
ಮಕ್ಕಳು (Children) ಗೊತ್ತಲ್ಲಾ, ಹೇಳಿದ ಮಾತು ಒಂದೂ ಕೇಳಲ್ಲ. ಎಲ್ಲದಕ್ಕೂ ಹಠ ಹಿಡಿದು ಕೂತು ಬಿಡ್ತಾರೆ. ಅದರಲ್ಲೂ ತಿನ್ನೋಕೆ ಕೊಟ್ಟದನ್ನು ಎಸೆದು ಬಿಡುವ ಅಭ್ಯಾಸ ಮಕ್ಕಳಲ್ಲಿ ಹೆಚ್ಚಿರುತ್ತದೆ. ಎಲ್ಲಾ ತಿಂದೇ ಏಳ್ಬೇಕು ಅಂತ ಪೋಷಕರು (Parents) ಅದೆಷ್ಟು ಗದರಿಸಿದ್ರೂ ಆ ಮಾತನ್ನು ಕೇಳೋದೆ ಇಲ್ಲ. ಅರ್ಧಂಬರ್ಧ ತಿಂದು ಆಹಾರ (Food)ವನ್ನು ತೆಗೆದುಕೊಂಡು ಹೋಗಿ ಚೆಲ್ಲಿ ಬಿಡುತ್ತಾರೆ. ಆದರೆ ಆಹಾರವನ್ನು ಚೆಲ್ಲುವ ಈ ಅಭ್ಯಾಸ (Habit) ತುಂಬಾ ಕೆಟ್ಟದ್ದು. ಆದ್ರೆ ಮಕ್ಕಳಿಗೆ ಎಷ್ಟು ಬಿಡಿಸಿ ಹೇಳಿದರೂ ಈ ವಿಚಾರ ಅರ್ಥವಾಗುವುದಿಲ್ಲ
ವಿಶ್ವ ಆಹಾರ ಸುರಕ್ಷತಾ ದಿನವನ್ನು ಪ್ರತಿ ವರ್ಷ ಜೂನ್ 7 ರಂದು ಆಚರಿಸಲಾಗುತ್ತದೆ. ಇದನ್ನು ವಿಶ್ವ ಆಹಾರ ಸುರಕ್ಷತಾ ದಿನ ಎಂದೂ ಕರೆಯುತ್ತಾರೆ. ಆಹಾರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆಹಾರದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು, ಪತ್ತೆಹಚ್ಚಲು ಮತ್ತು ನಿರ್ವಹಿಸಲು ತೆಗೆದುಕೊಂಡ ಕ್ರಮಗಳನ್ನು ಪ್ರೋತ್ಸಾಹಿಸಲು ದಿನವನ್ನು ಆಚರಿಸಲಾಗುತ್ತದೆ. ಈ ದಿನ ಮಕ್ಕಳಿಗೆ ಆಹಾರ ಸುರಕ್ಷತೆಯ ಬಗ್ಗೆ ಹೇಗೆ ತಿಳಿಸಿಕೊಡಬಹುದು ಎಂಬುದನ್ನು ತಿಳಿಯೋಣ. ವಿಶ್ವ ಆಹಾರ ಸುರಕ್ಷತಾ ದಿನದಂದು ಆಹಾರವನ್ನು ವ್ಯರ್ಥ ಮಾಡದಂತೆ ಮಕ್ಕಳಿಗೆ ಕಲಿಸಲು ಈ 5 ಟ್ರಿಕ್ಸ್ ಬಳಸಿ.
Childhood Obesity: ಮಕ್ಕಳ ಬೊಜ್ಜಿಗೆ ಪೋಷಕರು ಕಾರಣವೇ? ಹೇಗೆ?
ಪ್ರತಿ ವರ್ಷ ಜೂನ್ 7ರಂದು, ಆಹಾರ ಭದ್ರತೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು, ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲು ನಿರ್ಧರಿಸಿತು. 2018ರಲ್ಲಿ ಈ ದಿನವನ್ನು ಆಯ್ಕೆ ಮಾಡಲಾಯಿತು. ಪ್ರತಿ ವರ್ಷ, ಸಂಸ್ಥೆಯು ಆಹಾರ ಭದ್ರತೆಯ ಪ್ರಸ್ತುತ ಸವಾಲುಗಳ ಮೇಲೆ ಕೇಂದ್ರೀಕರಿಸುವ ಥೀಮ್‌ನೊಂದಿಗೆ ಬರುತ್ತದೆ.
ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಲು ಹೇಳಿ
ಯಾವಾಗಲೂ ಕಡಿಮೆ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುವುದನ್ನು ಮಕ್ಕಳಿಗೆ ಕಲಿಸಿ. ಅಗತ್ಯವಿದ್ದರೆ ಮತ್ತೆ ಆಹಾರವನ್ನು ಬಡಿಸಿಕೊಳ್ಳಬಹುದು. ಎರಡನೇ, ಮೂರನೇ ಅಥವಾ ನಾಲ್ಕನೇ ಬಾರಿ ಆಹಾರವನ್ನು ಬಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವನಿಗೆ ವಿವರಿಸಿ. ಹೀಗೆ ಮನವರಿಕೆಯಾದಾಗ ಮಕ್ಕಳು ಕಡಿಮೆ ಪ್ರಮಾಣದ ಆಹಾರ ತೆಗೆದುಕೊಳ್ಳುತ್ತಾರೆ ಮತ್ತು ಇದರಿಂದ ಫುಡ್ ವೇಸ್ಟ್ ಮಾಡುವ ಅಭ್ಯಾಸ ಕಡಿಮೆಯಾಗುತ್ತದೆ.
