ಬೇಸಿಗೆಯ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಲಾವಂಚ ಬೇರಿನ ನೀರು

ಬೇಸಿಗೆಯ ಸೆಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.  ತಡೆದುಕೊಳ್ಳಲಾಗದ ಬಿಸಿಲ ಬೇಗೆಯ ಜೊತೆ ಜನ ಈ ಸಮಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಿರುವಾಗ ಕೆಲವು ಗಿಡಮೂಲಿಕೆಗಳು ನಮಗೆ ಬೇಸಿಗೆಯಲ್ಲಿ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಅಂತಹ ಗಿಡಮೂಲಿಕೆಗಳಲ್ಲಿ ಲಾವಂಚ ಕೂಡ.

Beat the Heat with Lavancha Unlock its Summer Health Benefits

ಬೇಸಿಗೆಯ ಸೆಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.  ತಡೆದುಕೊಳ್ಳಲಾಗದ ಬಿಸಿಲ ಬೇಗೆಯ ಜೊತೆ ಜನ ಈ ಸಮಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಿರುವಾಗ ಕೆಲವು ಗಿಡಮೂಲಿಕೆಗಳು ನಮಗೆ ಬೇಸಿಗೆಯಲ್ಲಿ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಅಂತಹ ಗಿಡಮೂಲಿಕೆಗಳಲ್ಲಿ ಲಾವಂಚ ಕೂಡ ಒಂದು ಬಹುತೇಕರಿಗೆ ಈ ಲಾವಂಚ ಬೇರಿನ ಪ್ರಯೋಜನಗಳ ಅರಿವಿಲ್ಲ, ಆದರೆ ಅದು ಅತ್ಯುತ್ತಮವಾದ ಆರೋಗ್ಯವರ್ಧಕವಾಗಿದೆ. ಕರಾವಳಿ ಭಾಗದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇದನ್ನು ಬಹುತೇಕ ಆಯುರ್ವೇದಿಕ್‌ ಔಷಧಿಗಳಲ್ಲಿ ಬಳಸಲಾಗುತ್ತದೆ. ಬೇಸಿಗೆಯಲ್ಲಿ ಈ ಲಾವಂಚ ಬೇರಿನಿಂದ ಏನೆಲ್ಲಾ ಪ್ರಯೋಜನಗಳಿವೆ ಹಾಗೂ ಇದರ ನೀರನ್ನು ಕುಡಿಯುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನಾವೀಗ ನೋಡೋಣ...

ಲಾವಂಚ ಎಂದರೇನು?
ಲಾವಂಚವನ್ನು ವೈಜ್ಞಾನಿಕ ಭಾಷೆಯಲ್ಲಿ ವೆಟಿವರ್ (vetiver) ಎಂದೂ ಕರೆಯುತ್ತಾರೆ ಇದೊಂದು ರೀತಿಯ ಸುಗಂಧ ಭರಿತವಾದ ಹುಲ್ಲು. ಇದನ್ನು ಭಾರತದ ಕೆಲವು ಭಾಗಗಳಲ್ಲಿ ಮತ್ತು ಇತರ ಏಷ್ಯಾದ ದೇಶಗಳಲ್ಲಿಯೂ ಬೆಳೆಸಲಾಗುತ್ತದೆ. ಔಷಧೀಯ ಉದ್ದೇಶಗಳು ಮಾತ್ರವಲ್ಲದೇ ಸೌಂದರ್ಯವರ್ಧಕಗಳಿಗೆ ಪರಿಮಳವನ್ನು ಸೇರಿಸಲು ಕೂಡ ಬಳಸಲಾಗುತ್ತದೆ. ಲಾವಂಚದ ಬೇರನ್ನು ಜ್ಯೂಸ್‌ ಮಾಡುವುದಕ್ಕೂ ಕೆಲವರು ಬಳಸುತ್ತಾರೆ  ಏಕೆಂದರೆ ಇದು ಬೇಸಿಗೆಯ ಶಾಖದ ವಿರುದ್ಧ ಇದು ನಮಗೆ ಉತ್ತಮ ಪರಿಹಾರ ನೀಡುತ್ತದೆ. ಮೊದಲೆಲ್ಲಾ ಕೆರೆ ಬಾವಿ ಮುಂತಾದ ನೀರಿನ ಮೂಲಗಳಲ್ಲಿ ಇದನ್ನು ಬೆಳೆಸುತ್ತಿದ್ದರು. ನೀರು ಹೆಚ್ಚಾಗಿರುವಲ್ಲಿ ಇದು ಚೆನ್ನಾಗಿ ಬೆಳೆಯುವುದು.

