ನಮ್ಮ ಮೆಟ್ರೋದಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿ ಮಂಗನಾಟ ಮಾಡಿದ್ದವ ಯುರೋಪ್‌ನಲ್ಲಿ ಸಂಸದನಾಗಿ ಆಯ್ಕೆ!
ಯುರೋಪ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 24 ವರ್ಷದ ಯುಟ್ಯೂಬರ್ ಫಿಡಿಯಾಸ್ ಪನಯೋಟೌ, ಸೈಪ್ರಿಯೋಟ್ ಕ್ಷೇತ್ರದಲ್ಲಿ ಗೆದ್ದು ಸಂಸದನಾಗಿದ್ದಾನೆ. ಪ್ರವಾಸ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಯುಟ್ಯೂಬರ್ ಫಿಡಿಯಾಸ್ ಪನಯೋಟೌ ರಾಜಕೀಯದಲ್ಲಿ ಸಕ್ರಿಯವಾಗಿದ್ದಾನೆ.
ಬೆಂಗಳೂರು: ರಾಜಧಾನಿಯ ಬೆಂಗಳೂರಿನ (Bengaluru) ನಮ್ಮ ಮೆಟ್ರೋದಲ್ಲಿ (Namma Metro) ಟಿಕೆಟ್ ಇಲ್ಲದೇ ನಿಯಮ ಉಲ್ಲಂಘಿಸಿದ್ದ ಯುಟ್ಯೂಬರ್ (Youtuber) ಯುರೋಪ್‌ನಲ್ಲಿ ಸಂಸದನಾಗಿ ಆಯ್ಕೆಯಾಗಿದ್ದಾನೆ. ಯುರೋಪ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 24 ವರ್ಷದ ಯುಟ್ಯೂಬರ್ ಫಿಡಿಯಾಸ್ ಪನಯೋಟೌ, ಸೈಪ್ರಿಯೋಟ್ ಕ್ಷೇತ್ರದಲ್ಲಿ ಗೆದ್ದು ಸಂಸದನಾಗಿದ್ದಾನೆ. ಪ್ರವಾಸ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಯುಟ್ಯೂಬರ್ ಫಿಡಿಯಾಸ್ ಪನಯೋಟೌ ರಾಜಕೀಯದಲ್ಲಿ ಸಕ್ರಿಯವಾಗಿದ್ದಾನೆ. 2023ರಲ್ಲಿ ಬೆಂಗಳೂರಿಗೆ ಸಂದರ್ಭದಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದನು. ಅಷ್ಟು ಮಾತ್ರವಲ್ಲದೇ ನಿಯಮ ಉಲ್ಲಂಘನೆ ಮಾಡಿರುವ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದನು. ಈ ವಿಡಿಯೋ ವೈರಲ್ ಬಳಿಕ ದಂಡ ವಿಧಿಸಿರೋದಾಗಿ ನಮ್ಮ ಮೆಟ್ರೋ ಹೇಳಿಕೊಂಡಿತ್ತು.
