ಪ್ರಮುಖ ಹುದ್ದೆಗೆ ಕಠಿಣ ಸಂದರ್ಶನ ನಡೆದಿತ್ತು. ಕಂಪನಿ ಸಿಇಒ ಕೊನೆಗೆ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದ್ದರು.ಯು ಆರ್ ಸೆಲೆಕ್ಟೆಡ್ ಎಂದು ಅಭಿನಂದಿಸಿದ್ದರು. ಆದರೆ ಕೆಲಸ ಸಿಕ್ಕ ಖುಷಿಯ ಬೆನ್ನಲ್ಲೇ ಮಹಿಳೆ ಪತಿಯನ್ನು ಒಂದು ಬಾರಿ ಇಲ್ಲಿಗೆ ಕರೆಯುವಂತೆ ಸೂಚಿಸಿದ್ದಾಳೆ. ಇಷ್ಟೇ ನೋಡಿ, ಆಯ್ಕೆಯಾಗಿದ್ದ ಈಕೆ ಕೆಲಸವನ್ನೇ ಕಳೆದುಕೊಂಡಿದ್ದಾಳೆ. ಕಾರಣವೇನು?
ಮುಂಬೈ(ಮಾ.19) ಹಲವು ಸುತ್ತಿನ ಸಂದರ್ಶನ, ವೇತನ, ಕಂಪನಿ ನಿಯಮ, ಷರತ್ತು ಎಲ್ಲವನ್ನು ಮೀರಿ ಕೆಲಸ ಗಿಟ್ಟಿಸಿಕೊಳ್ಳುವುದು ಸವಾಲು. ಅದರಲ್ಲೂ ಪ್ರಮುಖ ಹುದ್ದೆ, ಅನುಭವಿಗಳ ಆಯ್ಕೆ ವೇಳೆ ಕಂಪನಿಯ ಸಿಇಒ ಸೇರಿದಂತೆ ಪ್ರಮುಖರು ಸಂದರ್ಶನದಲ್ಲಿ ಹಾಜರಿರುತ್ತಾರೆ. ಈ ವೇಳೆ ಅವರ ಪ್ರಶ್ನೆಗಳು, ಸವಾಲುಗಳಿಗೆ ಉತ್ತರಿಸಿ ಆಯ್ಕೆಯಾಗುವುದು ಹರಸಾಹಸವೇ ಸರಿ. ಹೀಗೆ ಕಂಪನಿ ಬಾಸ್ ಪ್ರಮುಖ ಹುದ್ದೆಗೆ ಸಂದರ್ಶನ ನಡೆಸಿದ್ದಾರೆ. ಹಲವರು ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಮಹಿಳೆಯೊಬ್ಬರು ಎಲ್ಲಾ ಸುತ್ತುಗಳಲ್ಲಿ ಪಾಸ್ ಆಗಿ ಕೊನೆಗೆ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಆಯ್ಕೆಯಾದ ಬಳಿಕ ಮಹಿಳೆ, ತನ್ನ ಪತಿಯಲ್ಲಿ ಒಂದು ಮಾತು ಕೇಳಲು ಮುಂದಾಗಿದ್ದಾರೆ. ಮಹಿಳೆ ಆಡಿದ ಮಾತಿನಿಂದ ಕೆಲಸ ಕಳೆದುಕೊಂಡ ಘಟನೆ ನಡೆದಿದೆ.
ನ್ಯಾಚುರಲಿ ಯುವರ್ಸ್ ಕಂಪನಿಯ ಸಿಇಒ ವಿನೋದ್ ಚೆಂದಿಲ್ ಈ ಮಹತ್ವದ ಘಟನೆಯನ್ನು ವಿವರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ನ್ಯಾಚುರಲಿ ಯುವರ್ಸ್ ಕಂಪನಿಯ ಪ್ರಮುಖ ಹುದ್ದೆಯಾಗಿತ್ತು. ಇದಕ್ಕೆ ಹಿರಿಯ ಅನುಭವಸ್ಥರ ಆಯ್ಕೆ ಮಾಡಲು ಕಂಪನಿ ಮುಂದಾಗಿತ್ತು. ಹೀಗಾಗಿ ಒಂದಷ್ಟು ರೆಸ್ಯೂಮ್ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನ ಮಾಡಿತ್ತು. ಈ ಸಂದರ್ಶನದಲ್ಲಿ ಹಲವರ ಪೈಕಿ ಹಿರಿಯ ಮಹಿಳೆಯೊಬ್ಬರನ್ನು ಕಂಪನಿ ಆಯ್ಕೆ ಮಾಡಿತ್ತು.
ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ವೃತ್ತಿ ಅವಕಾಶ, ಸರಿಯಾದ ಹಾದಿಯಲ್ಲಿದ್ದೀರಾ ಚೆಕ್ ಮಾಡಿ
ಕಂಪನಿಯ ಬಾಸ್ ಈ ಕುರಿತು ಮಹಿಳೆ ಜೊತೆ ಯುಆರ್ ಸೆಲೆಕ್ಟೆಡ್, ಕಂಗ್ರಾಜುಲೇಶನ್ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಆದರೆ ಮಹಿಳೆ ಕೂಡ ಕೆಲಸಕ್ಕೆ ಆಯ್ಕೆಯಾದ ಸಂಭ್ರಮ ಮಾತುಗಳಲ್ಲಿ ಅರ್ಥವಾಗುತ್ತಿತ್ತು. ಇದರ ನಡುವೆ ಕಂಪನಿಯ ಸಿಇಒ ಒಂದು ಮಾತು ಹೇಳಿದ್ದಾರೆ. ತನ್ನ ಪತಿಯನ್ನು ಒಮ್ಮೆ ಭೇಟಿ ಮಾಡುತ್ತೀರಾ? ಕಚೇರಿಗೆ ತೆರಳಲು ಸೂಚಿಸುತ್ತೇನೆ. ನಿಮ್ಮ ಸಮಯದಲ್ಲಿ ಭೇಟಿ ಮಾಡಲು ಸೂಚಿಸುತ್ತೇನೆ ಎಂದಿದ್ದಾಳೆ.
ಮಹಿಳೆ ಈ ಮಾತುಗಳನ್ನು ಕೆಲವೇ ಪದಗಳಲ್ಲಿ ಹೇಳಿದ್ದಾಳೆ. ಆದರೆ ಈ ಮಾತು ಕೇಳಿಸಿಕೊಂಡ ಬೆನ್ನಲ್ಲೇ ಕಂಪನಿ ಸಿಇಒ ವಿನೋದ್ ಚೆಂದಿಲ್, ಇಮೇಲ್ ಮೂಲಕ ನೀವು ಕೆಲಸದಿಂದ ರಿಜೆಕ್ಟ್ ಆಗಿದ್ದೀರಿ ಎಂದು ಇಮೇಲ್ ಮಾಡಿದ್ದಾರೆ. ಮಹಿಳೆ ಕೆಲಸ ಸಿಕ್ಕ ಬಳಿಕ ಪತಿಯನ್ನು ಕಚೇರಿಗೆ ಕಳುಹಿಸಿ ತಾನು ಮುಂದಿನ ದಿನದಲ್ಲಿ ಕೆಲಸ ಮಾಡುವ ಕಚೇರಿಯ ಬಾಸ್ ಜೊತೆ ಮಾತನಾಡಲು ಸೂಚಿರುವುದರಲ್ಲಿ ತಪ್ಪೇನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ಇಮೇಲ್‌ನಲ್ಲಿ ಒಂದೇ ವಾಕ್ಯದಲ್ಲಿ ಸಿಇಒ ಕಾರಣ ಹೇಳಿದ್ದಾರೆ. ಈ ನೇಮಕಾತಿ ಹಿರಿಯ ಅನುಭವಸ್ಥ ಅಭ್ಯರ್ಥಿಗಾಗಿತ್ತು ಎಂದಿದ್ದಾರೆ. ಬಳಿಕ ಟ್ವಿಟರ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ನಮ್ಮ ಕಂಪನಿಯಲ್ಲಿ ಹಿರಿಯ ಹುದ್ದೆಗೆ ನೇಮಕಾತಿ ಮಾಡಲಾಗಿತ್ತು. ಈ ಹುದ್ದೆಯಲ್ಲಿ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತ್ವರಿತಗತಿಯಲ್ಲಿ ನಿರ್ಧಾರ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಹಿರಿಯ ಅನುಭವಸ್ಥರೇ ಬೇಕು ಎಂದು