ಅಂಬಾನಿ ಮನೆ ಅಡುಗೆ ಕೆಲಸಗಾರನ ಸಂಬಳ ಎಷ್ಟಿದೆ? ಖಾಸಗಿ ಕಂಪನಿ ಉದ್ಯೋಗಿಗಳಿಗಿಂತ ಡಬಲ್

By Chethan Kumar  |  First Published Oct 1, 2024, 4:41 PM IST

ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆಯಲ್ಲಿ ಅಡುಗೆ ಕೆಲಸ ಮಾಡುವಾತನ ವೇತನ ಕೇಳಿದರೆ ಅಚ್ಚರಿಯಾಗುವುದು ಖಚಿತ. ಈತನ ಸ್ಯಾಲರಿ ಹಲವು ಖಾಸಗಿ ಕಂಪನಿಗಳ ಮ್ಯಾನೇಜರ್, ಬಾಸ್ ಸ್ಯಾಲರಿಗಿಂತ ಡಬಲ್. ಸಿಂಪಲ್ ಅಡುಗೆ ಮಾಡಲು ಅಂಬಾನಿ ತನ್ನ ಕುಕ್‌ಗೆ ನೀಡುತ್ತಿರುವ ಸ್ಯಾಲರಿ ಎಷ್ಟು?


ಮುಂಬೈ(ಅ.01) ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿ. ಅಂಬಾನಿ ಹಾಗೂ ಕುಟುಂಬದ ಲೈಫ್ ಸ್ಟೈಲ್ ಕೂಡ ಐಷಾರಾಮಿ. ಪ್ರತಿ ದಿನ ಕೋಟಿ ಕೋಟಿ ರೂಪಾಯಿ ಆದಾಯ, ನೂರಾರು ಕೋಟಿ ರೂಪಾಯಿ ಮನೆ, ಓಡಾಡಲು ದುಬಾರಿ ಕಾರು ಸೇರಿದಂತೆ ಎಲ್ಲವೂ ಐಷಾರಾಮಿತನ. ಆದರೆ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಜೀವನ ತುಂಬಾ ಸರಳ. ಅದರಲ್ಲೂ ಮುಕೇಶ್ ಅಂಬಾನಿ ಅತ್ಯಂತ ಸರಳ ಲೈಫ್ ಮುನ್ನಡೆಸುತ್ತಿದ್ದಾರೆ. ಮುಕೇಶ್ ಅಂಬಾನಿಯ ಆ್ಯಂಟಿಲಿಯ ಮನೆಯ ಸಿಬ್ಬಂದಿಗಳು ಕೋಟಿ, ಲಕ್ಷ ರೂಪಾಯಿಯಲ್ಲೇ ವೇತನ ಪಡೆಯುತ್ತಿದ್ದಾರೆ. ಈ ಪೈಕಿ ಮುಕೇಶ್ ಹಾಗೂ ನೀತಾ ಅಂಬಾನಿಗೆ ಅಡುಗೆ ತಯಾರಿಸುವ ಕೆಲಸಗಾರ ತಿಂಗಳ ವೇತನ ಹಲವು ಖಾಸಗಿ ಕಂಪನಿಗಳ ಮ್ಯಾನೇಜರ್‌ಗಿಂತ ದುಪ್ಪಟ್ಟು. 

