LIVE NOW
Published : Jan 11, 2026, 07:28 AM ISTUpdated : Jan 11, 2026, 11:49 PM IST

Karnataka News Live: ಮಂಗಳೂರು - ಎಡಪದವಿನಲ್ಲಿ ಅಮಾನವೀಯ ಕೃತ್ಯ; ಹಸುವಿನ ಮೂತಿಗೆ ಚೂರಿ ಹಾಕಿದ ವ್ಯಾಪಾರಿ ಉಮರಬ್ಬ!

ಸಾರಾಂಶ

ಬೆಂಗಳೂರಿನಲ್ಲಿ ಫಿಲ್ಮಿ ಶೈಲಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಕಸರತ್ತು ಮಾಡುವ ಪುಂಡರಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಸುರಂಜನ್ ದಾಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ 19 ವರ್ಷದ ಭಾಸ್ಕರ್‌ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರ ಕಾರ್ಯಾಚರಣೆ ವೇಳೆ ಭಾಸ್ಕರ್ ಸಿಕ್ಕಿ ಬಿದ್ದಿದ್ದಾನೆ. ಭಾಸ್ಕರ್ ಮೊಬೈಲ್‌ನಲ್ಲಿ ಇದೇ ರೀತಿ ವ್ಹೀಲಿಂಗ್ ಮಾಡಿರುವ ಹಲವು ವಿಡಿಯೋಗಳು ಪತ್ತೆಯಾಗಿದೆ. ಇತ್ತ ಬೆಂಗಳೂರಲ್ಲಿ ಥಣಿಸಂದ್ರದಲ್ಲಿ ಮನೆಗಳ ತೆರವು ಪ್ರಕರಣ ಕೋಲಾಹಲ ಸೃಷ್ಟಿಸಿದೆ. ಕೋಗಿಲು ಬಳಿ ಇದೀಗ ಥಣಿಸಂದ್ರದಲ್ಲಿ ರಾಜಕೀಯ ಮೇಲಾಟಗಳು ಶುರುವಾಗಿದೆ. ರಾಜ್ಯ ರಾಜಾಕರಣ ಸೇರಿದಂತೆ ಇಂತಿನ ಪ್ರತಿ ಕ್ಷಣದ ಅಪ್‌ಡೇಟ್ ಇಲ್ಲಿದೆ.

Mangaluru FIR Against Trader Umar for Brutally Stabbing Cow s Mouth in Edapadavu

11:49 PM (IST) Jan 11

ಮಂಗಳೂರು - ಎಡಪದವಿನಲ್ಲಿ ಅಮಾನವೀಯ ಕೃತ್ಯ; ಹಸುವಿನ ಮೂತಿಗೆ ಚೂರಿ ಹಾಕಿದ ವ್ಯಾಪಾರಿ ಉಮರಬ್ಬ!

ಮಂಗಳೂರಿನ ಎಡಪದವಿನಲ್ಲಿ, ಅಯ್ಯಪ್ಪ ಪೂಜಾ ಸ್ಥಳದ ಬಳಿ ಚುರುಮುರಿ ಅಂಗಡಿ ಹಾಕಿದ್ದ ಉಮರಬ್ಬ ಎಂಬಾತ, ಆಹಾರಕ್ಕಾಗಿ ಬಂದ ಹಸುವಿನ ಮೂತಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದಾನೆ. ಈ ಅಮಾನುಷ ಕೃತ್ಯಕ್ಕೆ ಸ್ಥಳೀಯರು ಹಾಗೂ ಅಯ್ಯಪ್ಪ ಭಕ್ತರಿಂದ ತೀವ್ರ ಆಕ್ರೋಶ .

Read Full Story

11:26 PM (IST) Jan 11

ಬಾಗಲಕೋಟೆ - ಕಬ್ಬು ಕಟಾವು ಮಷಿನ್‌ನಲ್ಲಿ ಶಾರ್ಟ್ ಸರ್ಕಿಟ್; 20 ಎಕರೆ ಕಬ್ಬು ಬೆಂಕಿಗೆ ಆಹುತಿ!

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಕಬ್ಬು ಕಟಾವು ಯಂತ್ರದಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಯಂತ್ರದ ಜೊತೆಗೆ ಸುಮಾರು 20 ಎಕರೆ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ನಾಲ್ವರು ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.
Read Full Story

11:06 PM (IST) Jan 11

ದ್ವೇಷ ಭಾಷಣ ಮಾಡಲೆಂದೇ ವಿರೋಧ ಪಕ್ಷದವರು ಮಸೂದೆಗೆ ವಿರೋಧ? - ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ

ದ್ವೇಷ ಭಾಷಣ ಮಸೂದೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಶಾಸಕ ಎ.ಎಸ್. ಪೊನ್ನಣ್ಣ ಪ್ರಶ್ನಿಸಿದ್ದಾರೆ. ದ್ವೇಷ ಭಾಷಣ ಮಾಡಲೆಂದೇ ಅವರು ಮಸೂದೆಯನ್ನು ವಿರೋಧಿಸುತ್ತಿದ್ದಾರೆಯೇ ಎಂದು ಕೇಳಿದ್ದು, ಸದನದಲ್ಲಿ ಸರಿಯಾಗಿ ಚರ್ಚಿಸದ ವಿಪಕ್ಷಗಳ ನಡೆಯನ್ನು ಟೀಕಿಸಿದರು.

