ಇನ್ನಾದರೂ ನಿಲ್ಲುತ್ತಾ ರಷ್ಯಾ ಉಕ್ರೇನ್ ಯುದ್ಧ ನ್ಯಾಟೋ ಸದಸ್ಯತ್ವವನ್ನು ಪಡೆಯದಿರುವ ಬಗ್ಗೆ ಚರ್ಚಿಸಲು ಸಿದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿಕೆ
ಕೀವ್(ಮಾ.22): ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ನ್ಯಾಟೋ ಸದಸ್ಯತ್ವವನ್ನು ಪಡೆಯದಿರುವ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿದ್ದು, ಇನ್ನಾದರೂ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಶಮನಗೊಂಡು ಯುದ್ಧ ನಿಲ್ಲುವುದೋ ಎಂಬ ಕುತೂಹಲ ಮೂಡಿದೆ. ಕದನ ವಿರಾಮ, ರಷ್ಯಾದ ಪಡೆಗಳ ವಾಪಸಾತಿ ಮತ್ತು ಉಕ್ರೇನ್‌ನ ಭದ್ರತೆಯ ಭರವಸೆಗೆ ಬದಲಾಗಿ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ಸದಸ್ಯತ್ವವನ್ನು ಪಡೆಯದಿರಲು ಉಕ್ರೇನ್‌ನಿಂದ ಬದ್ಧತೆಯನ್ನು ಚರ್ಚಿಸಲು ಸಿದ್ಧ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ತಡರಾತ್ರಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದೊಂದು ಎಲ್ಲರಿಗೂ ಸರಿ ಎನಿಸುವ ವಿಚಾರವಾಗಿದೆ. ನ್ಯಾಟೋಗೆ ((Nato) ಸಂಬಂಧಿಸಿದಂತೆ ನಮ್ಮೊಂದಿಗೆ ಏನು ಮಾಡಬೇಕೆಂದು ತಿಳಿದಿಲ್ಲದ ಪಶ್ಚಿಮ ದೇಶಗಳಿಗೇಕೆ, ಭದ್ರತಾ ಖಾತರಿಗಳನ್ನು ಬಯಸುವ ಉಕ್ರೇನ್‌ಗೆ (Ukraine) ಮತ್ತು ಮತ್ತಷ್ಟು ನ್ಯಾಟೋ ವಿಸ್ತರಣೆಯನ್ನು ಬಯಸದ ರಷ್ಯಾಕ್ಕೆ ಹೀಗೆ ಎಲ್ಲರಿಗೂ ಇದೊಂದು ರಾಜಿಯಾಗುವ ವಿಚಾರವಾಗಿದೆ ಎಂದು ಝೆಲೆನ್ಸ್ಕಿ ಹೇಳಿದರು. ಸೋಮವಾರ ಉಕ್ರೇನಿಯನ್ ದೂರದರ್ಶನ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಝೆಲೆನ್ಸ್ಕಿ (Volodymyr Zelenskyy) ಹೀಗೆ ಹೇಳಿದ್ದಾರೆ.
ಉಕ್ರೇನ್ ಪಡೆ ಸೇರಿದ ವಿಶ್ವದ ಅತ್ಯುತ್ತಮ ಸ್ನಿಪರ್ 'ವಾಲಿ' ಇವನ್ಯಾರು ಗೊತ್ತಾ
ಅಲ್ಲದೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ನೇರ ಮಾತುಕತೆ ನಡೆಸುವ ವಿಚಾರವನ್ನು ಪುನರ್ ಪ್ರಸ್ತಾಪಿಸಿದ ಅವರು, ಪುಟಿನ್ ಅವರನ್ನು ಭೇಟಿಯಾಗದ ಹೊರತು, ರಷ್ಯಾ ಯುದ್ಧವನ್ನು ನಿಲ್ಲಿಸಲು ಬಯಸುತ್ತದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ ಎಂದು ಹೇಳಿದರು. ಕದನ ವಿರಾಮದ ನಂತರ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳನ್ನು ಹೊಂದಿರುವ ಕ್ರೈಮಿಯಾ (Crimea) ಮತ್ತು ಪೂರ್ವ ಡೊನ್ಬಾಸ್ (eastern Donbas) ಪ್ರದೇಶದ ಸ್ಥಿತಿ ಮತ್ತು ಭದ್ರತಾ ಖಾತರಿಗಳನ್ನು ಒದಗಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಕೈವ್ (Kyiv) ಸಿದ್ಧವಾಗಿದೆ ಎಂದು ಕೂಡ ಝೆಲೆನ್ಸಿಕಿ ಹೇಳಿದ್ದಾರೆ.
