Asianet Suvarna News Asianet Suvarna News

ವಿಶ್ವದ ಹಿರಿಯ ವ್ಯಕ್ತಿ ನಿಧನ: ಬರ್ತಡೇಗೆ ವಾರ ಇರುವಾಗ ಅಗಲಿದ 112 ವರ್ಷದ ಶತಾಯುಷಿ

 

  • 112 ವರ್ಷದ ಶತಾಯುಷಿ ನಿಧನ
  • ಸ್ಯಾಟರ್ನಿನೊ ಗಾರ್ಸಿಯಾ ನಿಧನರಾದ ಶತಾಯುಷಿ
  • ಸ್ಪೇನ್‌ ಮೂಲದ ಸ್ಯಾಟರ್ನಿನೊ ಗಾರ್ಸಿಯಾ
Worlds Oldest Man, Passes Away at Spanish Weeks Before his Birthday akb
Author
Bangalore, First Published Jan 19, 2022, 6:01 PM IST

ಜಗತ್ತಿನ ಹಿರಿಯ ವ್ಯಕ್ತಿ 112 ವರ್ಷದ ಸ್ಯಾಟರ್ನಿನೊ ಗಾರ್ಸಿಯಾ ಎಂಬುವರು ನಿಧನರಾಗಿದ್ದಾರೆ. 112 ವರ್ಷದ ಸ್ಯಾಟರ್ನಿನೊ ಗಾರ್ಸಿಯಾ ತಮ್ಮ113ನೇ ಹುಟ್ಟುಹಬ್ಬಕ್ಕೆ ಒಂದು ವಾರ ಇರಬೇಕಾದರೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಪೇನ್‌ ಮೂಲದ ಇವರ ಪೂರ್ಣ ಹೆಸರು ಸಾಟರ್ನಿನೊ ಡೆ ಲಾ ಫ್ಯೂಯೆಂಟೆ ಗಾರ್ಸಿಯಾ. ಉತ್ತರ ಸ್ಪ್ಯಾನಿಷ್ ( Spanish) ನಗರದ ಲಿಯಾನ್‌ ( Leon) ನಲ್ಲಿರುವ ತಮ್ಮ ಮನೆಯಲ್ಲಿ ಮಂಗಳವಾರ ನಿಧನರಾದರು.

ಈ ಶತಾಯುಷಿ ವ್ಯಕ್ತಿ ತನ್ನ ಕುಟುಂಬದೊಂದಿಗೆ ಫೆಬ್ರವರಿ 8 ರಂದು ತನ್ನ ಜನ್ಮದಿನವನ್ನು ಆಚರಿಸಬೇಕಾಗಿತ್ತು, ಫೆಬ್ರವರಿ 8  ಹುಟ್ಟಿದ ದಿನಾಂಕ ಎಂದು ಹೇಳಿಕೊಂಡಿದ್ದರೂ ಮೂರು ದಿನಗಳ ನಂತರ ಅವನ ಜನ್ಮವನ್ನು ಅಧಿಕೃತ ದಾಖಲೆಗಳು ದಾಖಲಿಸುತ್ತವೆ. ಅತ್ಯಂತ ಹಳೆಯ ವ್ಯಕ್ತಿಯ ಮರಣವನ್ನು ಹಿರಿಯ ಜೆರೊಂಟಾಲಜಿ ಸಲಹೆಗಾರ ( Gerontology Consultant) ರಾಬರ್ಟ್ ಯಂಗ್ (Robert Young) ಅವರು ದೃಢಪಡಿಸಿದ್ದಾರೆ.

ಬಳ್ಳಾರಿ: ಕೊರೋನಾ ಗೆದ್ದು ಬಂದ ಶತಾಯುಷಿ ದಂಪತಿ..!

ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ ಪ್ರಕಾರ ಇವರು ಭೂಮಿಯ ಮೇಲಿನ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದರು. ಇವರು 11 ಫೆಬ್ರವರಿ 1909 ರಂದು ಪುಯೆಂಟೆ ಕ್ಯಾಸ್ಟ್ರೊದಲ್ಲಿ (ಸ್ಪೇನ್‌ನ ವಾಯುವ್ಯದಲ್ಲಿರುವ ಲಿಯಾನ್‌ನ ನೆರೆಹೊರೆಯ ಊರು) ಜನಿಸಿದರು. ಆದರೂ ಅವರು ಯಾವಾಗಲೂ ತಮ್ಮ ಜನ್ಮದಿನವನ್ನು ಸ್ವಲ್ಪ ಮುಂಚಿತವಾಗಿ ಫೆಬ್ರವರಿ 8 ರಂದು ಆಚರಿಸಲು ನಿರ್ಧರಿಸಿದರು. ಅವರ ದೀರ್ಘಾಯುಷ್ಯದ ರಹಸ್ಯದ ಬಗ್ಗೆ ಕೇಳಿದಾಗ, ಇದೆಲ್ಲವೂ ಶಾಂತವಾದ ಜೀವನದಿಂದ ಸಾಧ್ಯ ಎಂದು ಹೇಳಿದರು.