Read Full Story

10:51 PM (IST) Jan 11

ರಾಯಚೂರು - ಟಿಪ್ಪರ್ ಡಿಕ್ಕಿಯಾಗಿ ಟ್ರಾಕ್ಟರ್ ಪಲ್ಟಿ; ಹತ್ತಿ ಮಾರಲು ಹೋಗಿದ್ದ ರೈತ ಸಾವು!

ರಾಯಚೂರು ಹೊರವಲಯದಲ್ಲಿ ಮರಳು ತುಂಬಿದ ಟಿಪ್ಪರ್, ಹತ್ತಿ ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾನ್ವಿ ತಾಲ್ಲೂಕಿನ ನಾಗರಾಜ್ ಎಂಬ ರೈತ ಹತ್ತಿ ಮಾರಲು ಬರುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ.
Read Full Story

10:46 PM (IST) Jan 11

ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ರಾಶಿಕಾ, ಶೋ ಮುಗಿಯುವ ಮುನ್ನ ಶಾಕಿಂಗ್‌ ನ್ಯೂಸ್‌ ಹೇಳಿದ ಸುದೀಪ್‌!

ಬಿಗ್‌ಬಾಸ್‌ ಫಿನಾಲೆ ವಾರಕ್ಕೂ ಮುನ್ನ ನಡೆದ ಎಲಿಮಿನೇಷನ್‌ನಲ್ಲಿ, ಟಾಪ್-5 ಸ್ಪರ್ಧಿ ಎನಿಸಿದ್ದ ರಾಶಿಕಾ ಶೆಟ್ಟಿ ಮನೆಯಿಂದ ಹೊರಬಿದ್ದಿದ್ದಾರೆ. ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡಿದ ಅವರು ತಮ್ಮ ಜರ್ನಿಯನ್ನು ನೆನೆದಿದ್ದು, ಈ ವಾರ ಮಿಡ್‌ವೀಕ್‌ ಎಲಿಮಿನೇಷನ್‌ ನಡೆಯಲಿದೆ ಎಂದು ಸುದೀಪ್ ಘೋಷಿಸಿದ್ದಾರೆ.
Read Full Story

10:32 PM (IST) Jan 11

MGNREGA - ಗಾಂಧೀಜಿಯವರ ಇತಿಹಾಸ ಮುಚ್ಚಿ ಹಾಕುವ ಯತ್ನ; ಹೀಗಾಗಿಯೇ ನರೇಗಾ ಹೆಸರು ಬದಲಾವಣೆ ಎಂದ ಪೊನ್ನಣ್ಣ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮನ್ರೇಗಾ ತಿದ್ದುಪಡಿ ಹೇಳಿಕೆಗೆ ಶಾಸಕ ಎ.ಎಸ್. ಪೊನ್ನಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಿದ್ದುಪಡಿಯು ಉದ್ಯೋಗ ಖಾತ್ರಿಗೆ ಮಾರಕವಾಗಿದ್ದು, ಚರ್ಚೆ ನಡೆಸದೇ ಜಾರಿಗೊಳಿಸಿರುವುದು ಗಾಂಧೀಜಿಯವರ ಕೊಡುಗೆ ಮುಚ್ಚಿಹಾಕುವ ಪ್ರಯತ್ನ ಎಂದು ಅವರು ಆರೋಪಿಸಿದರು.

Read Full Story

08:50 PM (IST) Jan 11

ಕಾಂಗ್ರೆಸ್ ಶಾಸಕಿ ನಯನಾ ಮೊಟಮ್ಮಗೂ ಅಶ್ಲೀಲ ಕಾಮೆಂಟ್ಸ್ ಕಾಟ; ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್!

ಮೂಡಿಗೆರೆ ಶಾಸಕಿ ನಯನಾ ಮೊಟಮ್ಮ ಅವರು ತಮ್ಮ ವೈಯಕ್ತಿಕ ಫೋಟೋಗಳಿಗೆ ಬಂದ ಅಶ್ಲೀಲ ಕಾಮೆಂಟ್‌ಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ತಮ್ಮ ಉಡುಪಿನ ಆಧಾರದ ಮೇಲೆ ನಿಂದಿಸುವುದನ್ನು ಖಂಡಿಸಿ, ಈ ಮಹಿಳಾ ವಿರೋಧಿ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ ಮತ್ತು ಅನಾಮಧೇಯ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Read Full Story

08:39 PM (IST) Jan 11

'ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾದ್ದು ಕೊ*ಲೆ..' ಪೊಲೀಸರಿಗೆ ಈ ಅನುಮಾನ ಬಂದಿದ್ದಕ್ಕೆ ಇದೇ ಕಾರಣ..

Sharmila Kushalappa Murder: How Bengaluru Police Cracked the Techie’s Death Case ಬೆಂಗಳೂರಿನಲ್ಲಿ ಟೆಕ್ಕಿ ಶರ್ಮಿಳಾ ಕುಶಾಲಪ್ಪ ಅವರ ಸಾವು ಶಾರ್ಟ್ ಸರ್ಕ್ಯೂಟ್‌ನಿಂದಲ್ಲ, ಅದೊಂದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. 

