ಯೂಟ್ಯೂಬರ್ ನೊರಮ್, ಈ ಹಿಂದೆ 264 ಗಂಟೆ ನಿದ್ದೆ ಮಾಡದೆ ದಾಖಲೆ ಮಾಡಿದ್ದರು. ಇತ್ತೀಚೆಗೆ, ಅತಿ ಹೆಚ್ಚು ಕಾಲ ನಿಶ್ಚಲವಾಗಿ ನಿಲ್ಲುವ ಚಾಲೆಂಜ್‌ನಲ್ಲಿ ಭಾಗವಹಿಸಿದ್ದರು. 38 ಗಂಟೆಗಳ ಕಾಲ ನಿಂತು ದಾಖಲೆ ಮಾಡಿದರೂ, ಸ್ಥಳೀಯರು ಕಿರುಕುಳ ನೀಡಿದರು. ಈ ಹಿಂದೆ ನಿದ್ದೆ ಮಾಡದೇ ಇದ್ದಾಗ ಪ್ರಜ್ಞಾಹೀನರಾಗಿದ್ದರು. ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿದರು ಮತ್ತು ಆತನಿಗೆ ತೊಂದರೆ ಕೊಟ್ಟರು. (50 ಪದಗಳು)
ಇಲ್ಲೊಬ್ಬ ಯುವಕ ಈಗಾಗಲೇ 264 ಗಂಟೆಗಳ ಕಾಲ ನಿದ್ದೆ ಮಾಡದೇ ವಿಶ್ವದಾಖಲೆ ಮಾಡಿದ್ದಾನೆ. ಇದೀಗ ಅತಿಹೆಚ್ಚು ಕಾಲ ನಿಶ್ಚಲವಾಗಿ ನಿಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಮುಂದಾಗಿದ್ದ ಯೂಟ್ಯೂಬರ್‌ಗೆ ಸ್ಥಳೀಯ ಯುವತಿಯರು ಮುತ್ತುಕೊಟ್ಟು, ಬಾಯಿಗೆ ಕ್ಯಾರೆಟ್ ಇಟ್ಟು ಆತನ ಸಾಧನೆಗೆ ಭಂಗ ತರುವ ಕೆಲಸ ಮಾಡಿದ್ದಾರೆ.
ಇಂದು ಯೂಟ್ಯೂಬರ್‌ಗಳು ವಿವಿಧ ರೀತಿಯ ಚಾಲೆಂಜ್‌ಗಳನ್ನು ಮಾಡುತ್ತಾರೆ. ಈಗ ಲೈವ್ ಸ್ಟ್ರೀಮ್‌ನಲ್ಲಿ ಅತಿ ಹೆಚ್ಚು ಕಾಲ ಎಚ್ಚರವಾಗಿದ್ದು ಹೊಸ ವಿಶ್ವ ದಾಖಲೆ ನಿರ್ಮಿಸಲು ಪ್ರಯತ್ನಿಸಿದ ಆಸ್ಟ್ರೇಲಿಯಾದ ಯೂಟ್ಯೂಬರ್ ನೊರಮ್ ಇದೀಗ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಏನೇ ಆಗಲಿ, ತಾನು 38 ಗಂಟೆಗಳ ಕಾಲ ನಿಶ್ಚಲವಾಗಿ ನಿಂತುಕೊಂಡು ಪುನಃ ವಿಶ್ವ ದಾಖಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಯುವಕನ ನಿಶ್ಚಲ ನಿಲುವು ಅಪಾಯಕ್ಕೆ ತಲುಪಬಹುದೆಂದು ಹೆದರಿ ಜನರು ಪೊಲೀಸರನ್ನು ಕರೆದಿದ್ದಾರೆ. ಇನ್ನು ಕೆಲವರು ಆತನಿಗೆ ಭಾರೀ ತೊಂದರೆಯನ್ನು ಕೊಟ್ಟಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಇದೇ ರೀತಿಯ ಚಾಲೆಂಜ್ ಅನ್ನು ಯೂಟ್ಯೂಬರ್ ನೋರೆಮ್ ಮಾಡಿದ್ದರು. ಆಗ ಲೈವ್ ಸ್ಟ್ರೀಮ್‌ನಲ್ಲಿ ಅತಿ ಹೆಚ್ಚು ಸಮಯ ನಿದ್ರೆ ಮಾಡದೆ ಇದ್ದ ವಿಶ್ವ ದಾಖಲೆಯನ್ನು ಮುರಿಯಲು ನೊರಮ್ ಪ್ರಯತ್ನಿಸಿದರು. ಇವರು 264 ಗಂಟೆಗಳ ಕಾಲ ಎಚ್ಚರವಾಗಿದ್ದರು. ಬರೋಬ್ಬರಿ 11 ದಿನಗಳ ಕಾಲ ನಿದ್ದೆ ಮಾಡದೇ ಎಚ್ಚರವಾಗಿದ್ದ ನೊರಮ್ ಕೊನೆಗೆ, 265ನೇ ಗಂಟೆಯಲ್ಲಿ ಲೈವ್ ಸ್ಟ್ರೀಮ್‌ನಲ್ಲಿಯೇ ಪ್ರಜ್ಞಾಹೀನರಾದರು. ವೀಕ್ಷಕರು ಇವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದಾಗ ಯೂಟ್ಯೂಬ್ ಲೈವ್ ಸ್ಟ್ರೀಮ್ ಅನ್ನು ತಡೆಹಿಡಿಯಿತು.
