ಹುಟ್ಟುಹಬ್ಬ ಬೇಡವೆಂದ ರಚಿತಾ ರಾಮ್: ದರ್ಶನ್ ಜೈಲಿಗೆ ಹೋಗಿದ್ದಕ್ಕೆ ಅಂತ ಗೊತ್ತು ಬಿಡಿ ಎಂದ ಫ್ಯಾನ್ಸ್!

By Roopa Hegde  |  First Published Oct 1, 2024, 2:02 PM IST

ಸ್ಯಾಂಡಲ್ವುಡ್ ನಟಿ ರಚಿತಾ ರಾಮ್, ಇದೇ ಅಕ್ಟೋಬರ್ 3ರಂದು 32ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಗುಳಿಕೆನ್ನೆ ಬೆಡಗಿ ಎಂದೇ ಪ್ರಸಿದ್ಧಿಯಾಗಿರುವ ನಟಿ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದೇನೆ ಎನ್ನುವ ಮೂಲಕ ಸೆಲೆಬ್ರೇಷನ್ ಬೇಡ ಎಂದಿದ್ದಾರೆ.
 


ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Sandalwood Dimple Queen Rachita Ram) ಅಕ್ಟೋಬರ್ 3ರಂದು 32ನೇ ವರ್ಷಕ್ಕೆ ಕಾಲಿಡಲಿದ್ದಾರೆ. ರಚ್ಚು ಬರ್ತ್ ಡೇ ಅಂತ ಫ್ಯಾನ್ಸ್ ಖುಷಿಯಾಗಿದ್ರೆ ಈ ಬಾರಿ ಹುಟ್ಟುಹಬ್ಬ (Birthday) ಆಚರಿಸಿಕೊಳ್ಳಲ್ಲ ಅಂತ ರಚಿತಾ ರಾಮ್ ಘೋಷಣೆ ಮಾಡಿ, ಫ್ಯಾನ್ಸ್ ನಿರಾಸೆಗೊಳಿಸಿದ್ದಾರೆ. ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಕಲಾವಿದರ ಬರ್ತ್ ಡೇ ಸೆಲಬ್ರೇಷನ್ ನಿಂತಿದೆ. ಅನೇಕ ಕಲಾವಿದರು, ಒಂದಲ್ಲ ಒಂದು ಕಾರಣ ಹೇಳಿ ತಮ್ಮ ಬರ್ತ್ ಡೇಯನ್ನು ರದ್ದು ಮಾಡಿದ್ದರು. ಈಗ ಈ ಪಟ್ಟಿಗೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಕೂಡ ಸೇರಿದ್ದಾರೆ.

ಸೋಶಿಯಲ್ ಮೀಡಿಯಾ (Social Media)ದಲ್ಲಿ ರಚಿತಾ ರಾಮ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ರಚಿತಾ ರಾಮ್, ಎಲ್ಲರಿಗೂ ನಮಸ್ಕಾರ. ಈ ಬಾರಿ ಚಿತ್ರೀಕರಣ ಇರುವ ಕಾರಣ, ಅಕ್ಟೋಬರ್ 3ರಂದು ಹುಟ್ಟುಹಬ್ಬದ ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ. ಎಲ್ಲರ ಕ್ಷಮೆಯಾಚಿಸುತ್ತೇನೆ. ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಲವ್ ಯು ಆಲ್ ಎಂದಿರುವ ರಚಿತಾ ರಾಮ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. 

Tap to resize

Latest Videos

undefined

ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡಗೆ ಊಸರವಳ್ಳಿ ಪಟ್ಟ, ಗೌತಮಿ ಮೇಲೆ ಸಾಫ್ಟ್ ಕಾರ್ನರ್ಡ್

ದರ್ಶನ್ ಜೈಲಿಗೆ ಹೋಗಿದ್ದಕ್ಕೆ ರಚಿತಾ ರಾಮ್ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಈ ಸತ್ಯವನ್ನು ಫ್ಯಾನ್ಸ್ ಕೂಡ ಹೇಳಿದ್ದಾರೆ. ದರ್ಶನ್ ಜೈಲಿಗೆ ಹೋಗಿದ್ದಕ್ಕೆ ನೀವು ಬರ್ತ್ ಡೇ ಆಚರಿಸಿಕೊಳ್ತಿಲ್ಲ ಎನ್ನುವುದು ಗೊತ್ತು ಮೇಡಂ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಈ ತ್ಯಾಗ ದರ್ಶನ್ ಗಾಗಿ, ಅವರು ಬಂದ್ಮೇಲೆ ಹುಟ್ಟುಹಬ್ಬವನ್ನು ಜೋರಾಗಿ ಮಾಡ್ಕೊಳ್ಳಿ ಎಂದು ಫ್ಯಾನ್ಸ್ ಸಲಹೆ ನೀಡಿದ್ದಾರೆ. ಇದ್ರ ಜೊತೆ ಬಹುತೇಕ ಫ್ಯಾನ್ಸ್, ಈಗ್ಲೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