Read Full Story

07:38 PM (IST) Jan 11

Bigg Boss ಟ್ವಿಸ್ಟ್​ ಮೇಲೆ ಟ್ವಿಸ್ಟ್​ - ಅವರಲ್ಲ, ಇವರಲ್ಲ ರೋಬೋಟ್​ ಹೇಳಿದ್ದೇ ಬೇರೆ ಹೆಸ್ರನ್ನು! ಕಿಚ್ಚನ ರಿಯಾಕ್ಷನ್​ ನೋಡಿ

ಬಿಗ್​ಬಾಸ್​ ಕನ್ನಡ 12 ಫಿನಾಲೆ ಸಮೀಪಿಸುತ್ತಿದ್ದಂತೆ, ಮನೆಗೆ ರೋಬೋಟ್​ ಒಂದು ಅಚ್ಚರಿಯ ಪ್ರವೇಶ ನೀಡಿದೆ. ಸುದೀಪ್ ಅವರು ಇಷ್ಟದ ಸ್ಪರ್ಧಿ ಯಾರೆಂದು ಕೇಳಿದಾಗ, ರೋಬೋಟ್​  ಇಬ್ಬರ ಹೆಸರನ್ನು ಹೇಳುವ ಮೂಲಕ ಬಿಗ್​ಬಾಸ್​ ಜಾಣ್ಮೆಯಿಂದ ವಿವಾದವನ್ನು ತಪ್ಪಿಸಿದೆ.

Read Full Story

07:34 PM (IST) Jan 11

ಮದುವೆ ಆಗೋದೇ ಕೆಲಸ, ಮೂರಾಯ್ತು ಈಗ 4ನೇ ಗಂಡ ಬೇಕಂತೆ - ಪತಿ ಸೈಕೋ ಎಂದು ಕೇಸ್‌ ಹಾಕಿದ್ದ ಟೆಕ್ಕಿಗೆ ಗಂಡನ ತಿರುಗೇಟು!

ಪತಿ ಮಂಜುನಾಥ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮೇಘಶ್ರೀ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. ಮೇಘಶ್ರೀಗೆ ಇದು ಮೂರನೇ ಮದುವೆ, ಹಣಕ್ಕಾಗಿ ಆಕೆ ಮೋಸ ಮಾಡುತ್ತಿದ್ದಾಳೆ ಎಂದು ಪತಿ ಮಂಜುನಾಥ್ ಇದೀಗ 12 ಗಂಭೀರ ಆರೋಪಗಳನ್ನು ಮಾಡಿ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
Read Full Story

07:11 PM (IST) Jan 11

ಬೆಂಗಳೂರು - ಮಂಗಳೂರು ಟೆಕ್ಕಿ ಉಸಿರುಗಟ್ಟಿ ಸಾವು ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರನ ಬಂಧಿಸಿದ ಪೊಲೀಸರು!

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಟೆಕ್ಕಿ ಶರ್ಮಿಳಾ ಅವರ ಸಾವು ಶಾರ್ಟ್ ಸರ್ಕ್ಯೂಟ್‌ನಿಂದಾದ ಬೆಂಕಿ ಅವಘಡವೆಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ, ಪೊಲೀಸ್ ತನಿಖೆಯು ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಬಹಿರಂಗಪಡಿಸಿದ್ದು, ಈ ಸಂಬಂಧ ಆಕೆಯ ಪ್ರಿಯಕರ, ಕೇರಳ ಮೂಲದ ಕರ್ನಲ್ ಕುರೈಯನ್ನು ಬಂಧಿಸಲಾಗಿದೆ.
Read Full Story

06:46 PM (IST) Jan 11

ಬೆಳಗಾವಿ ರೈಲು, ರಸ್ತೆ, ವಿಮಾನ ಯೋಜನೆಗಳು ವಿಳಂಬ, ರೈಲ್ವೆ ಯೋಜನೆಗೆ 407 ಎಕರೆ ಜಮೀನು ಈಗಾಗಲೇ ಸ್ವಾಧೀನ

ಸಂಸದ ಜಗದೀಶ ಶೆಟ್ಟರ ಅವರು ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ, ಆರು ಪಥದ ಹೆದ್ದಾರಿ, ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಭೂಸ್ವಾಧೀನ, ಕಾಮಗಾರಿ ವಿಳಂಬ  ಹಲವು ಅಡಚಣೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು  

Read Full Story

06:45 PM (IST) Jan 11

ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿ ಇಸ್ಕಾನ್ ವತಿಯಿಂದ 41ನೇ ವರ್ಷದ ಶ್ರೀ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ

ಬೆಂಗಳೂರಿನ ಇಸ್ಕಾನ್ ವತಿಯಿಂದ 41ನೇ ವರ್ಷದ  ಶ್ರೀ ಕೃಷ್ಣ-ಬಲರಾಮ ರಥಯಾತ್ರೆಯು ಅತ್ಯಂತ ಸಂಭ್ರಮದಿಂದ ನಡೆಯಿತು. ಮಾಧವತೀರ್ಥ ಮಠದ ವಿದ್ಯಾ ವಲ್ಲಭ ಮಾಧವ ತೀರ್ಥ ಶ್ರೀಗಳು ಮತ್ತು ಮಧು ಪಂಡಿತ್ ದಾಸರ ಉಪಸ್ಥಿತಿಯಲ್ಲಿ ನಡೆದ ಈ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು. 

 

Read Full Story

06:39 PM (IST) Jan 11

Shobhaa De - ಸೈಫ್ ಅಲಿ ಖಾನ್ ಚಾಕು ಇರಿತದ ಪ್ರಕರಣ; ಹಲವು ಸಂಶಯ ಹೇಳಿ ಪ್ರಶ್ನೆಗಳನ್ನು ಕೇಳಿದ ಶೋಭಾ ಡೇ!

"ಅವನು ಹುಚ್ಚನಂತೆ ನನ್ನ ಮೇಲೆರಗಿ ಎರಡು ಚಾಕುಗಳಿಂದ ಮನಬಂದಂತೆ ಇರಿಯಲು ಶುರುಮಾಡಿದ. ನಾನು ತಡೆಯಲು ಪ್ರಯತ್ನಿಸಿದೆ, ಆದರೆ ನನ್ನ ಬೆನ್ನಿಗೆ ಜೋರಾದ ಪೆಟ್ಟು ಬಿತ್ತು. ಅಲ್ಲಿಗೆ ಅರ್ಧ ಚಾಕು ನನ್ನ ಬೆನ್ನಿನೊಳಗೆ ಇಳಿದಿತ್ತು" ಎಂದು ಸೈಫ್ ಆ ಕರಾಳ ಕ್ಷಣಗಳನ್ನು ನೆನಪಿಸಿಕೊಂಡಿದ್ದರು. ಆ ಕೇಸ್ ಏನಾಯ್ತು?

Read Full Story

06:16 PM (IST) Jan 11

ಪರಶುರಾಮ ಥೀಂ ಪಾರ್ಕ್‌ನ ಲಕ್ಷಾಂತರ ಮೌಲ್ಯದ ಸೊತ್ತು ಕದ್ದವರು ಅರೆಸ್ಟ್, ಕಳ್ಳರು ಕಾಂಗ್ರೆಸ್ ಬ್ರದರ್ಸ್ ಎಂದ ಶಾಸಕ ಸುನೀಲ್ ಕುಮಾರ್!

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಡೆದ ತಾಮ್ರದ ಹೊದಿಕೆ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹2.18 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.  ಶಾಸಕ ಸುನಿಲ್ ಕುಮಾರ್ ಕಳ್ಳರನ್ನು 'ಕಾಂಗ್ರೆಸ್ ಬ್ರದರ್ಸ್' ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

06:13 PM (IST) Jan 11

ಜಾತಿ ನಿಂದನೆ ಮಾಡಿ ಶ್ರೀರಾಮುಲು ಮೇಲೆ ದಾಳಿಗೆ ಸಂಚು? ಬಳ್ಳಾರಿ ಗಲಾಟೆಗೆ ರೆಡ್ಡಿ ಬಿಗ್ ಟ್ವಿಸ್ಟ್, ಬೆಚ್ಚಿಬಿಳಿಸುವ ಸಾಕ್ಷ್ಯ ಬಿಡುಗಡೆ!

ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಫೋಟಕ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಶ್ರೀರಾಮುಲು ಅವರ ಮೇಲಿನ ಪೂರ್ವನಿಯೋಜಿತ ದಾಳಿ ಎಂದು ಆರೋಪಿಸಿರುವ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. 

Read Full Story

05:27 PM (IST) Jan 11

ಚಡ್ಡಿ ಹಾಕಿ ಓಡಾಡಬೇಡಮ್ಮ ಅಂತ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ಹೋಂಗಾರ್ಡ್‌ಗೆ ರಕ್ತಬರುವಂತೆ ಥಳಿಸಿದ ಯುವತಿ!

ಬೆಂಗಳೂರಿನ ಕೆ.ಆರ್ ಪುರಂನಲ್ಲಿ, ಚಡ್ಡಿ ಧರಿಸಿದ್ದ ಯುವತಿಗೆ ಬುದ್ಧಿವಾದ ಹೇಳಿದ ಹಿರಿಯ ಹೋಂಗಾರ್ಡ್ ಲಕ್ಷ್ಮಿನರಸಮ್ಮ ಅವರ ಮೇಲೆ ಯುವತಿ ತೀವ್ರವಾಗಿ ಹಲ್ಲೆ ಮಾಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Read Full Story

05:27 PM (IST) Jan 11

Udyami Vokkaliga Expo 2026 - ಸಾಲ ಕೊಡುವ ಮುನ್ನ ಹುಷಾರ್, ನಿಮ್ಮ ನೆರಳನ್ನೂ ನಂಬಬೇಡಿ - ಡಿಕೆಶಿ ಲೈಫ್ ಲೆಸನ್

ಬೆಂಗಳೂರಿನ 'ಉದ್ಯಮಿ ಒಕ್ಕಲಿಗ ಎಕ್ಸ್‌ಪೋ'ದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಉದ್ಯಮದಲ್ಲಿ ನಂಬಿಕೆಯ ಮಹತ್ವ ಮತ್ತು ಸಾಲ ನೀಡುವಲ್ಲಿನ ಎಚ್ಚರಿಕೆ ಕುರಿತು ಸಲಹೆ ನೀಡಿದರು. ತಮ್ಮನ್ನು 'ಬಂಡೆ' ಎಂದು ಕರೆಯುವುದರ ಹಿಂದಿನ ಶ್ರಮ, ರಾಜಕೀಯ ಏರಿಳಿತಗಳನ್ನು ಹಂಚಿಕೊಂಡರು.