93ನೇ ವಯಸ್ಸಿಗೆ ಓಟ ಆರಂಭಿಸಿದ್ದ ಶತಾಯುಷಿ ಅಥ್ಲೀಟ್‌ ಮನ್‌ ಕೌರ್ ಇನ್ನಿಲ್ಲ..!

ಆ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. ಮತ್ತು ಶೂ ತಯಾರಕನಾಗಿ ತನ್ನ ಜೀವಿತಾವಧಿಯಲ್ಲಿ ಕೆಲಸ ಮಾಡಿದ್ದರು. ಆದರೆ ಅವರು ಜಾಸ್ತಿ ಎತ್ತರವಿಲ್ಲದ ಕಾರಣ 1936 ರಲ್ಲಿ ಪ್ರಾರಂಭವಾದ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಅವರು ಹೋರಾಡುವುದು ಸಾಧ್ಯವಾಗಲಿಲ್ಲ. ಇದು ಕೂಡ ಅವರ ದೀರ್ಘಾವಧಿ ಜೀವಿತಕ್ಕೆ ಕಾರಣ ಎನ್ನಲಾಗುತ್ತಿದೆ.

ಸಾಟರ್ನಿನೊ ಮತ್ತು ಅವರ ಪತ್ನಿ ಆಂಟೋನಿನಾ ಬ್ಯಾರಿಯೊ ಗುಟೈರೆಜ್‌ಗೆ (Antonina Barrio Gutiérrez) ಒಟ್ಟು ಏಳು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದ. ಆದರೆ ಮಗ ಬಾಲ್ಯದಲ್ಲಿ ಮೃತಪಟ್ಟಿದ್ದ. 112 ವರ್ಷ ವಯಸ್ಸಿನ ಈ ಶತಾಯುಷಿಯನ್ನು ಅವರ ಒಬ್ಬ ಮಗಳು ಮತ್ತು ಅವರ ಅಳಿಯ ನೋಡಿಕೊಳ್ಳುತ್ತಿದ್ದರು. ಈ ಶತಾಯುಷಿ 14 ಮೊಮ್ಮಕ್ಕಳು ಮತ್ತು 22 ಮರಿ ಮೊಮ್ಮಕ್ಕಳನ್ನು ಒಳಗೊಂಡಿರುವ  ದೊಡ್ಡ ಕುಟುಂಬವನ್ನು ಹೊಂದಿದ್ದರು. 

ಇವರು ಉತ್ಸಾಹಿ ಫುಟ್ಬಾಲ್ ಅಭಿಮಾನಿಯಾಗಿದ್ದರು ಮತ್ತು ವರ್ಷಗಳ ಕಾಲ ಫುಟ್ಬಾಲ್ ಆಟವನ್ನು ಆಡಿದ್ದರು ಜೊತೆಗೆ ಪುಯೆಂಟೆ ಕ್ಯಾಸ್ಟ್ರೊ ಎಂಬ ಸ್ಥಳೀಯ ತಂಡವನ್ನು ಸಹ ಸ್ಥಾಪಿಸಿದರು. ದೊಡ್ಡ ಕ್ಲಬ್‌ಗಳಿಗೆ ಸಂಬಂಧಿಸಿದಂತೆ, ಅವರು ಕ್ಲಬ್ ಕಲ್ಚರಲ್ ಲಿಯೋನೆಸಾದ ಬೆಂಬಲಿಗರಾಗಿದ್ದರು. ಎರಡು ವರ್ಷಗಳ ಹಿಂದೆ, ಅವರನ್ನು ಕ್ಲಬ್‌ನ ಅತ್ಯಂತ ಹಳೆಯ ಸದಸ್ಯ ಎಂದು ಪುಯೆಂಟೆ ಕ್ಯಾಸ್ಟ್ರೋದಿಂದ ಸನ್ಮಾನಿಸಲ್ಪಟ್ಟಿದ್ದರು. 

ಏತನ್ಮಧ್ಯೆ, ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಜಪಾನ್‌ನ ಕೇನ್ ತನಕಾ (Kane Tanaka) ಕೆಲವೇ ದಿನಗಳ ಹಿಂದೆ 119 ವರ್ಷಕ್ಕೆ ಕಾಲಿಟ್ಟರು. ತನಕಾ ಎರಡು ವಿಶ್ವ ಯುದ್ಧಗಳು ಮತ್ತು 1918 ರ ಸ್ಪ್ಯಾನಿಷ್ ಸಾಂಕ್ರಾಮಿಕ ರೋಗಕ್ಕೆ ಸಾಕ್ಷಿಯಾಗಿದ್ದರು.

Follow Us:
Download App:
  • android
  • ios