ಬಾದಾಮಿ ಗೋಂದು ಎಂದರೇನು? ಇದರ ಪ್ತಯೋಜನ ಏನು ಎಂಬ ಪ್ರಶ್ನೆ ಕೆಲವರಿಗೆ ಇರಬಹುದು.
ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಇಂದು ಚಿಯಾ ಬೀಜಗಳು, ತುಳಸಿ ಬೀಜಗಳ ಡ್ರಿಂಕ್ಸ್ ಬಳಕೆ ಮಾಡಲಾಗುತ್ತದೆ. ಇದರ ಜೊತೆಗೆ ಬಾದಾಮಿ ಗೋಂದನ್ನು ಸಿಕ್ಕಾಪಟ್ಟೆ ಬಳಕೆ ಮಾಡಲಾಗ್ತಿದೆ. ಈ ಸಮಯದಲ್ಲಿ ಬಾದಾಮಿ ಗೋಂದು ಟ್ರೆಂಡ್‌ನಲ್ಲಿದೆ. ಇದು ಇಷ್ಟು ಫೇಮಸ್ ಆಗಲು ಕಾರಣ ಏನಿರಬಹುದು. ಸಾಕಷ್ಟು ಮಾಹಿತಿ ಇಲ್ಲಿದೆ, ಸಂಪೂರ್ಣ ಓದಿ.
ಈ ಗೋಂದು ಎಂದರೇನು? ಎಲ್ಲಿಂದ ಸಿಗುತ್ತದೆ?
ಬಾದಾಮಿ ಗೋಂದು ದೇಹದ ಉಷ್ಣತೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಇನ್ನೂ ಕೆಲ ಪ್ರಯೋಜನಗಳಿವೆ. ಬಾದಾಮಿ ಗಮ್ ಎಂದು ಕೂಡ ಕರೆಯಲಾಗುವುದು. ಬಾದಾಮಿ ಮರದ ತೊಗಟೆಯಿಂದ ಸ್ರವಿಸುವ ಅಂಟು ಇದು. Tragacanth gum or Almond gum, Gond Katira ಎಂದು ಕೂಡ ಕರೆಯಲಾಗುವುದು. ನೀರಿನಲ್ಲಿ ಹಾಕಿ ಅರ್ಧ ಗಂಟೆಗಳ ಬಳಿಕ ಇದು ಜೆಲ್‌ಆಗುವುದು. ದೇಹದ ಉಷ್ಣತೆ ಜೊತೆಗೆ ತೂಕ ಇಳಿಕೆಗೂ ಇದು ಸಹಕಾರಿ. ಮರದ ಕಾಂಡ ಅಥವಾ ಮರದ ಕೊಂಬೆಯಿಂದ ಈ ಗಮ್‌ಬೀಳುತ್ತದೆ. ಅದಾದ ನಂತರದಲ್ಲಿ ಈ ಗಮ್‌ಘನಸ್ಥಿತಿಗೆ ಪರಿವರ್ತಿತಾಗುತ್ತದೆ. ತಮಿಳುನಾಡಿನಲ್ಲಿ ಇದು ತುಂಬ ಫೇಮಸ್.ತಮಿಳಿಗರು ಇದನ್ನು ಬಾದಾಮ್ ಪಿಸಿನ್ ಎಂದು ಕೂಡ ಕರೆಯುತ್ತಾರೆ.
ಭೂಮಿಯ ಋಣ ಸುನೀತಾಗೆ ಇದೆ, ಆಕೆ ಮೊದಲಿನಂತೆ ಬದುಕೋದು ಕಷ್ಟ!
ಈ ಗೋಂದಿನಲ್ಲಿ ಏನಿದೆ?
ಇದರಲ್ಲಿ ಸಾಕಷ್ಟು ಪೌಷ್ಠಿಕಾಂಶ ಇದೆ. ಕಾರ್ಬೋಹೈಡ್ರೇಟ್, ಕೊಬ್ಬು, ಪ್ರೋಟೀನ್, ಸೋಡಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಕಬ್ಬಿಣದಂತಹ ಖನಿಜ ಇದೆ. ಬ್ಯಾಕ್ಟೀರಿಯಾ ವಿರೋಧಿ, ಗಾಯಗಳನ್ನು ಗುಣಪಡಿಸುವ ಗುಣ ಹೊಂದಿದ್ದು, ಇದು ಚರ್ಮದ ಆರೈಕೆಗೆ ಸಹಕಾರಿ.
ಭೂಮಿಯ ಋಣ ಸುನೀತಾಗೆ ಇದೆ, ಆಕೆ ಮೊದಲಿನಂತೆ ಬದುಕೋದು ಕಷ್ಟ!
ಪ್ರಯೋಜನಗಳು ಏನು?
ನೈಸರ್ಗಿಕವಾಗಿ ಇದು ಶೀತಕವಾಗಿದ್ದು, ದೇಹವನ್ನು ತಂಪು ಮಾಡುತ್ತದೆ. ದೇಹದಲ್ಲಿ ಉಷ್ಣತೆ ಜಾಸ್ತಿ ಆಗಿದ್ದು, ಕೆಲವರ ಕಣ್ಣು ಕೆಂಪಾಗುತ್ತದೆ, ಹೊಟ್ಟೆ ಸಮಸ್ಯೆ ಆಗುತ್ತದೆ. ಇದಕ್ಕೆಲ್ಲ ಈ ಗಮ್‌ತುಂಬ ಸಹಾಯಕಾರಿ. ಆಮ್ಲೀಯತೆ ಕಡಿಮೆ ಮಾಡುವುದು,ಗಿ ಹೊಟ್ಟೆಗೆ ತುಂಬಾ ಹಿತ. ಹೊಟ್ಟೆ ಹುಣ್ಣು, ಹೊಟ್ಟೆ ಉರಿಯಂತಹ ಅನೇಕ ಸಮಸ್ಯೆಗಳು ಕಡಿಮೆ ಆಗುತ್ತವೆ.
PCOS ಸಮಸ್ಯೆ ಹೊಂದಿರುವ ಮಹಿಳೆಯರು ಕೂಡ ಈ ಗೋಂದು ಬಳಸಬಹುದು. ಮಲಬದ್ಧತೆ, ಮೊಡವೆ ಆಗೋದನ್ನು ಕೂಡ ನಿವಾರಣೆ ಮಾಡುತ್ತದೆ. ಜೀರ್ಣಕ್ರಿಯೆ ಸಹಾಯ ಮಾಡುತ್ತದೆ. ಜಾಯಿಂಟ್ ಪೇನ್ ಇದ್ದರೂ ಕೂಡ ಕಡಿಮೆ ಮಾಡುತ್ತದೆ. ಎನರ್ಜಿ ನೀಡುವುದು.