Read Full Story

04:40 PM (IST) Jan 11

ನರೇಗಾ ಸಮರ - ಹೆಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್‌ಗೆ ಬರ್ತೀನಿ ಎಂದು ಪಂಥಾಹ್ವಾನ!

ನರೇಗಾ ಯೋಜನೆ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ನೀಡಿದ್ದ ಚರ್ಚೆಯ ಸವಾಲನ್ನು ಡಿಸಿಎಂ ಡಿಕೆ ಶಿವಕುಮಾರ್ ಅಧಿಕೃತವಾಗಿ ಸ್ವೀಕರಿಸಿದ್ದಾರೆ. ತಮ್ಮ ಕನಕಪುರ ತಾಲೂಕಿಗೆ ನರೇಗಾದಲ್ಲಿ ನಂಬರ್ ಒನ್ ಪ್ರಶಸ್ತಿ ಬಂದಿದ್ದು, ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಬೆರಳ ತುದಿಯಲ್ಲಿದೆ ಎಂದು ಹೇಳಿದ್ದಾರೆ. 

Read Full Story

03:59 PM (IST) Jan 11

ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ - ಎಷ್ಟು ಬುದ್ಧಿವಂತನೋ, ಅಷ್ಟೇ ಹಠವಾದಿ, ಏನೂ ಉಳಿದೇ ಇಲ್ಲ ಬೂದಿಯಾಗಿ ಬಿಟ್ಟಿದ್ದಾನೆ - ಮಾವ ಕಣ್ಣೀರು

ದಾವಣಗೆರೆಯ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಅವರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ ಅವರ ಇಬ್ಬರು ಮಕ್ಕಳು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಚಂದ್ರಶೇಖರ್ ಅವರ ಹಠಮಾರಿ ಸ್ವಭಾವವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರ ಹೇಳಿಕೆ.

Read Full Story

03:29 PM (IST) Jan 11

ರೆಸ್ಯೂಮ್ 2 ಲೈನ್, ಅನುಭವ ಶೂನ್ಯ; ಸೆಕ್ಯೂರಿಟಿ ಗಾರ್ಡ್‌ಗೆ ಥ್ಯಾಂಕ್ಸ್ ಹೇಳಿ ಉದ್ಯೋಗ ಗಿಟ್ಟಿಸಿದ ಮಹಿಳೆ

ರೆಸ್ಯೂಮ್ 2 ಲೈನ್, ಅನುಭವ ಶೂನ್ಯ; ರಿಜೆಕ್ಟ್ ಆಗಿದ್ದ ಮಹಿಳೆಯನ್ನು ಮತ್ತೆ ಕರದು ಉದ್ಯೋಗ ನೀಡಲಾಗಿದೆ. ಕಂಪನಿ ಸಂಸ್ಥಾಪಕರೇ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾರಣ ಸೆಕ್ಯೂರಿಟಿ ಗಾರ್ಡ್ ಹೇಳಿದೆ ಥ್ಯಾಂಕ್ಸ್.

Read Full Story

02:18 PM (IST) Jan 11

ಧಾರವಾಡ - ಅಂಡಮಾನ್–ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಹೃದಯಾಘಾಕ್ಕೆ ಬಲಿ!

ಧಾರವಾಡದ ಕೆಸಿಡಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಎಸ್. ಅನ್ನಪೂರ್ಣ ಅವರು ಕುಟುಂಬ ಸಮೇತ ಅಂಡಮಾನ್ ಪ್ರವಾಸಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಅವರ ಅನಿರೀಕ್ಷಿತ ಸಾವಿನಿಂದಾಗಿ ಕಾಲೇಜು ವಲಯ ಹಾಗೂ ವಿದ್ಯಾರ್ಥಿಗಳಲ್ಲಿ ತೀವ್ರ ಶೋಕ ಮನೆಮಾಡಿದೆ.
Read Full Story

02:12 PM (IST) Jan 11

BBK 12 - ಕಿಚ್ಚ ಸುದೀಪ್‌ ಮುಂದೆ ಗಿಲ್ಲಿ ನಟನಿಗೆ ವಾರ್ನ್‌ ಮಾಡಿದ ಕಾವ್ಯ ಶೈವ! ಅಂಥದ್ದೇನಾಯ್ತು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸೂಪರ್‌ ಸಂಡೇ ವಿಥ್‌ ಸುದೀಪ ಎಪಿಸೋಡ್‌ ನಡೆದಿದೆ. ವಾಹಿನಿಯು ಪ್ರೋಮೋ ರಿಲೀಸ್‌ ಮಾಡಿದ್ದು, ಅದರಲ್ಲಿ ಗಿಲ್ಲಿ ನಟನಿಗೆ ಕಾವ್ಯ ಶೈವ ಅವರು ವಾರ್ನ್‌ ಮಾಡಿದ್ದಾರೆ.

 

Read Full Story

01:26 PM (IST) Jan 11

ಬಾಯಲ್ಲಿ ಮಾತ್ರ 'ಹಣಿಶಿಣಮೆಣಶಿಣಕಾಯಿ', ಒಳಗೆ ಉಂಟಲ್ವಾ ರಸಗುಲ್ಲಾ - ರಕ್ಷಿತಾಗೆ ಅಶ್ವಿನಿ ಫುಲ್​ ಮಾರ್ಕ್ಸ್​!

