ಅವಮಾನ ಆಗಿದೆ ಅನ್ನೋದು ವೈಯಕ್ತಿಕ, ಸಂಸ್ಥೆ ಮೇಲೆ ಆಪಾದನೆ ಹಾಕೋದು ಅಪರಾಧ: ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್!

Published : Oct 01, 2024, 04:46 PM IST
ಅವಮಾನ ಆಗಿದೆ ಅನ್ನೋದು ವೈಯಕ್ತಿಕ, ಸಂಸ್ಥೆ ಮೇಲೆ ಆಪಾದನೆ ಹಾಕೋದು ಅಪರಾಧ: ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್!

ಸಾರಾಂಶ

 ಬಾಯಿಗೆ ಬಂದ ಹಾಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ಕಿಚ್ಚ ಸುದೀಪ್. ಯಾಕೆ ನೆಗೆಟಿವ್ ಹರಡಿಸುತ್ತಿದ್ದಾರೆ..   

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸುಮಾರು 10 ವರ್ಷಗಳಿಂದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಪ್ರತಿ ವೀಕೆಂಡ್ ಸ್ಪರ್ಧಿಗಳ ಜೊತೆ ಮಾತನಾಡಿ ಅವರ ಕಷ್ಟ ಸುಖಗಳನ್ನು ವಿಚಾರಿಸಿಕೊಳ್ಳುವ ಸುದೀಪ್‌ರನ್ನು ನೋಡಿದರೆ ವೀಕ್ಷಕರಿಗೆ ಖುಷಿ. ತುಂಬಾ ಗೌರವದಿಂದ ಸೇಫ್‌ ಆಂಡ್ ಎಲಿಮಿನೇಟ್ ಮಾಡುವ ಕಿಚ್ಚ ಸುದೀಪ್‌ರನ್ನು ಅದೆಷ್ಟೋ ಮಂದಿ ಹೊಗಳಿದ್ದಾರೆ. ಆದರೆ ಕಳೆದ ವರ್ಷ ಬಿಗ್ ಬಾಸ್ ಸೀಸನ್ 10 ಗ್ರ್ಯಾಂಡ್ ಓಪನಿಂಗ್ ದಿನ ನಡೆದ ವೋಟಿಂಗ್‌ನಿಂದ ಕೆಲವರು ಬೇಸರ ಮಾಡಿಕೊಂಡು ನೆಗೆಟಿವ್ ಆಗಿ ಮಾತನಾಡಿದ್ದಾರೆ. ಈ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. 

ಸುದೀಪ್ ಉತ್ತರ:

'ಕಳೆದ ವರ್ಷ ಬಿಗ್ ಬಾಸ್‌ ಮನೆಗೆಂದು ಹೋದವರಲ್ಲಿ ಯಾರಿಗಾದರೂ ನೋವಾಗಿದ್ದರೆ ಬೇಜಾರು ಆಗಿದ್ದರೆ ಖಡ ಖಂಡಿತವಾಗಲೂ ಯಾವ ಜಾನೆಲ್‌ನಿಂದ ಅವರಿಗೆ ನೋಯಿಸಬೇಕು ಅನ್ನೋ ಉದ್ದೇಶ ಇರಲ್ಲಮ್ಮ. ಈಗ ಮಾರ್ಕೆಟ್‌ನಲ್ಲಿ ಒಂದು ಸಿನಿಮಾವನ್ನು ಬಿಡುತ್ತೀನಿ ಅಂದುಕೊಳ್ಳಿ, ಸಿನಿಮಾ ಚೆನ್ನಾಗಿ ಓಡಿಲ್ಲ ಅಂತ ಅವಮಾನ ಮಾಡಿದ್ದರು ವೀಕ್ಷಕರು ಪಿಕ್ಚರ್ ಸರಿಯಾಗಿ ಓಡಿಸಲಿಲ್ಲ ಅಥವಾ ಮತ್ತೆ ಯಾರೋ ವಿಮರ್ಶೆ ಸರಿಯಾಗಿ ಬರೆಯಲಿಲ್ಲ ಅಂದ್ರೆ ಹೇಗೆ? ಇಲ್ಲಿ ಇಳಿದಿದ್ದೀವಿ ಅಂದ್ಮೇಲೆ ಅಂತೆ ಕಂತೆ ನೋವುಗಳನ್ನು ಎದುರಿಸಬೇಕಾಗುತ್ತದೆ. ಬಿಗ್ ಬಾಸ್‌ಗೆ ಬಂದ ಮೇಲೆ ಅದರದ್ದೇ ಆದ ರೂಲ್ಸ್‌ಗಳು ಇರುತ್ತದೆ..ಅದು ಗೊತ್ತಿದ್ದೂ ಬಂದ ಮೇಲೆ, ಗೊತ್ತಿದ್ದೂ ಆಟವಾಡಿದ ಮೇಲೆ ..ಅದು ವೇದಿಕೆಯಲ್ಲಿ ಬಂದ ಮೇಲೆ ಅದನ್ನು ನಿಮ್ಮ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅಂದಾಗ ಅವಮಾನವಾಗಿ ತೆಗೆದುಕೊಳ್ಳುವುದು ಬಿಡುವುದು ವೈಯಕ್ತಿಕ. ಒಂದು ಸಂಸ್ಥೆ ಮೇಲೆ ಆಪಾಧನೆ ಹಾಕುವುದು ದೊಡ್ಡ ಅಪರಾಧ ಏಕೆಂದರೆ ರೂಲ್ಸ್‌ ಹೇಳದೆ ಯಾರೂ ಯಾರನ್ನು ಕರೆದುಕೊಂಡು ಬರುವುದಿಲ್ಲ. ನಿಮ್ಮನ್ನು ಕರೆದು ಸರ್ಪ್ರೈಸ್ ಆಗಿ ಅವಮಾನ ಮಾಡಿದರೆ ಆಗ ಮಾತನಾಡೋಣ' ಎಂದು ಕಿಚ್ಚ ಸುದೀಪ್ ಉತ್ತರಿಸಿದ್ದಾರೆ.