ಇದನ್ನೂ ಓದಿ: ಮೊದಲ ರಾತ್ರಿಯಂದೇ ನವ ಜೋಡಿಯ ದುರಂತ ಅಂತ್ಯ, ಬೆಡ್‌ನಲ್ಲಿ ವಧು, ನೇಣಿನಲ್ಲಿ ವರನ ಮೃತದೇಹ!
ಈ ಬಾರಿ ಮತ್ತೊಂದು ಚಾಲೆಂಜ್ ಎದುರಿಸಿ ವಿಶ್ವದಾಖಲೆ ಮಾಡಲು ನೊರೆಮ್ ಮುಂದಾಗಿದ್ದನು. ಅತಿ ಹೆಚ್ಚು ಸಮಯ ನಿಶ್ಚಲವಾಗಿ ನಿಲ್ಲುವುದು ಈತನ ಗುರಿ ಆಗಿತ್ತು. ರಸ್ತೆಯ ಬದಿಯಲ್ಲಿ ಅಲುಗಾಡದೆ ನಿಂತ ನೊರಮ್‌ನನ್ನು ಜನರು ಹಲವು ವಿಧಗಳಲ್ಲಿ ಕಿರುಕುಳ ನೀಡಲು ಪ್ರಯತ್ನಿಸುವುದನ್ನು ಕಾಣಬಹುದು. ಇವರ ದೇಹಕ್ಕೆ ಸ್ಪ್ರೇ ಪೇಂಟ್ ಮಾಡುವುದು, ಮೀಸೆ ಬರೆಯುವುದು ಮತ್ತು ಇವರನ್ನು ಚುಂಬಿಸುವುದು, ಬಾಯಿಗೆ ಹಲವು ವಸ್ತುಗಳನ್ನು ಇಡುವುದು, ತಲೆಯ ಕೂದಲು ಎಳೆಯುವುದು, ಬಟ್ಟೆ ಬಿಚ್ಚುವುದು, ಟೋಪಿ ಬದಲಿಸುವುದು ಸೇರಿದಂತೆ ಹಲವು ಕೀಟನೆಗಳನ್ನು ಜನರು ಕೊಟ್ಟಿದ್ದಾರೆ. ಆದರೆ, ನೊರೆಮ್ ಮಾತ್ರ ಒಂದು ಹೆಜ್ಜೆಯನ್ನೂ ಸಹ ಚಲಿಸದೇ ಸ್ಟಿಲ್ ಆಗಿ ನಿಂತುಕೊಂಡಿದ್ದರು.
ವಿಡಿಯೋ ವೀಕ್ಷಣೆಗೆ ಇದನ್ನು ಕ್ಲಿಕ್ ಮಾಡಿ: https://x.com/InternetH0F/status/1898426084762521677
ಇನ್ನು ನೊರೆಮ್ 38 ಗಂಟೆಗಳ ಕಾಲದ (ಒಂದೂವರೆ ದಿನ) ನಿಶ್ಚಲವಾಗಿ ನಿಂತಿರುವ ಚಾಲೆಂಜ್‌ನ ವಿಡಿಯೊವನ್ನು ಕೆಲವು ನಿಮಿಷಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಯೂಟ್ಯೂಬರ್ ನೊರಮ್ ಈ ರೀತಿಯ ಕಠಿಣ ಚಾಲೆಂಜ್‌ಗಳನ್ನು ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ: ಗೋ ಫ್ರೋ ಕ್ಯಾಮರಾ ಸೆರೆ ಹಿಡಿದ ಸಾಗರದಾಳದ ಅದ್ಭುತ ದೃಶ್ಯವಿದು: ವೈರಲ್ ವೀಡಿಯೋ