ಬಿಗ್​ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಜಗಳದಿಂದಲೇ ಪರಿಚಿತರಾದ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಸ್ನೇಹವೂ ಅಷ್ಟೇ ವಿಶೇಷವಾಗಿದ್ದು, ತನ್ನ ಬಾಯಿ ಮೆಣಸಿನಕಾಯಿಯಂತೆ ಆದರೆ ಮನಸ್ಸು ರಸಗುಲ್ಲಾದಂತೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.
Read Full Story

01:12 PM (IST) Jan 11

Bigg Boss Kannada Season 12 ನೋಡಿದವ್ರಿಗೆ ಕಾಡುವ ಕಟ್ಟ ಕಡೆಯ 3 ಪ್ರಶ್ನೆಗಳಿವು! ಯಾರು ಉತ್ತರ ಕೊಡ್ತಾರೆ?

Bigg Boss Kannada Season 12: ಕಿಚ್ಚ ಸುದೀಪ್‌ ನಿರೂಪಣೆಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ನೋಡಿದ ವೀಕ್ಷಕರಿಗೆ ಕೆಲ ಸಂದೇಹಗಳು ಬಂದಿವೆ. ಇದಕ್ಕೆ ಕಾರಣ ಏನು? ಹಾಗಾದರೆ ಆ ಪ್ರಶ್ನೆಗಳು ಯಾವುವು?

 

Read Full Story

01:11 PM (IST) Jan 11

ಹುಬ್ಬಳ್ಳಿಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆ, ಮಹಿಳೆಯ ಅತ್ಯಾ*ಚಾರವೆಸಗಿ ವಿಡಿಯೋ ಹರಿಬಿಟ್ಟ ಯುವಕರು!

ಹುಬ್ಬಳ್ಳಿಯಲ್ಲಿ ಹಾವೇರಿ ಮೂಲದ ಮಹಿಳೆಯ ಮೇಲೆ ಇಬ್ಬರು ಯುವಕರು ಅತ್ಯಾ*ಚಾರ ಎಸಗಿ, ಆ ದೃಶ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣವು ಸ್ಥಳೀಯವಾಗಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದೆ.

Read Full Story

12:52 PM (IST) Jan 11

ಶಾಂತಿ ಸಾಗರ ಈ ಗವಿಸಿದ್ಧೇಶ್ವರ ಮಹಾಜಾತ್ರೆ

‘ಗವಿಸಿದ್ದೇಶ್ವರ ಜಾತ್ರೆ ದೇಶದ ಎಂಟನೇ ಅದ್ಭುತ. ಇಲ್ಲಿಯ ದಾಸೋಹ, ಶ್ರೀಗಳ ಸಾಧನೆ ಎಲ್ಲವೂ ಸೇರಿದರೆ ದೇಶದ ಅಲ್ಲ, ವಿಶ್ವದ ಎಂಟನೇ ಅದ್ಭುತ!’

ಇದು, ಕೊಪ್ಪಳ ಜಾತ್ರೆ ಮತ್ತು ಗವಿಮಠ ಕುರಿತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ. ಎಂ. ಪುಷ್ಪಾವತಿ ಅವರ ಉದ್ಗಾರ.

Read Full Story

12:52 PM (IST) Jan 11

Bigg Boss ಇತಿಹಾಸದಲ್ಲೇ ಮೊದಲು - ರೋಬೋ ಎಂಟ್ರಿ! ನಿಮ್ದೆಲ್ಲಾ ಗೊತ್ತು ಎನ್ನುತ್ತ ಕಿಚ್ಚನನ್ನೇ ಸುಸ್ತು ಮಾಡ್ತು

ಬಿಗ್​ಬಾಸ್​ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಇತಿಹಾಸದಲ್ಲೇ ಮೊದಲ ಬಾರಿಗೆ ರೋಬೋಟ್​ ಒಂದು ಮನೆಗೆ ಎಂಟ್ರಿ ಕೊಟ್ಟಿದೆ. ಈ ರೋಬೋಟ್, ನಿರೂಪಕ ಕಿಚ್ಚ ಸುದೀಪ್​ ಅವರಿಗೇ ಗೊತ್ತಿಲ್ಲದ ಶೋನ ಹಲವು ಅಂಕಿಅಂಶಗಳನ್ನು ಬಹಿರಂಗಪಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
Read Full Story

12:39 PM (IST) Jan 11

ಗಿಲ್ಲಿ ನಟ ಗೆದ್ದಾಯ್ತು; Bigg Boss ಟ್ರೋಫಿ ಬೋನಸ್‌ ಅಷ್ಟೇ; ಲೈಫ್‌ ಸೆಟಲ್‌ ಮಾಡೋ ಆದಾಯ ಬಂದಾಯ್ತು!

BBK 12 Winner Name: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗಿಲ್ಲಿ ನಟ ಅವರು ಟ್ರೋಫಿ ಗೆಲ್ಲಲಿ, ಬಿಡಲಿ ಅವರ ಮುಂದಿನ ಜೀವನ ಚೆನ್ನಾಗಿರುವ ಆದಾಯ ಹುಡುಕಿಕೊಂಡು ಬಂದಾಯ್ತು. ಹಾಗಾದರೆ ಏನದು?