1992, ಅಕ್ಟೋಬರ್ 3ರಂದು ಜನಿಸಿರುವ ರಚಿತಾ ರಾಮ್, ಕನ್ನಡದ ಪ್ರಸಿದ್ಧ ಹಾಗೂ ಬಹುಬೇಡಿಕೆಯ ನಟಿ. ಅರಸಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದ ರಚಿತಾ ರಾಮ್, ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡಿದ್ರು. ದರ್ಶನ್ ಬ್ಯಾನರ್ ನಲ್ಲಿ ನಟಿಸಿದ ರಚಿತಾ ರಾಮ್,  ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ನಟಿಸಿದ್ದರು. ದಿಲ್ ರಂಗೀಲಾ, ಅಂಬರೀಷ, ರನ್ನ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಚಿತಾ ರಾಮ್, ರಿಯಾಲಿಟಿ ಶೋಗಳ ಜಡ್ಜ್ ಆಗಿ ಮಿಂಚಿದ್ದಾರೆ. ಭರತನಾಟ್ಯ ಕಲಾವಿದೆ ರಚಿತಾ ರಾಮ್, ಬಹುತೇಕ ಎಲ್ಲ  ಸೂಪರ್ ಹಿರೋಗಳಿಗೆ ಜೋಡಿಯಾಗಿದ್ದಾರೆ. ಸಂಜು ವೆಡ್ಸ್ ಗೀತಾ 2 ಶೂಟಿಂಗ್ ಮುಗಿಸಿರುವ ರಚಿತಾ ರಾಮ್, ಈಗ ಹೊಸ ನಟರಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ಝೈದ್ ಖಾನ್ ಜೊತೆ ಕಲ್ಟ್ ಚಿತ್ರದಲ್ಲಿ ನಟಿಸಲಿದ್ದಾರೆ. ಕಲ್ಟ್, ಝೈದ್ ಖಾನ್ ಎರಡನೇ ಚಿತ್ರ.

ಹೆರಿಗೆ ನಂತ್ರ ದೀಪಿಗೆ ಕಾಡ್ತಿದ್ಯಾ ಒಂಟಿತನ..? ರಣವೀರ್ ಬಗ್ಗೆ ಇಂಥ ಸ್ಟೋರಿ ಹಾಕಿದ ಬೆಡಗಿ

ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡವರಲ್ಲಿ ರಚಿತಾ ರಾಮ್ ಕೂಡ ಒಬ್ಬರು. ಪರಪ್ಪನ ಅಗ್ರಹಾರಕ್ಕೆ ದರ್ಶನ್ ಭೇಟಿಗೆ ಹೋಗಿದ್ದ ಅವರು, ರಾಜನನ್ನು ರಾಜನಂತೆ ನೋಡಿಕೊಳ್ಳಲು ಬಯಸ್ತೇನೆ ಎಂದಿದ್ದರು. ಅಲ್ಲದೆ ಒಂದಿಷ್ಟು ಡ್ರೈಫ್ರೂಟ್ಸ್, ಹಣ್ಣಗಳನ್ನು ದರ್ಶನ್ ಗೆ ನೀಡಿ, ಕಣ್ಣಿರುಹಾಕಿ ಬಂದಿದ್ದರು. ದರ್ಶನ್ ನನಗೆ ಗುರು ಎನ್ನುವ ರಚಿತಾ ರಾಮ್, ಅವರ ಋಣ ತೀರಿಸಲು ಸಾಧ್ಯವಿಲ್ಲ ಅಂತ ಆಗಾಗ ಹೇಳ್ತಿರುತ್ತಾರೆ. ಈಗ ದರ್ಶನ್ ಗಾಗಿ ತಮ್ಮ ಬರ್ತ್ ಡೇ ರದ್ದು ಮಾಡಿದ್ದು, ಚಿತ್ರೀಕರಣದ ನೆಪ ಹೇಳಿದ್ದಾರೆ ರಚಿತಾ ರಾಮ್.  

click me!