ಪದಗ್ರಹಣದ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಶಿವಾನಿ ರಾಜಾ ವಿರುದ್ಧ ಭಾರತ ಮೂಲದ ರಾಜೇಶ್ ಅಗರ್ವಾಲ್ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಲಂಡನ್: ಬ್ರಿಟನ್ ಚುನಾವಣೆ ಮುಕ್ತಾಯವಾಗಿದ್ದು, ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ 14 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಚುನಾವಣೆಯಲ್ಲಿ ಭಾರತ ಮೂಲದ 25ಕ್ಕೂ ಅಧಿಕ ಜನರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದೀಗ ನೂತನ ಸಂಸದರ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತಿದ್ದು, ಭಾರತ ಮೂಲದ ಜನಪ್ರತಿನಿಧಿಗಳು ಭಗವದ್ಗೀತೆ ಹಿಡಿದು ಪದಗ್ರಹಣ ಸ್ವೀಕರಿಸುತ್ತಿದ್ದಾರೆ. ಕನ್ಸರ್ವೇಟಿವ್ ಪಾರ್ಟಿಯ ಬಾಬ್ ಬ್ಲಾಕ್‌ಮೆನ್ ಮತ್ತು ಶಿವಾನಿ ರಾಜಾ ಭಗವದ್ಗೀತೆ ಜೊತೆಯಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪದಗ್ರಹಣದ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಶಿವಾನಿ ರಾಜಾ ವಿರುದ್ಧ ಭಾರತ ಮೂಲದ ರಾಜೇಶ್ ಅಗರ್ವಾಲ್ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಪೂರ್ವ ಲೀಸೆಸ್ಟರ್ ಕ್ಷೇತ್ರದ ಪ್ರತಿನಿಧಿಯಾಗಿ ಶಪಥ ಸ್ವೀಕರಿಸಲು ಖುಷಿ ಮತ್ತು ಹೆಮ್ಮೆಯಾಗುತ್ತಿದೆ. ಭಗದ್ವೀತೆ ಮತ್ತು ರಾಜಾ ಚಾರ್ಲ್ಸ್ ಪ್ರಮಾಣವಾಗಿ ಪದಗ್ರಹಣ ಸ್ವೀಕರಿಸಿದ್ದೇನೆ ಎಂದು ಶಿವಾನಿ ರಾಜಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಶಿವಾನಿ ರಾಜಾ 14,526 ಮತಗಳನ್ನು ಪಡೆಯುವ ಮೂಲಕ ಲಂಡನ್ ಮಾಜಿ ಉಪ ಮೇಯರ್ ರಾಜೇಶ್ ಅಗರ್ವಾಲ್ ಅವರನ್ನು ಸೋಲಿಸಿದ್ದಾರೆ. ರಾಜೇಶ್ ಅಗರ್ವಾಲ್ 10,100 ಮತ ಪಡೆದುಕೊಂಡಿದ್ದಾರೆ. 1987ರಿಂದ ಪೂರ್ವ ಲೀಸೆಸ್ಟರ್‌ ಕ್ಷೇತ್ರ ಲೇಬರ್ ಪಕ್ಷದ ಭದ್ರಕೋಟೆ ಎಂದೇ ಬಿಂಬಿತವಾಗಿದೆ. 37 ವರ್ಷದ ಬಳಿಕ ಮೊದಲ ಬಾರಿಗೆ ಬೇರೆ ಪಕ್ಷವೊಂದು ಈ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದೆ.

'ಬ್ರಿಟನ್‌ನಲ್ಲಿ ಹಿಂದು ಫೋಬಿಯಾಗೆ ಜಾಗವಿಲ್ಲ..' ಬ್ರಿಟಿಷ್‌ ಹಿಂದುಗಳಿಗೆ ವಿಶ್ವಾಸ ನೀಡಿದ ಯುಕೆ ಹೊಸ ಪಿಎಂ!

ಶಿವಾನಿ ರಾಜಾ ಸೇರಿದಂತೆ ಭಾರತ ಮೂಲದ 27 ಜನರು ಚುನಾವಣೆಯಲ್ಲಿ ಗೆದ್ದು ಹೌಸ್ ಆಫ್ ಕಾಮನ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ 263 ಮಹಿಳಾ ಸದಸ್ಯರು ಸಂಸದರಾಗಿ ಆಯ್ಕೆಯಾಗಿದ್ದು, ಇದೇ ಸಂಸತ್‌ನ ಶೇ.40ರಷ್ಟಾಗಿದೆ. ವಿಶೇಷ ಅಂದ್ರೆ ಇದರಲ್ಲಿ ಕಪ್ಪು ವರ್ಣದ 90 ಸದಸ್ಯರಿದ್ದಾರೆ. ಬ್ರಿಟನ್‌ನ ಲೇಬರ್ ಪಕ್ಷವು ಒಟ್ಟು 650 ಸ್ಥಾನಗಳಲ್ಲಿ ಸುಮಾರು 410 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಚುನಾವಣೆಯಲ್ಲಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 130 ಸ್ಥಾನಗಳನ್ನು ಗೆದ್ದಿದೆ. ಶುಕ್ರವಾರ ಮುಂಜಾನೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಸೋಲನ್ನು ಒಪ್ಪಿಕೊಂಡರು ಮತ್ತು ದೇಶದ ಮುಂದಿನ ಪ್ರಧಾನಿಯಾಗಲು ಸ್ಟಾರ್ಮರ್‌ ಅವರನ್ನು ಸ್ವಾಗತಿಸಿದ್ದಾರೆ. 

ಬ್ರಿಟನ್ ಸಂಪುಟದಲ್ಲಿ ಭಾರತ ಮೂಲದ ಯುವತಿಗೆ ಸ್ಥಾನ; ಮಹತ್ವದ ಜವಾಬ್ದಾರಿ ನೀಡಿದ ಕೀರ್ ಸ್ಟಾರ್ಮರ್ 

Scroll to load tweet…