24 ವರ್ಷದ ಯುಟ್ಯೂಬರ್ ಫಿಡಿಯಾಸ್ ಪನಯೋಟೌ ತನ್ನ ವಿಚಿತ್ರ ನಡವಳಿಕೆಯಿಂದಲೇ ಫೇಮಸ್. ಸೆಲೆಬ್ರಿಟಿಗಳನ್ನು ತಪ್ಪಿಕೊಳ್ಳಲು ಪ್ರಯತ್ನಿಸೋದು, ಶವಪೆಟ್ಟಿಗೆಯಲ್ಲಿ ಕುಳಿತು ವಿಡಿಯೋ ಮಾಡುವ ಮೂಲಕ ಯುಟ್ಯೂಬ್‌ನಲ್ಲಿ 20 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರಬರ್ ಹೊಂದಿದ್ದಾನೆ. ಟಿಕ್‌ಟಾಕ್ ಸೇರಿದಂತೆ ಇನ್ನುಳಿದ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಲಕ್ಷ ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾನೆ. ಯುಟ್ಯೂಬ್‌ನಲ್ಲಿ ತನ್ನನ್ನು ವೃತ್ತಿಪರ ತಪ್ಪುಗಳನ್ನು ಮಾಡುವ ವ್ಯಕ್ತಿ ಎಂದು ಫಿಡಿಯಾಸ್ ಪನಯೋಟೌ ಹೇಳಿಕೊಂಡಿದ್ದಾನೆ. ಜಪಾನ್‌ನಲ್ಲಿಯೂ ಹೋಟೆಲ್‌ನಲ್ಲಿ ತಿಂಡಿ ಸೇವಿಸಿ ಬಿಲ್ ನೀಡದೇ ಎಸ್ಕೇಪ್ ಆಗಿದ್ದನು. ಅನಾರೋಗ್ಯದ ನೆಪ ಹೇಳಿ ಜಪಾನಿನ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ್ದನು. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನೇರಳೆ ಮಾರ್ಗ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಬಿಎಂಆರ್‌ಸಿಎಲ್!
ವೈರಲ್ ವಿಡಿಯೋದಲ್ಲಿ ಏನಿದೆ?
ಇಂಡಿಯಾದಲ್ಲಿ ಹೇಗೆ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ತೋರಿಸುತ್ತೇನೆ ಎಂದು ಯುಟ್ಯೂಬರ್ ಫಿಡಿಯಾಸ್ ಪನಯೋಟೌ ಹೇಳುತ್ತಾನೆ. ಮೆಟ್ರೋ ನಿಲ್ದಾಣದೊಳಗೆ ಪ್ರವೇಶದಲ್ಲಿಯೇ ಇಬ್ಬರನ್ನು ಮಾತನಾಡಿಸುವ ಫಿಡಿಯಾಸ್, ಇಲ್ಲಿ ಫ್ರೀಯಾಗಿ ಪ್ರಯಾಣಿಸಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಉಚಿತವಾಗಿ ಪ್ರಯಾಣಿಸಲು ಆಗಲ್ಲ ಎಂದು ಹೇಳುತ್ತಾರೆ. ನಂತರ ಒಳಗೆ ಹೋದ ಫಿಡಿಯಾಸ್ ಎಂಟ್ರಿ ಗೇಟ್ ಜಿಗಿದು ಒಳಗೆ ಬರುತ್ತಾನೆ. ಇಷ್ಟಕ್ಕೆ ಫಿಡಿಯಾಸ್ ಹುಚ್ಚಾಟ ಕಡಿಮೆಯಾಗಲ್ಲ.
ಜನಸಂದಣಿ ಇರೋ ಮೆಟ್ರೋದಲ್ಲಿ ವರ್ಕೌಟ್ ಮಾಡುವ ಮೂಲಕ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿದ್ದನು. ನಿಲ್ದಾಣದಿಂದ ಬರುತ್ತಿದ್ದಂತೆ ರೈಲಿನಿಂದ ಹೊರ ಬರುವ ಫಿಡಿಯಾಸ್, ಎಕ್ಸಿಟ್ ಗೇಟ್‌ನಲ್ಲಿಯೂ ಜಿಗಿದು ಹೊರ ಬರುತ್ತಾನೆ. ಇದುವೇ ನನ್ನ ಉಚಿತ ಪ್ರಯಾಣ ಎಂದು ಫಿಡಿಯಾಸ್ ಹೇಳಿಕೊಳ್ಳುತ್ತಾನೆ. ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಕೆಆರ್ ಮಾರ್ಕೆಟ್, ವಿಧಾನಸೌಧ, ಎಂಜಿ ರಸ್ತೆಯಲೆಲ್ಲಾ ಫಿಡಿಯಾಸ್ ಸುತ್ತಾಡಿದ್ದನು.
ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಬ್ರಿಟನ್ ಸಂಸದೆ