ಇದಕ್ಕೂ ಮೊದಲು ಆಯಕಟ್ಟಿನ ನಗರವಾದ ಮರಿಯುಪೋಲ್ ಅನ್ನು ತಮ್ಮ ವಶಕ್ಕೆ ನೀಡಿ, ಶರಣಾಗುವಂತೆ ರಷ್ಯಾ ಸೇನೆ ಮಾಡಿದ್ದ ಪ್ರಸ್ತಾಪವನ್ನು ಉಕ್ರೇನ್ ಸೇನೆ ಸಾರಾಸಗಟಾಗಿ ತಿರಸ್ಕರಿಸಿತ್ತು. ಮರಿಯುಪೋಲ್ ನಮ್ಮ ವಶದಲ್ಲಿದೆ. ಹೀಗಾಗಿ ನೀವು ಶಸ್ತ್ರಾಸ್ತ್ರ ಕೆಳಗಿಳಿಸಿ, ಶಾಂತಿಯ ಸಂಕೇತವಾದ ಬಿಳಿಯ ಧ್ವಜ ಹಾರಿಸಿ. ನಾವು ನಿಮಗೆ ಸುರಕ್ಷಿತ ಕಾರಿಡಾರ್ ಮೂಲಕ ತೆರಳಲು ಅವಕಾಶ ಮಾಡಿಕೊಡುತ್ತೇವೆ ಎಂದು ಯುದ್ಧದ 26ನೇ ದಿನವಾದ ಸೋಮವಾರ ರಷ್ಯಾ ಸೇನೆ, ಉಕ್ರೇನ್ ಸೇನೆಗೆ ಸಲಹೆ ನೀಡಿತ್ತು.
ರಷ್ಯಾ ಉಕ್ರೇನ್ ಯುದ್ಧ.. ರಾಶಿರಾಶಿ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ
ಆದರೆ ಇದನ್ನು ತಿರಸ್ಕರಿಸಿರುವ ಉಕ್ರೇನ್‌ನ ಉಪ ಪ್ರಧಾನಿ ಐರಿನಾ ವೆರೆಶ್ಚುಕ್, ಶರಣಾಗತಿ ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದಿಲ್ಲ. ರಷ್ಯಾದ ತಂತ್ರಗಳಿಗೆ ಉಕ್ರೇನ್ ಮಣಿಯುವುದಿಲ್ಲ. ಈ ಕುರಿತಾಗಿ ನಮ್ಮ ನಿರ್ಣಯವನ್ನು ರಷ್ಯಾಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಉಕ್ರೇನ್ ಸೈನಿಕರು ಅಜೋವ್ ಸಮುದ್ರದ ಬಂದರನ್ನು ತ್ಯಜಿಸಿ, ಶಸ್ತ್ರಾಸ್ತ್ರಗಳನ್ನು ತೊರೆದು, ನಾಗರಿಕರನ್ನು ಸ್ಥಳಾಂತರಿಸಲು ನಿರ್ಮಿಸಲಾಗಿರುವ ಮಾನವೀಯ ಕಾರಿಡಾರ್ ಮೂಲಕ ಸೈನಿಕರು ನಿರ್ಗಮಿಸಬಹುದು. ಶಸ್ತ್ರಾಸ್ತ್ರ ತ್ಯಜಿಸಿರುವುದರಿಂದ ಎಲ್ಲರಿಗೂ ಮರಿಯುಪೋಲ್‌ನಿಂದ ಸುರಕ್ಷಿತ ನಿರ್ಗಮನವನ್ನು ಖಾತ್ರಿ ಪಡಿಸಲಾಗುವುದು ಎಂದು ರಷ್ಯಾ ಹೇಳಿತ್ತು. ಇದಕ್ಕಾಗಿ ಸೋಮವಾರ ಮುಂಜಾನೆ 5ರವರೆಗೆ ಗಡುವನ್ನು ನೀಡಲಾಗಿತ್ತು.
ಉಕ್ರೇನ್ ಪ್ರಸ್ತಾಪ ತಿರಸ್ಕರಿಸಿದ ಬೆನ್ನಲ್ಲೇ, ಆ ನಗರದ ಮೇಲಿನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಮರಿಯುಪೋಲ್ ಅತ್ಯಂತ ಆಯಕಟ್ಟಿನ ನಗರವಾಗಿದ್ದು, ಇದು ಪೂರ್ಣವಾಗಿ ವಶವಾದರೆ, 2014ರಲ್ಲಿ ತಾನು ಉಕ್ರೇನ್‌ನಿಂದ ವಶಪಡಿಸಿಕೊಂಡಿರುವ ಕ್ರೆಮಿಯಾ ಪ್ರದೇಶಕ್ಕೆ ಸುಲಲಿತವಾಗಿ ನೀರು ಪೂರೈಕೆ ಮಾಡುವುದು ರಷ್ಯಾಕ್ಕೆ ಸಾಧ್ಯವಾಗಲಿದೆ. ಹೀಗಾಗಿ ಉಳಿದೆಲ್ಲಾ ನಗರಗಳಿಗಿಂತ ಈ ನಗರವನ್ನೇ ರಷ್ಯಾ ಹೆಚ್ಚು ಗುರಿ ಮಾಡಿದೆ. ಪರಿಣಾಮ ಈ ನಗರವೊಂದರಲ್ಲೇ 2000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ.