ಸತ್ಯ ಧರಿಸಿರುವ ವಿಗ್ ತೆಗೆಯಲು ಕಣ್ಣೀರಿಟ್ಟ ಗೌತಮಿ ಜಾದವ್; ಕೊಂಕು ಮಾಡಿದವರಿಗೂ ಆಶ್ಚರ್ಯ!

ಏನಾಗಿತ್ತು:

ಕಳೆದ ವರ್ಷ ಸೀಸನ್ 10ರಲ್ಲಿ ಸ್ಪರ್ಧಿಗಳ ಎಂಟ್ರಿ ವಿಭಿನ್ನವಾಗಿತ್ತು. ವೇದಿಕೆ ಮೇಲೆ ಸುದೀಪ್ ಒಬ್ಬೊಬ್ಬರಾಗಿ ಸ್ಪರ್ಧಿಗಳನ್ನು ಬರ ಮಾಡಿಕೊಳ್ಳಲಿದ್ದಾರೆ, ಬಂದು ಮಾತುಕತೆ ನಡೆದ ಮೇಲೆ ಆ ವ್ಯಕ್ತಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಲು ಯೋಗ್ಯತೆ ಇದ್ದರೆ ಅಲ್ಲಿದ್ದ ಸಾರ್ವಜನಿಕರು ವೋಟ್ ಹಾಕಬೇಕಿತ್ತು. ಕೆಲವರು ಹೆಚ್ಚಿಗೆ ವೋಟ್ ಪಡೆದು ಎಂಟ್ರಿ ಆಗಿದ್ದಾರೆ ಇನ್ನೂ ಕೆಲವರು ಸ್ವಲ್ಪ ವೋಟ್ ಪಡೆದು ವೇಟಿಂಗ್‌ನಲ್ಲಿದ್ದರು ಆದರೆ ಕೆಲವರು ಕಡಿಮೆ ವೋಟ್ ಪಡೆದು ಹೊರ ನಡೆದರು. ಈ ವೋಟಿಂಗ್ ಪ್ರಕ್ರಿಯೆ ಬಗ್ಗೆ ಗೊತ್ತಿರಲಿಲ್ಲ ನನಗೆ ಮೋಸ ಆಗಿದೆ ಎಂಚು ಚಿತ್ರಾಲ್ ರಂಗಸ್ವಾಮಿ ಧ್ವನಿ ಎತ್ತಿದ್ದರು. ಬಿಗ್ ಬಾಸ್ ವಿರುದ್ಧ ತಿರುಗಿಬಿದ್ದ ವಿಡಿಯೋಗಳು ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟು ಒಂದೆರಡು ವಾರ ಚೆನ್ನಾಗಿ ಆಟವಾಡಿ ಎಲಿಮಿನೇಟ್ ಆಗಿ ಹೊರ ಬಂದ ರಕ್ಷಕ್ ಬುಲೆಟ್ ಕೂಡ ಆಗಾಗ ನೆಗೆಟಿವ್ ಕಾಮೆಂಟ್ ಪಾಸ್ ಮಾಡುತ್ತಿದ್ದರು. ಈ ನೆಗೆಟಿವ್ ಮಾತನಾಡುವವರಿಗೆ ಸುದೀಪ್ ಪ್ರತಿಕ್ರಿಯೆ ನೀಡುವುದು ಎಂದು ಸ್ಪಷ್ಟವಾಗಿದೆ. 

15 ವರ್ಷಗಳ ನಂತರ ಮನೆಗೆ ಹೊಸ ದುಬಾರಿ ಫ್ರಿಡ್ಜ್‌ ತಂದ ವರುಣ್ ಆರಾಧ್ಯ; ಜನರ ಬಿಕ್ಷೆ ಎಂದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!