Read Full Story

12:11 PM (IST) Jan 11

BBK 12 - ‌ ನಿಜಕ್ಕೂ ಚಪ್ಪಾಳೆ ಕೊಡೋ ಪ್ರದರ್ಶನ ಕೊಟ್ಟಿರೋ ಸ್ಪರ್ಧಿ ಯಾರು? ಕಂಪೆನಿ HR ಬಹಿರಂಗ ಪೋಸ್ಟ್!

Bigg Boss Kannada 12 Episode: ಬಿಗ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆಗೆ ಒಂದು ವಾರ ಇದೆ. ಹೀಗಿರುವಾಗ ಅಶ್ವಿನಿ ಗೌಡ, ಧ್ರುವಂತ್‌ ಅವರು ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ. ಹೀಗಿರುವಾಗ ಖಾಸಗಿ ಕಂಪೆನಿ HR ಒಬ್ಬರು ಎಲ್ಲರ ಆಟವನ್ನು ವಿಮರ್ಶೆ ಮಾಡಿದ್ದಾರೆ.

 

Read Full Story

12:10 PM (IST) Jan 11

ವಿಶ್ವದ ಅತಿದೊಡ್ಡ ದ್ವೀಪದ ಮೇಲೆ ಟ್ರಂಪ್‌ ವ್ಯಾಮೋಹ ಏಕೆ?

ಗ್ರೀನ್‌ಲ್ಯಾಂಡ್‌ ದ್ವೀಪವನ್ನು ಖರೀದಿಸಲು ಸಿದ್ಧ ಎಂದು ಮೊದಲ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಸೌಮ್ಯವಾಗಿ ಹೇಳುತ್ತಿದ್ದರು. ಜ.3ರಂದು ವೆನಿಜುವೆಲಾದಲ್ಲಿ ಅಲ್ಲಿನ ಅಧ್ಯಕ್ಷರ ಬೆಡ್‌ರೂಂಗೇ ನುಗ್ಗಿ, ಪತ್ನಿ ಸಮೇತ ಅವರನ್ನು ಅಮೆರಿಕ ಕಮಾಂಡೋಗಳು ಹೊತ್ತೊಯ್ದ ಬಳಿಕ ಟ್ರಂಪ್‌ ಖದರ್ರೇ ಬದಲಾಗಿದೆ.

Read Full Story

12:01 PM (IST) Jan 11

ಮದ್ವೆ ಬಳಿಕ ಕೇಳ್ತಿದ್ದ ಆ ಪ್ರಶ್ನೆಗೆ ನಟಿ ವೈಷ್ಣವಿ ಗೌಡ 7 ತಿಂಗಳಿಗೆ ಕೊಟ್ಟರು ಉತ್ತರ! ಫ್ಯಾನ್ಸ್​ ಫುಲ್​ ಖುಷ್​

'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ, ತಮ್ಮ ಮದುವೆಯಾಗಿ ಏಳು ತಿಂಗಳ ನಂತರ ಲವ್ ಸ್ಟೋರಿ ಬಗ್ಗೆ ಎದ್ದಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕಾರಿನಲ್ಲಿ ದೇವರು ಹೋಗುತ್ತಿರುವ ಎಐ ಫೋಟೋ ಹಂಚಿಕೊಳ್ಳುವ ಮೂಲಕ, ತಮ್ಮ ಮದುವೆ ದೇವರ ಕೃಪೆಯಿಂದ ನಡೆದಿದೆ ಎಂದು ಅವರು ಸೂಚ್ಯವಾಗಿ ತಿಳಿಸಿದ್ದಾರೆ.
Read Full Story

11:57 AM (IST) Jan 11

ಎವಿಆರ್ ರೆಡ್ಡಿ ಕನ್ನಡ ನಟಿ ವಿವಾದ, ಹಣ ಕೊಟ್ಟಿದ್ದಕ್ಕೆ ದಾಖಲೆ, ಇಬ್ಬರು ಜೊತೆಗಿರೋ ತೀರಾ ಖಾಸಗಿ ಫೋಟೋ ಲೀಕ್!

ಎವಿಆರ್ ರೆಡ್ಡಿ ಮತ್ತು ಖ್ಯಾತ ನಟಿಯ ನಡುವಿನ ಗಲಾಟೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಇಬ್ಬರೂ ಆತ್ಮೀಯವಾಗಿರುವ ಖಾಸಗಿ ಫೋಟೋಗಳು ಮತ್ತು ನಟಿಗೆ ಕೋಟಿಗಟ್ಟಲೆ ಹಣ ಹಾಗೂ ವಸ್ತುಗಳನ್ನು ನೀಡಿರುವ ದಾಖಲೆಗಳು ಇದೀಗ ವೈರಲ್ ಆಗಿವೆ. ಈ ಹಿಂದೆ ನಟಿ, ರೆಡ್ಡಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು.

Read Full Story

11:32 AM (IST) Jan 11

BBK 12 - ಕೆಲ ವಿಷಯಕ್ಕೆ ಕಿಚ್ಚನ ಚಪ್ಪಾಳೆಗೆ ಧ್ರುವಂತ್‌ ಯೋಗ್ಯ; ಇನ್ನೂ ಕೆಲವಕ್ಕೆ ಅಲ್ಲ - ಕಂಪೆನಿ HR

Bigg Boss Kannada Season 12: ಧ್ರುವಂತ್‌ ಹಾಗೂ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಕಂಪೆನಿ HR ಸಂಕೇತ್‌ ರಾಮಕೃಷ್ಣಮೂರ್ತಿ ಅವರು ಧ್ರುವಂತ್‌ ಅವರ ಪ್ಲಸ್, ಮೈನಸ್‌ ವಿಷಯಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಬೇಸರವನ್ನು ಹೊರಹಾಕಿದ್ದಾರೆ.

