69ರ ಹರೆಯದಲ್ಲೂ ನಿರಂತರ 20 ನಿಮಿಷ ಡಾನ್ಸ್‌: ಸಿನಿರಸಿಕರ ಗತಕ್ಕೆ ಜಾರಿಸಿದ ನಟಿ ರೇಖಾ

By Anusha Kb  |  First Published Oct 1, 2024, 3:51 PM IST

ಯುಎಇನ ಅಬುಧಾಬಿಯಲ್ಲಿ ನಡೆದ 2024 ಐಫಾ ಉತ್ಸವದಲ್ಲಿ ಅವರು ನಿರಂತರ 20 ನಿಮಿಷಗಳ ಕಾಲ ಡಾನ್ಸ್ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಕಣ್ಮನ ತಣಿಸಿದರು.


ವಯಸ್ಸು ಕೇವಲ ನಂಬರ್‌ ಅಷ್ಟೇ ಎಂಬುದನ್ನು ಬಾಲಿವುಡ್‌ನ ಹಿರಿಯ ನಟಿ ರೇಖಾ ಮತ್ತೆ ಸಾಬೀತುಪಡಿಸಿದ್ದಾರೆ. ಯುಎಇನ ಅಬುಧಾಬಿಯಲ್ಲಿ ನಡೆದ 2024 ಐಫಾ ಉತ್ಸವದಲ್ಲಿ ಅವರು ನಿರಂತರ 20 ನಿಮಿಷಗಳ ಕಾಲ ಡಾನ್ಸ್ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಕಣ್ಮನ ತಣಿಸಿದರು. 20 ಸಾಮಾನ್ಯವಾಗಿ ಕೆಲ ನಿಮಿಷಗಳ ಕಾಲ ಕುಣಿದರೆ ಹರೆಯದ ಮಕ್ಕಳೇ ಸುಸ್ತಾಗುತ್ತಾರೆ. ಆದರೆ ಹಿರಿಯ ನಟಿ ರೇಖಾ ತಮ್ಮ 69ರ ಹರೆಯದಲ್ಲೂ ನಿರಂತರ 20 ನಿಮಿಷಗಳ ಕಾಲ ಡಾನ್ಸ್ ಮಾಡಿ ಐಫಾ ಸಮಾರಂಭಕ್ಕೆ ರಂಗು ತುಂಬಿದರು.  ಪಿಂಕ್ ಬಣ್ಣದ ಸುಂದರವಾರ ಅನಾರ್ಕಲಿ ಧಿರಿಸು ಧರಿಸಿದ್ದ ರೇಖಾ ಕಾರ್ಯಕ್ರಮದುದ್ದಕ್ಕೂ ಹದಿಹರೆಯದ ಯುವತಿಯಂತೆ ಕಂಗೊಳಿಸುತ್ತಾ ನೃತ್ಯದಲ್ಲಿ ಭಾವಪರವಶರಾಗಿದ್ದರು. 

1969ರಲ್ಲಿ ತೆರೆ ಕಂಡ ಸಿನಿಮಾ 'ಗೈಡ್‌' ನ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ 'ಪಿಯಾ ತೊಸೆ ನೈನಾ ಲಗೇ ರೆ' ಹಾಡು ಹಾಗೂ 1979ರಲ್ಲಿ ತೆರೆಕಂಡ 'ಮಿಸ್ಟರ್ ನಟವರಲಾಲ್' ಸಿನಿಮಾದ 'ಪರ್ದೇಸಿಯಾ ಯೆಹ್  ಸಚ್ ಹೈ ಪಿಯಾ' ಹಾಡಿಗೆ ಹೆಜ್ಜೆ ಹಾಕಿದರು.  ಹಾಗೆಯೇ 1960ರಲ್ಲಿ ತೆರೆಕಂಡಂತಹ ಸಿನಿಮಾ 'ಮುಘಲ್ - ಇ-ಅಜಂ' ಸಿನಿಮಾದ 'ಮೊಹೆ ಪಂಘಾಟ್ ಪೆ' ಹಾಡಿಗೆ ಹಾಗೂ 1964ರಲ್ಲಿ ತೆರೆಕಂಡ 'ವೋ ಕೌನ್ ತಿ' ಸಿನಿಮಾದ 'ಲಗ್ ಜಾ ಗಲೇ' ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳು ಸೇರಿದಂತೆ ಅಲ್ಲಿದ್ದ ಎಲ್ಲಾ ಸಿನಿಮಾ ಪ್ರಿಯರು ನಟ ನಟಿಯರನ್ನು ರಂಜಿಸಿದರು. 

Tap to resize

Latest Videos

undefined

69ನೇ ವರ್ಷದಲ್ಲೂ ಆಕರ್ಷಕವಾಗಿ ಕಾಣುವ ಬಾಲಿವುಡ್ ನಟಿ ರೇಖಾ, ಅದಕ್ಕೆ ಕಾರಣವಿದು!

ಐಫಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ರೇಖಾ ಅವರ ಈ ಡಾನ್ಸ್‌ನ ಕೆಲ ತುಣಕುಗಳನ್ನು ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ರೇಖಾ ಅವರ ಈ ಡಾನ್ಸ್ ಅವರ ಅಭಿಮಾನಿಗಳನ್ನು ಗತಕ್ಕೆ ಕೊಂಡೊಯ್ದಿದೆ. ಸಂಪ್ರದಾಯಿಕ ಹಾಗೂ ಸದಾ ಹೊಳೆಯುತ್ತಿರುವ ರೇಖಾ ಅವರು ನೆಕ್ಸಾ ಐಫಾ ಅವಾರ್ಡ್ 2024ರ ವೇದಿಕೆಯನ್ನು ತಮ್ಮ ಅದ್ಭುತವಾದ ಡಾನ್ಸ್ ಪ್ರದರ್ಶನದ ಮೂಲಕ ಬೆಳಗಿಸಿದರು ಎಂದು ಐಫಾ ಇನ್ಸ್ಟಾ ಪೇಜ್, ರೇಖಾ ಡಾನ್ಸ್‌ನ ಕೆಲ ತುಣುಕುಗಳನ್ನು ಪೋಸ್ಟ್ ಮಾಡಿ ಬರೆದುಕೊಂಡಿದೆ.