ನೇಮಕಾತಿ ಮಾಡಲಾಗಿತ್ತು. ಈ ಕುರಿತು ಸ್ಪಷ್ಟ ಅರಿವಿದ್ದರೂ, ಸ್ವಂತ ನಿರ್ಧಾರ ತೆಗೆದುಕೊಳ್ಳಲು ಪತಿಯನ್ನು ಕೇಳಬೇಕು ಎಂದರೆ ಕಂಪನಿಯ ನಿರ್ಧಾರ ತೆಗೆದುಕೊಳ್ಳಲು ಆಕೆಗೆ ಸಾಧ್ಯವಾಗುದಿಲ್ಲ. ಮಹಿಳೆಯ ಪತಿ ಕಚೇರಿಗೆ ಭೇಟಿ ನೀಡಿ ಸಿಇಒ, ಹೆಚ್ಆರ್ ಜೊತೆ ಮಾತನಾಡಿ ಕಂಪನಿ ಕುರಿತು ಖಾತ್ರಿಪಡಿಸಿದ ಬಳಿಕವಷ್ಟೇ ಮಹಿಳೆ ಕೆಲಸ ಮಾಡುವುದಾದರೆ, ಮಹಿಳೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಹಲವು ಬಾರಿ ವಿಫಲರಾಗಬಹುದು ಎಂದು ವಿನೋದ್ ಚೆಂದಿಲ್ ಹೇಳಿದ್ದರೆ.
ಈ ಟ್ವೀಟ್ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಹುತೇಕರು ಕಂಪನಿ ಬಾಸ್ ಪರ ನಿಂತಿದ್ದಾರೆ. ಆದರೆ ಕೆಲವರು ಮಹಿಳೆ ಪರ ಟ್ವೀಟ್ ಮಾಡಿದ್ದಾರೆ. ಇಲ್ಲಿ ಮಹಿಳೆ ಸ್ವತಂತ್ರಗಳಲ್ಲ, ಅಥವಾ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥಳು ಎಂದರ್ಥವಲ್ಲ. ಭಾರತೀಯ ವ್ಯವಸ್ಥೆಯಲ್ಲಿ ಮಹಿಳೆ ಎಷ್ಟೇ ಸ್ವತಂತ್ರಳಾದರೂ, ಕುಟುಂಬ, ಪತಿ, ಮಕ್ಕಳ ವಿಚಾರದಲ್ಲಿ ಆಕೆ ಹೆಚ್ಚು ಅವಲಂಬಿಯಾಗಿರುತ್ತಾಳೆ. ತನ್ನ ಒಂದು ನಿರ್ಧಾರ, ಇಡೀ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾವನ್ನೂ ಬೀರಬಲ್ಲದು. ಹೀಗಾಗಿ ತಾನು ಕೆಲಸಕ್ಕೆ ಸೇರುವ ಮುನ್ನ ಪತಿಯಲ್ಲಿ ಕೇಳುವುದು, ಕಂಪನಿ, ಇತರ ವಿಚಾರಗಳ ಕುರಿತು ಪತಿಗೆ ಮನದಟ್ಟಾಗಿಸುವುದು ಅತ್ಯಗತ್ಯ. ಭಾರತ ವಿದೇಶಿ ಪದ್ಧತಿ, ಸಂಪ್ರದಾಯ ಹಾಗೂ ಸಂಸ್ಕೃತಿಯಂತಿಲ್ಲ. ಇಲ್ಲಿ ವಿವಾಹಿತ ಮಹಿಳೆ ಕೆಲಸ ಮಾಡಲು ಸಾಕಷ್ಟು ಅಡೆತಡೆಗಳಿವೆ. ಇದು ಯಾರೋ ಹೇರಿದ ಅಡೆತಡೆಯಲ್ಲ, ಕುಟುಂಬದ ಜವಾಬ್ದಾರಿಯ ಅಡೆ ತಡೆ ಎಂದು ಹಲವರು ಮಹಿಳೆ ಪರ ವಾದಿಸಿದ್ದಾರೆ.
ವಿಡಿಯೋ ಮೀಟಿಂಗ್‌ನಲ್ಲಿ ಕ್ಯಾಮೆರಾ ಆನ್ ಮಾಡಲು ಸೂಚಿಸಿದ ಬಾಸ್‌ಗೆ ಎದುರಾಯ್ತು ಶಾಕ್