
ಮನೆಯಲ್ಲಿ ಒಳ್ಳೆಯ ತಿಂಡಿಗಳನ್ನು ಕೊಡುತ್ತಿಲ್ಲವೆಂದು ಹೋಟೆಲ್‌ನಲ್ಲಿ ಹೋಗಿ ಬಾಯಿ ಚಪಲಕ್ಕೆ ರಸಗುಲ್ಲವನ್ನು ತಿನ್ನುವವರು ಹೆಚ್ಚಾಗಿದ್ದಾರೆ. ಇಲ್ಲೊಬ್ಬ ವೃದ್ಧ ಕಾರ್ಯನಿಮಿತ್ತ ಪಟ್ಟಣಕ್ಕೆ ಹೋದಾಗ ಹೋಟೆಲ್‌ನಲ್ಲಿ ರಸಗುಲ್ಲವನ್ನು ಆರ್ಡರ್ ಮಾಡಿ, ತಿನ್ನಲಾರಂಭಿಸಿದ್ದಾನೆ. ಆದರೆ, ರಸಗುಲ್ಲಾ ಬಾಯಿಗೆ ಹಾಕಿಕೊಂಡಿದ್ದೇ ತಡ, ಅಲ್ಲಿಯೇ ಒದ್ದಾಡಿ ಬಿದ್ದು ಪ್ರಾಣ ಬಿಟ್ಟಿದ್ದಾನೆ.
ಸಾಮಾನ್ಯವಾಗಿ ವಯಸ್ಸಾದ ನಂತರ ಹಲ್ಲುಗಳೆಲ್ಲಾ ಉದುರಿ ಹೋಗಿರುತ್ತವೆ. ಆಗ ಗಟ್ಟಿಯಾದ ಆಹಾರಗಳನ್ನು ತಿನ್ನುವುದಕ್ಕೆ ಕಷ್ಟವಾಗುತ್ತದೆ. ಇನ್ನು ದೊಡ್ಡ ಗಾತ್ರದ ತುತ್ತುಗಳನ್ನು ಕೂಡ ತಿನ್ನದೇ ಸಣ್ಣ ಸಣ್ಣ ತುಂಡುಗಳನ್ನು ನಿಧಾನವಾಗಿ ತಿನ್ನುತ್ತಾರೆ. ಅದರಲ್ಲಿಯೂ ವಯಸ್ಸಾದ ನಂತರ ಬಿಪಿ, ಶುಗರ್ ಎಂದು ಹೆಚ್ಚು ಊಟ ಮಾಡುವುದಕ್ಕೂ ಕೆಲವರು ಹಿಂದೇಟು ಹಾಕುತ್ತಾರೆ. ಆದರೆ, ಇಲ್ಲೊಬ್ಬ ವೃದ್ಧ ಮನೆಯಲ್ಲಿ ಒಳ್ಳೆಯ ತಿಂಡಿ ಕೊಡಲಿಲ್ಲವೆಂದರೆ ಹೋಟೆಲ್‌ಗಳಿಗೆ ಹೋಗಿ ತಮ್ಮ ಬಾಯಿ ಚಪಲಕ್ಕೆ ಏನು ಬೇಕೋ ಅದನ್ನೆಲ್ಲಾ ತಿಂದು ಬರುತ್ತಾರೆ. ಇದೇ ಕೆಲಸದ ನಿಮಿತ್ತ ಪೇಟೆಗೆ ಹೋಗಿದ್ದ ವೃದ್ಧ ಬಾಯಿ ಚಪಲಕ್ಕೆ ರಸಗುಲ್ಲಾವನ್ನು ಆರ್ಡರ್ ಮಾಡಿ ತಿನ್ನಲು ಮುಂದಾಗಿದ್ದಾರೆ. ಆದರೆ, ರಸಗುಲ್ಲಾವನ್ನು ಬಾಯಿಗೆ ಹಾಕಿಕೊಂಡಿದ್ದೇ ತಡ, ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಈ ಘಟನೆ ಬಿಹಾರದ ಶೇಖಪುರದಲ್ಲಿ ನಡೆದಿದೆ. ಶೇಖಪುರ ನ್ಯಾಯಾಲಯಕ್ಕೆ ಜಾಮೀನುದಾರರಾಗಿ ಬಂದಿದ್ದ 65 ವರ್ಷದ ವಾಲ್ಮೀಕಿ ಪ್ರಸಾದ್ ಎಂಬ ವೃದ್ಧ ಹೋಟೆಲ್‌ನಲ್ಲಿ ಉಪಹಾರ ಸೇವಿಸುವಾಗ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ರಸಗುಲ್ಲಾ ತಿನ್ನುವಾಗ ಅದು ಅವರ ಗಂಟಲಲ್ಲಿ ಸಿಲುಕಿಕೊಂಡಿತು. ಇದರಿಂದ ವೃದ್ಧನಿಗೆ ಉಸಿರುಗಟ್ಟಲು ಪ್ರಾರಂಭವಾಯಿತು. ನಂತರ ಉಸಿರಾಡಲಾಗದೇ ಪ್ರಜ್ಞಾಹೀನರಾಗಿ ನೆಲಕ್ಕೆ ಬಿದ್ದರು. ತಕ್ಷಣವೇ ಸುತ್ತಮುತ್ತಲಿನ ಜನರು ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೆದು ಅಂತ ಹಿಂಗೆಲ್ಲ ಚಿಯಾ ಸೀಡ್ಸ್ ತಿಂದ್ರೆ ಅಪಾಯ ಗ್ಯಾರಂಟಿ
ರಸಗುಲ್ಲಾದಿಂದ ವೃದ್ಧನ ಸಾವು: ವಾಲ್ಮೀಕಿ ಪ್ರಸಾದ್ ಬೆಳಿಗ್ಗೆ ಉಪಹಾರಕ್ಕಾಗಿ ಹೋಟೆಲ್‌ಗೆ ತಲುಪಿ ರಸಗುಲ್ಲಾ ಆರ್ಡರ್ ಮಾಡಿದರು. ಆದರೆ, ಬಾಯಲ್ಲಿ ಹಲ್ಲುಗಳು ಇಲ್ಲದ ಕಾರಣ ರಸಗುಲ್ಲಾವನ್ನು ಕಚ್ಚಿ ತಿನ್ನಲಾಗದೇ ಇಡಿ ಇಡಿಯಾಗಿ ನಾಲಿಗೆಯಿಂದ ಚಪ್ಪರಿಸುತ್ತಾ ನುಂಗಲು ಹೋದಾಗ ಗಂಟಲಲ್ಲಿ ಸಿಲುಕಿಕೊಂಡಿದೆ. ಇದಾದ ನಂತರ ಗಂಟಲಿನಿಂದ ರಸಗುಲ್ಲಾ ಹೊರಗೆ ಉಗುಳಲು ಪ್ರಯತ್ನ ಮಾಡಿದರೂ ಸಾಧ್ಯವಾಗದೇ ಕೆಳಗೆ ಬಿದ್ದು ಒದ್ದಾಡಿದ್ದಾರೆ. ಹೋಟೆಲ್‌ನಲ್ಲಿದ್ದ ಜನರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರಿಗೆ ಯಾವುದೇ ಸಹಾಯ ಸಿಗಲಿಲ್ಲ. ನಂತರ ಕೆಲವರು ಅವರನ್ನು ಸಾದರ್ ಆಸ್ಪತ್ರೆಗೆ ಕರೆದೊಯ್ದರು.
ಇನ್ನು ವೃದ್ಧನಿಗೆ ಸಕಾಲದಲ್ಲಿ ಪ್ರಥಮ ಚಿಕಿತ್ಸೆ ಸಿಕ್ಕಿದ್ದರೆ ಅವರ ಜೀವ ಉಳಿಸಬಹುದಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ನಂತರ ಮೃತರ ಕುಟುಂಬದಲ್ಲಿ ದುಃಖದ ಛಾಯೆ ಮೂಡಿದೆ. ಗ್ರಾಮದಲ್ಲಿಯೂ ಅಸಹಜ ಸಾವು ಸಂಭವಿಸಿದ್ದಕ್ಕೆ ಶೋಕ ಮತ್ತು ದುಃಖದ ವಾತಾವರಣವಿದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣದ ಪ್ರಥಮ ಚಿಕಿತ್ಸೆ ಅತ್ಯಗತ್ಯ ಎಂದು ಗ್ರಾಮಸ್ಥರು ಹೇಳುತ್ತಾರೆ.
ಇದನ್ನೂ ಓದಿ: ಮಕ್ಕಳು ಮಾಡೋಕೆ ಬಿಡ್ತಿಲ್ಲವೆಂದು ದೂರು ಕೊಟ್ಟ ಕಂಜೂಸ್ ಗಂಡನ ನೀಚ ಬುದ್ಧಿ ಬಿಚ್ಚಿಟ್ಟ ಹೆಂಡತಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.