ಮುಕೇಶ್ ಅಂಬಾನಿ ಶ್ರೀಮಂತ ಉದ್ಯಮಿ ನಿಜ. ಆದರೆ ಮುಕೇಶ್ ಅಂಬಾನಿ ಆಹಾರ ಪದ್ಧತಿ ಅತ್ಯಂತ ಸರಳ. ಮನೆ ಅಡುಗೆಯನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ದಾಲ್, ರೋಟಿ, ರೈಸ್ ಹೆಚ್ಚು ಬಳಕೆ ಮಾಡುತ್ತಾರೆ. ಪ್ರತಿ ಭಾನುವಾರ ಇಡ್ಲಿ ಸಾಂಬಾರ್ ತಿನ್ನಲು ಇಷ್ಟಪಡುತ್ತಾರೆ. ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಅಂಬಾನಿ ಹೆಚ್ಚು ಇಷ್ಟುಪಡುತ್ತಾರೆ. ತಮ್ಮ ಡೈಯೆಟ್‌ನಲ್ಲಿ ಅಂಬಾನಿ ಮನೆ ಆಹಾರಕ್ಕೆ ಪ್ರಮುಖ ಪ್ರಾತಿನಿಧ್ಯ ನೀಡಿದ್ದಾರೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ ಈ ಅಡುಗೆ ತಯಾರಿಸುವ ಕೆಲಸಗಾರನಿಗೆ ಅಂಬಾನಿ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿದ್ದಾರೆ.

Tap to resize

Latest Videos

undefined

ಹಬ್ಬದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಸ್ಟರ್‌ಸ್ಟ್ರೋಕ್, ಕೇವಲ 13 ಸಾವಿರ ಇಎಂಐನಲ್ಲಿ ಐಫೋನ್ 16 !

ಹೌದು, ಅಂಬಾನಿ ಆ್ಯಂಟಿಲಿಯಾ ಮನೆಯ ಅಡುಗೆ ಕೆಲಗಾರನ ಮಾಸಿಕ ಸಂಬಂಳ 2 ಲಕ್ಷ ರೂಪಾಯಿ, ವಾರ್ಷಿಕ ವೇತನ 24 ಲಕ್ಷ ರೂಪಾಯಿ. ಇಷ್ಟೇ ಅಲ್ಲ, ಇದರ ಜೊತೆಗೆ ಆರೋಗ್ಯ ವಿಮೆ ಸೇರಿದಂತೆ ಇತರ ಹಲವು ಸೌಲಭ್ಯಗಳಿವೆ. ಅಡುಗೆ ಕೆಲಸಗಾರನ ಕುಟುಂಬಕ್ಕೆ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಸೇರಿದಂತೆ ಇತರ ಕೆಲ ಪ್ರಯೋಜನಗಳನ್ನು ಅಂಬಾನಿ ನೀಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಕೇಶ್ ಅಂಬಾನಿ ಬೆಳಗ್ಗೆ ತಿಂಡಿಗೆ ಇಡ್ಲಿ ಸಾಂಬಾರ್, ಪಪ್ಪಾಯ ಜ್ಯೂಸ್ ಸೇರಿದಂತೆ ಇತರ ಆಹಾರಗಳನ್ನು ಸೇವಿಸುತ್ತಾರೆ. ಇದರ ಜೊತೆಗೆ ಪಾಪ್ಡಿ ಚಾಟ್ಸ್, ಸೇವ್ ಪುರಿ ಸೇರಿದಂತೆ ಗುಜರಾತಿ ತಿನಿಸುಗಳನ್ನು ಇಷ್ಟಪಡುತ್ತಾರೆ. ಮುಂಬೈನ ಸ್ವಾತಿ ಸ್ನಾಕ್ಸ್ ರೆಸ್ಟೋರೆಂಟ್‌ನಿಂದ ಕೆಲವು ಬಾರಿ ಗುಜರಾತಿ ಸ್ನಾಕ್ಸ್ ಆರ್ಡರ್ ಮಾಡುತ್ತಾರೆ.

ಅಂಬಾನಿ ಮನೆಯ ಹಲವು ಸಿಬ್ಬಂದಿಗಳ ಲಕ್ಷ ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಅಂಬಾನಿ ಕಾರು ಚಾಲಕ ಕೂಡ ಪ್ರತಿ ತಿಂಗಳು 2 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ. 

ಭಾರತದ ಕೊಡುಗೈ ದಾನಿ ಯಾರು? 8 ಲಕ್ಷ ಕೋಟಿ ವಿತರಿಸಿದ ಉದ್ಯಮಿ ಅಂಬಾನಿ ಅದಾನಿ ಅಲ್ಲ!
 

click me!