಹೋಟೆಲ್‌ನಿಂದ ಹೊರಡುವ ಮೊದಲು ಸಾಕ್ಷ್ಯವನ್ನು ಮುಚ್ಚಿಡಲು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದ. ಆಸ್ಪತ್ರೆಗೆ ಬಂದ ಕೆಲವೇ ನಿಮಿಷದಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ವಿದ್ಯಾರ್ಥಿನಿ ಮರಣೋತ್ತರ ಪರೀಕ್ಷೆ ವರದಿ ಪ್ರಕಾರ, ಆಕೆ ಖಾಸಗಿ ಭಾಗಕ್ಕೆ ಗಾಯವಾಗಿರುವುದು ಸ್ಪಷ್ಟವಾಗಿದೆ. ಇದರಿಂದ ರಕ್ತಸ್ರಾವವಾಗಿದೆ. ಪೊಲೀಸರು, ಯುವಕನನ್ನು ವಿದ್ಯಾರ್ಥಿನಿ ಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯ ಆರೋಪಿಯನ್ನು ಅಕ್ಟೋಬರ್ 4 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಶಾರೀರಿಕ ಸಂಬಂಧ ಬೆಳೆಸುವ ವೇಳೆ ಅಲ್ಪಸ್ವಲ್ಪ ರಕ್ತಸ್ರಾವವಾಗುವುದು ಸಾಮಾನ್ಯ. ಅದು ಅತಿಯಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ತುರ್ತು ಚಿಕಿತ್ಸೆ ಅಗತ್ಯವಿರುತ್ತದೆ ಎಂಬ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಿಗೂ ತಿಳಿದಿರಬೇಕು. 

click me!