Latest Videos

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ
ಲಾವಂಚ ಹೊಟ್ಟೆ ನೋವು, ಮಲಬದ್ಧತೆ ಮತ್ತು ತಲೆನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಲಾವಂಚ ಎಣ್ಣೆಯನ್ನು ನರಮಂಡಲವನ್ನು ಶಾಂತಗೊಳಿಸಲು ಮತ್ತು ಮೆದುಳಿಗೆ ರಕ್ತ ಪರಿಚಲನೆ ಸುಧಾರಿಸಲು ಬಳಸಲಾಗುತ್ತದೆ.  ಇದಲ್ಲದೆ, ಲಾವಂಚದ ಬಲವಾದ ಸುವಾಸನೆಯು ದೇಹವನ್ನು ಶಾಂತಗೊಳಿಸಿ ಒತ್ತಡ ನಿವಾರಿಸಿ, ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. 

ಕಲ್ಲಂಗಡಿ ತಿಂದ ಮೇಲೆ ಈ ತಪ್ಪು ಮಾಡಬೇಡಿ..!

ದೇಹವನ್ನು ಸದಾ ಹೈಡ್ರೇಟ್ ಆಗಿಡುವುದು.
ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಸಾಕಷ್ಟು ಬೆವರುವುದರಿಂದ ದೇಹದಲ್ಲಿ ನೀರಿನ ಅಂಶ ಬಹಳ ಕಡಿಮೆಯಾಗುವುದು ಆದರೆ ಲಾವಂಚ ಬೇರಿನ ನೀರಿನ ಸೇವನೆ ಮಾಡುವುದರಿಂದ ದೇಹ ಡಿಹೈಡ್ರೇಟ್ ಆಗದಂತೆ ತಡೆಯುತ್ತದೆ.  ಬೇಸಿಗೆಯ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ದೇಹವನ್ನು ಹೈಡ್ರೇಟ್ ಆಗಿ ಇಡುವುದು. ಲಾವಂಚ ಬೇರುಗಳು ಹೆಚ್ಚು ಸಾಂದ್ರತೆ ಮತ್ತು ತಂಪಾಗಿರುವುದರಿಂದ, ಬೇಸಿಗೆಯಲ್ಲಿ ಇದರ ನೀರನ್ನು ಕುಡಿಯುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ಬೇಸಿಗೆಯಲ್ಲಿ ಹಸಿವು ಕಡಿಮೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಈ ನೀರನ್ನು ಹೆಚ್ಚು ಕುಡಿದರೆ ದೇಹಕ್ಕೆ ಶಕ್ತಿ ನೀಡುತ್ತದೆ.

ಬೆವರಿನ ವಾಸನೆಗೆ ಮುಕ್ತಿ
ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಬೆವರಿನ ವಾಸನೆ ಇರುತ್ತದೆ. ಇದರ ಬಳಕೆಯಿಂದ ಬೇಸಿಗೆಯಲ್ಲಿ ಬೆವರಿನ ವಾಸನೆ ಇರುವುದಿಲ್ಲ. ಬೇಸಿಗೆಯಲ್ಲಿ ಅತಿಯಾದ ಬೆವರಿನಿಂದ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಹೊಂದಿದ್ದರೆ, ಈ ಬೇರನ್ನು ಸ್ವಲ್ಪ ನೀರಿನಲ್ಲಿ ಕುದಿಸಿ ನೀರನ್ನು ಕುದಿಸಿ ಮತ್ತು ಸ್ನಾನಕ್ಕೆ ಬಳಸುವ ನೀರಿಗೆ ಸೇರಿಸಿ. ಈ ಬೇರು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಆದ್ದರಿಂದ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಗಮನ ನೀಡಬೇಕಾಗಿದೆ.

ಸೀಬೆ ಎಲೆ ಜಗಿಯುವುದರಿಂದ ಎಷ್ಟೊಂದು ಪ್ರಯೋಜನ, ಹಲವು ರೋಗಗಳು ಮಾಯ

ಲಾವಂಚ ಬೇರಿನ ಬಳಕೆ ಹೇಗೆ?
ಈ ಬೇರನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ಅದ್ದಿಡಿ. ಈ ನೀರನ್ನು  ದಿನವೂ ಬಾಟಲ್‌ಗಳಲ್ಲಿ ತುಂಬಿಟ್ಟು ಕುಡಿಯಿರಿ. ಅಥವಾ ನೀವು ಕುಡಿಯುವ ನೀರಿನ ಪಾತ್ರೆಗೆ ಈ ಲಾವಂಚದ ಬೇರನ್ನು ಹಾಕಿಡಿ ಅದೇ ನೀರನ್ನು ಕುಡಿಯಿರಿ. 

ಲಾವಂಚ ಬೇರು ಎಲ್ಲಿ ಲಭ್ಯ?

ಬಹುತೇಕ ಆಯುರ್ವೇದಿಕ್‌ ಮೆಡಿಕಲ್‌ಗಳಲ್ಲಿ ಈ ಲಾವಂಚ ಬೇರುಗಳು ಲಭ್ಯವಿರುತ್ತದೆ.

click me!