Read Full Story

10:56 AM (IST) Jan 11

ರಾಗಾ ವಿರುದ್ಧ ಮಿತ್ರರೇ ಸಿಟ್ಟಾಗಿರುವುದೇಕೆ?

ನಿರ್ಣಯಗಳನ್ನು ತೆಗೆದುಕೊಳ್ಳುವಾಗ ರಾಹುಲ್ ಗಾಂಧಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರಮುಖ ನಿರ್ಣಯಗಳನ್ನು ಘೋಷಿಸುವಾಗಲೂ ಮಿತ್ರರನ್ನು ಸಂಪರ್ಕ ಮಾಡುವುದಿಲ್ಲ. ಸಂಸತ್‌ ಅಧಿವೇಶನ ವೇಳೆ ಜರ್ಮನಿಗೆ ಹೋಗಿ ಕುಳಿತರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಇಕ್ಕಟ್ಟಿಗೆ ಸಿಲುಕಿಸುವವರು ಯಾರು?

Read Full Story

10:12 AM (IST) Jan 11

ಅಶ್ವಿನಿ ಗೌಡ, ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ; ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಬಳಿ ಕೊಡಿಸಿದ್ಯಾಕೆ? ಕಾಕತಾಳಿಯವೋ?

Bigg Boss Gilli Nata: ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ, ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಹೀಗಿರುವಾಗ ಗಿಲ್ಲಿ ನಟ, ರಕ್ಷಿತಾ ಅವರೇ ಆ ಕಿಚ್ಚನ ಚಪ್ಪಾಳೆ ಒಪನ್‌ ಮಾಡಿದ್ದು ಯಾಕೆ?

 

Read Full Story

10:12 AM (IST) Jan 11

ಬಂಗಾಳಕೊಲ್ಲೀಲಿ ವಾಯುಭಾರ ಕುಸಿತ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ ಶನಿವಾರದ ವೇಳೆಗೆ ದುರ್ಬಲಗೊಂಡಿದೆ. ಹೀಗಾಗಿ ಚಂಡಮಾರುತದ ಭೀತಿ ದೂರವಾಗಿದೆ. ಆದರೆ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಚುಮುಚುಮು ಚಳಿಯ ವಾತಾವರಣ ಮತ್ತು ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

Read Full Story

10:12 AM (IST) Jan 11

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ಮಕ್ಕಳಿಂದ ದುಡುಕಿನ ನಿರ್ಧಾರ

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ದಾವಣಗೆರೆ ಹೊರವಲಯದಲ್ಲಿ ಕಾರಿನಲ್ಲಿ ಕಾರ್ಪೋರೇಟ್ ಶವ ಪತ್ತೆಯಾಗಿದ್ದರೆ, ಮಾಹಿತಿ ತಿಳಿದು ಇಬ್ಬರು ಮಕ್ಕಳು ದುಡುಕಿನ ನಿರ್ಧಾರಕ್ಕೆ ಯತ್ನಿಸಿದ್ದಾರೆ.

Read Full Story

09:43 AM (IST) Jan 11

ಹೊಟೆಲ್ ರೂಂನಿಂದ ಕಾಂಗ್ರೆಸ್ ಶಾಸಕ ರಾಹುಲ್ ಅರೆಸ್ಟ್, 3ನೇ ಯುವತಿ ದೂರಿನಲ್ಲಿ ನಾಯಕ ಲಾಕ್

ಅತ್ಯಾ*ಚಾರ ಎಸಗಿ ಗರ್ಭಿಣಿ ಮಾಡಿದ ಪ್ರಕರಣ, ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟಥಿಲ್ ಅರೆಸ್ಟ್ ಮಾಡಲಾಗಿದೆ. ಗೌಪ್ಯವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೊಟೆಲ್ ರೂಂಗೆ ದಾಳಿ ಮಾಡಿ ಶಾಸಕನ ಅರೆಸ್ಟ್ ಮಾಡಿದ್ದಾರೆ.

 

Read Full Story

09:30 AM (IST) Jan 11

BBK 12 - ಮನೆಮಂದಿಗೆ ಚೆಲ್ಲಾಟ, ಗಿಲ್ಲಿ ನಟನಿಗೆ ಪ್ರಾಣಸಂಕಟ; ಈ ಎಪಿಸೋಡ್‌ ನನ್ನ ಮರೆತುಬಿಡಿ, ಪ್ಲೀಸ್..!

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಾರಣ ಕೊಟ್ಟು, ನಿಮಗೆ ಯಾರಿಗೆ ಶಿಕ್ಷೆ ಕೊಡಬೇಕೋ ಅನಿಸತ್ತೋ, ಅವರಿಗೆ ಶಿಕ್ಷೆ ಕೊಡಿ ಎಂದು ಕಿಚ್ಚ ಸುದೀಪ್‌ ಅವರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

More Trending News