ಉಳಿದ ಆಹಾರವನ್ನು ಏನು ಮಾಡಬೇಕು
ಮಗುವಿನ ತಟ್ಟೆಯಲ್ಲಿ ಆಹಾರ ಉಳಿದಿದ್ದರೆ, ಅದನ್ನು ತಕ್ಷಣ ಎಸೆಯಬೇಡಿ. ಮಕ್ಕಳ ಹಸಿವು ತುಂಬಾ ಚಿಕ್ಕದಾಗಿದೆ ಮತ್ತು ಮರಳಿ ಬೇಗನೇ ಅವರಿಗೆ ಹಸಿವಾಗುತ್ತದೆ. ಹೀಗಾಗಿ ಮಕ್ಕಳು ತಿನ್ನದೇ ಬಿಟ್ಟ ಆಹಾರವನ್ನು ಪಾತ್ರೆಯಲ್ಲಿ ತೆಗೆದಿರಿಸಿ. ಅವರು ಹಸಿವಾಗುತ್ತೆ ಎಂದು ಮತ್ತೊಮ್ಮೆ ಆಹಾರ ಕೇಳಿದಾಗ ಇದನ್ನು ಕೊಡಿ.
ಆಹಾರವನ್ನು ಆಸಕ್ತಿದಾಯಕವಾಗಿಸಿ
ಮಕ್ಕಳು ತಿನ್ನುವ ಆಹಾರವನ್ನು ಯಾವಾಗಲೂ ಆಸಕ್ತಿದಾಯಕವಾಗಿಸುವುದು ಮುಖ್ಯ. ತಿನ್ನುವ ಆಹಾರ ನೋಡಲು ಆಕರ್ಷಕವಾಗಿದ್ದರೆ ಮಕ್ಕಳು ಯಾವುದೇತಕರಾರು ಮಾಡದೆ ತಟ್ಟೆ ಖಾಲಿ ಮಾಡುತ್ತಾರೆ. ಹೀಗಾಗಿ ತರಕಾರಿ, ಹಣ್ಣುಗಳನ್ನು ತಟ್ಟೆಯಲ್ಲಿ ಹೆಚ್ಚು ಸೇರಿಸಿ. ಇದರಿಂದ ಆಹಾರ ಕಲರ್‌ಫುಲ್ ಆಗಿ ಕಾಣುತ್ತದೆ. ಮಕ್ಕಳು ಆಹಾರವನ್ನು ಇಷ್ಟಪಟ್ಟು ತಿನ್ನಲು ಸಾಧ್ಯವಾಗುತ್ತದೆ. ಇದರಿಂದ ಫುಡ್ ವೇಸ್ಟ್ ಆಗೋ ಚಿಂತೆಯಿಲ್ಲ.
ಮಕ್ಕಳು ಮಣ್ಣು ತಿಂದ್ರೆ ತಪ್ಪಲ್ಲ, ಹಾಗಂಥ ಪದೆ ಪದೇ ತಿಂದ್ರೆ ಡೇಂಜರಸ್!
ಆಹಾರ ವ್ಯರ್ಥದ ಪರಿಣಾಮ ವಿವರಿಸಿ
ಪ್ರತಿದಿನ ಸಾಕಷ್ಟು ಆಹಾರವನ್ನು ಪಡೆಯುವ ಅದೃಷ್ಟವನ್ನು ಮಕ್ಕಳಿಗೆ ತಿಳಿಸಿ. ಬಡ ಮಕ್ಕಳು ವಾಸಿಸುವ ಸ್ಥಳಕ್ಕೆ ಕರೆದುಕೊಂಡು ಹೋಗಿ, ಚಿಕ್ಕ ಮಕ್ಕಳು ಸಹ ಹೇಗೆ ಹಸಿವಿನಿಂದ ಇರುತ್ತಾರೆ ಎಂಬುದನ್ನು ತೋರಿಸಿ. ಈ ರೀತಿಯಾಗಿ ಮಗುವಿಗೆ ಆಹಾರದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅವನು ಪ್ರತಿದಿನ ಆಹಾರ ತಿನ್ನುವಾಗ ಫುಡ್ ವೇಸ್ಟ್ ಮಾಡಲು ಮುಂದಾಗುವುದಿಲ್ಲ.
ಆಹಾರವನ್ನು ಹೇಗೆ ಬೆಳೆಯಲಾಗುತ್ತದೆ ಎಂಬುದನ್ನು ತಿಳಿಸಿಕೊಡಿ
ಆಹಾರದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ, ಆಹಾರವನ್ನು ಹೇಗೆ ಬೆಳೆಯಲಾತ್ತದೆ ಎಂಬುದನ್ನು ತಿಳಿಸಿ. ನಿಮ್ಮ ಬಾಲ್ಕನಿಯಲ್ಲಿ ಕೆಲವು ಗಿಡಮೂಲಿಕೆಗಳನ್ನು ನೆಡಿ ಮತ್ತು ಅವುಗಳನ್ನು ಬೆಳೆಸಲು ಎಷ್ಟು ಕಷ್ಟಪಡಬೇಕು ಎಂಬುದನ್ನು ತೋರಿಸಿ. ಮಗುವಿನೊಂದಿಗೆ ಆಹಾರವನ್ನು ಬೇಯಿಸಿ. ಇದು ಮಗುವಿಗೆ ಆಹಾರವನ್ನು ಗೌರವಿಸಲು ಕಲಿಯಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.