ಈ ಮಹಾ ಸೀಕ್ರೆಟ್ ನಿಮಗೇನಾದ್ರೂ ಗೊತ್ತಿದ್ಯಾ? ರೇಖಾ ಜೋಡಿಯಾಗಿ ನಟಿಸಿದ್ದರು ಶಂಕರ್‌ ನಾಗ್!

ರೇಖಾ ಅವರ ಈ ಐತಿಹಾಸಿಕ ನೃತ್ಯ ಪ್ರದರ್ಶನ ಅಭಿಮಾನಿಗಳ ಮನಸೊರೆಗೊಂಡಿದೆ. ರೆಡಿಟ್‌ನಲ್ಲಿ ವೀಡಿಯೋ ಶೇರ್ ಮಾಡಿಕೊಂಡ ಅಭಿಮಾನಿಯೊಬ್ಬರು, ತುಂಬಾ ಗ್ರೇಸ್‌ಫುಲ್ ಆಗಿದೆ, ಈ ವಯಸ್ಸಿನಲ್ಲೂ ಇವರೊಬ್ಬರು ಸಾಟಿಯಿಲ್ಲದ ನಟಿ, ಈ ರೀತಿಯ ಡಾನ್ಸ್‌ಗಳ ಸೊಬಗನ್ನು  ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಯಸ್ಸಿನಲ್ಲೂ ಈಕೆ ಅಲೌಕಿಕವಾದ ಸುಂದರಿ ಎಂದು ಈ ವೀಡಿಯೋಗೆ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರಿಗೆ 70ರ ಹರೆಯ ಆದರೂ ಹೇಗೆ ಅವರು ಹೀಗೆ ಸೊಂಟ ಬಳುಕಿಸುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ರೇಖಾ ಅವರು ತಮ್ಮ ವಯಸ್ಸನ್ನು ಮರೆತು ಮಾಡಿದ ನೃತ್ಯ ಎಲ್ಲರ ಹೃದಯ ಸೊರೆಗೊಳಿಸಿದೆ.

"Hum sab kehtein hain ji aap ne hamara dil ek baar nahi hazaaron crore baar liya hai" just can't take off eyes from this flawless performance from none other than 💘💘💘💘💘💘 pic.twitter.com/TAQSlSavBJ

— 💖👑 GreatestLegendaryIconRekhaji👑 💖 (@TheRekhaFanclub)

 

ಅಬುಧಾಬಿಯಲ್ಲಿ ನಡೆದ 2ನೇ ದಿನದ ಐಫಾ ಅವಾರ್ಡ್ ಸಮಾರಂಭದಲ್ಲಿ  ಬಾಲಿವುಡ್‌ನ ಅನೇಕ ನಟರು ವೇದಿಕೆಗೆ ತಮ್ಮ ನೃತ್ಯ ಪ್ರದರ್ಶನದ ಮೂಲಕ ಮೆರುಗು ತಂದರು. ಹೇಮಾ ಮಾಲಿನಿ, ಶಾರುಖ್ ಖಾನ್, ರಾಣಿ ಮುಖರ್ಜಿ, ಅನಿಲ್ ಕಪೂರ್, ಬಾಬಿ ಡಿಯೋಲ್, ವಿಕ್ಕಿ ಕೌಶಲ್, ಶಾಹೀದ್ ಕಪೂರ್, ಕೃತಿ ಸನನ್ ಡಾನ್ಸ್ ಮಾಡುವ ಮೂಲಕ ವೇದಿಕೆಗೆ ರಂಗು ತುಂಬಿದರು.  ಈ ಕಾರ್ಯಕ್ರಮದ ನಿರೂಪಣೆ ಮಾಡಿದ ನಟ ಶಾರುಖ್ ಖಾನ್ ಕೇವಲ ನಿರೂಪಣೆ ಮಾತ್ರ ಮಾಡಲಿಲ್ಲ, ನವಿರಾದ ಹಾಸ್ಯ ಹಾಗೂ ತಮ್ಮ ಚಾರ್ಮಿಂಗ್ ಮ್ಯಾನರಿಸಂ ಮೂಲಕ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದರು. ಇವರ ಜೊತೆಗೆ ವಿಕ್ಕಿ ಕೌಶಲ್ ಹಾಗೂ ಕರಣ್ ಜೋಹರ್‌ ಸೇರಿ ಶಾರುಖ್ ಖಾನ್ ನಟನೆಯ ಹಿಟ್ಟ ಹಾಡು ಝೂಮೆ ಜೊ ಪಠಾಣ್ ಹಾಡಿಗೆ ಅದ್ಭುತವಾಗಿ ಡಾನ್ಸ್ ಮಾಡುವ ಮೂಲಕ ವೇದಿಕೆಯಲ್ಲಿ ಕರೆಂಟ್ ಹರಿಯುವಂತೆ ಮಾಡಿದರು. ಮೂರು ದಿನಗಳ ಈ ಐಫಾ ಉತ್ಸ ಸೆಪ್ಟೆಂಬರ್ 27ರಂದು ಆರಂಭವಾಗಿತ್ತು. 

Rekha performing at IIFA
byu/kokotara inBollyBlindsNGossip

 

click me!