700 ಡಾನ್ಸರ್ಸ್​​ ಜೊತೆ ರಶ್ಮಿಕಾ ಮಂದಣ್ಣ ನೃತ್ಯ: ಚಿತ್ರರಂಗಕ್ಕೆ ಬಂದ ಡಾ.ರಾಜ್ ಮತ್ತೊಬ್ಬ ಮೊಮ್ಮಗ

Sep 29, 2024, 7:10 PM IST

ಹಾಟ್​ ಬ್ಯೂಟಿ ರಶ್ಮಿಕಾ ಮಂದಣ್ಣ ಬೆಸ್ಟ್ ಡಾನ್ಸರ್​ ಅಂತ ಪುಷ್ಪ ಸಿನಿಮಾ ಸಾರಿ ಹೇಳಿದೆ. ಇದೀಗ ರಶ್ಮಿಕಾ ಮಂದಣ್ಣ 700 ಜನ ಡಾನ್ಸರ್ಸ್​ ಜೊತೆ ಕುಣಿಯೋಕೆ ಸಜ್ಜಾಗಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ‘ಛವ್ವಾ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಫಸ್ಟ್ ಟೈಂ 700 ಜನ ಡಾನ್ಸರ್​​ ಜೊತೆ ಡಾನ್ಸ್ ಮಾಡುತ್ತಾರೆ. ಈ ಸಿನಿಮಾದಲ್ಲಿ ಛತ್ರಪತಿ ಸಾಂಬಾಜಿ ಪಾತ್ರದಲ್ಲಿ ವಿಕ್ಕಿ ನಟಿಸಿದ್ರೆ, ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. 

ಲತಾ ಮಂಗೇಶ್ಕರ್​ರನ್ನ ನೆನಪಿಸಿಕೊಂಡ ಪ್ರಧಾನಿ: ಇಂದು ಗಾನ ಕೋಗಿಲೆ ಲತಾ ಮಂಗೇಶ್ಕರ್ 95ನೇ ಹುಟ್ಟುಹಬ್ಬ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಲತಾ ಬಂಗೇಶ್ಕರ್​ರನ್ನ ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ. ‘ಲತಾ ಮಂಗೇಶ್ಕರ್ ಅವರನ್ನು ಜನ್ಮದಿನದಂದು ನೆನಪಿಸಿಕೊಳ್ಳುತ್ತಿದ್ದೇನೆ. ತಮ್ಮ ಸುಮಧುರ ಹಾಡುಗಳಿಂದ ಅವರು ಯಾವಾಗಲೂ ಜನರ ಹೃದಯ ಮತ್ತು ಮನಸ್ಸಿನಲ್ಲಿ ಇರುತ್ತಾರೆ. ಲತಾ ದೀದಿ ಮತ್ತು ನಾನು ವಿಶೇಷವಾದ ಬಾಂಧವ್ಯ ಹೊಂದಿದ್ದೆವು. ಅವರ ವಾತ್ಸಲ್ಯ ಮತ್ತು ಆಶೀರ್ವಾದ ಪಡೆಯುವ ಭಾಗ್ಯ ನನಗಿತ್ತು’ ಎಂದಿದ್ದಾರೆ ಪ್ರಧಾನಿ ಮೋದಿ.

ಚಿತ್ರರಂಗಕ್ಕೆ ಬಂದ ಡಾ. ರಾಜ್ ಮತ್ತೊಬ್ಬ ಮೊಮ್ಮಗ: ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ಕುಮಾರ್​ ಅವರ ಕುಟುಂಬ ಸಾಕಷ್ಟು ಕೊಡುಗೆ ನೀಡಿದೆ. ಅವರ ಫ್ಯಾಮಿಲಿಯ ಹಲವರು ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅದೇ ಕುಟುಂಬದ ಹೊಸ ತಲೆಮಾರಿನ ಪ್ರತಿಭೆಗಳು ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಡಾ. ರಾಜ್​ಕುಮಾರ್ ಅವರ ಹಿಂದೆ ಶಕ್ತಿಯಾಗಿ ನಿಂತಿದ್ದವರು ಸಹೋದರ ವರದಪ್ಪ. ಈಗ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಕೂಡ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ಮಿಂಚುಹುಳು’ ‘ಮಿಂಚುಹುಳು’ ಸಿನಿಮಾಗೆ ಮಹೇಶ್ ಕುಮಾರ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. 

ತಿರುಪತಿ ಲಡ್ಡು ಬಗ್ಗೆ ಮೌನ ಮುರಿದ ನಟಿ ಖುಷ್ಬು: ತಿರುಮಲ ತಿರುಪತಿ ಲಡ್ಡು ವಿವಾದ ಭಾರೀ ಸುದ್ದಿ ಮಾಡುತ್ತಿದೆ. ಸದ್ಯ ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಎಪಿ ಡಿಸಿಎಂ ಪವನ್ ಕಲ್ಯಾಣ್ ಹಾಗೂ ನಟ ಪ್ರಕಾಶ್ ರಾಜ್ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಇದೀಗ ನಟಿ ಖುಷ್ಬು ಕೂಡ ಮೌನ ಮುರಿದಿದ್ದು, ಹಿಂದೂ ಧರ್ಮವನ್ನು ಗುರಿಯಾಗಿಸಿಕೊಂಡಾಗಲೆಲ್ಲ ನಾವು ಎಲ್ಲಾ ನಡೆಯುತ್ತೆ ಅನ್ನೋ ಮನೋಭಾವವನ್ನು ಹೊಂದಬೇಕೆಂದು ನಾನು ಗಮನಿಸಿದ್ದೇನೆ. ಯಾಕಪ್ಪಾ..? ಭಾಯ್? ಒಂದು ನಿರ್ದಿಷ್ಟ ಧರ್ಮವನ್ನು ನಿಂದಿಸುವವನ್ನು, ನಾನು ಕೇಳುತ್ತೇನೆ, ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮದ ಬಗ್ಗೆ ಇದೇ ರೀತಿ ಮಾತನಾಡಲು ನಿಮಗೆ ಧೈರ್ಯವಿದೆಯೇ.? ಎಂದು ನಟಿ ಖುಷ್ಬೂ ಪ್ರಶ್ನಿಸಿದ್ದಾರೆ.