ಬಿಹಾರದಲ್ಲಿ ಬಾಲಿವುಡ್ ನಟನ ಸಾವು, ಗಂಗಾ ನದಿಯಲ್ಲಿ ಸಿಕ್ತು ಶವ

By Mahmad Rafik  |  First Published Oct 1, 2024, 11:20 AM IST

ಕಳೆದ ಎರಡು ದಿನಗಳಿಂದ 56 ವರ್ಷದ ಬಾಲಿವುಡ್ ನಟ ನಾಪತ್ತೆಯಾಗಿದ್ದರು. ಗಂಗಾ ನದಿಯಲ್ಲಿ ಶೋಧಕಾರ್ಯ ನಡೆಸಿದಾಗ ನಟನ ಶವ ಪತ್ತೆಯಾಗಿದೆ. 


ಪಾಟನಾ: ಬಾಲಿವುಡ್ ನಟ ಅಜಯ್ ಕುಮಾರ್ ಶಾ ಗಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ನಟ ಅಜಯ್ ಕುಮಾರ್, ತಮ್ಮ ಊರಾದ ಆರಾಗೆ ಆಗಮಿಸಿದ್ದರು. ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಗಂಗಾನದಿ ಸ್ನಾನಕ್ಕೆ ಅಜಯ್ ಕುಮಾರ್ ಹೋಗಿದ್ದರು. ಈ ವೇಳೆ ನದಿಯಲ್ಲಿ ಮುಳುಗಿ ಅಜಯ್ ಕುಮಾರ್ ಮೃತರಾಗಿದ್ದಾರೆ. ವಿಷಯ ತಿಳಿದ ಸ್ಥಳಕ್ಕಾಗಮಿಸಿದ ಪೊಲೀಸರ ಸಮ್ಮುಖದಲ್ಲಿ ನಟನ ಶವವನ್ನು ಮೇಲೆಕ್ಕೆತ್ತಿದ್ದಾರೆ ಎಂದು ವರದಿಯಾಗಿದೆ.

ಮೃತ ನಟ ಅಜಯ್ ಕುಮಾರ್, ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೇರಾಫೇರಿ, ಖಟ್ಟಾ ಮಿಟ್ಟಾ, ಚುಪ್ಕೆ ಚುಪ್ಕೆ ಮತ್ತು ಭಾಗ್‌ ಭಾಗ್‌ ಚಿತ್ರಗಳ ಪ್ರಮುಖ ಪಾತ್ರದಲ್ಲಿ ಅಜಯ್ ಕುಮಾರ್ ನಟಿಸಿದ್ದರು. ನಟನೆ ಜೊತೆಗೆ ಮುಂಬೈನಲ್ಲಿ ಅಜಯ್ ಕುಮಾರ್, ನಟನಾ ತರಬೇತಿ ಶಾಲೆಯನ್ನು ನಡೆಸಿದ್ದರು. ಈ ಶಾಲೆ ಮೂಲಕ ಹಲವು ಉದಯನ್ಮೋಕ ಕಲಾವಿದರಿಗೆ ಅಜಯ್ ಕುಮಾರ್ ಮಾರ್ಗದರ್ಶಕರಾಗಿದ್ದರು.

Tap to resize

Latest Videos

undefined

56 ವರ್ಷದ ಅಜಯ್ ಕುಮಾರ್ ಶಾ, ಆರಾದಲ್ಲಿರುವ ಮನೆಗೆ ಬಂದಿದ್ದರು. ಆದರೆ ಎರಡು ದಿನಗಳಿಂದ ಅಜಯ್ ಕುಮಾರ್ ದಿಢೀರ್ ಅಂತ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಗಂಗಾ ನದಿ ತೀರದಲ್ಲಿ ಅಜಯ್ ಕುಮಾರ್ ಚಪ್ಪಲಿ ಸಿಕ್ಕಿತ್ತು. ಅನುಮಾನಗೊಂಡು ನದಿಯಲ್ಲಿ ಹುಡುಕಾಟ ನಡೆಸಿದಾಗ ಅಜಯ್ ಕುಮಾರ್ ಶಾ ಅವರ ಶವ ಪತ್ತೆಯಾಗಿದೆ. ಅಜಯ್ ಕುಮಾರ್ ಶಾ ಕುಟುಂಬ ತಾರಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಅಜಯ್ ಕುಮಾರ್ ಅವಿವಾಹಿತರಾಗಿದ್ದು,  ಅರುಣ್ ಶಾ ಮತ್ತು ರಾಜಕುಮಾರ್ ಶಾ ಎಂಬ ಇಬ್ಬರು ಸೋದರು ಹಾಗೂ ಓರ್ವ ಬಬಿತಾದೇವಿ ಹೆಸರಿನ ಸೋದರಿಯರಿದ್ದಾರೆ.

ಎರಡು ಹೊತ್ತು ಊಟಕ್ಕೂ ಪರದಾಡಿ, ತೋಟದಲ್ಲಿ ಮಲಗುತ್ತಿದ್ದ ನಟನಿಗೆ ಫಾಲ್ಕೆ ಪ್ರಶಸ್ತಿ; ಕನ್ನಡ ಸೇರಿ 8 ಭಾಷೆಗಳಲ್ಲಿ ನಟನೆ

ನದಿ ಬಳಿ ಚಪ್ಪಲಿ ಪತ್ತೆಯಾದಾಗ ಅಜಯ್ ಕುಮಾರ್ ಶಾ ಕುಟುಂಬಸ್ಥರು ಗ್ಗೆ ಅರಾ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರ ಸಮ್ಮುಖದಲ್ಲಿ NDRF ತಂಡ ಗಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಅಜಯ್ ಕುಮಾರ್ ಶಾ ಶವ ಪತ್ತೆಯಾಗಿದೆ.

ಅಜಯ್ ಕುಮಾರ್ ಸಾವಿನ ಸುದ್ದಿಯಿಂದ ಆಪ್ತರು ಮತ್ತು ಅವರ ಶಿಷ್ಯರು ಆಘಾತಕ್ಕೊಳಗಾಗಿದ್ದಾರೆ. ನದಿಯಲ್ಲಿ ಸ್ನಾನ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಿಸ್ ಫೈರ್ ಆಗಿ ನಟ ಗೋವಿಂದ ಕಾಲಿಗೆ ತಗುಲಿದ ಗುಂಡು; ಆಸ್ಪತ್ರೆಗೆ ದಾಖಲು

click me!